Saturday, 2 June 2012


ಅಧ್ಯಾಯ : ದೇಶ್ಯ-ಅನ್ಯದೇಶ್ಯ-ತತ್ಸಮ-ತದ್ಭವ ಪ್ರಕರಣ : ಭಾಗ III – ತತ್ಸಮ ತದ್ಭವ ರೂಪಗಳು

ಸಂಸ್ಕೃತ ಮತ್ತು ಪ್ರಾಕೃತಗಳಿಂದ ಭಾಷೆಯ ಶಬ್ದಗಳನ್ನು ಕನ್ನಡಕ್ಕೆ ತೆಗೆದುಕೊಳ್ಳುವಾಗ ಹಲಕೆಲವು ವ್ಯತ್ಯಾಸ ಮಾಡಿ ಕನ್ನಡಿಗರು ಕನ್ನಡಕ್ಕೆ ಸೇರಿಸಿಕೊಂಡಿದ್ದಾರೆಂದು ಹಿಂದೆಯೇ ವಿವರಿಸಲಾಗಿದೆ.

(೨೭) ತತ್ಸಮಗಳು-ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳು ತತ್ಸಮಗಳು. ತತ್ ಎಂದರೆ ಅದಕ್ಕೆ, ಸಮ ಎಂದರೆ ಸಮಾನವಾದುದು-ಇಲ್ಲಿ ಅದಕ್ಕೆ ಎಂದರೆ ಸಂಸ್ಕೃತಕ್ಕೆ ಸಮಾನ (ಎಂದು ಅರ್ಥ) ಇವನ್ನು ಕೆಲವರು ಸಮಸಂಸ್ಕೃತ ಗಳೆಂದೂ ಕರೆಯುವರು (ಕನ್ನಡಕ್ಕೂ ಸಂಸ್ಕೃತಕ್ಕೂ ಇವು ಸಮಾನರೂಪಗಳೆಂದು ತಾತ್ಪರ್ಯ). ಅಲ್ಲದೆ ತದ್ಭವ ಶಬ್ದಗಳ ಸಂಸ್ಕೃತ ರೂಪಗಳನ್ನು ತತ್ಸಮ ಗಳೆಂದೇ ಕರೆಯುವುದು ರೂಢಿಗೆ ಬಂದಿದೆ.

ಉದಾಹರಣೆಗೆ:- ರಾಮ, ಭೀಮ, ಕಾಮ, ವಸಂತ, ಸೋಮ, ಚಂದ್ರ, ಸೂರ್ಯ, ಗ್ರಹ, ಕರ್ತೃ, ಶತ್ರು, ಸ್ತ್ರೀ, ಶ್ರೀ, ವನ, ಮಧು, ಕಮಲ, ಭುವನ, ಭವನ, ಶಯನ, ಶ್ರುತಿ, ಸ್ಮೃತಿ, ಶುದ್ಧಿ, ಸಿದ್ಧಿ, ಕವಿ, ಕಾವ್ಯ, ರವಿ, ಗಿರಿ, ಲಿಪಿ, ಪಶು, ಶಿಶು, ರಿಪು, ಭಾನು, ಯತಿ, ಮತಿ, ಪತಿ, ಗತಿ-ಇತ್ಯಾದಿ.

(೨೮) ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲಿ, ಪೂರ್ಣ ವಿಕಾರವನ್ನಾಗಲಿ, ಹೊಂದಿ ಬಂದಿರುವ ಶಬ್ದಗಳನ್ನು ತದ್ಭವಗಳೆಂದು ಕರೆಯುವರು (ತತ್ ಎಂದರೆ ಅದರಿಂದ ಎಂದರೆ ಸಂಸ್ಕೃತದಿಂದ ಭವ ಎಂದರೆ ಹುಟ್ಟಿದ ಅಥವಾ ನಿಷ್ಪನ್ನವಾದ ಎಂದು ಅರ್ಥ).

(ಅಲ್ಪಸ್ವಲ್ಪ ವಿಕಾರ ಹೊಂದಿದ ಶಬ್ದಗಳನ್ನು ಸಮಸಂಸ್ಕೃತ ಎಂದು ಕರೆಯುವುದೂ ವಾಡಿಕೆ)

ಉದಾಹರಣೆಗೆ:- ಮಾಲೆ, ಸೀತೆ, ಉಮೆ, ವೀಣೆ, ಅಜ್ಜ, ಬಂಜೆ, ಸಿರಿ, ಬಾವಿ, ದನಿ, ಜವನಿಕೆ, ನಿದ್ದೆ, ಗಂಟೆ, ಜೋಗಿ, ರಾಯ, ಕೀಲಾರ, ಪಟಕ, ಸಂತೆ, ಪಕ್ಕ, ಪಕ್ಕಿ, ಚಿತ್ತಾರ, ಬಟ್ಟ, ಆಸೆ, ಕತ್ತರಿ-ಇತ್ಯಾದಿ.

(i) ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳ ಪಟ್ಟಿ:-

ಸಂಸ್ಕೃತ ರೂಪ
ವ್ಯತ್ಯಾಸ ರೂಪ
ಸಂಸ್ಕೃತ ರೂಪ
ವ್ಯತ್ಯಾಸ ರೂಪ
ದಯಾ
ದಯೆ, ದಯ
ಗ್ರೀವಾ
ಗ್ರೀವೆ, ಗ್ರೀವ
ಕರುಣಾ
ಕರುಣೆ, ಕರುಣ
ಶಮಾ
ಶಮೆ
ನಾರೀ
ನಾರಿ
ವಧ
ವಧೆ
ನದೀ
ನದಿ
ಅಭಿಲಾಷ
ಅಭಿಲಾಷೆ
ವಧೂ
ವಧು
ಪ್ರಶ್ನ
ಪ್ರಶ್ನೆ
ಸರಯೂ
ಸರಯು
ಉದಾಹರಣೆ
ಉದಾಹರಣೆ
ಸ್ವಯಂಭೂ
ಸ್ವಯಂಭು
ಸರಸ್ವತೀ
ಸರಸ್ವತಿ
ಮಾಲಾ
ಮಾಲೆ
ಲಕ್ಷ್ಮೀ
ಲಕ್ಷ್ಮಿ
ಸೀತಾ
ಸೀತೆ
ಗೌರೀ
ಗೌರಿ
ಬಾಲಾ
ಬಾಲೆ
ಭಾಮಿನೀ
ಭಾಮಿನಿ
ಲೀಲಾ
ಲೀಲೆ
ಕಾಮಿನೀ
ಕಾಮಿನಿ
ಗಂಗಾ
ಗಂಗೆ
ಕುಮಾರೀ
ಕುಮಾರಿ
ನಿಂದಾ
ನಿಂದೆ
ಗೋದಾವರೀ
ಗೋದಾವರಿ
ಶಾಲಾ
ಶಾಲೆ
ಕಾವೇರೀ
ಕಾವೇರಿ
ರಮಾ
ರಮೆ
ಶಾಸ್ತ್ರೀ
ಶಾಸ್ತ್ರಿ
ಉಮಾ
ಉಮೆ
ಭಿಕ್ಷಾ
ಭಿಕ್ಷಾ, ಭಿಕ್ಷೆ
ದಮಾ
ದಮೆ
ಯಾತ್ರಾ
ಯಾತ್ರೆ
ಕ್ಷಮಾ
ಕ್ಷಮೆ
ಜ್ವಾಲಾ
ಜ್ವಾಲೆ
ಆಶಾ
ಆಶೆ
ರೇಖಾ
ರೇಖೆ
ಸಂಸ್ಥಾ
ಸಂಸ್ಥೆ
ಮುದ್ರಾ
ಮುದ್ರೆ
ನಿದ್ರಾ
ನಿದ್ರೆ
ದ್ರಾಕ್ಷಾ
ದ್ರಾಕ್ಷೆ
ಯವನಿಕಾ
ಯವನಿಕೆ
ಮಾತ್ರಾ
ಮಾತ್ರೆ
ದ್ರೌಪದೀ
ದ್ರೌಪದಿ
ಶಾಖಾ
ಶಾಖೆ
ವೇಳಾ
ವೇಳೆ
ವಾಲುಕಾ
ವಾಲುಕ
ಭಾಷಾ
ಭಾಷೆ
ಗಾಂಧಾರೀ
ಗಾಂಧಾರಿ
-ಇತ್ಯಾದಿಗಳು

ಮೇಲಿನ ಎಲ್ಲ ಉದಾಹರಣೆಗಳಲ್ಲಿ ಮುಖ್ಯವಾಗಿ ಸಂಸ್ಕೃತದ ಕಾರಂತ ಶಬ್ದಗಳು ಕಾರಾಂತಗಳಾಗಿವೆ (ಮಾಲಾ-ಮಾಲೆ ಇತ್ಯಾದಿ); ಕೆಲವು ಕಾರಾಂತಗಳೂ ಕಾರಂತಗಳಾಗಿವೆ (ವಧ-ವಧೆ); ಕೆಲವು ದೀರ್ಘಾಂತಗಳು ಹ್ರಸ್ವಾಂತಗಳಾಗಿವೆ (ಲಕ್ಷ್ಮೀ-ಲಕ್ಷ್ಮಿ); ಕೆಲವು ಆಕಾರಂತಗಳು ಅಕಾರಾಂತಗಳಾಗಿಯೂ ಆಗಿವೆ (ದಯಾ-ದಯ); ಹೀಗೆ ಸ್ಥೂಲವಾಗಿ ತಿಳಿಯಬಹುದು. ಹೀಗೆ ಅಲ್ಪಸ್ವಲ್ಪ ವ್ಯತ್ಯಾಸಗೊಂಡ ಮೇಲೆ ಇವು ಕನ್ನಡದ ಪ್ರಕೃತಿಗಳಾಗುವುವು. ಇವುಗಳ ಮೇಲೆ ಕನ್ನಡದ ಪ್ರತ್ಯಯಗಳನ್ನು ಹಚ್ಚಬಹುದು. (ಇಂಥವನ್ನೇ ಸಮ ಸಂಸ್ಕೃತಗಳೆಂದು ಕೆಲವರು ಕರೆಯುವರೆಂದು ಹಿಂದೆ ತಿಳಿಸಿದೆ).

(ii) ಶಬ್ದದ ಕೊನೆಯಲ್ಲಿರುವ ಋಕಾರವು ಅರ ಎಂದು ವ್ಯತ್ಯಾಸಗೊಳ್ಳುವುವು. ಕೆಲವು ಎಕಾರಾಂತಗಳೂ ಆಗುವುವು. ಅನಂತರ ಕನ್ನಡ ಪ್ರಕೃತಿಗಳಾಗುವುವು.

ಸಂಸ್ಕೃತ ರೂಪ
ವ್ಯತ್ಯಾಸ ರೂಪ
ಸಂಸ್ಕೃತ ರೂಪ
ವ್ಯತ್ಯಾಸ ರೂಪ
ಕರ್ತೃ
ಕರ್ತ, ಕರ್ತಾರ
ನೇತೃ
ನೇತಾರ
ದಾತೃ
ದಾತ, ದಾತಾರ
ಸವಿತೃ
ಸವಿತಾರ
ಪಿತೃ
ಪಿತ, ಪಿತರ
ಭರ್ತೃ
ಭರ್ತಾರ
ಮಾತೃ
ಮಾತೆ
ಹೋತೃ
ಹೋತಾರ

(iii) ಕೆಲವು ನಕಾರಾಂತ ಶಬ್ದಗಳು ಕೊನೆಯ ನಕಾರವನ್ನು ಲೋಪ ಮಾಡಿಕೊಂಡು ಕನ್ನಡ ಪ್ರಕೃತಿಗಳಾಗುವುವು.

ಸಂಸ್ಕೃತ ರೂಪ
ವ್ಯತ್ಯಾಸ ರೂಪ
ಸಂಸ್ಕೃತ ರೂಪ
ವ್ಯತ್ಯಾಸ ರೂಪ
ರಾಜನ್
ರಾಜ
ಬ್ರಹ್ಮನ್
ಬ್ರಹ್ಮ
ಕರಿನ್
ಕರಿ
ಪುರೂರವನ್
ಪುರೂರವ
ಆತ್ಮನ್
ಆತ್ಮ
ಯುವನ್
ಯುವ
ಧಾಮನ್
ಧಾಮ
ಮೂರ್ಧನ್
ಮೂರ್ಧ

(iv) ಕೆಲವು ವ್ಯಂಜನಾಂತ ಶಬ್ದಗಳು ಕೊನೆಯ ವ್ಯಂಜನವನ್ನು ಲೋಪ ಮಾಡಿಕೊಂಡಾಗಲೀ ಅಥವಾ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರದೊಡನಾಗಲೀ ವ್ಯತ್ಯಾಸಗೊಂಡು ಕನ್ನಡ ಪ್ರಕೃತಿಗಳಾಗುತ್ತವೆ.

ಸಂಸ್ಕೃತ ರೂಪ ಬದಲಾವಣೆಯಾದ ರೂಪಗಳು

ಧನಸ್
ಧನು
ಧನುಸ್ಸು
(ಸ್ + )
ಶಿರಸ್
ಶಿರ
ಶಿರಸ್ಸು
(ಸ್ + )
ಯಶಸ್
ಯಶ
ಯಶಸ್ಸು
(ಸ್ + )
ಮನಸ್
ಮನ
ಮನಸ್ಸು
(ಸ್ + )
ತೇಜಸ್
ತೇಜ
ತೇಜಸ್ಸು
(ಸ್ + )
ವಯಸ್
ವಯ
ವಯಸ್ಸು
(ಸ್ + )
ಪಯಸ್
ಪಯ
ಪಯಸ್ಸು
(ಸ್ + )
ಶ್ರೇಯಸ್
ಶ್ರೇಯ
ಶ್ರೇಯಸ್ಸು
(ಸ್ + )

(v) ಕೆಲವು ಸಂಸ್ಕೃತದ ಪ್ರಥಮಾವಿಭಕ್ತ್ಯಂತ ಏಕವಚನಗಳು ತಮ್ಮ ಕೊನೆಯ ವ್ಯಂಜನದೊಡನೆ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರ ಸೇರಿಸಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.

ಸಂಸ್ಕೃತದಲ್ಲಿ ಪ್ರಥಮಾ ಏಕವಚನದ ರೂಪ
ವಿಕಾರಗೊಂಡ ರೂಪ
ಪ್ರತಿಪತ್
ಪ್ರತಿಪತ್ತು
ಕ್ಷುತ್
ಕ್ಷುತ್ತು
ಸಂಪತ್
ಸಂಪತ್ತು
ವಿಯತ್
ವಿಯತ್ತು
ವಿಪತ್
ವಿಪತ್ತು
ದಿಕ್
ದಿಕ್ಕು
ತ್ವಕ್ಕು
ತ್ವಕ್
ವಾಕ್
ವಾಕ್ಕು
ಸಮಿತ್
ಸಮಿತ್ತು

(vi) ಸಂಸ್ಕೃತದ ಪ್ರಥಮಾವಿಭಕ್ತಿಯ ಬಹುವಚನಾಂತವಾಗಿರುವ ಕೆಲವು ಪುಲ್ಲಿಂಗ ವ್ಯಂಜನಾಂತ ಶಬ್ದಗಳು ತಮ್ಮ ಕೊನೆಯ ವಿಸರ್ಗವನ್ನು ಲೋಪಮಾಡಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.

ಪ್ರಥಮಾ ವಿಭಕ್ತಿ ಬಹುವಚನ ರೂಪ
ವಿಕಾರ ರೂಪ
ವಿದ್ವಾಂಸಃ -
ವಿದ್ವಾಂಸ
ಹನುಮಂತಃ -
ಹನುಮಂತ
ಶ್ವಾನಃ -
ಶ್ವಾನ
ಭಗವಂತಃ -
ಭಗವಂತ
ಶ್ರೀಮಂತಃ -
ಶ್ರೀಮಂತ

(vii) ಸಂಸ್ಕೃತದ ಕೆಲವು ವ್ಯಂಜನಾಂತ ಶಬ್ದಗಳು ವ್ಯಂಜನದ ಮುಂದೆ, ಒಂದು ಕಾರದೊಡನೆ ಅಂದರೆ ಅಕಾರಾಂತಗಳಾಗಿ ಕನ್ನಡದ ಪ್ರಕೃತಿಗಳಾಗುತ್ತವೆ.

ವ್ಯಂಜನಾಂತ ಸಂಸ್ಕೃತ ಶಬ್ದ
ವಿಕಾರಗೊಂಡ ರೂಪ
ದಿವ್
ದಿವ
ಚತುರ್
ಚತುರ
ಬುಧ್
ಬುಧ
ಕುಕುಭ್
ಕುಕುಭ
ವೇದವಿದ್
ವೇದವಿದ
ಸಂಪದ್
ಸಂಪದ
ಮರುತ್
ಮರುತ
ಗುಣಭಾಜ್
ಗುಣಭಾಜ

ಮೇಲೆ ಇದುವರೆಗೆ ಹೇಳಿದ ಸಂಸ್ಕೃತದಿಂದ ಕನ್ನಡಕ್ಕೆ ಬರುವ ಶಬ್ದಗಳು ಕೊನೆಯಲ್ಲಿ ಅಲ್ಪಸ್ವಲ್ಪ ವಿಕಾರಹೊಂದಿದ ಬಗೆಗೆ ಸ್ಥೂಲವಾಗಿ ತಿಳಿದಿದ್ದೀರಿ. ಇವನ್ನು ಅಲ್ಪಸ್ವಲ್ಪ ವಿಕಾರವನ್ನು ಕೊನೆಯಲ್ಲಿ ಹೊಂದಿದ ತದ್ಭವ ಶಬ್ದಗಳೆಂದು ಹೇಳಬೇಕು (ಇವನ್ನು ಕೆಲವರು ಸಮಸಂಸ್ಕೃತ ಎಂದೂ ಹೇಳುವರೆಂದು ಹಿಂದೆ ತಿಳಿಸಿದೆ).

ಈಗ ಶಬ್ದದ ಮೊದಲು, ಮಧ್ಯದಲ್ಲಿಯೂ ಹೆಚ್ಚಾಗಿ ವಿಕಾರ ಹೊಂದಿದ ಅನೇಕ ಶಬ್ದಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ.

(viii) ಸಂಸ್ಕೃತದಲ್ಲಿ , ಗಳನ್ನು ಹೊಂದಿರುವ ಶಬ್ದಗಳು ಕನ್ನಡದಲ್ಲಿ ಸಕಾರವಾಗಿರುವ, ಮತ್ತು ಯಕಾರಕ್ಕೆ ಜಕಾರ ಬಂದಿರುವ ತದ್ಭವ ಶಬ್ದಗಳು (ಕನ್ನಡ ಪ್ರಕೃತಿಗಳು) ಆಗುತ್ತವೆ.

ಸಂಸ್ಕೃತ ರೂಪ
ವಿಕಾರ ರೂಪ
ಸಂಸ್ಕೃತ ರೂಪ
ವಿಕಾರ ರೂಪ
ಸಂಸ್ಕೃತ ರೂಪ
ವಿಕಾರ ರೂಪ
ಶಶಿ
ಸಸಿ
ಔಷಧ
ಔಸದ
ಯೋಧ
ಜೋದ
ಶಂಕಾ
ಸಂಕೆ
ಶೇಷಾ
ಸೇಸೆ
ಯುದ್ಧ
ಜುದ್ದ
ಶಾಂತಿ
ಸಾಂತಿ
ಮಷಿ
ಮಸಿ
ಯವಾ
ಜವೆ
ಆಕಾಶ
(i)ಆಗಸ
(ii)
ಆಕಾಸ
ಪಾಷಾಣ
ಪಾಸಾಣ
ವಿದ್ಯಾ
ಬಿಜ್ಜೆ
ಯಶ
ಜಸ
ವಂಧ್ಯಾ
ಬಂಜೆ
ಶಿರ
ಸಿರ
ಯವನಿಕಾ
ಜವನಿಕೆ
ಧ್ಯಾನ
ಜಾನ
ಕಲಶ
ಕಳಸ
ಯಮ
ಜವ
ಯತಿ
ಜತಿ
ಶೂಲ
ಸೂಲ
ಕಾರ್ಯ
ಕಜ್ಜ
ಯಂತ್ರ
ಜಂತ್ರ
ಶುಚಿ
ಸುಚಿ
ಯೌವನ
ಜವ್ವನ
ಯುಗ
ಜುಗ
ಅಂಕುಶ
ಅಂಕುಸ
ಯಾತ್ರಾ
ಜಾತ್ರೆ
ಯುಗ್ಮ
ಜುಗುಮ
ಶುಂಠಿ
ಸುಂಟಿ
ಯೋಗಿನ್
ಜೋಗಿ
ವಿದ್ಯಾಧರ
ಬಿಜ್ಜೋದರ
ಪಶು
ಪಸು
ರಾಶಿ
ರಾಸಿ
ಉದ್ಯೋಗ
ಉಜ್ಜುಗ
ಹರ್ಷ
ಹರುಸ
ಶಾಣ
ಸಾಣೆ
ಸಂಧ್ಯಾ
ಸಂಜೆ
ವರ್ಷ
ವರುಸ
ಪರಶು
ಪರಸು
ದ್ಯೂತ
ಜೂಜು
ಭಾಷಾ
ಬಾಸೆ
ದಿಶಾ
ದೆಸೆ
ವೇಷ
ವೇಸ
ದಶಾ
ದಸೆ

(ix) ವರ್ಗದ ಪ್ರಥಮಾಕ್ಷರಗಳಿಂದ ಕೂಡಿದ ಅನೇಕ ಸಂಸ್ಕೃತ ಶಬ್ದಗಳು ಅದೇ ವರ್ಗದ ಮೂರನೆಯ ವರ್ಣಗಳಾಗುತ್ತವೆ. ಅವು ಇಂಥ ಸ್ಥಾನದಲ್ಲಿಯೇ ಇರಬೇಕೆಂಬ ನಿಯಮವಿಲ್ಲ.

ಸಂಸ್ಕೃತ ರೂಪ
ವಿಕಾರ ರೂಪ
ಸಂಸ್ಕೃತ ರೂಪ
ವಿಕಾರ ರೂಪ
ಸಂಸ್ಕೃತ ರೂಪ
ವಿಕಾರ ರೂಪ
ಡಮರುಕ
ಡಮರುಗ
ಸೂಚಿ
ಸೂಜಿ
ಜಾತಿ
ಜಾದಿ
ಆಕಾಶ
ಆಗಸ
ವಚಾ
ಬಜೆ
ವಸತಿ
ಬಸದಿ
ದೀಪಿಕಾ
ದೀವಿಗೆ
ಕಟಕ
ಕಡಗ
ಚತುರ
ಚದುರ
ಮಲ್ಲಿಕಾ
ಮಲ್ಲಿಗೆ
ಅಟವಿ
ಅಡವಿ
ಭೂತಿ
ಬೂದಿ
ಪೈತೃಕ
ಹೈತಿಗೆ
ತಟ
ತಡ
ದೂತಿ
ದೂದಿ

(x) ಸಂಸ್ಕೃತದಲ್ಲಿ ಮಹಾಪ್ರಾಣಾಕ್ಷರಗಳಿಂದ ಕೂಡಿದ ಅನೇಕ ಅಕ್ಷರಗಳು ಅಲ್ಪಪ್ರಾಣಗಳಾಗಿ ಕನ್ನಡ ಪ್ರಕೃತಿಗಳಾಗುತ್ತವೆ.

ಸಂಸ್ಕೃತ ರೂಪ
ವಿಕಾರ ರೂಪ
ಸಂಸ್ಕೃತ ರೂಪ
ವಿಕಾರ ರೂಪ
ಸಂಸ್ಕೃತ ರೂಪ
ವಿಕಾರ ರೂಪ
ಛಂದ
ಚಂದ
ಘಟಕ
ಗಡಗೆ
ಧನ
ದನ
ಛಾಂದಸ
ಚಾಂದಸ
ಘೋಷಣಾ
ಗೋಸಣೆ
ಧೂಪ
ದೂಪ
ಛವಿ
ಚವಿ
ಗೋಷ್ಠಿ
ಗೊಟ್ಟಿ
ನಿಧಾನ
ನಿದಾನ
ಕಂಠಿಕಾ
ಕಂಟಿಕೆ
ಘೂಕ
ಗೂಗೆ
ಧೂಸರ
ದೂಸರ
ಶುಂಠಿ
ಸುಂಟಿ
ಅರ್ಘ
ಅಗ್ಗ
ಧೂಳಿ
ದೂಳಿ
ಫಾಲ
ಪಾಲ
ಝಟತಿ
ಜಡಿತಿ
ವಿಧಿ
ಬಿದಿ
ಫಣಿ
ಪಣಿ
ಢಕ್ಕೆ
ಡಕ್ಕೆ
ಕುಸುಂಭ
ಕುಸುಬೆ
ಘಂಟಾ
ಗಂಟೆ
ರೂಢಿ
ರೂಡಿ

(xi) ಸಂಸ್ಕೃತದ ಕೆಲವು ಖಕಾರವುಳ್ಳ ಶಬ್ದಗಳು ಗಕಾರಗಳಾಗಿ ಛಕಾರದ ಒತ್ತಿನಿಂದ ಕೂಡಿದ ಅಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿ ಠಕಾರವು ಡಕಾರವಾಗಿ, ಛಕಾರವು ಸಕಾರವಾಗಿಯೂ, ಥಕಾರವು ದಕಾರವಾಗಿಯೂ ಮತ್ತು ಟಕಾರವಾಗಿಯೂ, ಹಕಾರವಾಗಿಯೂ ರೂಪಾಂತರ ಹೊಂದಿ ಕನ್ನಡ ಪ್ರಕೃತಿಗಳಾಗುತ್ತವೆ.

ಉದಾಹರಣೆಗಳು:

ಖಕಾರ ಗಕಾರವಾಗುವುದಕ್ಕೆ
ಛಕಾರವು ಸಕಾರವಾಗಿರುವುದಕ್ಕೆ
ಠಕಾರ ಡಕಾರವಾದುದಕ್ಕೆ
ಮುಖ
ಮೊಗ
ಛುರಿಕಾ
ಸುರಿಗೆ
ಕುಠಾರ
ಕೊಡಲಿ
ವೈಶಾಖ
ಬೇಸಗೆ
ಛತ್ರಿಕಾ
ಸತ್ತಿಗೆ
ಮಠ
ಮಡ

ಥಕಾರವು ದಕಾರವಾದುದಕ್ಕೆ
ಥಕಾರವು ಟಕಾರವಾದುದಕ್ಕೆ
ಥಕಾರವು ಹಕಾರವಾದುದಕ್ಕೆ
ವೀಥಿ
ಬೀದಿ
ಗ್ರಂಥಿ
ಗಂಟು
ಗಾಥೆ
ಗಾಹೆ



ಛಕಾರದ ಒತ್ತಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿದುದಕ್ಕೆ
ಇಚ್ಛಾ
ಇಚ್ಚೆ














No comments:

Post a Comment