Saturday 2 June 2012


ಅಧ್ಯಾಯ : ಸಮಾಸ ಪ್ರಕರಣ: ಭಾಗ III – ಸಾರಾಂಶ

III – ಸಾರಾಂಶ

ಸಮಾಸ

ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಿಕೆ.

ಉತ್ತರಪದಾರ್ಥ ಪ್ರಧಾನವಾದುದು ತತ್ಪುರುಷಸಮಾಸ.

ವಿಶೇಷಣ ವಿಶೇಷಭಾವ ಸಂಬಂಧ-ಮತ್ತು ಸಮಾನಾಧಿಕರಣಗಳುಳ್ಳದ್ದು ಕರ್ಮಧಾರಯಸಮಾಸ.

ಸಂಖ್ಯಾಪೂರ್ವಪದವಾಗಿ ಉಳ್ಳದ್ದು ದ್ವಿಗುಸಮಾಸ.

ಅಂಶಾಂಶಿಭಾವಸಂಬಂಧವುಳ್ಳದ್ದು ಅಂಶಿಸಮಾಸ.

ಸರ್ವಪದಾರ್ಥ ಪ್ರಧಾನವಾದುದು ದ್ವಂದ್ವ.

ಅನ್ಯಪದಾರ್ಥ ಪ್ರಧಾನವಾದದ್ದು ಬಹುವ್ರೀಹಿಸಮಾಸ.

ಪೂರ್ವಪದ-ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು ಉತ್ತರದ ನಾಮಪದದೊಡನೆ ಕೂಡಿ ಆಗುವ ಸಮಾಸ ಗಮಕ.

ಪೂರ್ವಪದ ದ್ವಿತೀಯಾಂತವಾಗಿದ್ದು ಉತ್ತರದ ಕ್ರಿಯೆಯೊಡನೆ ಕೂಡಿ ಆಗುವ ಸಮಾಸ ಕ್ರಿಯಾಸಮಾಸ.

ಅರಿಸಮಾಸ:- ಕನ್ನಡ ಪದಗಳೊಡನೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು. ಮಾಡಿದರೆ ಅರಿಸಮಾಸವೆನಿಸುವುದು. (i) ಪೂರ್ವಕವಿ ಪ್ರಯೋಗಗಳಲ್ಲಿ ದೋಷವಿಲ್ಲ. (ii) ಬಿರುದಾವಳಿಯೇ ಮೊದಲಾದವುಗಳಲ್ಲಿ ದೋಷವೆಣಿಸಬಾರದು. (iii) ಕ್ರಿಯಾ-ಗಮಕಸಮಾಸಗಳಲ್ಲಿ ದೋಷವಿಲ್ಲ.

* * *

ಅಭ್ಯಾಸ ಪ್ರಶ್ನೆಗಳು

() ಸಮಾಸವೆಂದರೇನು? ಸೂತ್ರೋದಾಹರಣ ಪೂರ್ವಕ ವಿವರಿಸಿರಿ.

() ಸಮಾಸಗಳಲ್ಲಿ ಎಷ್ಟುವಿಧ?

() ಅರಿಸಮಾಸವೆಂದರೇನು?

() ಎಲ್ಲೆಲ್ಲಿ ಅರಿಸಮಾಸ ದೋಷವನ್ನು ಎಣಿಸಕೂಡದು?

() ಕೆಳಗೆ ಕೆಲವು ಸಮಾಸ ಪದಗಳನ್ನು ಕೊಟ್ಟಿದೆ. ಅವುಗಳನ್ನು ಬಿಡಿಸಿ ಬರೆದು ಸಮಾಸದ ಹೆಸರು ತಿಳಿಸಿರಿ:-

ಅರಮನೆ, ಮರಗಾಲು, ಇಮ್ಮಡಿ, ಇಕ್ಕೆಲ, ಮುಕ್ಕಣ್ಣು, ಮುಕ್ಕಣ್ಣ, ನಿಡುಮೂಗು, ನಿಡುಮೊಗ, ಹೆಮ್ಮರ, ಹೆದ್ದಾರಿ, ಬೆಳ್ಗೊಡೆ, ರಾಮಕೃಷ್ಣರು, ಗಿಡಮರಬಳ್ಳಿ, ಮುಂದಲೆ, ಕಡೆಗಣ್ಣು, ಮನುಷ್ಯ, ತೋರುಗಂಬ, ಹುರಿಗಡಲೆ,-ಇತ್ಯಾದಿ.

() ಕೆಳಗೆ ಕೆಲವು ಸಮಾಸಗಳನ್ನು ವಿಗ್ರಹವಾಕ್ಯ ಮಾಡಿ ಬರೆದಿದೆ. ಅವುಗಳನ್ನು ಕೂಡಿಸಿ ಬರೆದು ಸಮಾಸದ ಹೆಸರು ತಿಳಿಸಿರಿ.

ಇವಳು+ಮುದುಕಿ, ಇವನು+ಮುದುಕ, ದೇವರ+ಮಂದಿರ, ತಿಂದುದು+ಅನ್ನ, ಎರಡು+ಕೆಲ, ಮೂರು+ಪುರಿ, ಮರದ+ಬಾಳ್, ಕೆಚ್ಚನೆ+ಜಡೆ, ಎರಡು+ಕಡೆ, ನುಣ್ಣಿತು+ಸರ, ತಣ್ಣನೆ+ನೀರು, ಕಡಿದು+ಅಪ್ಪಣೆ, ಇನಿದು+ಸರ, ಅರಳುವುದು+ಮೊಗ್ಗು, ಬೆಚ್ಚನೆಯ+ಕದಿರು+ಉಳ್ಳವ -ಇತ್ಯಾದಿ.

() ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳಗಳಲ್ಲಿ ಸರಿಯಾದ ಪದವನ್ನು ಹಾಕಿ ವಾಕ್ಯವನ್ನು ಪೂರ್ಣಮಾಡಿರಿ:-

() ಕನ್ನಡ ಮತ್ತು ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಿದರೆ ____ ಎನ್ನುವರು.

() ಪೂರ್ವೋತ್ತರಪದಗಳು ಅಂಶಾಂಶಿಭಾವ ಸಂಬಂಧದಿಂದ ಕೂಡಿದ್ದರೆ_______ ಸಮಾಸವೆನಿಸುವುದು.

() ಕರ್ಮಧಾರಯಸಮಾಸದಲ್ಲಿ ಪೂರ್ವೋತ್ತರಪದಗಳು__ಸಂಬಂಧದಿಂದ ಕೂಡಿರುತ್ತವೆ.

() ಬಹುವ್ರೀಹಿಸಮಾಸದಲ್ಲಿ _________ ಪದದ ಅರ್ಥವು ಪ್ರಧಾನವಾಗಿರುತ್ತದೆ.

() ಕ್ರಿಯಾಸಮಾಸದಲ್ಲಿ ಉತ್ತರಪದವು __________ ಯಿಂದ ಕೂಡಿರುತ್ತದೆ.

() ದ್ವಿಗುಸಮಾಸದಲ್ಲಿ ಪೂರ್ವಪದವು _________ ವಾಚಕವಾಗಿರುತ್ತದೆ.

() ಪೂರ್ವಪದವು ಸರ್ವನಾಮ, ಕೃದಂತಗಳಲ್ಲಿ ಒಂದಾಗಿದ್ದು ಉತ್ತರ ನಾಮಪದದೊಡನೆ ಸೇರಿ ಆಗುವ ಸಮಾಸವನ್ನು ________ ಎನ್ನುವರು.

() ಗಮಕಸಮಾಸವು ___________ ಒಂದು ಪ್ರಭೇದವಾಗಿದೆ.

() ಕೆಳಗೆ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ಒಂದು ಸರಿಯಾದ ಉತ್ತರವನ್ನು ಆರಿಸಿ ಬಿಟ್ಟಿರುವ ಸ್ಥಳಗಳಲ್ಲಿ ಸೇರಿಸಿ ಬರೆಯಿರಿ:-

() ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕತಪಗಳಿಗೆ ಕ್ರಮವಾಗಿ ಗದಬಗಳು ___________ ಬರುತ್ತವೆ. (ಆಗಮವಾಗಿ, ಆದೇಶವಾಗಿ, ಲೋಪವಾಗಿ)



No comments:

Post a Comment