Sunday, 3 June 2012


ಅಧ್ಯಾಯ : ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ vI – ನಾಮಪ್ರಕೃತಿಗಳಿಗೆ ನಾಮವಿಭಕ್ತಿಪ್ರತ್ಯಯಗಳು ಬರುವ ಅರ್ಥಗಳು ಮತ್ತು ಪ್ರಯೋಗಗಳು

ಇದುವರೆಗೆ ನೀವು ನಾಮಪ್ರಕೃತಿಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವಾಗ ಆಗುವ ಕಾರ್ಯಗಳಾವುವೆಂಬುದನ್ನು ಸ್ಥೂಲವಾಗಿ ತಿಳಿದಿರಿ. ಯಾವ ವಿಭಕ್ತಿಪ್ರತ್ಯಯವು ಯಾವ ಕಾರಕಾರ್ಥದಲ್ಲಿ ಬರುವುದೆಂಬುದನ್ನು ಸ್ಥೂಲವಾಗಿ ತಿಳಿದಿರಿ. ವಿಷಯವನ್ನು ಇನ್ನೊಮ್ಮೆ ಜ್ಞಾಪಿಸಿಕೊಳ್ಳಿರಿ.

- ಎಂಬ ಪ್ರಥಮಾವಿಭಕ್ತಿಯು ಕರ್ತ್ರರ್ಥದಲ್ಲೂ (ಕರ್ತೃವಿನ ಅರ್ಥದಲ್ಲೂ),

ಅನ್ನು - ಎಂಬ ದ್ವಿತೀಯಾವಿಭಕ್ತಿಯು ಕರ್ಮಾರ್ಥದಲ್ಲೂ,

ಇಂದಎಂಬ ತೃತೀಯಾವಿಭಕ್ತಿಯು ಕರಣ ಎಂದರೆ ಸಾಧನದ ಅರ್ಥದಲ್ಲೂ,

ಗೆ, , ಕ್ಕೆ, ಅಕ್ಕೆ - ಇತ್ಯಾದಿ ಚತುರ್ಥೀವಿಭಕ್ತಿಗಳು ಸಂಪ್ರದಾನ(ಕೊಡುವಿಕೆ) ಅರ್ಥದಲ್ಲೂ,

ದೆಸೆಯಿಂದಎಂಬ ಪಂಚಮೀವಿಭಕ್ತಿಯು ಅಪಾದಾನ (ಅಗಲುವಿಕೆ) ಅರ್ಥದಲ್ಲೂ,

ಎಂಬ ಷಷ್ಠೀವಿಭಕ್ತಿಯು ಎಲ್ಲ ಅರ್ಥಗಳ ಸಂಬಂಧದಲ್ಲೂ,

ಅಲ್ಲಿ, ಒಳುಇತ್ಯಾದಿ ಸಪ್ತಮೀ ವಿಭಕ್ತಿಗಳು ಅಧಿಕರಣ (ಆಧಾರ) ಅರ್ಥದಲ್ಲೂ,

, , , ಇರಾ - ಇತ್ಯಾದಿ ಸಂಬೋಧನಾವಿಭಕ್ತಿಗಳು ಕರೆಯುವಿಕೆ (ಅಭಿಮುಖೀಕರಣ) ಯಲ್ಲೂ ಬರುತ್ತವೆ.

ಈಗ ವಿಭಕ್ತಿಪ್ರತ್ಯಯಗಳು ಒಮ್ಮೊಮ್ಮೆ ಬೇರೆಬೇರೆ ಅರ್ಥಗಳಲ್ಲೂ ಬರುತ್ತವೆ ಎಂಬ ವಿಷಯವನ್ನು ತಿಳಿಯೋಣ.

() ಪ್ರಥಮಾವಿಭಕ್ತಿ:-

() ಕರ್ತ್ರರ್ಥಕ್ಕೆ-

(i) *ಕೂಸು ಮಲಗಿತು-ಇಲ್ಲಿ ಮಲಗುವ ಕ್ರಿಯೆಯನ್ನು ಕೂಸು ಮಾಡಿದುದರಿಂದ ಅದೇ ಕರ್ತೃ ಪದವಾಗಿ ಪ್ರಥಮಾವಿಭಕ್ತಿಯನ್ನು ಪಡೆಯಿತು. ಇದು ಅಕರ್ಮಕವಾಕ್ಯ.

(ii) *ಮಗು ಹಾಲನ್ನು ಕುಡಿಯಿತು-ಹಾಲನ್ನು ಕಡಿಯುವ ಕಾರ್ಯ ಮಾಡಿದುದು ಮಗು ವಾದ್ದರಿಂದ ಅದೇ ಕರ್ತೃಪದವಾಗಿ ಪ್ರಥಮಾವಿಭಕ್ತ್ಯಂತವಾಯಿತು. ಇದು ಸಕರ್ಮಕವಾಕ್ಯ.

() ಕರ್ಮಾರ್ಥದಲ್ಲಿ ಪ್ರಥಮಾವಿಭಕ್ತಿ ಬರುವುದಕ್ಕೆ-

(iii) ಹುಡುಗನಿಂದ ಪುಸ್ತಕವು ಓದಲ್ಪಟ್ಟಿತು-ಇಲ್ಲಿ ಓದುವ ಕಾರ್ಯಕ್ಕೆ ಹುಡುಗನೇ ಕರ್ತೃವಾದರೂ, ಹುಡುಗ ಎಂಬುದರ ಮೇಲೆ ಪ್ರಥಮಾವಿಭಕ್ತಿ ಬರದೆ ಕರ್ಮವಾದ ಪುಸ್ತಕ ಎಂಬ ಪ್ರಕೃತಿಯ ಮೇಲೆ ಪ್ರಥಮಾವಿಭಕ್ತಿ ಬಂದಿದೆ.

() ದ್ವಿತೀಯಾವಿಭಕ್ತಿ:-

() ಕರ್ಮದಲ್ಲಿ ದ್ವಿತೀಯೆ ಬರುವುದಕ್ಕೆ-

(i) ಹುಡುಗನು ಪುಸ್ತಕವನ್ನು ಓದಿದನು.

(ii) ಮಕ್ಕಳು ಶಾಲೆಯನ್ನು ಕಟ್ಟಿದರು. - ಎರಡೂ ವಾಕ್ಯಗಳಲ್ಲಿ ಪುಸ್ತಕ ಶಾಲೆ ಎಂಬುವು ಕರ್ಮಪ್ರಕೃತಿಗಳು. ಅವುಗಳ ಮೇಲೆ ದ್ವಿತೀಯಾವಿಭಕ್ತಿ ಬಂದಿದೆ.

() ಒಂದು ಕಾರ್ಯ ಸತತವಾಗಿ (ಎಡಬಿಡದೆ) ನಡೆಯಿತು ಎಂಬರ್ಥದಲ್ಲಿ ದ್ವಿತೀಯಾವಿಭಕ್ತಿ ಬರುವುದು.

(i) ಅವನು ಹರದಾರಿಯನ್ನು ನಡೆದನು.

(ii) ರಾಮನು ಎರಡು ಗಾವುದಗಳನ್ನು ಓಡಿದನು. - ಇಲ್ಲಿ ಹರದಾರಿ, ಗಾವುದ ಗಳನ್ನು ನಡೆಯುವ, ಓಡುವ ಕಾರ್ಯ ಅವಿಚ್ಛಿನ್ನವಾಗಿ (ಸತತವಾಗಿ) ನಡೆಯಿತು. ಆದುದರಿಂದ ಹರದಾರಿ, ಗಾವುದ-ಇತ್ಯಾದಿ ಪ್ರಕೃತಿಗಳ ಮೇಲೆ ದ್ವಿತೀಯಾವಿಭಕ್ತಿ ಬಂದಿದೆ.

() ಕರೆ, ಬೇಡು, ಕೇಳು-ಇತ್ಯಾದಿ ಧಾತುಗಳಿಗೆ ಎರಡು ಕರ್ಮಗಳು (ದ್ವಿಕರ್ಮಗಳು) ಬರುವುದುಂಟು. ಉದಾಹರಣೆಗೆ:-

(i) *ಹಸುವನ್ನು ಹಾಲನ್ನು ಕರೆದನು.

(ii) ಅರಸನನ್ನು ಹಣವನ್ನು ಬೇಡಿದನು.

(iii) ಗುರುವನ್ನು ಆಶೀರ್ವಾದವನ್ನು ಕೇಳಿದನು.

() ತೃತೀಯಾವಿಭಕ್ತಿ:-

() ಕರಣಾರ್ಥದಲ್ಲಿ-

(i) ಕೊಡಲಿಯಿಂದ ಮರವನ್ನು ಕಡಿದನು.

(ii) ಲೆಕ್ಕಣಿಕೆಯಿಂದ ಅಕ್ಷರವನ್ನು ಬರೆದನು. -ಇಲ್ಲಿ ಸಾಧನಗಳಾದ ಕೊಡಲಿ, ಲೆಕ್ಕಣಿಕೆ ಎಂಬ ಪ್ರಕೃತಿಗಳ ಮೇಲೆ ಇಂದ ಎಂಬ ತೃತೀಯಾವಿಭಕ್ತಿ ಬಂದಿದೆ.

() ಕರ್ಮಣೀಪ್ರಯೋಗದಲ್ಲಿ ಕರ್ತ್ರರ್ಥದಲ್ಲಿ ತೃತೀಯಾವಿಭಕ್ತಿ ಬರುವುದು.-

(i) ಹುಡಗನಿಂದ ಪುಸ್ತಕವು ಓದಲ್ಪಟ್ಟಿತು.

(ii) ಮಕ್ಕಳಿಂದ ಶಾಲೆಯು ಕಟ್ಟಲ್ಪಟ್ಟಿತು. -ಇಲ್ಲಿ ಹುಡುಗನು, ಮಕ್ಕಳು

ಎಂಬೆರಡೂ ಪದಗಳು ಓದುವ, ಕಟ್ಟುವ ಕಾರ್ಯದ ಕರ್ತೃಗಳು. ಆದುದರಿಂದ ಇವುಗಳ ಮೇಲೆ ತೃತೀಯಾವಿಭಕ್ತಿ ಬಂದಿದೆ.

() ಕಾರಣಾರ್ಥದಲ್ಲೂ ತೃತೀಯಾವಿಭಕ್ತಿಯು ಬರುವುದು:-

(i) ವಿದ್ಯಾಭ್ಯಾಸದಿಂದ ಯಶಸ್ಸು ಸಿಗುವುದು.

(ii) ದುಡಿಮೆಯಿಂದ ಹಣ ಸಿಗುವುದು. -ಯಶಸ್ಸು ದೊರೆಯಲು ವಿದ್ಯಾಭ್ಯಾಸವೂ, ಹಣ ಸಿಗುವುದಕ್ಕೆ ದುಡಿಮೆಯೂ ಕಾರಣಗಳಾದ್ದರಿಂದ ಕಾರಣಾರ್ಥಗಳಲ್ಲಿ ತೃತೀಯಾವಿಭಕ್ತಿ ಬಂದಿದೆ.

() ಲಕ್ಷಣಕಾರ್ಯದಿಂದ ಕಾರಣವನ್ನು ತಿಳಿಯುವಿಕೆಯಲ್ಲಿ ತೃತೀಯಾವಿಭಕ್ತಿ ಬರುವುದು:-

(i) ಹೊಗೆಯಿಂದ ಬೆಂಕಿಯನ್ನು ತಿಳಿದನು.

(ii) ಪರಿಮಳದಿಂದ ಹೂವನ್ನು ಅರಿದನು. – ಬೆಂಕಿ ಇದೆ ಎಂದು ತಿಳಿಯಲು ಹೊಗೆಯೂ, ಹೂವಿದೆ ಎಂದು ತಿಳಿಯಲು ಪರಿಮಳವೂ ಕಾರಣಗಳಾದ್ದರಿಂದ ಹೊಗೆ, ಪರಿಮಳ ಎಂಬ ಶಬ್ದಗಳ ಮೇಲೆ ತೃತೀಯಾವಿಭಕ್ತಿ ಬಂದಿದೆ.

() ಒಂದು ಕೆಲಸವು ಎಡಬಿಡದೆ ನಡೆಯಿತು ಎಂದು ತೋರುವಾಗ ತೃತೀಯಾವಿಭಕ್ತಿ ಬರುವುದು-

(i) ನಮ್ಮ ಮಗನು ವರ್ಷದಿಂದ ಗ್ರಂಥ ಓದಿದನು.

(ii) ಒಂದು ತಿಂಗಳಿಂದ ಸಾಧನೆ ಮಾಡಿದ್ದೇನೆ.-ಇಲ್ಲಿ ಓದುವ ಕಾರ್ಯ, ಸಾಧಿಸಿದ ಕಾರ್ಯಗಳೆರಡೂ ವರ್ಷದಿಂದ ಮತ್ತು ತಿಂಗಳಿಂದ ಅವಿಚ್ಛಿನ್ನವಾಗಿ ನಡೆದಿವೆ. ಆದುದರಿಂದ ವರ್ಷ, ತಿಂಗಳು- ಎರಡೂ ಪ್ರಕೃತಿಗಳ ಮೇಲೆ ಇಂದ ಎಂಬ ತೃತೀಯಾವಿಭಕ್ತಿಪ್ರತ್ಯಯ ಬಂದಿದೆ.

() ಸಕರ್ಮಕಧಾತುವು ಪ್ರೇರಣಾರ್ಥದಲ್ಲಿ ಇಸು ಪ್ರತ್ಯಯವನ್ನು ಹೊಂದಿದಾಗ ಪ್ರೇರ್ಯಕರ್ತೃವಾಚಕದ ಮೇಲೆ ತೃತೀಯಾವಿಭಕ್ತಿಯು ಬರುವುದು.-

(i) ಅರಸನು ಶಿಲ್ಪಿಗಳಿಂದ ಗುಡಿಯನ್ನು ಕಟ್ಟಿಸಿದನು.

(ii) ತಾಯಿಯು ಮಕ್ಕಳಿಂದ ಪಾಠವನ್ನು ಓದಿಸಿದಳು. – ಇಲ್ಲಿ ಶಿಲ್ಪಿಗಳು, ಮಕ್ಕಳು ಎಂಬಿವು ಪ್ರೇರ್ಯಕರ್ತೃ ಅಂದರೆ ಇನ್ನೊಬ್ಬರ ಪ್ರೇರಣೆಯಿಂದ ಕಾರ್ಯಮಾಡಿದವರು. ಅಂಥ ಪ್ರಕೃತಿಗಳಾದ ಶಿಲ್ಪಿಗಳು, ಮಕ್ಕಳು-ಎಂಬ ಪ್ರಕೃತಿಗಳ ಮೇಲೆ ಇಂದ ಎಂಬ ತೃತೀಯಾ ವಿಭಕ್ತಿ ಬಂದಿದೆ.

() ಚತುರ್ಥೀವಿಭಕ್ತಿ:-

() ಸಂಪ್ರದಾನಾರ್ಥ:- ಸಂಪ್ರದಾನಾರ್ಥದಲ್ಲಿ ಎಂದರೆ ಕೊಡುವ ವಸ್ತುವು ಯಾರನ್ನು ಸೇರುವುದೋ ಅಲ್ಲಿ ಚತುರ್ಥೀವಿಭಕ್ತಿ ಬರುವುದು.

(i) ಮಕ್ಕಳಿಗೆ ತಿಂಡಿಯನ್ನು ಹಂಚಿದರು.

(ii) ವಿದ್ಯಾರ್ಥಿಗಳಿಗೆ ಗುರುಗಳು ಜ್ಞಾನವನ್ನು ನೀಡಿದರು.

ಇಲ್ಲಿ ತಿಂಡಿಯು ಮಕ್ಕಳಿಗೂ, ಜ್ಞಾನವು ವಿದ್ಯಾರ್ಥಿಗಳಿಗೂ ಸೇರಿತು. ಆದುದರಿಂದ ಮಕ್ಕಳು* ವಿದ್ಯಾರ್ಥಿ ಎಂಬ ಪ್ರಕೃತಿಗಳ ಮೇಲೆ ಇಗೆ ಎಂಬ ಚತುರ್ಥೀವಿಭಕ್ತಿಪ್ರತ್ಯಯ ಬಂದಿದೆ.

() ಯಾವುದಾದರೂ ಒಂದು ಉದ್ದೇಶ ಅಥವಾ ಕಾರಣವಿದ್ದಾಗ ಶಬ್ದಗಳಿಗೆ ಚತುರ್ಥೀವಿಭಕ್ತಿ ಬರುವುದು.

() ಉದ್ದೇಶಕ್ಕೆ-

() ವಿದ್ಯಾರ್ಥಿಗಳು ಶಾಲೆಗೆ ಓದಲು ಹೋಗುತ್ತಾರೆ.

() ತಿರುಕರು ಭಿಕ್ಷೆಗೆ ಮನೆಮನೆ ತಿರುಗುತ್ತಾರೆ.

() ಮರವು ತೇರಿಗೆ ಬೇಕಾಗಿದೆ.

() ಬಂಗಾರವು ಬಳೆಗೆ ಬೇಕು.

ಮೇಲಿನ ನಾಲ್ಕು ಉದಾಹರಣೆಗಳಲ್ಲೂ ಶಾಲೆಗೆ, ಭಿಕ್ಷೆಗೆ, ತೇರಿಗೆ, ಬಳೆಗೆ-ಇತ್ಯಾದಿ ಉದ್ದೇಶ ವಾಚಕಗಳು ಚತುರ್ಥೀವಿಭಕ್ತಿಯಿಂದ ಕೂಡಿರುವುದನ್ನು ಗಮನಿಸಿರಿ.

() ಕಾರಣಕ್ಕೆ-

() ದುರ್ಬುದ್ಧಿ ಹುಟ್ಟುವುದು ಕೇಡಿಗೆ.

() ಆಗುವುದೆಲ್ಲ ಒಳ್ಳೆಯದಕ್ಕೆ.

() ದುಡಿಯುತ್ತಿರುವುದು ಹೊಟ್ಟೆಗೆ ಮತ್ತು ಬಟ್ಟೆಗೆ.

ಮೇಲಿನ ಉದಾಹರಣೆಗಳಲ್ಲಿ ಕಾರಣಾರ್ಥಕ ಪದಗಳಾದ-ಕೇಡಿಗೆ, ಒಳ್ಳೆಯದಕ್ಕೆ, ಹೊಟ್ಟೆಗೆ, ಬಟ್ಟೆಗೆ-ಎಂಬ ಪದಗಳು ಚತುರ್ಥೀವಿಭಕ್ತ್ಯಂತಗಳಾಗಿರುವುದನ್ನು ಗಮನಿಸಿರಿ.

() ಸಾಮಾನ್ಯವಾಗಿ ಅಸಹನೆ, ದ್ರೋಹ, ಮಾತ್ಸರ್ಯ, ಭಯ, ಆಧಿಕ್ಯ (ಹೆಚ್ಚೆಂದು ತೋರುವಿಕೆ), ಸ್ವಭಾವ, ನಮಸ್ಕಾರ, ಹಿತ, ಅಹಿತ, ಹೋಲಿಕೆ ಮೊದಲಾದುವು ತೋರುವಾಗಲೂ ಚತುರ್ಥೀವಿಭಕ್ತಿಯು ಬರುವುದುಂಟು.

() ಅಸಹನೆಗೆ:- ವ್ಯಾಪಾರಿಗೆ ವ್ಯಾಪಾರಿಯು ಹೊಟ್ಟೆಕಿಚ್ಚು ತೋರುವನು.

() ದ್ರೋಹಕ್ಕೆ- ದುರ್ಜನರು ಸಜ್ಜನರಿಗೆ ದ್ರೋಹ ಬಗೆಯುವರು.

() ಮಾತ್ಸರ್ಯಕ್ಕೆ:- ಸವತಿಗೆ ಸವತಿಯು ಮಾತ್ಸರ್ಯ ತೋರುವಳು.

() ಭಯಕ್ಕೆ:- ಸತ್ಪುರುಷರು ಪಾಪಕ್ಕೆ ಅಂಜುವರು.

() ಆಧಿಕ್ಯ:- ಇದು ಅದಕ್ಕೆ ದೊಡ್ಡದು. (ಇದು ಅದಕ್ಕಿಂತ ದೊಡ್ಡದು) (*ಇದು ಅದಕ್ಕೂ ದೊಡ್ಡದುಬ).

() ಸ್ವಭಾವ:- ಮಕ್ಕಳಿಗೆ ಚಾಪಲ್ಯ ಸಹಜವಾದುದು.

() ಅಹಿತಕ್ಕೆ:- ಲೋಕಕ್ಕೆ ಮಳೆಯಾಗದಿರುವುದು ಅಹಿತವಾದದ್ದು.

() ಹಿತಕ್ಕೆ:- ರೋಗಿಗೆ ಔಷಧವೇ ಹಿತವಾದದ್ದು.

() ಹೋಲಿಕೆಗೆ:- ದೇವೇಂದ್ರನಿಗೆ ದುಷ್ಯಂತನು ಸಮಾನನು.

() ತಿನ್ನು, ಉಣ್ಣು, ಕುಡಿ, ಕಲಿ, ಮೊದಲಾದ ಅಶನಾರ್ಥಕ, ಬೋಧನಾರ್ಥಕ ಧಾತುಗಳಿಗೆ ಪ್ರೇರಣಾರ್ಥದಲ್ಲಿ ಇಸು ಪ್ರತ್ಯಯಗಳು ಬಂದು ತಿನ್ನಿಸು, ಉಣ್ಣಿಸು, ಕುಡಿಸು, ಬೋಧಿಸು ಎಂಬುವಾಗಿ ಅವು ಆಖ್ಯಾತ ಪ್ರತ್ಯಯ ಹೊಂದಿ ಕ್ರಿಯಾಪದಗಳಾದಾಗ ಪ್ರೇರ್ಯಕರ್ತೃವಾಚಕದ ಮೇಲೆ ಚತುರ್ಥೀವಿಭಕ್ತಿ ಪ್ರತ್ಯಯ ಬರುವುದು.

ಉದಾಹರಣೆಗೆ:- *ತಾಯಿಯು ಮಗುವಿಗೆ ತಿಂಡಿಯನ್ನು ತಿನಿಸಿದಳು.

ಇಲ್ಲಿ ಮಗುವಿಗೆ ತಿಂಡಿಯನ್ನು ತಿನ್ನುವಂತೆ ಮಾಡಿದಳಾದ್ದರಿಂದ ಮಗುವು ಪ್ರೇರ್ಯಕರ್ತೃವಾಯಿತು. ತಾಯಿ ಪ್ರೇರಣಕರ್ತೃ. ಪ್ರೇರ್ಯಕರ್ತೃವಾದ ಮಗು ಪ್ರಕೃತಿಯ ಮೇಲೆ ಚತುರ್ಥೀವಿಭಕ್ತಿ ಬಂದಿದೆ. ಇದರಂತೆ-

ತಂದೆ ಮಗನಿಗೆ ಹಾಲು ಕುಡಿಸಿದನು.

ಅಕ್ಕ ತನ್ನ ಮಗನಿಗೆ ಅನ್ನವನ್ನು ಉಣ್ಣಿಸಿದಳು.

ಉಪಾಧ್ಯಾಯರು ಶಿಷ್ಯರಿಗೆ ಪಾಠ ಕಲಿಸಿದರು.

ಇಲ್ಲಿ ಮಗ, ಶಿಷ್ಯಎಂಬಿವು ಪ್ರೇರ್ಯಕರ್ತೃಗಳಾದ್ದರಿಂದ ಅವುಗಳ ಮೇಲೆ ಚತುರ್ಥೀವಿಭಕ್ತಿ ಬಂದಿದೆ.

() ಪಂಚಮೀವಿಭಕ್ತಿ:-

() ಅಪಾದಾನಾರ್ಥ:- ಅಪಾದಾನ (ಅಗಲುವಿಕೆ) ತೋರುವಾಗ ಯಾವುದರ ದೆಸೆಯಿಂದ ಅಗಲಿಕೆಯುಂಟಾಯಿತೋ ಪ್ರಕೃತಿಯ ಮೇಲೆ ಪಂಚಮಿಯ ದೆಸೆಯಿಂದ ಎಂಬ ಪ್ರತ್ಯಯ ಬರುವುದು.

(i) ಮರದದೆಸೆಯಿಂದ ಹಣ್ಣು ಉದುರಿತು.

(ii) ಆಕಾಶದದೆಸೆಯಿಂದ ಮಳೆ ಬಿದ್ದಿತು.

ಇಲ್ಲಿ ಮರ ಮತ್ತು ಆಕಾಶಗಳ ದೆಸೆಯಿಂದ ಹಣ್ಣು, ಮಳೆಗಳು ಅಗಲಿಕೆ (ಅಪಾದಾನ) ಗೊಂಡುವಾದ್ದರಿಂದ ಪ್ರಕೃತಿಗಳ ಮೇಲೆ ದೆಸೆಯಿಂದ ಎಂಬ ಪಂಚಮೀವಿಭಕ್ತಿ ಬಂದಿತು.

() ನಿಮಿತ್ತ ಕಾರಣ ತೋರುವಾಗ ಪಂಚಮೀವಿಭಕ್ತಿ ಬರುವುದು.

(i) ಬೆಂಕಿಯ ದೆಸೆಯಿಂದ ಹೊಗೆ ಹೊರಟಿತು.

(ii) ಜ್ಞಾನದ ದೆಸೆಯಿಂದಲೇ ಮೋಕ್ಷ ಸಿಗುವುದು.

ಇಲ್ಲಿ ಹೊಗೆ ಹೊರಡಲು ಬೆಂಕಿ ಕಾರಣ, ಮೋಕ್ಷ ದೊರೆಯಲು ಜ್ಞಾನ ಕಾರಣ; ಆದ್ದರಿಂದ ಬೆಂಕಿ, ಜ್ಞಾನ, ಎಂಬ ಪ್ರಕೃತಿಗಳ ಮೇಲೆ ದೆಸೆಯಿಂದ ಎಂಬ ಪಂಚಮೀವಿಭಕ್ತಿ ಬಂದಿದೆ.

() ಭಯ ತೋರುವಾಗ ಯಾವುದರಿಂದ ಭಯವು ತೋರುವುದೋ ಅದರ ಮೇಲೆ ಪಂಚಮೀವಿಭಕ್ತಿ ಬರುವುದು.

(i) ಕಳ್ಳರ ದೆಸೆಯಿಂದ ಅಂಜಿಕೆ.

(ii) ಜೇಬುಗಳ್ಳರ ದೆಸೆಯಿಂದ ಹೆದರಿಕೆಯಾಗುವುದು.

(iii) ಹುಲಿಯ ದೆಸೆಯಿಂದ ಅಳುಕಾಗುವುದು.

ಇಲ್ಲಿ ಕಳ್ಳ, ಜೇಬುಗಳ್ಳ, ಹುಲಿ- ಮೂರು ಭಯವನ್ನುಂಟುಮಾಡುವಂಥವು; ಆದ್ದರಿಂದ ಪ್ರಕೃತಿಗಳ ಮೇಲೆ ಪಂಚಮೀವಿಭಕ್ತಿ ಬಂದಿದೆ.*

() ಷಷ್ಠೀವಿಭಕ್ತಿ:- ಎಲ್ಲೆಲ್ಲಿ ಸಂಬಂಧ ತೋರುವುದೋ, ಅಲ್ಲೆಲ್ಲ ಷಷ್ಠೀವಿಭಕ್ತಿ ಬರುವುದು. ಉಳಿದ ಆರೂ ವಿಭಕ್ತಿಗಳ ಕಾರಕಾರ್ಥಸಂಬಂಧದಲ್ಲೆಲ್ಲ ಇದು ಬರುವುದರಿಂದ ಷಷ್ಠೀ ಎಂಬುದು ಪ್ರತ್ಯೇಕ ಕಾರಕ ವಿಭಕ್ತಿಯಲ್ಲವೆಂದು ತಿಳಿಯಬೇಕು.

ಉದಾಹರಣೆಗೆ:-

ಭೂಮಿಯ ಅರಸು
ಕಾಲ ಕಡಗ.
ಗಿಳಿಯ ಹಿಂಡು
ಮನೆಯ ಹಂಚು.
ಆನೆಯ ಬಳಗ
ದೇವರ ಗುಡಿ.
ಕೈಯ ಬೆರಳು
ಜನರ ಸಂತೆ.
ಶಂಕರನ ಬಳಗ
ಮಸಿಯ ಬರಹ.
ಪುಸ್ತಕದ ಹಾಳೆ
ತೇರಿನ ಕಳಸ.

ಮೇಲಿನ ಉದಾಹರಣೆಗಳನ್ನು ಅವಲೋಕಿಸಿದರೆ ಸಂಬಂಧವೆಂಬುದು ಅನಂತವೆಂದು ತಿಳಿಯದಿರದು. ಅರಸನಿಗೆ ಭೂಮಿಯ ಸಂಬಂಧ, ಹಿಂಡಿಗೆ ಗಿಳಿಯ ಸಂಬಂಧ, ಬಳಗಕ್ಕೆ ಆನೆಯ ಸಂಬಂಧ.. ಹೀಗೆ ಎಲ್ಲೆಲ್ಲಿ ಸಂಬಂಧವಿರುವುದೋ ಅಲ್ಲೆಲ್ಲ ಷಷ್ಠೀವಿಭಕ್ತಿ ಬರುವುದು.

() ಸಪ್ತಮೀವಿಭಕ್ತಿ:-

() ಅಧಿಕರಣಾರ್ಥದಲ್ಲಿ ಸಪ್ತಮೀವಿಭಕ್ತಿ ಪ್ರತ್ಯಯ ಬರುವುದು.–ಅಧಿಕರಣವೆಂದರೆ ಆಧಾರವೆಂದರ್ಥ. ಜೇಬಿನಲ್ಲಿ ದುಡ್ಡು ಇದೆ ಎಂಬಲ್ಲಿ ಜೇಬು ಆಧಾರ ಅಥವಾ ಅಧಿಕರಣ. ದುಡ್ಡು ಆಧೇಯ.

(i) ಪುಸ್ತಕದಲ್ಲಿ ವಿವರಣೆಯಿದೆ. – ವಿವರಣೆಗೆ ಪುಸ್ತಕ ಆಧಾರ, ವಿವರಣೆ ಆಧೇಯ.

(ii) ಕಣಜದಲ್ಲಿ ಕಾಳು ತುಂಬಿದೆ. – ಕಾಳಿಗೆ ಕಣಜ ಆಧಾರ, ಕಾಳು ಆಧೇಯ.

(iii) ಶಾಲೆಯಲ್ಲಿ ಮಕ್ಕಳು ಇದ್ದಾರೆ. – ಶಾಲೆ ಆಧಾರ, ಮಕ್ಕಳು ಆಧೇಯ. ಇದರಂತೆ-ಆಕಾಶದಲ್ಲಿ ಪಕ್ಷಿಗಳ ಹಾರಾಟ, ಕಾಡಿನಲ್ಲಿ ಮೃಗಗಳ ಬಳಗ, ಸಮುದ್ರದಲ್ಲಿ ಮೀನುಗಳಿವೆ. – ಇತ್ಯಾದಿ.

() ಗುಂಪಿನಿಂದ (ಸಮುದಾಯದಿಂದ) ಒಂದನ್ನು ಬೇರ್ಪಡಿಸಿ ಹೇಳುವಾಗ ಗುಂಪಿನ ಶಬ್ದದ ಮೇಲೆ ಸಪ್ತಮೀವಿಭಕ್ತಿಪ್ರತ್ಯಯ ಬರುವುದು.

(i) ಊರುಗಳಲ್ಲಿ ನಮ್ಮೂರೇ ಚೆಂದ.

(ii) ರಾಷ್ಟ್ರಗಳಲ್ಲಿ ನಮ್ಮ ರಾಷ್ಟ್ರವೇ ಚೆಂದ.

(iii) ಮನುಷ್ಯರಲ್ಲಿ ಸಾಹಸಿಯೇ ಶ್ರೇಷ್ಠ.

(iv) ಹಣ್ಣುಗಳಲ್ಲಿ ಮಾವಿನ ಹಣ್ಣು ರುಚಿ. -ಇಲ್ಲಿ ಸಮುದಾಯ ವಾಚಕಗಳಾದ ಊರು, ರಾಷ್ಟ್ರ, ಮನುಷ್ಯ, ಹಣ್ಣು-ಇತ್ಯಾದಿ ಪ್ರಕೃತಿಗಳ ಮುಂದೆ ಸಪ್ತಮೀವಿಭಕ್ತಿ ಬಂದಿದೆ.

() ನಿಪುಣ, ಕುಶಲ, ಸಾಧು, ಚತುರ-ಇತ್ಯಾದಿ ಅರ್ಥಗಳು ತೋರುವಾಗ ಸಪ್ತಮೀವಿಭಕ್ತಿಯು ಬರುವುದು.

ಉದಾಹರಣೆಗೆ:-

(i) ಮಾತಿನಲ್ಲಿ ನಿಪುಣ.

(ii) ಹುಡುಗರಲ್ಲಿ ಸಾಧು.

(iii) ಕಾರ್ಯದಲ್ಲಿ ಕುಶಲ.

(iv) ಕೆಲಸದಲ್ಲಿ ಚತುರ.

() ಸಂಬೋಧನಾವಿಭಕ್ತಿ:- ಕರೆಯುವಿಕೆ = ಅಭಿಮುಖೀಕರಣದೂರದಲ್ಲಿದ್ದವರನ್ನಾಗಲಿ, ಸಮೀಪದಲ್ಲಿದ್ದವರ ನ್ನಾಗಲಿ ಕರೆಯುವಾಗ ಮತ್ತು ಮೊರೆಯಿಡುವಾಗ, ಏನನ್ನಾದರೂ ಕುರಿತು ಹೇಳುವಾಗ ಸಂಬೋಧನೆಯ , , , ಇರಾ ಇತ್ಯಾದಿ ವಿಭಕ್ತಿಪ್ರತ್ಯಯಗಳು ಏಕವಚನ, ಬಹುವಚನಗಳಲ್ಲಿ ಬರುವುದುಂಟು.

ಉದಾಹರಣೆಗೆ:-

(i)
*ಮಗುವೇ ಇತ್ತಬಾ.
(ಏಕಾರ ವಿಭಕ್ತಿಪ್ರತ್ಯಯ)
(ii)
ಅಕ್ಕಾ ಬೇಗ ಬಾ.
(ಆಕಾರ ವಿಭಕ್ತಿಪ್ರತ್ಯಯ)
(iii)
ತಂಗೀ ಇಲ್ಲಿ ಬಾ.
(ಈಕಾರ ವಿಭಕ್ತಿಪ್ರತ್ಯಯ)
(iv)
ದೇವರೇ ಕಾಪಾಡು.
(ಏಕಾರ ವಿಭಕ್ತಿಪ್ರತ್ಯಯ)
(v)
ಅಣ್ಣಾ ತಂದೆ ಹೀಗೆ ಹೇಳಿದನು.
(ಆಕಾರ ವಿಭಕ್ತಿಪ್ರತ್ಯಯ)
(vi)
ಅಣ್ಣಂದಿರಾ ಬನ್ನಿರಿ.
(ಇರಾ ಕಾರ ವಿಭಕ್ತಿಪ್ರತ್ಯಯ)



* ಕೂಸು, ಮಗುಇವೆರಡೂ ಉಕಾರಾಂತ ನಪುಂಸಕಲಿಂಗ ಪ್ರಕೃತಿಗಳು. ಕೂಸು+=ಕೂಸು; ಮಗು+=ಮಗು-ಎಂದೇ ಅವುಗಳ ರೂಪಗಳು. ಪ್ರಥಮಾವಿಭಕ್ತಿ ಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು. ಮಗು+=ಮಗುವುಎಂದೂ ಹೇಳಬಹುದು. ಆಗ ಮಧ್ಯದಲ್ಲಿ ಕಾರಾಗಮವಾಗಿದೆಯೆಂದು ಭಾವಿಸಬೇಕು.

* ಕೂಸು, ಮಗುಇವೆರಡೂ ಉಕಾರಾಂತ ನಪುಂಸಕಲಿಂಗ ಪ್ರಕೃತಿಗಳು. ಕೂಸು+=ಕೂಸು; ಮಗು+=ಮಗು-ಎಂದೇ ಅವುಗಳ ರೂಪಗಳು. ಪ್ರಥಮಾವಿಭಕ್ತಿ ಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು. ಮಗು+=ಮಗುವುಎಂದೂ ಹೇಳಬಹುದು. ಆಗ ಮಧ್ಯದಲ್ಲಿ ಕಾರಾಗಮವಾಗಿದೆಯೆಂದು ಭಾವಿಸಬೇಕು.

* ಮೂರು ಉದಾಹರಣೆಗಳಲ್ಲಿ ಹಾಲನ್ನು, ಹಣವನ್ನು, ಆಶೀರ್ವಾದವನ್ನು ಎಂಬಿವೇ ಮುಖ್ಯ ಕರ್ಮಪದಗಳು. ವಾಕ್ಯಗಳು ಕ್ರಮವಾಗಿ ಹಸುವಿನಿಂದ ಹಾಲನ್ನು ಕರೆದನು, ಅರಸನಿಂದ ಹಣವನ್ನು ಬೇಡಿದನು. ಗುರುವಿನಿಂದ ಆಶೀರ್ವಾದವನ್ನು ಬೇಡಿದನು. ಹೀಗೂ ಆಗಬಹುದು.

*ಮಗುಎಂಬುದರ ಬಹುವಚನ ರೂಪವೇ ಮಕ್ಕಳು ಎಂಬ ಶಬ್ದರೂಪವಾಗಿದೆ.

* ಅದಕ್ಕೂ ದೊಡ್ಡದು. (ಅದಕ್ಕೆ+=ಅದಕ್ಕೂ. ಇಲ್ಲಿ ಎಂಬುದು ಅವ್ಯಯ). ಅದಕ್ಕಿಂತ ದೊಡ್ಡದು-ಇತ್ಯಾದಿಯಾಗಿಯೂ ಹೇಳುವುದುಂಟು. (ಅದಕ್ಕೆ+ಇಂತ=ಅದಕ್ಕಿಂತಇಲ್ಲಿ ಇಂತ ಎಂಬುದು ಚತುರ್ಥೀವಿಭಕ್ತಿಯ ಮುಂದೆ ಬರುವುದುಂಟು),

* ಮಗುವು ತಿಂಡಿಯನ್ನು ತಿಂದಿತು. ಹೀಗೆ ಇದ್ದಿದ್ದರೆ ಮಗುವೇ ಪ್ರಧಾನ ಕರ್ತೃವಾಗುತ್ತಿತ್ತು.

* ಭಯಕ್ಕೆ ಕಾರಣವಾದ ವಸ್ತುಗಳ ಮೇಲೆ ಪಂಚಮೀವಿಭಕ್ತಿ ಬರುವುದೆಂಬುದರಿಂದ ಇದನ್ನು ಕಾರಣ (ನಿಮಿತ್ತ) ವಿಭಾಗದಲ್ಲೇ ಸೇರಿಸಬಹುದು. ಆದರೂ ಸ್ಪಷ್ಟತೆಗೋಸುಗ ಭಾಗ ಮಾಡಿದೆಯಷ್ಟೆ.

* ಮಗುವೇ೩-ಹೀಗೆ ನ್ನು ಬರೆದಿರುವುದು ಇಲ್ಲಿರುವ ಸ್ವರವೇ ( ಎಂಬ ಸ್ವರ) ಸಂಬೋಧನಾ ವಿಭಕ್ತಿಯೆಂದೂ, ಇದು ಪ್ಲುತಸ್ವರ (ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡಬೇಕಾದ ಸ್ವರ) ವೆಂದೂ ತಿಳಿಯಲೋಸುಗ ಮಾತ್ರ. ಅನ್ಯತ್ರ ಹೀಗೆ ಬರೆಯುವ ಪರಿಪಾಠವಿಲ್ಲ. ಇಲ್ಲಿ ತಿಳಿವಳಿಕೆಗೋಸುಗ ಮಾತ್ರ ತೋರಿಸಲಾಗಿದೆ.

1 comment: