Sunday, 3 June 2012


ಅಧ್ಯಾಯ : ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ v – ವಿಭಕ್ತಿ ಪ್ರತ್ಯಯಗಳು

ಇದುವರೆಗೆ ನಾಮಪ್ರಕೃತಿ, ಲಿಂಗ ಮತ್ತು ವಚನಗಳ ಬಗೆಗೆ ಅರಿತಿರುವಿರಿ. ನಾಮಪ್ರಕೃತಿಗಳಿಗೆ ವಿಧವಾದ ವಿಭಕ್ತಿಪ್ರತ್ಯಯಗಳು[1] ಅನೇಕ ಕಾರಕಾರ್ಥಗಳಲ್ಲಿ ಸೇರುವುವು. ಈಗ ಹಾಗೆ ಬರುವ ಪ್ರತ್ಯಯಗಳಾವುವು? ಅವುಗಳ ಪ್ರಯೋಜನವೇನು ಎಂಬುದನ್ನು ತಿಳಿಯೋಣ. ಕೆಳಗಿನ ವಾಕ್ಯಗಳನ್ನು ನೋಡಿರಿ:-

ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು ವಾಕ್ಯವು-ಭೀಮ, ತಾನು, ಬಲಗಾಲು, ಚೆಂಡು-ಹೀಗೆ ಕೇವಲ ನಾಮಪ್ರಕೃತಿಗಳನ್ನೇ ಹೇಳಿ ಒದೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ.

ಭೀಮ, ತಾನು, ಬಲಗಾಲು, ಚೆಂಡು ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ. ಸಂಬಂಧವನ್ನು ಪ್ರತ್ಯಯಗಳು ಉಂಟುಮಾಡುತ್ತವೆ. ಹೇಗೆಂಬುದನ್ನು ನೋಡಿರಿ.

ಭೀಮ ಎಂಬ ಪ್ರಕೃತಿಯ ಮೇಲೆ ಪ್ರತ್ಯಯ ಸೇರಿದಾಗ ಭೀಮನು ಎಂಬ ಕರ್ತೃಪದವಾಗಿ ಒದೆಯುವ ಕೆಲಸ ಮಾಡಿದನು ಎಂಬ ಅರ್ಥವು ಹೊಳೆಯುವುದು-ಮುಂದಿನ ಪ್ರಶ್ನೆ ಏನನ್ನು ಒದೆದನು? ಎಂಬುದು. ಆಗ ಚೆಂಡು ಎಂಬ ಪ್ರಕೃತಿಯಮೇಲೆ ಕರ್ಮಾರ್ಥದ ಅನ್ನು ಪ್ರತ್ಯಯ ಸೇರಿ ಚೆಂಡನ್ನು ಎಂಬ ಕರ್ಮಪದವಾಯಿತು. ಒದೆಯುವುದಕ್ಕೆ ಇದು ಕರ್ಮವಾಯಿತು. ಇದರಂತೆ ಮುಂದೆ ಯಾವುದರಿಂದ? ಎಂಬ ಪ್ರಶ್ನೆ ಹುಟ್ಟುವುದು. ಆಗ ಬಲಗಾಲು ಎಂಬ ಪ್ರಕೃತಿಯ ಮುಂದೆ ಸಾಧನಾರ್ಥಕ (ಕರಣಾರ್ಥಕ) ಇಂದ ಪ್ರತ್ಯಯವು ಸೇರಿ ಬಲಗಾಲಿನಿಂದ ಎಂಬ ಕರಣಾರ್ಥಕ ಪದದ ಸಂಬಂಧವುಟಾಯಿತು. ತಾನು ಎಂಬ ಪ್ರಕೃತಿಯ ಮೇಲೆ ಎಂಬ ಸಂಬಂಧಾರ್ಥಕ ಪ್ರತ್ಯಯ ಸೇರಿ ತನ್ನ ಸಂಬಂಧವಾದ ಬಲಗಾಲಿ ನಿಂದ ಎಂಬ ಸಂಬಂಧವು ಸೂಚಿತವಾಗುವುದು.

ಇಲ್ಲಿ ಬಂದಿರುವ ನಾಲ್ಕು ಪ್ರಕೃತಿಗಳ ಮೇಲೂ_

. ಭೀಮನು ಎಂಬಲ್ಲಿಯ ಪ್ರತ್ಯಯ ಕರ್ತೃರ್ಥದಲ್ಲೂ,

. ಚೆಂಡನ್ನು ಎಂಬಲ್ಲಿಯ ಅನ್ನು ಪ್ರತ್ಯಯ ಕರ್ಮಾರ್ಥದಲ್ಲೂ,

. ತನ್ನ ಎಂಬಲ್ಲಿಯ ಪ್ರತ್ಯಯ ಸಂಬಂಧದಲ್ಲೂ,

. ಬಲಗಾಲಿನಿಂದ ಎಂಬಲ್ಲಿಯ ಇಂದ ಪ್ರತ್ಯಯ ಸಾಧನಾರ್ಥದಲ್ಲೂ ಎಂದರೆ ಕರಣಾರ್ಥದಲ್ಲೂ ಸೇರಿ ವಾಕ್ಯದಲ್ಲಿ ಪರಸ್ಪರ ಸಂಬಂಧವನ್ನುಂಟುಮಾಡುವುವು.

ಕೇವಲ ಪ್ರಕೃತಿಗಳನ್ನೇ ಪ್ರಯೋಗ ಮಾಡುವುದು ಸಾಧ್ಯವಿಲ್ಲ. ಪ್ರಯೋಗ ಮಾಡಲೂ ಬಾರದು ಎಂಬುದು ಮೇಲಿನ ವಿವರಣೆಯಿಂದ ಅರ್ಥವಾಗುವುದು. ಅಲ್ಲದೆ , ಅನ್ನು, ಇಂದ,-ಇತ್ಯಾದಿ ಪ್ರತ್ಯಯಗಳೂ ಪ್ರಯೋಗಕ್ಕೆ ಯೋಗ್ಯವಲ್ಲ. ಕೆಲವು ಕಡೆ ವಾಕ್ಯಗಳಲ್ಲಿ ವಿಭಕ್ತಿಪ್ರತ್ಯಯವು ಇಲ್ಲದಂತೆ ಕಂಡುಬಂದರೂ ಅವು ಬಂದು ಲೋಪವಾಗಿವೆಯೆಂದು ಭಾವಿಸಬೇಕು.

ಉದಾಹರಣೆಗೆ:-

ಭೀಮನು ಚೆಂಡನ್ನು ಎಸೆದನುಎಂಬ ವಾಕ್ಯವು ಭೀಮ ಚೆಂಡನ್ನು ಎಸೆದನು - ಹೀಗೆ ಪ್ರಯೋಗಿಸಲ್ಪಟ್ಟರೆ ಭೀಮ ಎಂಬುದರ ಮೇಲೆ ವಿಭಕ್ತಿಪ್ರತ್ಯಯವೇ ಬಂದಿಲ್ಲವೆಂದು ಹೇಳಲಾಗದು. ಆದರೆ ಅಲ್ಲಿ ಎಂಬ ವಿಭಕ್ತಿಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು. ಹಾಗಾದರೆ ವಿಭಕ್ತಿಪ್ರತ್ಯಯವೆಂದರೇನು? ಎಂಬ ಬಗೆಗೆ ಕೆಳಗಿನಂತೆ ಸೂತ್ರವನ್ನು ಹೇಳಬಹುದು.

(೫೨) ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಆಧಿಕರಣಾಧಿಕಾರಕಾರ್ಥ ಗಳನ್ನು ವಿಭಾಗಿಸಿಕೊಡುವ ಶಬ್ದರೂಪವೇ ವಿಭಕ್ತಿ ಎನಿಸುವುದು.

ಷಷ್ಠೀವಿಭಕ್ತಿಯು ಕಾರಕಾರ್ಥಗಳಲ್ಲಿ ಸೇರಿಲ್ಲ. ಅದರ ಹಾಗೆ ಸಂಬೋಧನಾ ವಿಭಕ್ತಿಯೂ ಸೇರಿಲ್ಲ. ಕೇವಲ ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಸಪ್ತಮೀ ಆರು ವಿಭಕ್ತಿಗಳೇ ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವಂಥವುಗಳು. ಅವುಗಳ ವಿಷಯವನ್ನು ಈಗ ತಿಳಿಯೋಣ.

ವಿಭಕ್ತಿಗಳು-ಕಾರಕಾರ್ಥಗಳು-ಪ್ರತ್ಯಯಗಳು-ಪದಗಳು
ಸಂ
ವಿಭಕ್ತಿಗಳು
ಅರ್ಥಗಳು
(
ಕಾರಕಾರ್ಥಗಳು)
ವಿಭಕ್ತಿಪ್ರತ್ಯಯ
ಹೊಸಗನ್ನಡ ನಾಮಪದಗಳು
ಹಳಗನ್ನಡ ನಾಮಪದಗಳು
ಹೊಸಗನ್ನಡ
ಹೊಸಗನ್ನಡ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾ[2]
ಕರ್ತ್ರರ್ಥ
ಮ್
ರಾಮನು
ರಾಮರು
ರಾಮಮ್
ರಾಮರ್
ದ್ವಿತೀಯಾ
ಕರ್ಮಾರ್ಥ
ಅನ್ನು
ಅಂ
ರಾಮನನ್ನು
ರಾಮರನ್ನು
ರಾಮನಂ
ರಾಮರಂ
ತೃತೀಯಾ
ಕರಣಾರ್ಥ
(
ಸಾಧನಾರ್ಥ)
ಇಂದ
ಇಂ,
ಇಂದು,
ಇಂದೆ
ರಾಮನಿಂದ
ರಾಮರಿಂದ
ರಾಮನಿಂ
ರಾಮನಿಂದಂ
ರಾಮನಿಂದೆ
ರಾಮರಿಂ
ರಾಮರಿಂದಂ
ರಾಮರಿಂದೆ
ಚತುರ್ಥೀ
ಸಂಪ್ರದಾನ
(
ಕೊಡುವಿಕೆ)
ಗೆ, ಇಗೆ, ಕ್ಕೆ, ಅಕ್ಕೆ[3]
ಗೆ, ಕೆ, ಕ್ಕೆ
ರಾಮನಿಗೆ
ರಾಮರಿಗೆ
ರಾಮಂಗೆ
ರಾಮರ್ಗೆ
ಪಂಚಮೀ[4]
ಅಪಾದಾನ (ಅಗಲಿಕೆ)
ದೆಸೆಯಿಂದ
ಅತ್ತಣಿಂ,
ಅತ್ತಣಿಂದಂ
ಅತ್ತಣಿಂದೆ
ರಾಮನ
ದೆಸೆಯಿಂದ
ರಾಮರ
ದೆಸೆಯಿಂದ
ರಾಮನತ್ತಣಿಂ
ರಾಮರತ್ತಣಿಂ
ರಾಮನತ್ತಣಿಂದಂ
ರಾಮನತ್ತಣಿಂದೆ
ರಾಮರತ್ತಣಿಂದಂ
ರಾಮರತ್ತಣಿಂದೆ
ಷಷ್ಠೀ[5]
ಸಂಬಂಧ
ರಾಮನ
ರಾಮರ
ರಾಮನ
ರಾಮರ
ಸಪ್ತಮೀ
ಅಧಿಕರಣ
ಅಲ್ಲಿ, ಅಲಿ,
ಒಳು,
ಒಳ್
ರಾಮನಲ್ಲಿ
ರಾಮನಲಿ
ರಾಮನೊಳು
ರಾಮರಲ್ಲಿ
ರಾಮರಲಿ
ರಾಮರೊಳು
ರಾಮನೊಳ್
ರಾಮರೊಳ್
ಸಂಬೋಧನಾ[6]
ಕರೆಯುವಿಕೆ
(
ಅಭಿಮುಖೀಕರಣ)
, ಇರಾ,
,
, ಇರಾ,
,
ರಾಮಾ
ರಾಮನೇ
ರಾಮರಿರಾ,
ರಾಮರುಗಳೇ
ರಾಮಾ,
ರಾಮನೇ
ರಾಮರಿರಾ,
ರಾಮರ್ಗಳಿರಾ

ವಿಭಕ್ತಿಪ್ರತ್ಯಯಗಳು ನಾಮಪ್ರಕೃತಿಗಳ ಮೇಲೆ ಸೇರುವಾಗ ಬರುವ ಕೆಲವು ಆಗಮಾಕ್ಷರ ಗಳನ್ನು ಈಗ ನೋಡೋಣ.

['ಆಗಮಾಕ್ಷರ' ಎಂದರೆ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವ (ಹೊಸದಾಗಿ ಬರುವ) ಅಕ್ಷರ ಅಥವಾ ಅಕ್ಷರಗಳು.]

() ಕಾರಾಂತ ನಾಮಪ್ರಕೃತಿ ಅಣ್ಣ ಶಬ್ದ_

ಏಕವಚನ
ಬಹುವಚನ
ಪ್ರಥಮಾ
-
ಅಣ್ಣ
+
=
ಅಣ್ಣ
+
+
=
ಅಣ್ಣನು
ಅಣ್ಣಂದಿರು
ದ್ವಿತೀಯಾ
-
ಅಣ್ಣ
+
ಅನ್ನು
=
ಅಣ್ಣ
+
+
ಅನ್ನು
=
ಅಣ್ಣನನ್ನು
ಅಣ್ಣಂದಿರನ್ನು
ತೃತೀಯಾ
-
ಅಣ್ಣ
+
ಇಂದ
=
ಅಣ್ಣ
+
+
ಇಂದ
=
ಅಣ್ಣನಿಂದ
ಅಣ್ಣಂದಿರಿಂದ
ಚತುರ್ಥೀ
-
ಅಣ್ಣ
+
ಇಗೆ
=
ಅಣ್ಣ
+
+
ಇಗೆ
=
ಅಣ್ಣನಿಗೆ
ಅಣ್ಣಂದಿರಿಗೆ
ಪಂಚಮೀ
-
ಅಣ್ಣ
+
ದೆಸೆಯಿಂದ
=
ಅಣ್ಣ
+
+
ದೆಸೆಯಿಂದ
=
ಅಣ್ಣನ
ದೆಸೆಯಿಂದ
ಅಣ್ಣಂದಿರ
ದೆಸೆಯಿಂದ
ಷಷ್ಠೀ
-
ಅಣ್ಣ
+
=
ಅಣ್ಣ
+
+
=
ಅಣ್ಣನ
ಅಣ್ಣಂದಿರ
ಸಪ್ತಮೀ
-
ಅಣ್ಣ
+
ಅಲ್ಲಿ
=
ಅಣ್ಣ
+
+
ಅಲ್ಲಿ
=
ಅಣ್ಣನಲ್ಲಿ
ಅಣ್ಣಂದಿರಲ್ಲಿ
ಸಂಬೋಧನಾ
-
ಅಣ್ಣ
+
=
ಅಣ್ಣ
+
+
=
ಅಣ್ಣನೇ
ಅಣ್ಣಂದಿರೇ
ಅಣ್ಣ
+
=
ಅಣ್ಣ
+
=
ಅಣ್ಣಾ
ಅಣ್ಣಂದಿರಾ

ಅಣ್ಣ ಎಂಬ ಅಕಾರಾಂತ ಪುಲ್ಲಿಂಗದಲ್ಲಿ ಏಕವಚನದಲ್ಲಿ ವಿಭಕ್ತಿಪ್ರತ್ಯಯಗಳು ಎಲ್ಲ ಕಡೆಗೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಕಾರವು ಆಗಮವಾಗಿ ಬರುತ್ತದೆ. ಸಂಬೋಧನೆಯಲ್ಲಿ ಪ್ರತ್ಯಯ ಪರವಾದಾಗ ಮಾತ್ರ ಕಾರಾಗಮವಾಗುವುದಿಲ್ಲ.

() ಕಾರಾಂತ ಸ್ತ್ರೀಲಿಂಗ ಅಕ್ಕ ಶಬ್ದ_

ಏಕವಚನ
ಬಹುವಚನ
ಪ್ರಥಮಾ
-
ಅಕ್ಕ
+
=
ಅಕ್ಕ
+
+
=
ಅಕ್ಕನು
ಅಕ್ಕಂದಿರು
ದ್ವಿತೀಯಾ
-
ಅಕ್ಕ
+
ಅನ್ನು
=
ಅಕ್ಕ
+
+
ಅನ್ನು
=
ಅಕ್ಕನನ್ನು
ಅಕ್ಕಂದಿರನ್ನು
ತೃತೀಯಾ
-
ಅಕ್ಕ
+
ಇಂದ
=
ಅಕ್ಕ
+
+
ಇಂದ
=
ಅಕ್ಕನಿಂದ
ಅಕ್ಕಂದಿರಿಂದ
ಚತುರ್ಥೀ
-
ಅಕ್ಕ
+
ಇಗೆ
=
ಅಕ್ಕ
+
+
ಇಗೆ
=
ಅಕ್ಕನಿಗೆ
ಅಕ್ಕಂದಿರಿಗೆ
ಪಂಚಮೀ
-
ಅಕ್ಕ
+
ದೆಸೆಯಿಂದ
=
ಅಕ್ಕ
+
+
ದೆಸೆಯಿಂದ
=
ಅಕ್ಕನ ದೆಸೆಯಿಂದ
ಅಕ್ಕಂದಿರ ದೆಸೆಯಿಂದ
ಷಷ್ಠೀ
-
ಅಕ್ಕ
+
=
ಅಕ್ಕ
+
+
=
ಅಕ್ಕನ
ಅಕ್ಕಂದಿರ
ಸಪ್ತಮೀ
-
ಅಕ್ಕ
+
ಅಲ್ಲಿ
=
ಅಕ್ಕ
+
+
ಅಲ್ಲಿ
=
ಅಕ್ಕನಲ್ಲಿ
ಅಕ್ಕಂದಿರಲ್ಲಿ
ಸಂಬೋಧನಾ
-
ಅಕ್ಕ
+
=
ಅಕ್ಕ
+
+
=
ಅಕ್ಕನೇ
ಅಕ್ಕಂದಿರೇ
ಅಕ್ಕ
+
=
ಅಕ್ಕ
+
=
ಅಕ್ಕಾ
ಅಕ್ಕಂದಿರಾ

ಪುಲ್ಲಿಂಗದಂತೆಯೇ ಸ್ತ್ರೀಲಿಂಗ ಅಕಾರಾಂತ ಪ್ರಕೃತಿಯ ಮೇಲೆ ಏಕವಚನದಲ್ಲಿ ವಿಭಕ್ತಿಪ್ರತ್ಯಯಗಳು ಸೇರುವಾಗ ಬಹುಶಃ ಎಲ್ಲ ಕಡೆಗೂ ಕಾರಾಗಮ ಬಂದಿರುವುದನ್ನು ಕಾಣಬಹುದು. ಸಂಬೋಧನೆಯಲ್ಲಿ ವಿಭಕ್ತಿಪ್ರತ್ಯಯ ಸೇರಿದಾಗ ಮಾತ್ರ ಕಾರಾ ಗಮವಿಲ್ಲ[7].

ಮೇಲೆ ತಿಳಿಸಿದಂತೆ ಸಾಮಾನ್ಯವಾಗಿ ಅಕಾರಾಂತ ಪುಲ್ಲಿಂಗ, ಸ್ತ್ರೀಲಿಂಗಗಳಲ್ಲಿ ಏಕವಚನದ ವಿಭಕ್ತಿಪ್ರತ್ಯಯಗಳು ಸೇರುವಾಗ ನಕಾರವು ಆಗಮವಾಗುತ್ತದೆಂದು ತಿಳಿಯಬೇಕು. ಬಹುವಚನ ದಲ್ಲಿ ಬರುವುದಿಲ್ಲ. ಅಲ್ಲಿ ಬೇರೆ ಬಹುವಚನ ಸೂಚಕ ಆಗಮವು ಬರುವುದನ್ನು ಹಿಂದೆಯೇ ತಿಳಿಸಿದೆ.

ಈಗ ಇನ್ನೊಂದು ಬಗೆಯ ಆಗಮ ಬರುವುದನ್ನು ಕೆಳಗಿನ ಅಕಾರಾಂತ ನಪುಂಸಕಲಿಂಗದಲ್ಲಿ ಗಮನಿಸಿರಿ.

() ‘ಮರಎಂಬ ಕಾರಾಂತ ನಪುಂಸಕಲಿಂಗ ಪ್ರಕೃತಿ_

ವಿಭಕ್ತಿ

ಏಕವಚನ
ಬಹುವಚನ
ಪ್ರಥಮಾ
-
ಮರ
+
=
ಮರ
+
+
=
ಮರವು
ಮರಗಳು
ದ್ವಿತೀಯಾ
-
ಮರ
+
ಅನ್ನು
=
ಮರ
+
+
ಅನ್ನು
=
ಮರವನ್ನು
ಮರಗಳನ್ನು
ತೃತೀಯಾ
-
ಮರ
+
ಇಂದ
=
ಮರ
+
+
ಇಂದ
=
ಮರದಿಂದ
ಮರಗಳಿಂದ
ಚತುರ್ಥೀ
-
ಮರ
+
ಕ್ಕೆ
=
ಮರ
+
+
ಕ್ಕೆ, ಇಗೆ
=
ಮರಕ್ಕೆ
ಮರಗಳಿಗೆ
ಪಂಚಮೀ
-
ಮರ
+
ದೆಸೆಯಿಂದ
=
ಮರ
+
+
ದೆಸೆಯಿಂದ
=
ಮರದ
ದೆಸೆಯಿಂದ
ಮರಗಳ
ದೆಸೆಯಿಂದ
ಷಷ್ಠೀ
-
ಮರ
+
=
ಮರ
+
+
=
ಮರದ
ಮರಗಳ
ಸಪ್ತಮೀ
-
ಮರ
+
ಅಲ್ಲಿ
=
ಮರ
+
+
ಅಲ್ಲಿ
=
ಮರದಲ್ಲಿ
ಮರಗಳಲ್ಲಿ
ಸಂಬೋಧನಾ
-
ಮರ
+
=
ಮರ
+
+
=
ಮರವೇ
ಮರಗಳಿರಾ

ಮರ ಎಂಬ ಅಕಾರಾಂತ ನಪುಂಸಕಲಿಂಗ ನಾಮಪ್ರಕೃತಿಯ ಮೇಲೆ ವಿಧವಾದ ನಾಮವಿಭಕ್ತಿಪ್ರತ್ಯಯಗಳನ್ನು ಹಚ್ಚಿದಾಗ ಪ್ರಥಮಾ, ದ್ವಿತೀಯಾ, ಸಂಬೋಧನೆಗಳಲ್ಲಿ ಕಾರವೂ, ಚತುರ್ಥಿಯನ್ನುಳಿದು ಬೇರೆ ಕಡೆಗಳಲ್ಲಿ ಕಾರವೂ ಆಗಮಗಳಾಗಿ ಬಂದಿವೆ ಎಂಬುದನ್ನು ಗಮನಿಸಿರಿ.

ಆದ್ದರಿಂದ ಅಕಾರಾಂತ ನಪುಂಸಕಲಿಂಗ ಪ್ರಕೃತಿಗಳ ಮೇಲೆ ಏಕವಚನದಲ್ಲಿ ವಿಭಕ್ತಿ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಪ್ರಥಮಾ, ದ್ವಿತೀಯಾ, ಸಂಬೋಧನಗಳಲ್ಲಿ ಕಾರವೂ, ತೃತೀಯಾ, ಪಂಚಮೀ, ಷಷ್ಠೀ, ಸಪ್ತಮಿಗಳಲ್ಲಿ ಕಾರವೂ ಆಗಮವಾಗಿ ಬರುವುವು.

ಪ್ರಾಯಶಃ ಬರುವುವು ಎಂದು ಹೇಳಿರುವುದರಿಂದ ಪ್ರಾಣಿವಾಚಕಗಳಾದ ಅಕಾರಾಂತ ನಪುಂಸಕಲಿಂಗಗಳಲ್ಲಿ ಕೆಲವು ಕಡೆ ದಕಾರವು ಬರುವುದಿಲ್ಲ.

ಉದಾಹರಣೆಗೆ:-

ಅಕಾರಾಂತ ನಪುಂಸಕಲಿಂಗ ಕೋಣಶಬ್ದ:- ಕೋಣವು, ಕೋಣನನ್ನು, ಕೋಣನಿಂದ, ಕೋಣನಿಗೆ, ಕೋಣನ ದೆಸೆಯಿಂದ, ಕೋಣನ, ಕೋಣನಲ್ಲಿ, ಕೋಣವೇ (ಕೋಣನೇ)

ಅಕಾರಾಂತ ನಪುಂಸಕಲಿಂಗ ಗರುಡ ಶಬ್ದ:- ಗರುಡವು, ಗರುಡನನ್ನು, ಗರುಡನಿಂದ, ಗರುಡನಿಗೆ, ಗರುಡನ ದೆಸೆಯಿಂದ, ಗರುಡನ, ಗರುಡನಲ್ಲಿ, ಗರುಡವೇ (ಗರುಡನೇ).

ಮೇಲಿನಕೋಣ’,ಗರುಡ ಎರಡೂ ಅಕಾರಾಂತ ನಪುಂಸಕಲಿಂಗ ಪ್ರಕೃತಿಗಳ ಮೇಲೆ ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮಿ, ಷಷ್ಠೀ, ಸಪ್ತಮೀಗಳಲ್ಲಿ ಪುಲ್ಲಿಂಗದಂತೆ ನಕಾರಾಗಮವೂ, ಪ್ರಥಮಾ ಮತ್ತು ಸಂಬೋಧನೆಗಳಲ್ಲಿ ಕಾರವೂ, ಸಂಬೋಧನೆಯಲ್ಲಿ ವಿಕಲ್ಪದಿಂದ[8] ಕಾರವೂ, ತೃತೀಯೇಯಲ್ಲಿ ವಿಕಲ್ಪದಿಂದ ಕೋಣದಿಂದ, ಗರುಡದಿಂದ ಎಂದು ಆದಾಗ ಕಾರವೂ ಆಗಮಗಳಾಗುತ್ತವೆಂದು ತಿಳಿಯಬೇಕು.

() ಇನ ಎಂಬ ಆಗಮ ಬರುವ ವಿಚಾರ

ಗುರು, ಊರು, ಮಗು, ವಧು-ಮೊದಲಾದ ಉಕಾರಾಂತ ಪ್ರಕೃತಿಗಳಿಗೆ ತೃತೀಯಾ, ಪಂಚಮಿ, ಷಷ್ಠೀ, ಸಪ್ತಮೀ ವಿಭಕ್ತಿಗಳಲ್ಲಿ ಇನ ಎಂಬ ಆಗಮ ವಿಕಲ್ಪವಾಗಿ ಬರುವುದು. (ವಿಕಲ್ಪವಾಗಿ ಬರುವುದೆಂದು ಹೇಳಿರುವುದರಿಂದ ಬೇರೊಂದು ಆಗಮವೂ ಬರುವುದೆಂದು ತಿಳಿಯಬೇಕು. ಅಥವಾ ಯಾವ ಆಗಮವೂ ಬಾರದೆ ಇರುವುದೆಂದೂ ತಿಳಿಯಬೇಕು).

ಉದಾಹರಣೆಗೆ:-

ತೃತೀಯಾ
(i)
ಗುರುವಿನಿಂದ
(ಇನಾಗಮ)
ಗುರುವಿನಿಂದ (ವಕಾರಾಗಮ)
(ii)
ಊರಿನಿಂದ
(ಇನಾಗಮ)
ಊರಿಂದ (ಯಾವ ಆಗಮವೂ ಇಲ್ಲ)
(iii)
ವಧುವಿನಿಂದ
(ಇನಾಗಮ)
ವಧುವಿನಿಂದ (ವಕಾರಾಗಮ)
(iv)
ಮಗುವಿನಿಂದ
(ಇನಾಗಮ)
ಮಗುವಿನಿಂದ (ವಕಾರಾಗಮ)
ಪಂಚಮೀ
(i)
ಗುರುವಿನದೆಸೆಯಿಂದ
(ಇನಾಗಮ)
(ii)
ಊರಿನದೆಸೆಯಿಂದ
(ಇನಾಗಮ)
ಊರದೆಸೆಯಿಂದ (ಯಾವ ಆಗಮವೂ ಇಲ್ಲ)
(iii)
ವಧುವಿನದೆಸೆಯಿಂದ
(ಇನಾಗಮ)
(iv)
ಮಗುವಿನದೆಸೆಯಿಂದ
(ಇನಾಗಮ)
ಷಷ್ಠೀ
(i)
ಗುರುವಿನ
(ಇನಾಗಮ)
(ii)
ಊರಿನ
(ಇನಾಗಮ)
ಊರ (ಯಾವ ಆಗಮವೂ ಇಲ್ಲ)
(iii)
ವಧುವಿನ
(ಇನಾಗಮ)
(iv)
ಮಗುವಿನ
(ಇನಾಗಮ)
ಸಪ್ತಮೀ
(i)
ಗುರುವಿನಲ್ಲಿ
(ಇನಾಗಮ)
(ii)
ಊರಿನಲ್ಲಿ
(ಇನಾಗಮ)
ಊರಲ್ಲಿ(ಯಾವ ಆಗಮವೂ ಇಲ್ಲ)
(iii)
ವಧುವಿನಲ್ಲಿ
(ಇನಾಗಮ)
(iv)
ಮಗುವಿನಲ್ಲಿ
(ಇನಾಗಮ)

() ಅರ ಎಂಬಾಗಮ ಬರುವ ವಿಚಾರ

(i) ಉಕಾರಾಂತಗಳಾದ ಹಿರಿದು, ಕಿರಿದು ಮುಂತಾದ ಗುಣವಾಚಕ ಶಬ್ದಗಳು, (ii) ಒಂದು ಎಂಬ ಸಂಖ್ಯಾವಾಚಕ ಪದ (iii) ಅದು, ಇದು ಮುಂತಾದ ಸರ್ವನಾಮ (iv) ಕೊಡುವುದು, ಹೋಗುವುದು ಇತ್ಯಾದಿ ಉದು ಪ್ರತ್ಯಯಾಂತ ಕೃದಂತಗಳಿಗೆ ತೃತೀಯಾ, ಪಂಚಮೀ, ಷಷ್ಠೀ, ಸಪ್ತಮೀ ವಿಭಕ್ತಿಗಳಲ್ಲಿ ಅರ ಎಂಬಾಗಮವು ಬರುವುದು.

ಉದಾಹರಣೆಗೆ:-

(i) ಗುಣವಾಚಕಗಳು - ಹಿರಿದು, ಕಿರಿದು-ಇತ್ಯಾದಿ

ತೃತೀಯಾ
ಹಿರಿದು
+
ಅರ
+
ಇಂದ
=
ಹಿರಿದರಿಂದ
(ಅರ ಆಗಮ)
ಪಂಚಮೀ
ಹಿರಿದು
+
ಅರ
+
ದೆಸೆಯಿಂದ
=
ಹಿರಿದರದೆಸೆಯಿಂದ
(ಅರ ಆಗಮ)
ಷಷ್ಠೀ
ಹಿರಿದು
+
ಅರ
+
=
ಹಿರಿದರ
(ಅರ ಆಗಮ)
ಸಪ್ತಮೀ
ಹಿರಿದು
+
ಅರ
+
ಅಲ್ಲಿ
=
ಹಿರಿದರಲ್ಲಿ
(ಅರ ಆಗಮ)
ತೃತೀಯಾ
ಕಿರಿದು
+
ಅರ
+
ಇಂದ
=
ಕಿರಿದರಿಂದ
(ಅರ ಆಗಮ)
ಪಂಚಮೀ
ಕಿರಿದು
+
ಅರ
+
ದೆಸೆಯಿಂದ
=
ಕಿರಿದರದೆಸೆಯಿಂದ
(ಅರ ಆಗಮ)
ಷಷ್ಠೀ
ಕಿರಿದು
+
ಅರ
+
=
ಕಿರಿದರ
(ಅರ ಆಗಮ)
ಸಪ್ತಮೀ
ಕಿರಿದು
+
ಅರ
+
ಅಲ್ಲಿ
=
ಕಿರಿದರಲ್ಲಿ
(ಅರ ಆಗಮ)

(ii) ಸಂಖ್ಯಾವಾಚಕ - ಒಂದು

ತೃತೀಯಾ
ಒಂದು
+
ಅರ
+
ಇಂದ
=
ಒಂದರಿಂದ
(ಅರ ಆಗಮ)
ಪಂಚಮೀ
ಒಂದು
+
ಅರ
+
ದೆಸೆಯಿಂದ
=
ಒಂದರದೆಸೆಯಿಂದ
(ಅರ ಆಗಮ)
ಷಷ್ಠೀ
ಒಂದು
+
ಅರ
+
=
ಒಂದರ
(ಅರ ಆಗಮ)
ಸಪ್ತಮೀ
ಒಂದು
+
ಅರ
+
ಅಲ್ಲಿ
=
ಒಂದರಲ್ಲಿ
(ಅರ ಆಗಮ)

(iii) ಸರ್ವನಾಮ - ಅದು, ಇದು-ಇತ್ಯಾದಿಗಳು

ತೃತೀಯಾ
ಅದು
+
ಅರ
+
ಇಂದ
=
ಅದರಿಂದ
(ಅರ ಆಗಮ)
ಪಂಚಮೀ
ಅದು
+
ಅರ
+
ದೆಸೆಯಿಂದ
=
ಅದರದೆಸೆಯಿಂದ
(ಅರ ಆಗಮ)
ಷಷ್ಠೀ
ಅದು
+
ಅರ
+
=
ಅದರ
(ಅರ ಆಗಮ)
ಸಪ್ತಮೀ
ಅದು
+
ಅರ
+
ಅಲ್ಲಿ
=
ಅದರಲ್ಲಿ
(ಅರ ಆಗಮ)
ತೃತೀಯಾ
ಇದು
+
ಅರ
+
ಇಂದ
=
ಇದರಿಂದ
(ಅರ ಆಗಮ)
ಪಂಚಮೀ
ಇದು
+
ಅರ
+
ದೆಸೆಯಿಂದ
=
ಇದರದೆಸೆಯಿಂದ
(ಅರ ಆಗಮ)
ಷಷ್ಠೀ
ಇದು
+
ಅರ
+
=
ಇದರ
(ಅರ ಆಗಮ)
ಸಪ್ತಮೀ
ಇದು
+
ಅರ
+
ಅಲ್ಲಿ
=
ಇದರಲ್ಲಿ
(ಅರ ಆಗಮ)

(iv) ಉದು ಪ್ರತ್ಯಯಾಂತ ಕೃದಂತಗಳು - ಕೊಡುವುದು, ಹೋಗುವುದು-ಇತ್ಯಾದಿ

ತೃತೀಯಾ
ಕೊಡುವುದು
+
ಅರ
+
ಇಂದ
=
ಕೊಡುವುದರಿಂದ
(ಅರ ಆಗಮ)
ಪಂಚಮಿ
ಕೊಡುವುದು
+
ಅರ
+
ದೆಸೆಯಿಂದ
=
ಕೊಡುವುದರ
ದೆಸೆಯಿಂದ
(ಅರ ಆಗಮ)
ಷಷ್ಠೀ
ಕೊಡುವುದು
+
ಅರ
+
=
ಕೊಡುವುದರ
(ಅರ ಆಗಮ)
ಸಪ್ತಮೀ
ಕೊಡುವುದು
+
ಅರ
+
ಅಲ್ಲಿ
=
ಕೊಡುವುದರಲ್ಲಿ
(ಅರ ಆಗಮ)
ತೃತೀಯಾ
ಹೋಗುವುದು
+
ಅರ
+
ಇಂದ
=
ಹೋಗುವುದರಿಂದ
(ಅರ ಆಗಮ)
ಪಂಚಮೀ
ಹೋಗುವುದು
+
ಅರ
+
ದೆಸೆಯಿಂದ
=
ಹೋಗುವುದರ
(ಅರ ಆಗಮ)
ದೆಸೆಯಿಂದ
ಷಷ್ಠೀ
ಹೋಗುವುದು
+
ಅರ
+
=
ಹೋಗುವುದರ
(ಅರ ಆಗಮ)
ಸಪ್ತಮೀ
ಹೋಗುವುದು
+
ಅರ
+
ಅಲ್ಲಿ
=
ಹೋಗುವುದರಲ್ಲಿ
(ಅರ ಆಗಮ)
ಇದುವರೆಗೆ ಪ್ರಕೃತಿಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವಾಗ ಏಕವಚನದಲ್ಲಿ ಬರುವ ಇನ ಅರ ಎಂಬ ಆಗಮಗಳ ಸ್ಥೂಲಪರಿಚಯ ಮಾಡಿಕೊಂಡಿದ್ದೀರಿ. ಕಾರಾಗಮವಂತೂ ವಿಭಕ್ತಿಪ್ರತ್ಯಯ ಸೇರುವಲ್ಲಷ್ಟೇ ಅಲ್ಲ. ಸಂಧಿಯ ನಿಯಮದಂತೆ ಅದು ಬರಬೇಕಾದಲ್ಲೆಲ್ಲ ಬಂದೇ ಬರುತ್ತದೆ.

No comments:

Post a Comment