Sunday, 3 June 2012


ಅಧ್ಯಾಯ : ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ III – ಲಿಂಗಗಳು

() ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ

(i) ಭೀಮನು ಮಗನಿಗೆ ಬುದ್ಧಿ ಹೇಳಿದನು.

(ii) ಸೀತೆ ಉಳಿದ ಸ್ತ್ರೀಯರಿಗೆ ಬುದ್ಧಿ ಹೇಳಿದಳು.

(iii) ಕತ್ತೆ ಹುಲ್ಲನ್ನು ಮೇಯುತ್ತದೆ.

ಮೇಲಿನ ವಾಕ್ಯಗಳಲ್ಲಿ ಭೀಮನು, ಮಗನಿಗೆ, ಸೀತೆ, ಸ್ತ್ರೀಯರಿಗೆ, ಹುಲ್ಲನ್ನು-ಎಂಬ ನಾಮ ಪದಗಳಲ್ಲಿ ಭೀಮ, ಮಗಎಂಬೆರಡು ಶಬ್ದಗಳನ್ನು ಉಚ್ಚರಿಸಿದಾಗ ನಮ್ಮ ಮನಸ್ಸಿಗೆ ಗಂಡಸು ಎಂಬರ್ಥ ಹೊಳೆಯುವುದು. ಸೀತೆ, ಸ್ತ್ರೀಎಂಬ ಶಬ್ದವನ್ನು ಅಂದಾಗ ಮನಸ್ಸಿಗೆ ಹೆಂಗಸು ಎಂಬ ಅರ್ಥ ಹೊಳೆಯುವುದು. ಕತ್ತೆ, ಹುಲ್ಲು-ಶಬ್ದಗಳನ್ನು ಪ್ರಯೋಗ ಮಾಡಿದಾಗ ಹೆಂಗಸಲ್ಲದ, ಗಂಡಸಲ್ಲದ ಬೇರೆ ಪದಾರ್ಥವೆಂಬರ್ಥವು ಬೋಧವಾಗುವುದು (ಹೊಳೆಯುವುದು). ಇದನ್ನು ನಪುಂಸಕಲಿಂಗವೆನ್ನುವರು. ಹಾಗಾದರೆ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಿಗೆ ಸೂತ್ರಗಳನ್ನು ಕೆಳಗಿನಂತೆ ಹೇಳಬಹುದು.

(೪೩) ಪುಲ್ಲಿಂಗ:- ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗವೆನಿಸುವುದು.

ಉದಾಹರಣೆಗೆ:- ದೊಡ್ಡವನು, ಮುದುಕ, ಕಳ್ಳ, ಮನುಷ್ಯ, ಶಂಕರ, ಬಸವ, ಹುಡುಗ, ಕೆಟ್ಟವನು, ಅರಸು, ಪ್ರಧಾನಿ, ಮಂತ್ರಿ, ಜಟ್ಟಿ, ಶಕ್ತಿವಂತ, ತಂದೆ, ಮಾವ, ಸಹೋದರ, ಅಣ್ಣ, ತಮ್ಮ, ಚಿಕ್ಕಪ್ಪ, ಸಚಿವ, ರಾಮ, ಕೃಷ್ಣ, ಶಂಕರಾಚಾರ್ಯ, ಮದುಮಗ, ದಾಸ, ಕವಿ, ವಿಮರ್ಶಕ,-ಇತ್ಯಾದಿ.

ಮೇಲಿನ ಯಾವ ಶಬ್ದವನ್ನು ಹೇಳಿದರೂ ನಮ್ಮ ಭಾವನೆಗೆ ಗಂಡಸು ಎಂಬರ್ಥ ಹೊಳೆಯುವುದು. ಆದ್ದರಿಂದ ಇವು ಪುಲ್ಲಿಂಗಗಳು.

(೪೪) ಸ್ತ್ರೀಲಿಂಗ:- ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ಹೆಂಗಸು ಎಂಬ ಅರ್ಥವು ಹೊಳೆಯುವುದೋ ಅದು ಸ್ತ್ರೀಲಿಂಗವೆನಿಸುವುದು.

ಉದಾಹರಣೆಗೆ:- ದೊಡ್ಡವಳು, ಮುದುಕಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಹೆಂಡತಿ, ತಂಗಿ, ಸಹೋದರಿ, ಪಾರ್ವತಿ, ಅಕ್ಕ, ಅರಸಿ, ರಾಣಿ, ತಾಯಿ, ಅಜ್ಜಿ, ವಿದುಷಿ, ಚಲುವೆ, ಒಕ್ಕಲುಗಿತ್ತಿ, ಹಾವಾಡಗಿತ್ತಿ, ಕೆಟ್ಟವಳು, ಒಳ್ಳೆಯವಳು, ಬ್ರಾಹ್ಮಣಿತಿ, ಉಪಾಧ್ಯಾಯೆ, ಅಧ್ಯಕ್ಷೆ, ಸಚಿವೆ, ಮಗಳು, ಬಾಲಿಕೆ, ಸ್ತ್ರೀ, ಹೆಂಗಸು-ಇತ್ಯಾದಿಗಳು.

(೪೫) ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು ಗಂಡಸು ಎರಡೂ ಅಲ್ಲದ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕಲಿಂಗವೆನಿಸುವುದು.

ಉದಾಹರಣೆಗೆ:- ಮನೆ, ನೆಲ, ಬೆಂಕಿ, ಗದ್ದೆ, ತೋಟ, ಕತ್ತೆ, ಕುದುರೆ, ಕೋಣ, ಎತ್ತು, ನರಿ, ನಾಯಿ, ಕಟ್ಟಿಗೆ, ಕಲ್ಲು, ಇಟ್ಟಿಗೆ, ಹಸು, ಗಿಳಿ, ಹದ್ದು, ಮಳೆ, ಮೋಡ, ಜಲ, ಹೊಳೆ, ಹಳ್ಳ, ಮಂಚ, ಪುಸ್ತಕ, ಎಲೆ, ಬಳ್ಳಿ, ಹೂ, ಹಣ್ಣು, ಕಾಯಿ, ಕಂಬ, ಮರ, ಗೋಡೆ, ಹಲಗೆ, ಬಳಪ, ಬೆಳ್ಳಿ, ಬಂಗಾರ, ಆಕಾಶ-ಇತ್ಯಾದಿಗಳು.

() ಪುನ್ನಪುಂಸಕಲಿಂಗ, ಸ್ತ್ರೀನಪುಂಸಕಲಿಂಗ, ನಿತ್ಯನಪುಂಸಕಲಿಂಗ

ಮೇಲೆ ಹೇಳಿದಂತೆ ಲಿಂಗಗಳು ಮೂರು ಬಗೆಯಾದರೂ ಒಮ್ಮೊಮ್ಮೆ ಕೆಲವು ಶಬ್ದಗಳನ್ನು () ಪುಲ್ಲಿಂಗನಪುಂಸಕಲಿಂಗಗಳಲ್ಲೂ, () ಕೆಲವನ್ನು ಸ್ತ್ರೀನಪುಂಸಕಲಿಂಗಗಳಲ್ಲೂ, () ಕೆಲವನ್ನು ನಿತ್ಯವಾಗಿ ನಪುಂಸಕಲಿಂಗಗಳಲ್ಲೂ, () ಮತ್ತೆ ಕೆಲವನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಮೂರರಲ್ಲೂ ಪ್ರಯೋಗ ಮಾಡುತ್ತೇವೆ. ಅವುಗಳ ಬಗೆಗೆ ತಿಳಿಯೋಣ.

(೪೬) ಪುನ್ನಪುಂಸಕಲಿಂಗಗಳು:- ಸೂರ್ಯ, ಚಂದ್ರ, ಶನಿ, ಮಂಗಳ-ಇತ್ಯಾದಿ ಗ್ರಹವಾಚಕ ಶಬ್ದಗಳನ್ನು ಪುಲ್ಲಿಂಗದಂತೆಯೂ, ನಪುಂಸಕಲಿಂಗದಂತೆಯೂ, ಪ್ರಯೋಗಿಸು ತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕಗಳೆಂದೂ ಕರೆಯುತ್ತೇವೆ.

ಉದಾಹರಣೆಗೆ:-

ಸೂರ್ಯ ಮೂಡಿತು
(ನಪುಂಸಕಲಿಂಗ)
ಸೂರ್ಯ ಮೂಡಿದನು
(ಪುಲ್ಲಿಂಗ)
ಶನಿಯು ಕಾಡುತ್ತದೆ
(ನಪುಂಸಕಲಿಂಗ)
ಶನಿಯು ಕಾಡುತ್ತಾನೆ
(ಪುಲ್ಲಿಂಗ)
ಚಂದ್ರೋದಯವಾಯಿತು
(ನಪುಂಸಕಲಿಂಗ)
ಚಂದ್ರ ಉದಯವಾದನು
(ಪುಲ್ಲಿಂಗ)

(ಇಲ್ಲಿ ಸೂರ್ಯ, ಚಂದ್ರ, ಶನಿ-ಶಬ್ದಗಳು ಪುಲ್ಲಿಂಗ ನಪುಂಸಕಲಿಂಗಗಳೆರಡರಲ್ಲೂ ಪ್ರಯೋಗವಾಗಿರುವುದನ್ನು ಕಾಣಬಹುದು)

(೪೭) ಸ್ತ್ರೀನಪುಂಸಕಲಿಂಗಗಳು:- ದೇವತಾವಾಚಕಗಳಾದ ಶಬ್ದಗಳು ಸ್ತ್ರೀಲಿಂಗ ನಪುಂಸಕಲಿಂಗಗಳೆರಡರಲ್ಲೂ ಪ್ರಯೋಗಿಸಲ್ಪಡುತ್ತವೆ. ಇಂಥವನ್ನು ಸ್ತ್ರೀನಪುಂಸಕಲಿಂಗ ಗಳೆಂದು ಕರೆಯುವರು.

ಉದಾಹರಣೆಗೆ:-

ದೇವತೆ ಒಲಿಯಿತು
(ನಪುಂಸಕಲಿಂಗ)
ದೇವತೆ ಒಲಿದಳು
(ಸ್ತ್ರೀಲಿಂಗ)
ಲಕ್ಷ್ಮಿ ಒಲೆ/ಒಲಿಯಿತು
(ನಪುಂಸಕಲಿಂಗ)
ಲಕ್ಷ್ಮಿ ಒಲೆದಳು
(ಸ್ತ್ರೀಲಿಂಗ)
ಸರಸ್ವತಿ ಕೃಪೆ ಮಾಡಿತು
(ನಪುಂಸಕಲಿಂಗ)
ಸರಸ್ವತಿ ಕೃಪೆ ಮಾಡಿದಳು
(ಸ್ತ್ರೀಲಿಂಗ)
ಹುಡುಗಿ ಓದುತ್ತದೆ
(ನಪುಂಸಕಲಿಂಗ)
ಹುಡುಗಿ ಓದುವಳು
(ಸ್ತ್ರೀಲಿಂಗ)

ಮೇಲೆ ಹೇಳಿರುವ ದೇವತೆ, ಲಕ್ಷ್ಮಿ, ಸರಸ್ವತಿ, ಹುಡುಗಿ-ಇತ್ಯಾದಿ ಶಬ್ದಗಳು ಸ್ತ್ರೀಲಿಂಗ ನಪುಂಸಕಲಿಂಗಗಳೆರಡರಲ್ಲೂ ಪ್ರಯೋಗಿಸಲ್ಪಟ್ಟಿರುವುದರಿಂದ ಇವು ಸ್ತ್ರೀನಪುಂಸಕಲಿಂಗ ಗಳೆಂದು ಕರೆಯಿಸಿಕೊಳ್ಳಲ್ಪಡುತ್ತವೆ.

(೪೮) ನಿತ್ಯನಪುಂಸಕಲಿಂಗಗಳು:- ಶಿಶು, ಮಗು, ದಂಡು, ಜನ[1], ಕೂಸು -ಮೊದಲಾದ ಶಬ್ದಗಳು ಯಾವಾಗಲೂ ನಪುಂಸಕಲಿಂಗದಲ್ಲಿಯೇ ಪ್ರಯೋಗಿಸಲ್ಪಡುವು ದರಿಂದ ಇವನ್ನು ನಿತ್ಯನಪುಂಸಕಲಿಂಗಗಳೆಂದು ಕರೆಯುವರು.

ಉದಾಹರಣೆಗೆ:-

ಶಿಶು
ಜನಿಸಿತು.
ಮಗು
ಅಳುತ್ತದೆ.
ಜನ
ಸೇರಿದೆ.
ದಂಡು
ಬಂತು.
ಕೂಸು
ಮಲಗಿದೆ.

ಶಿಶು, ಕೂಸು, ಮಗುಇವು ಗಂಡು ಮಗುವಾದರೂ ಆಗಿರಬಹುದು, ಹೆಣ್ಣಾದರೂ ಆಗಿರಬಹುದು. ಆದರೆ ಪ್ರಯೋಗ ಮಾತ್ರ ನಪುಂಸಕಲಿಂಗದಲ್ಲಿ ಎಂದು ತಿಳಿಯಬೇಕು. ಜನ ಎಂಬಲ್ಲಿ ಹೆಣ್ಣು, ಗಂಡು ಎರಡೂ ಆಗಿರಬಹುದು. ಆದರೆ ಪ್ರಯೋಗ ಮಾತ್ರ ನಪುಂಸಕ ಲಿಂಗದಲ್ಲಿ ಎಂದು ತಿಳಿಯಬೇಕು. ದಂಡು ಎಂಬುದರಲ್ಲಿ ಮನುಷ್ಯ, ಪ್ರಾಣಿ, ಹೆಂಗಸು ಏನಾದರೂ ಇರಬಹುದು. ಪ್ರಯೋಗ ಮಾತ್ರ ನಪುಂಸಕಲಿಂಗದಲ್ಲಿ. ಆದುದರಿಂದ ಜನ, ದಂಡು, ಮಗು, ಶಿಶು-ಇಂಥ ಶಬ್ದಗಳನ್ನು ನಿತ್ಯನಪುಂಸಕಲಿಂಗಗಳೆಂದು ತಿಳಿಯಬೇಕು.

() ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಮೂರರಲ್ಲೂ ಪ್ರಯೋಗವಾಗುವ ಶಬ್ದಗಳು

[ವಾಚ್ಯಲಿಂಗ (ವಿಶೇಷ್ಯಾಧೀನಲಿಂಗಗಳು)]

() ನೀನು ತಂದೆ. (ಇಲ್ಲಿ `ನೀನುಶಬ್ದವು ಪುಲ್ಲಿಂಗ)

() ನೀನು ತಾಯಿ. (ಇಲ್ಲಿ `ನೀನುಶಬ್ದವು ಸ್ತ್ರೀಲಿಂಗ)

() ನೀನು ಪಶು. (ಇಲ್ಲಿ `ನೀನುಶಬ್ದವು ನಪುಂಸಕಲಿಂಗ)

ಮೇಲಿನ ಉದಾಹರಣೆಗಳಲ್ಲಿ ನೀನು ಎಂಬ ಶಬ್ದವು ಯಾವುದಕ್ಕೆ ಹೇಳಲ್ಪಡುವುದೋ (ವಿಶೇಷಣವಾಗಿ ಹೇಳಲ್ಪಡುವುದೋ) ಅದೇ ಲಿಂಗವನ್ನು ಹೊಂದುತ್ತದೆ. ಆದರೆ ಶಬ್ದವು ವಿಶೇಷ್ಯದ ಲಿಂಗವನ್ನು ಹೊಂದುತ್ತದಾದ್ದರಿಂದ ಇದಕ್ಕೆ ವಿಶೇಷ್ಯಾಧೀನಲಿಂಗವೆಂದೂ, ವಾಚ್ಯಲಿಂಗವೆಂದೂ ಹೇಳುವರು.

`ನೀನು ತಂದೆ’ – ಎಂಬಲ್ಲಿ `ತಂದೆಎಂಬ ಪುಲ್ಲಿಂಗಕ್ಕೆ ಅಧೀನವಾದ್ದರಿಂದ ಅಲ್ಲಿ ಪುಲ್ಲಿಂಗವೆನಿಸಿದೆ.

`ನೀನು ತಾಯಿ’ – ಎಂಬಲ್ಲಿ `ತಾಯಿಎಂಬ ಸ್ತ್ರೀಲಿಂಗಕ್ಕೆ ಅಧೀನವಾದ್ದರಿಂದ ಅಲ್ಲಿ ಸ್ತ್ರೀಲಿಂಗವೆನಿಸಿದೆ.

`ನೀನು ಪಶುಎಂಬಲ್ಲಿ `ಪಶುಎಂಬ ನಪುಂಸಕಲಿಂಗಕ್ಕೆ ಅಧೀನವಾದ್ದರಿಂದ ಅಲ್ಲಿ ನಪುಂಸಕಲಿಂಗವೆನಿಸಿದೆ.

ಆದ್ದರಿಂದ `ನೀನುಎಂಬುದಕ್ಕೆ ಸ್ವತಂತ್ರವಾಗಿ ಯಾವ ಲಿಂಗವನ್ನೂ ಹೇಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ಇಂಥ ಶಬ್ದಗಳಿಗೆಲ್ಲ ವಿಶೇಷ್ಯಾಧೀನಲಿಂಗ ಅಥವಾ ವಾಚ್ಯಲಿಂಗಗಳೆಂದು ಕರೆಯುವರು.

(೪೯) ವಾಚ್ಯಲಿಂಗ (ವಿಶೇಷ್ಯಾಧೀನಲಿಂಗಗಳು):- ನಾನು, ನೀನು, ತಾನು ಎಂಬ ಸರ್ವನಾಮಗಳೂ, ಒಳ್ಳೆಯ, ಕೆಟ್ಟ, ಬಿಳಿಯ, ಕರಿಯ ಮೊದಲಾದ ಗುಣವಾಚಕ ಶಬ್ದಗಳೂ, ಹಲವು, ಕೆಲವು, ಎಲ್ಲಾ-ಇತ್ಯಾದಿ ಶಬ್ದಗಳೂ ಮೂರು ಲಿಂಗಗಳಲ್ಲೂ ಒಂದೇರೀತಿ ಪ್ರಯೋಗಿಸಲ್ಪಡುವುದರಿಂದ ಇವನ್ನು ವಿಶೇಷ್ಯಾಧೀನಲಿಂಗಗಳು ಅಥವಾ ವಾಚ್ಯಲಿಂಗಗಳು ಎಂದು ಹೇಳುವರು.

ಉದಾಹರಣೆಗೆ:-

(i) ನಾನು-ಎಂಬುದಕ್ಕೆ-

ನಾನು ದೊಡ್ಡವನು (ಪುಲ್ಲಿಂಗ)

ನಾನು ದೊಡ್ಡವಳು (ಸ್ತ್ರೀಲಿಂಗ)

ನಾನು ದೊಡ್ಡದೆಂದಿತು (ನಪುಂಸಕಲಿಂಗ)

(ii) ನೀನು-ಎಂಬುದಕ್ಕೆ-

ನೀನು ಗಂಡಸು
(ಪುಲ್ಲಿಂಗ)
ನೀನು ಹೆಂಗಸು
(ಸ್ತ್ರೀಲಿಂಗ)
ನೀನು ಕಲ್ಲು
(ನಪುಂಸಕಲಿಂಗ)

(iii) ತಾನು-ಎಂಬುದಕ್ಕೆ-

ತಾನು ಚಿಕ್ಕವನೆಂದು ತಿಳಿದನು
(ಪುಲ್ಲಿಂಗ)
ತಾನು ಚಿಕ್ಕವಳೆಂದು ತಿಳಿದಳು
(ಸ್ತ್ರೀಲಿಂಗ)
ತಾನು ಸಣ್ಣದೆಂದು ಭಾವಿಸಿತು
(ನಪುಂಸಕಲಿಂಗ)

(iv) ಒಳ್ಳೆಯ-ಎಂಬುದಕ್ಕೆ-

ಒಳ್ಳೆಯ ಹುಡುಗ
(ಪುಲ್ಲಿಂಗ)
ಒಳ್ಳೆಯ ಹುಡುಗಿ
(ಸ್ತ್ರೀಲಿಂಗ)
ಒಳ್ಳೆಯ ನಾಯಿ
(ನಪುಂಸಕಲಿಂಗ)

(v) ಕೆಟ್ಟ-ಎಂಬುದಕ್ಕೆ-

ಕೆಟ್ಟ ಮನುಷ್ಯ
(ಪುಲ್ಲಿಂಗ)
ಕೆಟ್ಟ ಹೆಂಗಸು
(ಸ್ತ್ರೀಲಿಂಗ)
ಕೆಟ್ಟ ನಾಯಿ
(ನಪುಂಸಕಲಿಂಗ)

(vi) ಎಲ್ಲಾ-ಎಂಬುದಕ್ಕೆ-

ಎಲ್ಲಾ ಗಂಡಸರು ಬಂದರು
(ಪುಲ್ಲಿಂಗ)
ಎಲ್ಲಾ ಹೆಂಗಸರು ಬಂದರು
(ಸ್ತ್ರೀಲಿಂಗ)
ಎಲ್ಲಾ ದನಗಳು ಹೋದವು
(ನಪುಂಸಕಲಿಂಗ)

ಇದುವರೆಗೆ () ಪುಲ್ಲಿಂಗ () ಸ್ತ್ರೀಲಿಂಗ () ನಪುಂಸಕಲಿಂಗ () ಪುನ್ನಪುಂಸಕಲಿಂಗ () ಸ್ತ್ರೀನಪುಂಸಕಲಿಂಗ () ನಿತ್ಯನಪುಂಸಕಲಿಂಗ () ವಿಶೇಷ್ಯಾಧೀನಲಿಂಗ (ವಾಚ್ಯಲಿಂಗ) – ಎಂಬ ಏಳು ಬಗೆಯ ಲಿಂಗವನ್ನು ನಾಮಪಕೃತಿಗಳು ಹೇಗೆ ಹೊಂದುತ್ತವೆಂಬ ಬಗೆಗೆ ತಿಳಿದಿದ್ದೀರಿ.

ಈಗ ಲಿಂಗದಿಂದ ಶಬ್ದಗಳ ಸ್ವರೂಪ ಹೇಗೆ ವ್ಯತ್ಯಾಸಗೊಳ್ಳುವುದೆಂಬುದನ್ನು ನೋಡೋಣ.

(i) ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಹೇಗೆ ವ್ಯತ್ಯಾಸಗೊಳ್ಳುತ್ತವೆ?

ನಪುಂಸಕಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ಒಳ್ಳಿತು (ಒಳ್ಳೆಯದು)
ಒಳ್ಳೆಯವನು
ಒಳ್ಳೆಯವಳು

(ಪುಲ್ಲಿಂಗ, ಸ್ತ್ರೀಲಿಂಗಗಳಲ್ಲಿ ಒಳ್ಳಿತು ಎಂಬುದರ ಮುಂದೆ ಅವನು-ಅವಳು ಎಂಬ ಸರ್ವನಾಮಗಳೇ ಬರುತ್ತವೆ. ಒಳ್ಳಿತು+ಅವನು-ಒಳ್ಳೆಯವನು ಎಂಬಲ್ಲಿ ತುಕಾರಲೋಪ, ಕಾರದ ಮುಂದಿರುವ ಕಾರಕ್ಕೆ ಕಾರಾದೇಶವಾಗಿರುವುದನ್ನು ಗಮನಿಸಿರಿ).

ಇನಿದು (ಇನಿಯದು)
ಇನಿಯನು
ಇನಿಯಳು
ದೊಡ್ಡದು
ದೊಡ್ಡವನು
ದೊಡ್ಡವಳು
ಚಿಕ್ಕದು
ಚಿಕ್ಕವನು
ಚಿಕ್ಕವಳು
ಎಳದು (ಎಳೆಯದು)
ಎಳೆಯನು
ಎಳೆಯಳು
ಹಳೆದು (ಹಳೆಯದು)
ಹಳೆಯನು
ಹಳೆಯಳು
ಹೊಸತು (ಹೊಸದು)
ಹೊಸಬನು
ಹೊಸಬಳು

ಮೇಲಿನ ಉದಾಹರಣೆಗಳಿಂದ ಪುಲ್ಲಿಂಗ ಸ್ತ್ರೀಲಿಂಗಗಳಲ್ಲಿ, ಅವನು, ಅವಳು ಎಂಬಲ್ಲಿ ಅನು, ಅಳು-ಎಂಬುವೂ, ಹೊಸತು ಎಂಬಲ್ಲಿ ಮಾತ್ರ ಬನು ಬಳು ಎಂಬುವೂ ಸೇರುವುದನ್ನು ಗಮನಿಸಿರಿ.

(ii) ಸರ್ವನಾಮಗಳು ಮೂರು ಲಿಂಗಗಳಲ್ಲಿ ಹೇಗೆ ರೂಪ ಧರಿಸುತ್ತವೆಂಬುದನ್ನು ಗಮನಿಸಿರಿ.

ನಪುಂಸಕಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ಅದು
ಅವನು
ಅವಳು
ಇದು
ಇವನು (ಈತನು)
ಇವಳು (ಈಕೆ)
ಆವುದು
ಆವನು
ಆವಳು
ಯಾವುದು
ಯಾವನು
ಯಾವಳು
ನಾನು
ನಾನು
ನಾನು (ವಾಚ್ಯಲಿಂಗ)
ನೀನು
ನೀನು
ನೀನು (ವಾಚ್ಯಲಿಂಗ)
ತಾನು
ತಾನು
ತಾನು (ವಾಚ್ಯಲಿಂಗ)

(iii) ಸಂಖ್ಯಾವಾಚಕಗಳು ಮೂರು ಲಿಂಗಗಳಲ್ಲೂ ಹೇಗೆ ರೂಪ ಹೊಂದುತ್ತವೆಂಬು ದನ್ನು ಗಮನಿಸಿರಿ.

ನಪುಂಸಕಲಿಂಗ
ಸ್ತ್ರೀಲಿಂಗ
ಪುಲ್ಲಿಂಗ
ಒಂದು
ಒಬ್ಬನು
ಒಬ್ಬಳು
ಎರಡು
ಇಬ್ಬರು
ಇಬ್ಬರು
ಮೂರು
ಮೂವರು
ಮೂವರು

ಎರಡು ಮೊದಲ್ಗೊಂಡು ಮುಂದಿನ ಸಂಖ್ಯಾವಾಚಕಗಳು ಪುಲ್ಲಿಂಗ, ಸ್ತ್ರೀಲಿಂಗಗಳಲ್ಲಿ ಒಂದೇರೂಪ ಧರಿಸುವುವು.

(iv) ಕೆಲವು ಅಕಾರಂತ ಪುಲ್ಲಿಂಗ ಶಬ್ದಗಳಿಗೆ ಸ್ತ್ರೀಲಿಂಗದಲ್ಲಿ , , ಪ್ರತ್ಯಯಗಳು ಸೇರಿ ಸ್ತ್ರೀಲಿಂಗಗಳೆನಿಸುತ್ತವೆ.

ಉದಾಹರಣೆಗೆ:-

ಅಕಾರಾಂತ ಪುಲ್ಲಿಂಗ
ಸ್ತ್ರೀಲಿಂಗ ರೂಪಗಳು
ಅರಸ
ಅರಸಿ ( ಪ್ರತ್ಯಯ)
ಅಣುಗ
ಅಣುಗಿ ( ಪ್ರತ್ಯಯ)
ನಿಡುಮೂಗ
ನಿಡುಮೂಗಿ* ( ಪ್ರತ್ಯಯ)
ಜಾಣ
ಜಾಣೆ** ( ಪ್ರತ್ಯಯ)
ದಡ್ಡ
ದಡ್ಡೆ** ( ಪ್ರತ್ಯಯ)
ಹುಡುಗ
ಹುಡುಗಿ** ( ಪ್ರತ್ಯಯ)
ಮುದುಕ
ಮುದುಕಿ** ( ಪ್ರತ್ಯಯ)

-ಇತ್ಯಾದಿಗಳು



[1] ಜನ ಶಬ್ದವು ನಪುಂಸಕಲಿಂಗವಾದರೂ, ದುರ್ಜನ, ಸಜ್ಜನ, ಕುಜನ, ಸುಜನ ಎಂಬ ಶಬ್ದಗಳು ಮಾತ್ರ ಪುಲ್ಲಿಂಗಗಳು. (ಜನ ಶಬ್ದವು ದುರ್, ಸತ್, ಕು, ಸು-ಇತ್ಯಾದಿ ಉಪಸರ್ಗಪೂರ್ವಕವಾದರೆ ಪುಲ್ಲಿಂಗವೆಂದು ತಿಳಿಯಬೇಕು. ಉಪಸರ್ಗ=ಪೂರ್ವಪ್ರತ್ಯಯ)

* ಬಹುವ್ರೀಹಿಸಮಾಸದಲ್ಲಿ ಹೀಗಾಗುತ್ತವೆ.

** ಇವನ್ನು ತದ್ಧಿತಪ್ರತ್ಯಯಗಳೆಂದು ಹೇಳುವರು. ಪ್ರಕರಣದಲ್ಲಿ ಇದರ ಬಗೆಗೆ ಹೇಳಿದೆ.

** 

ಅಧ್ಯಾಯ : ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ IV – ವಚನಗಳು

ವಚನ ಎಂದರೆ ಸಂಖ್ಯೆ. ವಸ್ತುಗಳನ್ನು ಒಂದು ಅಥವಾ ಇನ್ನೂ ಹೆಚ್ಚಾಗಿ ಲೆಕ್ಕ ಹೇಳುವುದುಂಟು. ಅಂಥ ಸಮಯದಲ್ಲಿ ವಸ್ತು ಅಥವಾ ವ್ಯಕ್ತಿ ಒಂದಾಗಿದ್ದರೆ ಅಂಥದನ್ನು ಏಕವಚನ ಎನ್ನುತ್ತೇವೆ. ಎರಡು ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಬಹುವಚನ ಎನ್ನುತ್ತೇವೆ.

(೫೦) ಒಂದು ವಸ್ತು ಎಂದು ಹೇಳುವ ಶಬ್ದಗಳೆಲ್ಲ ಏಕವಚನಗಳು. ಒಂದಕ್ಕಿಂತ ಹೆಚ್ಚಾದ ವಸ್ತುಗಳೆಂದು ತಿಳಿಸುವ ಶಬ್ದಕ್ಕೆ ಬಹುವಚನವೆನ್ನುತ್ತೇವೆ.

ಕನ್ನಡ ಭಾಷೆಯಲ್ಲಿ ಏಕವಚನ ಬಹುವಚನಗಳೆಂದು ಎರಡೇ ವಚನಗಳು. ಸಂಸ್ಕೃತ ಭಾಷೆಯಲ್ಲಿ ಏಕವಚನ, ದ್ವಿವಚನ, ಬಹುವಚನಗಳೆಂದು ಮೂರು ಬಗೆಗಳುಂಟು. (ಕಣ್ಣುಗಳು, ಕಾಲುಗಳು, ಕೈಗಳು-ಇವು ದ್ವಿವಚನಗಳಾದರೂ ಇವಕ್ಕೆ ಕನ್ನಡದಲ್ಲಿ ದ್ವಿವಚನದ ಬೇರೆ ಪ್ರತ್ಯಯವಿಲ್ಲ. ಆದ್ದರಿಂದ ಒಂದಕ್ಕಿಂತ ಹೆಚ್ಚಾಗಿರುವುದೆಲ್ಲ ಬಹುವಚನವೆಂದೇ ಕರೆಯಲ್ಪಡುತ್ತವೆ).

ಉದಾಹರಣೆಗೆ:-

ಏಕವಚನ
ಬಹುವಚನ
ಅರಸು
ಅರಸರು (ಅರಸು+ಅರು)
ಅರಸಿ
ಅರಸಿಯರು (ಅರಸಿ+ಅರು)
ನೀನು
ನೀವು (ನೀನು+ವು)
ನಾನು
ನಾವು (ನಾನು+ವು)






No comments:

Post a Comment