Sunday 3 June 2012


ಅಧ್ಯಾಯ : ಕ್ರಿಯಾಪದ ಪ್ರಕರಣ: ಭಾಗ v – ಕ್ರಿಯಾಪದ ರೂಪಗಳ ಕೆಲವು ವಿಶೇಷ ರೂಪಗಳು ªÀÄÄAzÀĪÀgÉzÀ ¨sÁUÀ ...

() ಸಂಭಾವನಾರ್ಥದಲ್ಲಿ ಬರುವ ಕೆಲವು ವಿಶೇಷ ರೂಪಗಳು

(i) ಸಂಭಾವನಾರ್ಥದಲ್ಲಿ ಸಾಮಾನ್ಯವಾಗಿ ಎಂಬ ಪ್ರತ್ಯಯವು ಧಾತುಗಳಿಗೂ, ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವುದುಂಟು.

ಉದಾಹರಣೆಗೆ:-

ಹೋಗು ಧಾತು
ಏಕವಚನಹೋದಾನು, ಹೋದಾಳು, ಹೋದೀತು, ಹೋದೀಯೆ, ಹೋದೇನು
ಬಹುವಚನಹೋದಾರು, ಹೋದಾರು, ಹೋದಾವು, ಹೋದೀರಿ, ಹೋದೇವು



ಬರು ಧಾತು
ಏಕವಚನಬಂದಾನು, ಬಂದಾಳು, ಬಂದೀತು, ಬಂದೀಯೆ, ಬಂದೇನು
ಬಹುವಚನಬಂದಾರು, ಬಂದಾವು, ಬಂದೀರಿ, ಬಂದೇವು



ತಿನ್ನು ಧಾತು
ಏಕವಚನತಿಂದಾನು, ತಿಂದಾಳು, ತಿಂದೀತು, ತಿಂದೀಯೆ, ತಿಂದೇನು
ಬಹುವಚನತಿಂದಾರು, ತಿಂದಾವು, ತಿಂದೀರಿ, ತಿಂದೇವು



ಇರು ಧಾತು
ಏಕವಚನಇದ್ದಾನು, ಇದ್ದಾಳು, ಇದ್ದೀತು, ಇದ್ದೀಯೆ, ಇದ್ದೇನು
ಬಹುವಚನಇದ್ದಾರು, ಇದ್ದಾವು, ಇದ್ದೀರಿ, ಇದ್ದೇವು



ಬೇ ಧಾತು
ಏಕವಚನಬೆಂದಾನು, ಬೆಂದಾಳು, ಬೆಂದೀತು, ಬೆಂದೀಯೆ, ಬೆಂದೇನು
ಬಹುವಚನಬೆಂದಾರು, ಬೆಂದಾವು, ಬೆಂದೀರಿ, ಬೆಂದೇವು



ಬೀಳು ಧಾತು
ಏಕವಚನಬಿದ್ದಾನು, ಬಿದ್ದಾಳು, ಬಿದ್ದೀತು, ಬಿದ್ದೀಯೆ, ಬಿದ್ದೇನು
ಬಹುವಚನಬಿದ್ದಾರು, ಬಿದ್ದಾವು, ಬಿದ್ದೀರಿ, ಬಿದ್ದೇವು



ಮೀ ಧಾತು
ಏಕವಚನಮಿಂದಾನು, ಮಿಂದಾಳು, ಮಿಂದೀತು, ಮಿಂದೀಯೆ, ಮಿಂದೇನು
ಬಹುವಚನಮಿಂದಾರು, ಮಿಂದಾವು, ಮಿಂದೀರಿ, ಮಿಂದೇವು

ಮೇಲಿನ ಕ್ರಿಯಾಪದಗಳನ್ನು ನೋಡಿದಾಗ-ಆನು, ಆಳು, ಆರು, ಈತು, ಆವು, ಈಯೆ, ಈರಿ, ಏನು, ಏವು-ಎಂಬ ಆಖ್ಯಾತಪ್ರತ್ಯಯಕ್ಕೂ ಧಾತುವಿಗೂ ಮಧ್ಯದಲ್ಲಿ ಪ್ರತ್ಯಯ ಬಂದಿರುವುದನ್ನು ಗಮನಿಸಿರಿ.

ಬರು, ತಿನ್ನು ಧಾತುಗಳ ರು ಮತ್ತು ನ್ನು ಅಕ್ಷರಗಳಿಗೆ ಅನುಸ್ವಾರವೂ, ಬೇ, ಮೀ ಇತ್ಯಾದಿ ಏಕಾಕ್ಷರ ಧಾತುಗಳ ದೀರ್ಘವು ಹ್ರಸ್ವವಾಗಿ ಅನುಸ್ವಾರದಿಂದ ಕೂಡಿ ಮಿಂ, ಬೆಂ ಎಂದೂ ರೂಪ ಪಡೆಯುತ್ತವೆ, ಅಂದರೆ ಬಂ, ತಿಂ, ಮಿಂ, ಬೆಂ ಅಕ್ಷರಗಳ ಮುಂದೆ ದಕಾರವೂ ಅದರ ಮುಂದೆ ಆಖ್ಯಾತಪ್ರತ್ಯಯಗಳೂ ಬಂದು ಸಂಭಾವನಾರೂಪಗಳಾಗುತ್ತವೆ ಎಂದು ತಿಳಿಯಬೇಕು.

(ii) ಕೊಡು, ಬಿಡು, ಸುಡು, ಉಡು, ತೊಡು, ಇಡು, ಮೊದಲಾದ ಡು ಕಾರಾಂತ ಆದಿಹ್ರಸ್ವಸ್ವರದಿಂದ ಕೂಡಿದ ಧಾತುಗಳ ಸಂಭಾವನಾರೂಪಗಳು ಭೂತಕಾಲದ ರೂಪಗಳನ್ನು ಹೋಲುತ್ತವೆ.

ಉದಾಹರಣೆಗೆ:-

ಕೊಡು ಧಾತು
ಏಕವಚನಕೊಟ್ಟಾನು, ಕೊಟ್ಟಾಳು, ಕೊಟ್ಟೀತು, ಕೊಟ್ಟೀಯೆ, ಕೊಟ್ಟೇನು
ಬಹುವಚನಕೊಟ್ಟಾರು, ಕೊಟ್ಟಾರು, ಕೊಟ್ಟಾವು, ಕೊಟ್ಟೀರಿ, ಕೊಟ್ಟೇವು



ಬಿಡು ಧಾತು
ಏಕವಚನಬಿಟ್ಟಾನು, ಬಿಟ್ಟಾಳು, ಬಿಟ್ಟೀತು, ಬಿಟ್ಟೀಯೆ, ಬಿಟ್ಟೇನು
ಬಹುವಚನಬಿಟ್ಟಾರು, ಬಿಟ್ಟಾರು, ಬಿಟ್ಟಾವು, ಬಿಟ್ಟೀರಿ, ಬಿಟ್ಟೇವು



ಸುಡು ಧಾತು
ಏಕವಚನಸುಟ್ಟಾನು, ಸುಟ್ಟಾಳು, ಸುಟ್ಟೀತು, ಸುಟ್ಟೀಯೆ, ಸುಟ್ಟೇನು
ಬಹುವಚನಸುಟ್ಟಾರು, ಸುಟ್ಟಾರು, ಸುಟ್ಟಾವು, ಸುಟ್ಟೀರಿ, ಸುಟ್ಟೇವು.



ಉಡು ಧಾತು
ಏಕವಚನಉಟ್ಟಾನು, ಉಟ್ಟಾಳು, ಉಟ್ಟೀತು, ಉಟ್ಟೀಯೆ, ಉಟ್ಟೇನು
ಬಹುವಚನಉಟ್ಟಾರು, ಉಟ್ಟಾರು, ಉಟ್ಟಾವು, ಉಟ್ಟೀರಿ, ಉಟ್ಟೇವು.

ಇವುಗಳ ಹಾಗೆಯೇ ಉಳಿದ ಧಾತುರೂಪಗಳನ್ನು ಅರಿಯಬೇಕು

(iii) ಡುಕಾರಾಂತಗಳಾದಮಾಡು, ಕೂಡು, ಬೇಡು, ತೀಡು ಮೊದಲಾದ ಆದಿ ದೀರ್ಘಸ್ವರದಿಂದ ಕೂಡಿದ ಧಾತುಗಳ ರೂಪಗಳು ಮೇಲೆ ಹೇಳಿದ ರೂಪಗಳ ಹಾಗೆ ಆಗುವುದಿಲ್ಲ. ಅವುಗಳ ರೂಪಗಳನ್ನು ಕೆಳಗೆ ನೋಡಿರಿ.

ಉದಾಹರಣೆಗೆ:- ಮಾಡಾನು (ಮಾಡಿಯಾನು), ಮಾಡಾಳು (ಮಾಡಿಯಾಳು), ಮಾಡಾರು (ಮಾಡಿಯಾರು), ಮಾಡೀತು, ಮಾಡಾವು, ಮಾಡಿಯಾವು-ಇತ್ಯಾದಿ.

ಮೇಲಿನ ಉದಾಹರಣೆಗಳಲ್ಲಿ ಮಾಡಾನು ಎಂಬುದು ಮಾಡಿಯಾನು ಎಂದೂ ಆಗುವುದು. ಆಗ ಧಾತುವಿನ ಉಕಾರಕ್ಕೆ ಇಕಾರಾದೇಶವಾಗುವುದು. ಸಂಧಿಯ ನಿಯಮದಂತೆ ಯಕಾರವು ಆಗಮವಾಗಿ ಬಂದು ರೂಪಗಳು ಸಿದ್ಧಿಸುವುವು. ಇದರ ಹಾಗೆ ಉಳಿದ ಧಾತುಗಳ ಸಿದ್ಧರೂಪ ಗಳನ್ನು ತಿಳಿಯಬೇಕು.

(iv) ಸಾಮಾನ್ಯವಾಗಿ ಸಂಭಾವನಾರ್ಥಕ ಕ್ರಿಯಾಪದದ ರೂಪಗಳು ಭೂತಕಾಲದ ರೂಪಗಳನ್ನು ಹೋಲುತ್ತವೆ. ಕೆಳಗೆ ಕೊಟ್ಟಿರುವ ಭೂತಕಾಲದ ಮತ್ತು ಸಂಭಾವನಾರ್ಥದ ಕ್ರಿಯಾಪದ ರೂಪಗಳ ಹೋಲಿಕೆಯನ್ನು ಗಮನಿಸಿರಿ. (ಪ್ರಥಮಪುರುಷ ಪುಲ್ಲಿಂಗ ರೂಪಗಳನ್ನು ಮಾತ್ರ ಕೊಟ್ಟಿದೆ. ಉಳಿದವುಗಳನ್ನು ಇವುಗಳ ಹಾಗೆಯೇ ತಿಳಿಯಿರಿ.)

ಪ್ರಥಮಪುರುಷ ಪುಲ್ಲಿಂಗ

ಭೂತಕಾಲ
ಸಂಭಾವನಾರ್ಥ
ಧಾತು
ಏಕವಚನ
ಬಹುವಚನ
ಏಕವಚನ
ಬಹುವಚನ
ತಿನ್ನು
-
ತಿಂದನು
-
ತಿಂದರು
ತಿಂದಾನು
-
ತಿಂದಾರು
ಬರು
-
ಬಂದನು
-
ಬಂದರು
ಬಂದಾನು
-
ಬಂದಾರು
ತಿರಿ
-
ತಿರಿದನು
-
ತಿರಿದರು
ತಿರಿದಾನು
-
ತಿರಿದಾರು
ಹುರಿ
-
ಹುರಿದನು
-
ಹುರಿದರು
ಹುರಿದಾನು
-
ಹುರಿದಾರು
ಸುರಿ
-
ಸುರಿದನು
-
ಸುರಿದರು
ಸುರಿದಾನು
-
ಸುರಿದಾರು
ತಿಳಿ
-
ತಿಳಿದನು
-
ತಿಳಿದರು
ತಿಳಿದಾನು
-
ತಿಳಿದಾರು
ಬಿಡು
-
ಬಿಟ್ಟನು
-
ಬಿಟ್ಟರು
ಬಿಟ್ಟಾನು
-
ಬಿಟ್ಟಾರು
ತೊಡು
-
ತೊಟ್ಟನು
-
ತೊಟ್ಟರು
ತೊಟ್ಟಾನು
-
ತೊಟ್ಟಾರು
ಕೊಡು
-
ಕೊಟ್ಟನು
-
ಕೊಟ್ಟರು
ಕೊಟ್ಟಾನು
-
ಕೊಟ್ಟಾರು
ಇಡು
-
ಇಟ್ಟನು
-
ಇಟ್ಟರು
ಇಟ್ಟಾನು
-
ಇಟ್ಟಾರು
ತೋಡು
-
ತೋಡಿದನು
-
ತೋಡಿದರು
ತೋಡಿಯಾನು
(
ತೋಡಾನು
-
ತೋಡಿಯಾರು
ತೋಡಾರು)
ಮಾಡು
-
ಮಾಡಿದನು
-
ಮಾಡಿದರು
ಮಾಡಾನು
-
ಮಾಡಾರು
ತರು
-
ತಂದನು
-
ತಂದರು
ತಂದಾನು
-
ತಂದಾರು
ಕಾಣು
-
ಕಂಡನು
-
ಕಂಡರು
ಕಂಡಾನು
-
ಕಂಡಾರು
ಬೇ
-
ಬೆಂದನು
-
ಬೆಂದರು
ಬೆಂದಾನು
-
ಬೆಂದಾರು
ಕಡಿ
-
ಕಡಿದನು
-
ಕಡಿದರು
ಕಡಿದಾನು
-
ಕಡಿದಾರು

ಕ್ರಿಯಾಪದಗಳ ಅರ್ಥದಲ್ಲಿ ಬರುವ ಕೆಲವು ಬೇರೆ ಪದಗಳು (ಕ್ರಿಯಾರ್ಥಕಾವ್ಯಯಗಳು).

(i) ಅವನಿಗೆ ವಿವೇಕ ಉಂಟು*

(ii) ನನಗೆ ಸ್ವಲ್ಪ ಹಣ ಬೇಕು

(iii) ಅವನಿಗೆ ಯಾವುದೂ ಬೇಡ

(iv) ನನ್ನಲ್ಲಿ ಹಣ ಇಲ್ಲ

(v) ಅದು ನನ್ನ ಮನೆ ಅಲ್ಲ

(vi) ಅವು ಜಿಂಕೆಗಳೇ ಹೌದು (ಅಹುದು)

ಮೇಲೆ ಹೇಳಿದ ಇಂಥ-ಬೇಕು, ಬೇಡ, ಇಲ್ಲ, ಅಲ್ಲ, ಉಂಟು, ಹೌದು-ಮೊದಲಾದ ಪದಗಳ ಪ್ರಯೋಜನವು ಹೆಚ್ಚು. ಇವು ಯಾವಾಗಲೂ ತಮ್ಮ ರೂಪದಲ್ಲಿ ವ್ಯತ್ಯಾಸಗೊಳ್ಳು ವುದಿಲ್ಲ. ಇದನ್ನು ಕ್ರಿಯೆಯ ಅರ್ಥಕೊಡುವ ಅವ್ಯಯಗಳು ಎನ್ನುತ್ತಾರೆ.

(೬೮) ಕ್ರಿಯಾರ್ಥಕಾವ್ಯಯಗಳು:- ಕ್ರಿಯಾಪದದ ಅರ್ಥಕೊಡುವ ಬೇಕು, ಬೇಡ, ಉಂಟು, ಇಲ್ಲ, ಅಲ್ಲ, ಸಾಕು, ಹೌದು-ಇತ್ಯಾದಿ ಅವ್ಯಯಗಳನ್ನು ಕ್ರಿಯಾರ್ಥಕಾವ್ಯಯ ಗಳೆನ್ನುವರು.

ಸಾಮಾನ್ಯವಾಗಿ ಕ್ರಿಯಾರ್ಥಕಾವ್ಯಯಗಳು ಸ್ವತಂತ್ರವಾಗಿಯೂ, ಕೆಲವು ಸಲ ತಮ್ಮ ಹಿಂದೆ ಇನ್ನೊಂದು ಕ್ರಿಯೆಯಿಂದ ಕೂಡಿ ಪ್ರಯೋಗಗೊಳ್ಳುವುದೂ ಉಂಟು. ಅಥವಾ ತಮ್ಮ ಮುಂದೆ ಇನ್ನೊಂದು ಕ್ರಿಯಾಪದದಿಂದ ಕೂಡಿ ಪ್ರಯೋಗಗೊಳ್ಳುವುದೂ ಉಂಟು.

ಉದಾಹರಣೆಗೆ:-

(i) ಹಿಂದೆ ಕ್ರಿಯೆ ಇರುವುದಕ್ಕೆ-

ಅಡಿಗೆ ಆಗಿಲ್ಲ. (ಆಗಿ+ಇಲ್ಲ)

ಹಣ್ಣು ತಿನ್ನಬೇಕು. (ತಿನ್ನ+ಬೇಕು

(ii) ಮುಂದೆ ಕ್ರಿಯೆ ಇರುವುದಕ್ಕೆ-

ನನಗೆ ಅದು ಬೇಡವಾಗಿದೆ. (ಬೇಡ+ಆಗಿದೆ)

ಹಣ ಬೇಕಾಗಿದೆ. (ಬೇಕು+ಆಗಿದೆ)

(iii) ಸ್ವತಂತ್ರವಾಗಿ ಪ್ರಯೋಗವಾಗುವುದಕ್ಕೆ-

ನನ್ನಲ್ಲಿ ಹಣ ಇಲ್ಲ.

ಹತ್ತು ರೂಪಾಯಿ ಬೇಕು.

ಇನ್ನೂ ಕೆಲವು ಉದಾಹರಣೆಗಳನ್ನು ನೋಡಿರಿ-

() ಅದಕ್ಕೆ ಬೆಲೆ ಉಂಟಾಯಿತು (ಉಂಟು+ಆಯಿತು)

() ಅವನಿಗೆ ಅದು ಬೇಕಾಯಿತು (ಬೇಕು+ಆಯಿತು)

() ನನಗೆ ಊಟ ಸಾಕಾಗಿತ್ತು (ಸಾಕು+ಆಗಿ+ಇತ್ತು)

() ರಾಜನು ಹೌದೆಂದನು (ಹೌದು+ಎಂದನು)

() ಅವನಲ್ಲಿ ಅದು ಇಲ್ಲದಿಲ್ಲ (ಇಲ್ಲದೆ+ಇಲ್ಲ)

() ಅವನಿಗೆ ಬೇಕಾಗಿಲ್ಲ (ಬೇಕು+ಆಗಿ+ಇಲ್ಲ)

() ನನಗೆ ಸಾಕಾಗಿದೆ (ಸಾಕು+ಆಗಿ+ಇದೆ)

() ನನ್ನಲ್ಲಿ ಇಲ್ಲವಾಗಿದೆ (ಇಲ್ಲ+ಆಗಿದೆ)

() ಆಸೆಯುಂಟಾಗಿದೆ (ಉಂಟು+ಆಗಿದೆ)

(೧೦) ನಾವು ಮಾಡುವುದುಂಟು (ಮಾಡುವುದು+ಉಂಟು)

ಮೇಲಿನ ಉದಾಹರಣೆಗಳನ್ನು ನೋಡಿದರೆ, ಕ್ರಿಯಾರ್ಥಕಾವ್ಯಯಗಳ ಮುಂದೆ ಆಗು ಧಾತುವಿನ ಕ್ರಿಯಾಪದಗಳು ಸೇರುವುದುಂಟು. ಅಥವಾ ಇವುಗಳ ಹಿಂದೆ ಅನೇಕ ಧಾತುಗಳ ಅಪೂರ್ಣಕ್ರಿಯೆಗಳು, ಕೃದಂತ ಭಾವನಾಮಗಳು ಸೇರುವುದೂ ಉಂಟು.



*ಉಂಟುಎಂಬ ಕ್ರಿಯಾರೂಪವು ಉಳ್ ಎಂಬ ಧಾತುವಿನಿಂದ ನಿಷ್ಪತ್ತಿಯಾದ ರೂಪವೆಂದೂ ಕೆಲವರು ಹೇಳುವರು.

ನಿಲ್ಲುವುದುಂಟು, ಇರುವುದುಂಟು-ಇತ್ಯಾದಿ ರೂಪಗಳು ವಿಶೇಷವಾಗಿ ಬಳಕೆಯಲ್ಲಿವೆ. ಇವನ್ನು-ಇರುವುದು ಎಂಬುದು ಉಂಟು ನಿಲ್ಲುವುದು ಎಂಬುದು ಉಂಟು ಎಂದು ಅರ್ಥಮಾಡಬೇಕು. ಕ್ರಿಯಾಪದಗಳು ಇರುತ್ತವೆ, ನಿಲ್ಲುತ್ತವೆ ಎಂಬ ಕ್ರಿಯಾಪದದ ಅರ್ಥದಲ್ಲಿ ಒಮ್ಮೊಮ್ಮೆ ಸಂಶಯ ತೋರುವಂತೆಯೂ ಭಾಸವಾಗುತ್ತವೆ. ನಿಲ್ಲುವುದುಂಟು ಎಂದರೆ ನಿಲ್ಲದಿರುವುದೂ ಉಂಟು, ಎಂಬ ಅರ್ಥದಲ್ಲೂ ಪ್ರಯೋಗವಾಗುತ್ತವೆ.

* ಹಿಂದಿನ ಪ್ರಕರಣದಲ್ಲಿ ಬಂದ ವಿಭಕ್ತಿ ಪಲ್ಲಟವನ್ನು ಜ್ಞಾಪಿಸಿಕೊಳ್ಳಿ. ಅಲ್ಲಿ ಒಂದು ವಿಭಕ್ತಿಪ್ರತ್ಯಯವನ್ನು ಪ್ರಯೋಗ ಮಾಡಬೇಕಾದ ಕಡೆ ಬೇರೆ ವಿಭಕ್ತಿಪ್ರತ್ಯಯವನ್ನು ಪ್ರಯೋಗ ಮಾಡಿ ಹೇಳುವುದುಂಟು. ಅದರಂತೆ ಇಲ್ಲಿ ಒಂದು ಕಾಲದಲ್ಲಿ ಹೇಳಬೇಕಾದ ಕ್ರಿಯೆಯನ್ನು ಬೇರೊಂದು ಕಾಲದ ಕ್ರಿಯಾಪದದಿಂದ ಹೇಳುವುದು ವಾಡಿಕೆ.

* ಕೇವಲ ಪ್ರಕೃತಿಗಳು ಪ್ರಯೋಗಕ್ಕೆ ಅರ್ಹವಾದುವಲ್ಲ. ಆಖ್ಯಾತಪ್ರತ್ಯಯವಿಲ್ಲದೆ ಕ್ರಿಯಾಪದವಾಗುವಂತೆಯೂ ಇಲ್ಲ. ಆದ್ದರಿಂದ ಇಲ್ಲಿ ಆಖ್ಯಾತ ಪ್ರತ್ಯಯವು ಬಂದು ಲೋಪವಾದುದಾಗಿ ಭಾವಿಸಬೇಕೆಂದು ಹೇಳುವರು.

+ ಹಳಗನ್ನಡದಲ್ಲಿ ಧಾತುಗಳು ತರ್, ಬರ್ ಎಂಬ ರೂಪದಿಂದಿರುತ್ತವೆ. ಅಲ್ಲಿ ವಿಧ್ಯರ್ಥ ಮಧ್ಯಮಪುರುಷ ಏಕವಚನದಲ್ಲಿ ಇವುಗಳ ರೂಪಗಳು ತಾರ, ಬಾರ-ಎಂದೂ ಬಹುವಚನದಲ್ಲಿ ಇವು ತನ್ನಿಂ, ಬನ್ನಿಂ-ಎಂದೂ ರೂಪ ಹೊಂದುತ್ತವೆ.

* ಆರ್ ಎಂಬುದು ಸಾಮರ್ಥ್ಯ ಎಂಬರ್ಥದ ಧಾತುವೇ ಆಗಿದೆ. ಆದರೆ ಇದರ ಕ್ರಿಯಾರೂಪಗಳು ಕೇವಲ ನಿಷೇಧಾರ್ಥದಲ್ಲಿಯೇ ಪ್ರಯೋಗಿಸಲ್ಪಡುತ್ತವೆ.

+ ಅರಿರಿ ಎಂಬ ರೂಪವೂ ಉಂಟು.

* ಉಂಟು-ಎಂಬುದು ಉಳ್ ಧಾತುವಿನಿಂದ ನಿಷ್ಪನ್ನವಾದ ರೂಪವೆಂದು ಕೆಲವರ ಮತ. ಆದರೆ ಇದು ಲಿಂಗವಚನಾದಿಗಳಿಂದ ವ್ಯತ್ಯಾಸವಾಗುವ ಶಬ್ದರೂಪವಾದ್ದರಿಂದ ಇದನ್ನು ಕ್ರಿಯಾರ್ಥಕಾವ್ಯಯವೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ.

No comments:

Post a Comment