Sunday, 3 June 2012


ಅಧ್ಯಾಯ : ಕ್ರಿಯಾಪದ ಪ್ರಕರಣ: ಭಾಗ I – ಕ್ರಿಯಾಪ್ರಕೃತಿ (ಧಾತು)

ಹಿಂದಿನ ಅಧ್ಯಾಯದಲ್ಲಿ, ನಾಮಪ್ರಕೃತಿ-ನಾಮವಿಭಕ್ತಿಪ್ರತ್ಯಯ-ನಾಮಪದ ಎಂದರೇನು? ಪ್ರಕೃತಿಗಳ ವಿಧಗಳು, ಪ್ರತ್ಯಯಗಳ ವಿಧಗಳು ಇವುಗಳ ಬಗೆಗೆ ತಿಳಿದಿದ್ದೀರಿ. ಈಗ ನಾಮಪದ ಗಳ ಹಾಗೆಯೇ ಇನ್ನೊಂದು ರೀತಿಯ ಪದಗಳ ವಿಚಾರವನ್ನು ತಿಳಿಯೋಣ. ಪದವೆಂದರೆ ಪ್ರಕೃತಿಗೆ ಪ್ರತ್ಯಯ ಸೇರಿ ಆದ ಶಬ್ದರೂಪವೆಂದು ನಿಮಗೆ ತಿಳಿದಿದೆ.

(i) ತಾಯಿಯು ಅಡಿಗೆಯನ್ನು ಮಾಡುತ್ತಾಳೆ.

(ii) ತಂದೆಯು ಕೆಲಸವನ್ನು ಮಾಡಿದನು.

(iii) ಅಣ್ಣ ಊಟವನ್ನು ಮಾಡುವನು.

(iv) ದೇವರು ಒಳ್ಳೆಯದನ್ನು ಮಾಡಲಿ.

(vi) ಅವನು ನಾಳೆಯದಿನ ಮಾಡಾನು (ಮಾಡಿಯಾನು).

(vii) ಅವನು ಊಟವನ್ನು ಮಾಡನು.

ಮೇಲೆ ಇರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳಾದ- ಮಾಡುತ್ತಾಳೆ, ಮಾಡಿದನು, ಮಾಡುವನು, ಮಾಡಲಿ, ಮಾಡಾನು (ಮಾಡಿಯಾನು), ಮಾಡನು -ಇವೆಲ್ಲ ಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥಕೊಡುವಂಥ ಪದಗಳಾಗಿವೆ. ಆದುದರಿಂದ ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ-ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.

ಮೇಲೆ ಹೇಳಿದ ಆರು ಕ್ರಿಯಾಪದಗಳಿಗೆಲ್ಲ ಮೂಲ ಮಾಡು ಎಂಬ ಶಬ್ದವಾಗಿದೆ. ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ರೂಪವೇ ಆಗಿದೆ.

ಮಾಡುತ್ತಾನೆ
ಮಾಡು
ಮಾಡಿದನು
ಮಾಡುವನು
ಮಾಡಲಿ
ಮಾಡಾನು
ಮಾಡನು

ಮಾಡು ಎಂಬ ಮೂಲರೂಪಕ್ಕೆ ಅನೇಕ ಪ್ರತ್ಯಯಗಳು ಸೇರಿದ ಮೇಲೆ ಅದು ವಿವಿಧ ರೂಪಗಳನ್ನು ಹೊಂದಿ ವಿವಿಧವಾದ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದವಾಗುವುದು. ಇಂಥ ಕ್ರಿಯಾಪದದ ಮೂಲರೂಪವನ್ನು ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು. ಇದರ ಸೂತ್ರವನ್ನು ಮುಂದಿನಂತೆ ಹೇಳಬಹುದು.

(೫೪) ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು.

ಇಂಥ ಧಾತುಗಳು ಎರಡು ವಿಧ.

ಧಾತು
ಮೂಲ ಧಾತು
ಪ್ರತ್ಯಯಾಂತ ಧಾತು

() ಮೂಲಧಾತುಗಳು- ಉದಾಹರಣೆಗೆ:- ಮಾಡು, ತಿನ್ನು, ಹೋಗು, ಬರು, ಮಲಗು, ಏಳು, ನಡೆ, ನೋಡು, ಓಡು, ನಿಲ್ಲು, ಓದು, ಆಗು, ಹೊಳೆ, ಬದುಕು, ಇಕ್ಕು, ಮುಗಿ, ತೂಗು, ಹಿಗ್ಗು, ನಡುಗು, ಮಿಂಚು, ಮೆಟ್ಟು, ಹಂಚು, ಅಂಜು, ಈಜು, ಉಜ್ಜು, ದಾಟು, ಹುಟ್ಟು, ಒಕ್ಕು, ತುಂಬು, ಮುಚ್ಚು, ಹಿಡಿ, ಕೊಡು, ಹರಡು, ಇಡು, ಪಡೆ, ಕುಣಿ, ಕಾಣು, ಸುತ್ತು, ಒತ್ತು, ಎತ್ತು, ಬಿತ್ತು, ತೆರು, ಒದೆ, ತಿದ್ದು, ಹೊಡೆ, ಬಡಿ, ಬರೆ, ನೆನೆ, ಎನ್ನು, ಒಪ್ಪು, ತಪ್ಪು, ನಂಬು, ಉಬ್ಬು, ಕಾ, ಬೇ, ಮೀ, ಮೇ, ಚಿಮ್ಮು, ಹೊಯ್, ಬಯ್, ಸುಯ್, ಕೊಯ್, ತೆಯ್, ಸುರಿ, ಅರಿ, ಹೀರು, ಸೇರು, ಸೋಲು, ಹೊಲಿ, ಬಲಿ, ಹೇಸು, ಅರಸು, ಹುಡುಕು, ಬಳಸು, ಗುಡಿಸು, ಚೆಲ್ಲು, ತೊಳೆ, ಬೆಳಗು, ಬಡಿಸು, ಇಳಿ, ಏರು, ಹೊಗಳು, ತೆಗಳು, ಬಾಳು, ಬೀಳು, ತಾಳು, ಎಳೆ, ಕಳಿ, ಸೆಳೆ, ತಿಳಿ, ಸುಳಿ, ಕೊರೆ-ಇತ್ಯಾದಿ.

ಮೇಲೆ ಹೇಳಿದವುಗಳಲ್ಲದೆ ಇನ್ನೂ ಅನೇಕ ಧಾತುಗಳಿವೆ. ಎಲ್ಲ ಧಾತುಗಳಿಂದ ಆದ ವಿವಿಧ ಪ್ರತ್ಯಯಗಳನ್ನು ಹೊಂದಿ ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲೂ ವಿಧ್ಯರ್ಥ, ಸಂಭಾವನಾರ್ಥ, ನಿಷೇಧಾರ್ಥಗಳಲ್ಲೂ ನಾವು ಅನೇಕ ಕ್ರಿಯಾಪದಗಳನ್ನು ಪ್ರತಿನಿತ್ಯ ಭಾಷೆಯಲ್ಲಿ ಬಳಸುತ್ತೇವೆ.

() ಸಾಧಿತ ಧಾತು (ಪ್ರತ್ಯಯಾಂತ ಧಾತು)- ಒಮ್ಮೊಮ್ಮೆ ನಾವು ನಾಮಪ್ರಕೃತಿಗಳನ್ನೇ ಧಾತುಗಳನ್ನಾಗಿ ಮಾಡಿಕೊಂಡು ಕ್ರಿಯಾಪ್ರಕೃತಿಗಳಿಗೆ ಹತ್ತುವ ಪ್ರತ್ಯಯ ಹಚ್ಚಿ ಕ್ರಿಯಾಪದಗಳ ನ್ನಾಗಿ ಮಾಡಿ ಹೇಳುತ್ತೇವೆ.

ಉದಾಹರಣೆಗೆ:- ಅವನು ಗ್ರಂಥವನ್ನು ಕನ್ನಡಿಸಿದನು. ಕನ್ನಡ ಎಂಬುದು ನಾಮಪ್ರಕೃತಿಯಾಗಿದೆ. ಇದು ಧಾತುವಲ್ಲ. ಇದರ ಮೇಲೆ ಇಸು ಪ್ರತ್ಯಯ ಹಚ್ಚಿ ಕನ್ನಡಿಸು ಎಂದು ಆಗುವುದಿಲ್ಲವೆ? ಹೀಗೆ ಕನ್ನಡಿಸು ಎಂದಾದ ಮೇಲೆ ಇದು ಧಾತುವೆನಿಸುತ್ತದೆ. ಇದರ ಮೇಲೆ ಧಾತುಗಳ ಮೇಲೆ ಸೇರಬೇಕಾದ ಎಲ್ಲ ಪ್ರತ್ಯಯಗಳು ಸೇರಿ-ಕನ್ನಡಿಸುತ್ತಾನೆ, ಕನ್ನಡಿಸಿದನು, ಕನ್ನಡಿಸುವನು, ಕನ್ನಡಿಸಲಿ, ಕನ್ನಡಿಸಾನು, ಕನ್ನಡಿಸನು-ಇತ್ಯಾದಿ ಕ್ರಿಯಾಪದಗಳಾಗಿ ಬಳಸಲ್ಪಡುತ್ತವೆ. ಇಂಥ ಧಾತುಗಳನ್ನೇ ನಾವು ಸಾಧಿತಧಾತು ಅಥವಾ ಪ್ರತ್ಯಯಾಂತಧಾತು ಗಳೆಂದು ಕರೆಯುತ್ತೇವೆ.

(೫೫) ಪ್ರತ್ಯಯಾಂತ ಧಾತು (ಸಾಧಿತ ಧಾತು):- ಕೆಲವು ನಾಮ ಪ್ರಕೃತಿಗಳ ಮೇಲೂ, ಧಗ ಧಗ, ಛಟ ಛಟ ಮೊದಲಾದ ಅನುಕರಣ ಶಬ್ದಗಳ ಮೇಲೂ ಇಸು ಎಂಬ ಪ್ರತ್ಯಯ ಸೇರಿದಾಗ ಅವು ಪ್ರತ್ಯಯಾಂತ ಧಾತುಗಳೆನಿಸುತ್ತವೆ. ಇವಕ್ಕೆ ಸಾಧಿತ ಧಾತುಗಳೆಂದೂ ಹೆಸರು.

ಉದಾಹರಣೆಗೆ:-

ನಾಮ ಪ್ರಕೃತಿ
+
ಇಸು
=
ಧಾತು
-
ಕ್ರಿಯಾಪದ
ಕನ್ನಡ
+
ಇಸು
=
ಕನ್ನಡಿಸು
-
ಕನ್ನಡಿಸಿದನು
ಓಲಗ
+
ಇಸು
=
ಓಲಗಿಸು
-
ಓಲಗಿಸುತ್ತಾನೆ
ಅಬ್ಬರ
+
ಇಸು
=
ಅಬ್ಬರಿಸು
-
ಅಬ್ಬರಿಸುವನು
ನಾಮ ಪ್ರಕೃತಿ
+
ಇಸು
=
ಧಾತು
-
ಕ್ರಿಯಾಪದ

ಅನುಕರಣ ಶಬ್ದಗಳು ಧಾತುಗಳಾಗುವುದಕ್ಕೆ ಉದಾಹರಣೆ:-

ಧಗ ಧಗ
+
ಇಸು
=
ಧಗಧಗಿಸು
-
ಧಗಧಗಿಸುತ್ತಾನೆ
ಥಳ ಥಳ
+
ಇಸು
=
ಥಳಥಳಿಸು
-
ಥಳಥಳಿಸುತ್ತಾನೆ
ಗಮ ಗಮ
+
ಇಸು
=
ಗಮಗಮಿಸು
-
ಗಮಗಮಿಸುವುದು
ಛಟ ಛಟ
+
ಇಸು
=
ಛಟಛಟಿಸು
-
ಛಟಛಟಿಸುತ್ತದೆ

(೫೬) ಸಂಸ್ಕೃತದ ಕೆಲವು ನಾಮ ಪ್ರಕೃತಿಗಳಾದ ಯತ್ನ, ಪ್ರಯತ್ನ, ರಕ್ಷಾ, ಪೂಜಾ, ಭಾವ, ಭಂಗ, ಪ್ರಲಾಪ, ಸಿದ್ಧಿ, ಭೇದ, ನಿರ್ಣಯ, ದುಃಖ, ಪಾಲನಾ, ಸೇವನಾ-ಮುಂತಾದವುಗಳಿಗೆ ಕನ್ನಡದ ಇಸು ಪ್ರತ್ಯಯವು ಬಂದು ಅವು ಕನ್ನಡ ಧಾತುಗಳೇ ಆಗಿ, ಪ್ರತ್ಯಯಾಂತ ಧಾತುಗಳೆನಿಸುತ್ತವೆ.

ಉದಾಹರಣೆಗೆ:-

ಸಂಸ್ಕೃತ ನಾಮ ಪ್ರಕೃತಿ
+
ಕನ್ನಡದ ಇಸು ಪ್ರತ್ಯಯ
=
ಧಾತು
-
ಕ್ರಿಯಾಪದ
ಯತ್ನ
+
ಇಸು
=
ಯತ್ನಿಸು
-
ಯತ್ನಿಸುತ್ತಾನೆ
ಪ್ರಯತ್ನ
+
ಇಸು
=
ಪ್ರಯತ್ನಿಸು
-
ಪ್ರಯತ್ನಿಸಿದನು
ಭಾವ
+
ಇಸು
=
ಭಾವಿಸು
-
ಭಾವಿಸಿದನು
ಭಂಗ
+
ಇಸು
=
ಭಂಗಿಸು
-
ಭಂಗಿಸುತ್ತಾನೆ
ರಕ್ಷಾ
+
ಇಸು
=
ರಕ್ಷಿಸು
-
ರಕ್ಷಿಸನು
ಪ್ರಲಾಪ
+
ಇಸು
=
ಪ್ರಲಾಪಿಸು
-
ಪ್ರಲಾಪಿಸಿದನು
ಸಿದ್ಧಿ
+
ಇಸು
=
ಸಿದ್ಧಿಸು
-
ಸಿದ್ಧಿಸುತ್ತದೆ
ದುಃಖ
+
ಇಸು
=
ದುಃಖಿಸು
-
ದುಃಖಿಸುತ್ತಾನೆ
ನಿರ್ಣಯ
+
ಇಸು
=
ನಿರ್ಣಯಿಸು
-
ನಿರ್ಣಯಿಸುತ್ತಾನೆ
ಪಾಲನೆ
+
ಇಸು
=
ಪಾಲಿಸು
-
ಪಾಲಿಸಿದನು
ಸೇವನೆ
+
ಇಸು
=
ಸೇವಿಸು
-
ಸೇವಿಸುತ್ತಾನೆ

ಇಸು ಪ್ರತ್ಯಯವು ಮೇಲೆ ಹೇಳಿದ ಕಡೆಗಳಲ್ಲಿ ಮಾತ್ರವೇ ಬರುತ್ತದೆಂದು ತಿಳಿಯಬಾರದು. ಇದು ಸಹಜಧಾತುಗಳ ಮೇಲೂ ಪ್ರೇರಣಾರ್ಥದಲ್ಲಿ ಸಾಮಾನ್ಯವಾಗಿ ಬರುತ್ತದೆ.

ಉದಾಹರಣೆಗೆ:-

(i) ತಾಯಿ ಮಗುವಿಗೆ ಅನ್ನವನ್ನು ಉಣ್ಣಿಸಿದಳು.

(ii) ತಂದೆ ಮಗನಿಗೆ ಅಂಗಿಯನ್ನು ತೊಡಿಸಿದನು.

(iii) ತಾಯಿ ಮಗುವನ್ನು ಮಲಗಿಸಿದಳು.

ಮೇಲಿನ ಉದಾಹರಣೆಗೆಳಲ್ಲಿ ಉಣ್ಣಿಸಿದಳು ಎಂದರೆ ಉಣ್ಣುವಂತೆ ಮಾಡಿದಳು ಎಂದು ಅರ್ಥ. ತಾಯಿಯ ಪ್ರೇರಣೆಯಿಂದ ಅನ್ನವನ್ನು ಮಗು ಉಂಡಿತು. ಇದರಂತೆ ತೊಡಿಸಿದನು, ಮಲಗಿಸಿದಳು ಎಂಬಿವೂ ಪ್ರೇರಣಾರ್ಥಕ ಕ್ರಿಯಾಪದಗಳು. ಇವುಗಳಲ್ಲಿ ಎರಡು ಕರ್ತೃ ಪದಗಳಿವೆ. ಮೊದಲನೆಯ ವಾಕ್ಯದಲ್ಲಿ ತಾಯಿ ಪ್ರೇರಣಾರ್ಥಕ ಕರ್ತೃ, ಮಗು ಪ್ರೇರ್ಯಕರ್ತೃ.

(೫೭) ಪ್ರೇರಣಾರ್ಥದಲ್ಲಿ ಎಲ್ಲ ಧಾತುಗಳ ಮೇಲೂ ಸಾಮಾನ್ಯವಾಗಿ ಇಸು ಪ್ರತ್ಯಯ ಬರುವುದು.

ಉದಾಹರಣೆಗೆ:

ಸಹಜ ಧಾತು
+
ಪ್ರೇರಣಾರ್ಥದಲ್ಲಿ ಇಸು
=
ಪ್ರೇರಣಾರ್ಥಕ ಧಾತು
-
ಪ್ರೇರಣಾರ್ಥಕ ಕ್ರಿಯಾಪದ
ಮಾಡು
+
ಇಸು
=
ಮಾಡಿಸು
-
ಮಾಡಿಸುತ್ತಾನೆ
ತಿನ್ನು
+
ಇಸು
=
ತಿನ್ನಿಸು
-
ತಿನ್ನಿಸುತ್ತಾನೆ
ಓಡು
+
ಇಸು
=
ಓಡಿಸು
-
ಓಡಿಸುತ್ತಾನೆ
ಬರೆ
+
ಇಸು
=
ಬರೆಸು
-
ಬರೆಸುತ್ತಾನೆ
ಕಲಿ
+
ಇಸು
=
ಕಲಿಸು
-
ಕಲಿಸುತ್ತಾನೆ

ಮೇಲೆ ವಿವರಿಸಿದಂತೆ ಧಾತುಗಳು (ಕ್ರಿಯಾಪ್ರಕೃತಿಗಳು) ಸಹಜವಾದುವು ಹಾಗು ಇಸು ಪ್ರತ್ಯಯಾಂತಗಳಾದ ಸಾಧಿತಧಾತುಗಳು ಎಂದು ಎರಡು ಬಗೆ ಎಂದ ಹಾಗಾಯಿತು.

ಅಧ್ಯಾಯ : ಕ್ರಿಯಾಪದ ಪ್ರಕರಣ: ಭಾಗ II – ಸಕರ್ಮಕ, ಅಕರ್ಮಕ ಧಾತುಗಳು

() ಸಕರ್ಮಕ ಧಾತುಗಳು

ಕೆಳಗಿನ ವಾಕ್ಯವನ್ನು ಗಮನಿಸಿರಿ:-

ರಾಮನು ಮರವನ್ನು ಕಡಿದನು. ವಾಕ್ಯದಲ್ಲಿ ಏನನ್ನು ಕಡಿದನು? ಎಂದು ಪ್ರಶ್ನಿಸಿದರೆ, ಮರವನ್ನು ಎಂಬ ಉತ್ತರ ಬರುತ್ತದೆ. ಯಾರು? ಎಂದು ಪ್ರಶ್ನೆ ಮಾಡಿದರೆ ರಾಮ ಎಂಬ ಉತ್ತರ ಬರುತ್ತದೆ. ಕಡಿಯುವ ಕೆಲಸ ಮಾಡಿದನಾದ್ದರಿಂದ ರಾಮನು ಎಂಬ ಪದವು ಕರ್ತೃಪದವೆನಿಸಿತು. ಏನನ್ನು ಕಡಿದನೋ ಅದೇ ಕರ್ಮ. ಆದ್ದರಿಂದ ಮರವನ್ನು ಎಂಬುದು ಕರ್ಮಪದ. ಕಡಿದನು ಎಂಬುದು ಕ್ರಿಯಾಪದ. ಕಡಿದನುಎಂಬ ಕ್ರಿಯೆಗೆ ಏನನ್ನು? ಎಂಬ ಪ್ರಶ್ನೆ ಮಾಡಿದಾಗ ಬರುವ ಉತ್ತರವೇ ಕರ್ಮ. ವಾಕ್ಯವು ಕರ್ಮಪದವನ್ನುಳ್ಳ ವಾಕ್ಯವೆಂದಹಾಗಾಯಿತು. ಇದರ ಹಾಗೆ ಕೆಳಗಿನ ಕೆಲವು ವಾಕ್ಯಗಳನ್ನು ನೋಡಿರಿ:

ಕರ್ತೃಪದ
ಕರ್ಮಪದ
ಕ್ರಿಯಾಪದ
ಧಾತು
ದೇವರು
ಲೋಕವನ್ನು
ರಕ್ಷಿಸುವನು
ರಕ್ಷಿಸು
ಶಿಲ್ಪಿಗಳು
ಗುಡಿಯನ್ನು
ಕಟ್ಟಿದರು
ಕಟ್ಟು
ವಿದ್ಯಾರ್ಥಿಗಳು
ಪಾಠವನ್ನು
ಓದಿದರು
ಓದು
ಹುಡುಗರು
ಮನೆಯನ್ನು
ಸೇರಿದರು
ಸೇರು

ಇಲ್ಲಿ ರಕ್ಷಿಸುವನು, ಕಟ್ಟಿದರು, ಓದಿದರು, ಸೇರಿದರು ಇತ್ಯಾದಿ ಕ್ರಿಯಾಪದಗಳನ್ನುಳ್ಳ ವಾಕ್ಯಗಳಲ್ಲಿ ಕರ್ಮಪದ ಇದ್ದೇ ಇರಬೇಕು. ರಕ್ಷಿಸುವನು ಎಂಬ ಕ್ರಿಯೆಗೆ ಏನನ್ನು ಎಂಬ ಪ್ರಶ್ನೆ ಹುಟ್ಟೇ ಹುಟ್ಟುತ್ತದೆ. ಆದ್ದರಿಂದ ರಕ್ಷಿಸು ಎಂಬ ಧಾತು ಕರ್ಮಪದವನ್ನು ಅಪೇಕ್ಷಿಸುವ ಧಾತು. ಇದರ ಹಾಗೆಯೇ ಕಟ್ಟು, ಓದು, ಮಾಡು, ತಿನ್ನು, ಬರೆ ಇತ್ಯಾದಿ ಧಾತುಗಳಿಗೆ ಕರ್ಮಪದ ಬೇಕೇ ಬೇಕು. ಇಂಥ ಧಾತುಗಳೇ ಸಕರ್ಮಗಳು.

(೫೮) ಕರ್ಮಪದವನ್ನು ಅಪೇಕ್ಷಿಸುವ ಧಾತುಗಳೆಲ್ಲ ಸಕರ್ಮಕ ಧಾತುಗಳು.

ಉದಾಹರಣೆಗೆ:- ಮಾಡು, ಕೊಡು, ಕೆರೆ, ಬಿಡು, ಉಣ್ಣು, ತೊಡು, ಇಕ್ಕು, ಉಜ್ಜು, ದಾಟು, ಮೆಟ್ಟು, ತಿದ್ದು, ತುಂಬು, ನಂಬು, ಹೊಡೆ, ತಡೆ, ಹೀರು, ಸೇರು, ಹೊಯ್, ಸೆಯ್, ಕೆತ್ತು, ಕಡಿ, ತರ್ (ತರು), ಕೊಯ್, ಮುಚ್ಚು, ತೆರೆ, ಕತ್ತರಿಸು-ಇತ್ಯಾದಿ.

() ಅಕರ್ಮಕ ಧಾತುಗಳು

ಕೆಲವು ಧಾತುಗಳಿಗೆ ಕರ್ಮಪದದ ಅವಶ್ಯಕತೆ ಇರುವುದಿಲ್ಲ. ಕೆಳಗಿನ ವಾಕ್ಯಗಳನ್ನು ಗಮನಿಸಿರಿ:-

ಕರ್ತೃಪದ
ಕ್ರಿಯಾಪದ
ಧಾತು
(i)
ಕೂಸು
ಮಲಗಿತು
ಮಲಗು
(ii)
ರಾಮನು
ಓಡಿದನು
ಓಡು
(iii)
ಆಕಾಶ
ಹೊಳೆಯುತ್ತದೆ
ಹೊಳೆ
(iv)
ಅವನು
ಬದುಕಿದನು
ಬದುಕು
(v)
ಗಿಡವು
ಹುಟ್ಟಿತು
ಹುಟ್ಟು

ಮೇಲಿನ ವಾಕ್ಯಗಳಲ್ಲಿ ಕರ್ಮಪದಗಳಿಲ್ಲ. ಮಲಗಿತು ಎಂಬ ಕ್ರಿಯಾಪದಕ್ಕೆ ಏನನ್ನು? ಎಂಬ ಪ್ರಶ್ನೆ ಮಾಡಲು ಉತ್ತರ ಬರುವುದಿಲ್ಲ. ಏನನ್ನು ಮಲಗಿತು? ಎಂದು ಯಾರೂ ಕೇಳುವುದಿಲ್ಲ. ಅದರಂತೆ ಏನನ್ನು ಓಡಿತು? ಎಂದು ಯಾರೂ ಕೇಳುವುದಿಲ್ಲ. ಅಂದರೆ ಕ್ರಿಯೆಗಳಿಗೆ ಕರ್ಮಪದಗಳು ಬೇಕಾಗಿಲ್ಲ.

(೫೯) ಕರ್ಮಪದದ ಅಪೇಕ್ಷೆಯಿಲ್ಲದ ಧಾತುಗಳನ್ನು ಅಕರ್ಮಕ ಧಾತುಗಳೆನ್ನುವರು.

ಉದಾಹರಣೆಗೆ:- ಮಲಗು, ಓಡು, ಇರು, ಬದುಕು, ಬಾಳು, ಹೋಗು, ಬರು, ನಾಚು, ಹೆದರು, ಬೀಳು, ಏಳು, ಸೋರು, ಇಳಿ, ಉರುಳು-ಇತ್ಯಾದಿ.

ಈಗ ಅಕರ್ಮಕ ಸಕರ್ಮಕ ವಾಕ್ಯ ನೋಡಿರಿ

ಅಕರ್ಮಕ ವಾಕ್ಯಗಳು
ಸಕರ್ಮಕ ವಾಕ್ಯಗಳು
()
ಮಗು ಮಲಗಿತು
ಮಗು ಹಾಲನ್ನು ಕುಡಿಯಿತು
()
ಹುಡುಗ ಓಡಿದನು
ಹುಡುಗನು ಪುಸ್ತಕವನ್ನು ಓದಿದನು
()
ತಂದೆ ಇದ್ದಾರೆ
ತಂದೆ ಊಟವನ್ನು ಮಾಡಿದನು
()
ಅವನು ಬದುಕಿದನು
ಅವನು ದೇವರನ್ನು ನೆನೆದನು
()
ಅಕ್ಕ ಬಂದಳು
ಅಕ್ಕ ಅಡಿಗೆಯನ್ನು ಮಾಡಿದಳು
()
ಅವನು ಬಾಳಿದನು
ಅವನು ಊರನ್ನು ಸೇರಿದನು
(ಇಲ್ಲಿ ಕರ್ಮಪದದ ಅವಶ್ಯಕತೆ ಇಲ್ಲ)
(ಇಲ್ಲಿ ಕರ್ಮಪದ ಬೇಕೇ ಬೇಕು)





ಅಧ್ಯಾಯ : ಕ್ರಿಯಾಪದ ಪ್ರಕರಣ: ಭಾಗ III – ಕ್ರಿಯಾಪದ                   

ಪೂರ್ವದಲ್ಲಿ ಧಾತುವೆಂದರೇನು? ಅವು ಎಷ್ಟು ಪ್ರಕಾರ? ಎಂಬುದನ್ನು ಅರಿತಿರಿ. ಈಗ ಧಾತುಗಳು ಕ್ರಿಯಾಪದ ಗಳಾಗುವ ರೀತಿಯನ್ನು ತಿಳಿಯೋಣ. ಕೆಳಗೆ ಕೆಲವು ಕ್ರಿಯಾಪದ ಗಳನ್ನು ಕೊಟ್ಟಿದೆ. ಅವುಗಳನ್ನು ಬಿಡಿಸಿ ನೋಡೋಣ.

ಕ್ರಿಯಾಪದ ಏಕವಚನ
ಧಾತು
ಕಾಲಸೂಚಕ ಪ್ರತ್ಯಯ
ಆಖ್ಯಾತ ಪ್ರತ್ಯಯ (ಬಹುವಚನ)
()
ಮಾಡುತ್ತಾನೆ
-
ಮಾಡು
+
ಉತ್ತ
+
ಆನೆ-(ಮಾಡುತ್ತಾರೆ)
()
ಮಾಡುತ್ತಾಳೆ
-
ಮಾಡು
+
ಉತ್ತ
+
ಆಳೆ-(ಮಾಡುತ್ತಾರೆ)
()
ಮಾಡುತ್ತದೆ
-
ಮಾಡು
+
ಉತ್ತ
+
ಅದೆ-(ಮಾಡುತ್ತವೆ)
()
ಮಾಡುತ್ತೀಯೆ
-
ಮಾಡು
+
ಉತ್ತ
+
ಈಯೆ-(ಮಾಡುತ್ತೀರಿ)
()
ಮಾಡುತ್ತೇನೆ
-
ಮಾಡು
+
ಉತ್ತ
+
ಏನೆ-(ಮಾಡುತ್ತೇವೆ)



()
ಹುಟ್ಟಿದನು
-
ಹುಟ್ಟು
+
+
ಅನು-(ಹುಟ್ಟಿದರು)
()
ಹುಟ್ಟಿದಳು
-
ಹುಟ್ಟು
+
+
ಅಳು-(ಹುಟ್ಟಿದರು)
()
ಹುಟ್ಟಿತು
-
ಹುಟ್ಟು
+
+
ಇತು-(ಹುಟ್ಟಿದವು)
()
ಹುಟ್ಟಿದೆ
-
ಹುಟ್ಟು
+
+
-(ಹುಟ್ಟಿದಿರಿ)
()
ಹುಟ್ಟಿದೆನು
-
ಹುಟ್ಟು
+
+
ಎನು-(ಹುಟ್ಟಿದೆವು)



()
ಬರುವನು
-
ಬರು
+
+
ಅನು-(ಬರುವರು)
()
ಬರುವಳು
-
ಬರು
+
+
ಅಳು-(ಬರುವರು)
()
ಬರುವುದು
-
ಬರು
+
+
ಉದು-(ಬರುವುವು)
()
ಬರುವೆ
-
ಬರು
+
+
-(ಬರುವಿರಿ)
()
ಬರುವೆನು
-
ಬರು
+
+
ಎನು-(ಬರುವೆವು)

ಮೇಲೆ ಐದೈದು ಕ್ರಿಯಾಪದಗಳ ಮೂರು ಗುಂಪುಗಳಿವೆ. ಮೊದಲಿನ ಐದು ಕ್ರಿಯಾಪದ ಗಳಲ್ಲಿ-ಮಾಡು ಧಾತುವಿನ ಮುಂದೆ ಎಲ್ಲ ಕಡೆಗೂ ಉತ್ತ ಎಂಬ ಪ್ರತ್ಯಯವು ಬಂದು ಅದರ ಮುಂದೆ ಆನೆ, ಆಳೆ, ಅದೆ, ಈಯೆ, ಏನೆ ಎಂಬ ಪ್ರತ್ಯಯಗಳು ಏಕವಚನದಲ್ಲೂ, ಬಹುವಚನದಲ್ಲಿ ಆರೆ, ಆರೆ, ಅವೆ, ಈರಿ, ಏವೆ ಎಂಬ ಪ್ರತ್ಯಯಗಳೂ ಬಂದಿವೆ.

ಎರಡನೆಯ ಐದು ಕ್ರಿಯಾಪದಗಳಲ್ಲಿ ಹುಟ್ಟು ಎಂಬ ಧಾತುವಿನ ಮುಂದೆ ಎಂಬ ಪ್ರತ್ಯಯವು ಎಲ್ಲ ಕಡೆಗೂ ಬಂದು ಅದರ ಮುಂದೆ ಅನು, ಅಳು, ಇತು, , ಎನು ಎಂಬ ಪ್ರತ್ಯಯಗಳು ಏಕವಚನದಲ್ಲೂ, ಅರು, ಅರು, ಅವು, ಇರಿ, ಎವು ಎಂಬ ಪ್ರತ್ಯಯಗಳು ಬಹುವಚನದಲ್ಲೂ ಬಂದಿವೆ.

ಮೂರನೆಯ ಐದು ಕ್ರಿಯಾಪದಗಳಲ್ಲಿ ಬರು ಎಂಬ ಧಾತುವಿನ ಮುಂದೆ ಎಂಬ ಪ್ರತ್ಯಯವು ಎಲ್ಲ ಕಡೆಗೂ ಬಂದು ಅದರ ಮುಂದೆ ಅನು, ಅಳು, ಉದು, , ಎನು ಎಂಬ ಪ್ರತ್ಯಯಗಳು ಏಕವಚನದಲ್ಲೂ, ಅರು, ಅರು, ಅವು, ಇರಿ, ಎವು ಎಂಬ ಪ್ರತ್ಯಯಗಳು ಬಹುವಚನದಲ್ಲೂ ಬಂದಿವೆ.

ಮಧ್ಯದಲ್ಲಿ ಮೂರು ಕಡೆಗೆ ಬಂದಿರುವ ಉತ್ತ, , ಎಂಬುವು ಕಾಲಸೂಚಕ ಪ್ರತ್ಯಯಗಳು* ಅಂದರೆ ಉತ್ತ ಎಂಬುದು ವರ್ತಮಾನಕಾಲವನ್ನೂ, ಎಂಬುದು ಭೂತಕಾಲ ವನ್ನೂ, ಎಂಬುದು ಭವಿಷ್ಯತ್ ಕಾಲವನ್ನೂ ಸೂಚಿಸುತ್ತವೆ ಎಂದು ತಿಳಿಯಬೇಕು. ಕೊನೆಯಲ್ಲಿ ಬಂದಿರುವ ಆನೆ, ಆಳೆ, ಆರೆ, ಆರೆ, ಅದೆ, ಅವೆ, ಈಯೆ, ಈರಿ, ಏನೆ, ಏವೆ ಇತ್ಯಾದಿ ಪ್ರತ್ಯಯಗಳೆಲ್ಲ ಆಖ್ಯಾತಪ್ರತ್ಯಯಗಳು.

ಆದ್ದರಿಂದ ಮೇಲೆ ಹೇಳಿದ ಮೂರು ಗುಂಪುಗಳ ಕ್ರಿಯಾಪದಗಳಲ್ಲಿ ಮೊದಲಿನ ಐದು ಕ್ರಿಯಾಪದಗಳ ಗುಂಪು ವರ್ತಮಾನಕಾಲದ (ಈಗ ನಡೆಯುತ್ತಿರುವ) ಕ್ರಿಯೆಯನ್ನೂ, ಎರಡನೆಯ ಐದು ಕ್ರಿಯಾಪದಗಳ ಗುಂಪು ಹಿಂದೆ ನಡೆದ ಕ್ರಿಯೆಯ ಅಂದರೆ ಭೂತಕಾಲದ ಕ್ರಿಯೆಯನ್ನೂ, ಮೂರನೆ ಐದು ಕ್ರಿಯಾಪದಗಳ ಗುಂಪು ಮುಂದೆ ನಡೆಯುವ ಅಂದರೆ ಭವಿಷ್ಯತ್ಕಾಲದ ಕ್ರಿಯೆಯನ್ನೂ ಗೊತ್ತುಪಡಿಸುವ ಕ್ರಿಯಾಪದಗಳೆಂದ ಹಾಗಾಯಿತು. ಹಾಗಾದರೆ ಕ್ರಿಯಾಪದ ಎಂದರೇನೆಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-

(೬೦) ಧಾತುಗಳಿಗೆ ಆಖ್ಯಾತ* ಪ್ರತ್ಯಯಗಳು ಸೇರಿ ಕ್ರಿಯಾಪದಗಳೆನಿಸುವುವು.

ಹೀಗೆ ಆಖ್ಯಾತಪ್ರತ್ಯಯಗಳು ಸೇರುವಾಗ ವರ್ತಮಾನ, ಭೂತ, ಭವಿಷ್ಯತ್ ಕಾಲಗಳಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಕ್ರಮವಾಗಿ ಉತ್ತ, , ಎಂಬ ಕಾಲಸೂಚಕ ಪ್ರತ್ಯಯಗಳು ಆಗಮವಾಗಿ ಬರುತ್ತವೆ.



* ಇವಕ್ಕೆ ವಿಕರಣ ಪ್ರತ್ಯಯಗಳೆಂದೂ ಕರೆಯುವರು. ಸಂಸ್ಕೃತ ವ್ಯಾಕರಣದಲ್ಲಿ ಕರೆಯುವ ಪದ್ದತಿಯಂತೆ ಕನ್ನಡದಲ್ಲೂ ವಿಕರಣ ಪ್ರತ್ಯಯವೆನ್ನುತ್ತಾರೆ. ಆದರೆ ಇವು ಕಾಲವನ್ನು (ವರ್ತಮಾನಕಾಲ, ಭೂತಕಾಲ, ಭವಿಷ್ಯತ್ಕಾಲ) ಸೂಚಿಸುತ್ತವಾದ್ದರಿಂದ ಕನ್ನಡದಲ್ಲಿ ಕಾಲಸೂಚಕ ಪ್ರತ್ಯಯಗಳೆಂದೇ ಕರೆಯುವರು.
* ಆಖ್ಯಾತ ಎಂದರೆ ಭಾವಪ್ರಧಾನವಾದುದು (ಭಾವಪ್ರಧಾನಮಾಖ್ಯಾತಂ)

No comments:

Post a Comment