Sunday, 3 June 2012

ಅಧ್ಯಾಯ : ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ v – ವಿಭಕ್ತಿ ಪ್ರತ್ಯಯಗಳು ªÀÄÄAzÀĪÀgÉzÀ ¨sÁUÀ...
(೧೦) ನಪುಂಸಕಲಿಂಗದಲ್ಲಿ ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳು ಹೇಗಾಗುತ್ತವೆ ನೋಡಿರಿ:- 
() ದೊಡ್ಡದು ಶಬ್ದ ನಪುಂಸಕಲಿಂಗದಲ್ಲಿ
ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ದೊಡ್ಡದು
ದೊಡ್ಡವು
ದ್ವಿತೀಯಾವಿಭಕ್ತಿ
-
ದೊಡ್ಡದನ್ನು
ದೊಡ್ಡವನ್ನು
ತೃತೀಯಾವಿಭಕ್ತಿ
-
ದೊಡ್ಡದರಿಂದ
ದೊಡ್ಡವುಗಳಿಂದ
ಚತುರ್ಥೀವಿಭಕ್ತಿ
-
ದೊಡ್ಡದಕ್ಕೆ
ದೊಡ್ಡವುಗಳಿಗೆ
ಪಂಚಮೀವಿಭಕ್ತಿ
-
ದೊಡ್ಡದರ ದೆಸೆಯಿಂದ
ದೊಡ್ಡವುಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ದೊಡ್ಡದರ
ದೊಡ್ಡವುಗಳ
ಸಪ್ತಮೀವಿಭಕ್ತಿ
-
ದೊಡ್ಡದರಲ್ಲಿ
ದೊಡ್ಡವುಗಳಲ್ಲಿ
ಸಂಬೋಧನಾ
-
ದೊಡ್ಡದೇ
ದೊಡ್ಡವುಗಳೇ
() ಸಣ್ಣದು, ಚಿಕ್ಕದು ಶಬ್ದಗಳು ನಪುಂಸಕಲಿಂಗದಲ್ಲಿ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಸಣ್ಣದು
ಸಣ್ಣವು
ಚಿಕ್ಕದು
ಚಿಕ್ಕವು
ದ್ವಿತೀಯಾವಿಭಕ್ತಿ
-
ಸಣ್ಣದನ್ನು
ಸಣ್ಣವನ್ನು
ಚಿಕ್ಕದನ್ನು
ಚಿಕ್ಕವುಗಳನ್ನು
ತೃತೀಯಾವಿಭಕ್ತಿ
-
ಸಣ್ಣದರಿಂದ
ಸಣ್ಣವುಗಳಿಂದ
ಚಿಕ್ಕದರಿಂದ
ಚಿಕ್ಕವುಗಳಿಂದ
ಚತುರ್ಥೀವಿಭಕ್ತಿ
-
ಸಣ್ಣದಕ್ಕೆ
ಸಣ್ಣವುಗಳಿಗೆ
ಚಿಕ್ಕದಕ್ಕೆ
ಚಿಕ್ಕವುಗಳಿಗೆ
ಪಂಚಮೀವಿಭಕ್ತಿ
-
ಸಣ್ಣದರ ದೆಸೆಯಿಂದ
ಸಣ್ಣವುಗಳ ದೆಸೆಯಿಂದ
ಚಿಕ್ಕದರ ದೆಸೆಯಿಂದ
ಚಿಕ್ಕವುಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಸಣ್ಣದರ
ಸಣ್ಣವುಗಳ
ಚಿಕ್ಕದರ
ಚಿಕ್ಕವುಗಳ
ಸಪ್ತಮೀವಿಭಕ್ತಿ
-
ಸಣ್ಣದರಲ್ಲಿ
ಸಣ್ಣವುಗಳಲ್ಲಿ
ಚಿಕ್ಕದರಲ್ಲಿ
ಚಿಕ್ಕವುಗಳಲ್ಲಿ
ಸಂಬೋಧನಾ
-
ಸಣ್ಣದೇ
ಸಣ್ಣವುಗಳೇ
ಚಿಕ್ಕದೇ
ಚಿಕ್ಕವುಗಳೇ
ಮೇಲೆ ವಿವರಿಸಿದಂತೆ ನಪುಂಸಕಲಿಂಗದಲ್ಲಿ ಮೂರು ಗುಣವಾಚಕ ಶಬ್ದಗಳು ಎಲ್ಲ ವಿಭಕ್ತಿಗಳ ಏಕವಚನದಲ್ಲಿ ಇದ್ದ ಹಾಗೆಯೇ ಇದ್ದು, ತೃತೀಯಾ, ಪಂಚಮೀ, ಷಷ್ಠೀ, ಸಪ್ತಮೀ ವಿಭಕ್ತಿಗಳಲ್ಲಿ ಅರ ಎಂಬ ಆಗಮ ವನ್ನು ಹೊಂದಿ ವಿಭಕ್ತಿಪ್ರತ್ಯಯಗಳನ್ನು ಧರಿಸಿರುತ್ತವೆ. ಬಹುವಚನದಲ್ಲಿ ಎಲ್ಲ ಕಡೆಗೂ, ದೊಡ್ಡ, ಸಣ್ಣ, ಚಿಕ್ಕ ರೂಪ ಧರಿಸಿ ಪ್ರಥಮೆಯಲ್ಲಿ ಅವು ಎಂಬಾಗಮವನ್ನೂ, ಉಳಿದ ಎಲ್ಲ ಕಡೆಗೂ ಅವುಗಳು ಎಂಬಾಗಮವನ್ನೂ ಧರಿಸಿ ವಿಭಕ್ತಿ ಪ್ರತ್ಯಯಗಳನ್ನು ಧರಿಸುತ್ತವೆ.
ಮೂಡಲು, ತೆಂಕಲು, ಪಡುವಲು, ಬಡಗು, ಮುಂದು, ಹಿಂದು, ನಡುವೆ, ಅತ್ತ, ಇತ್ತ, ಎತ್ತ ಮುಂತಾದ ದಿಗ್ವಾಚಕ ಶಬ್ದಗಳಿಗೆ ಅಣ ಎಂಬುದು ಆಗಮವಾಗಿ ಬರುವುದು.
ಉದಾಹರಣೆಗೆ:- ಮೂಡಣ, ಪಡುವಣ, ತೆಂಕಣ, ಬಡಗಣ, ನಡುವಣ, ಅತ್ತಣ, ಇತ್ತಣ, ಎತ್ತಣ. ಹೀಗೆ ಅಣ ಆಗಮವು ಬಂದನಂತರ ವಿಭಕ್ತಿಪ್ರತ್ಯಯಗಳು ಸೇರುವುವು.
(೧೧) ಈಗ ಮುಖ್ಯವಾದ ಕೆಲವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿನ ಶಬ್ದಗಳ ಸಿದ್ಧರೂಪಗಳನ್ನು ಏಕವಚನ ಬಹುವಚನಗಳೆರಡರಲ್ಲೂ ನೋಡಿರಿ.
() ಅಕಾರಾಂತ ಪುಲ್ಲಿಂಗ ಹುಡುಗ ಶಬ್ದ () ಅಕಾರಾಂತ ಪುಲ್ಲಿಂಗ ಮನುಷ್ಯ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಹುಡುಗ(ನು)
ಹುಡುಗರು
ಮನುಷ್ಯ(ನು)
ಮನುಷ್ಯರು
ದ್ವಿತೀಯಾವಿಭಕ್ತಿ
-
ಹುಡುಗನನ್ನು
ಹುಡುಗರನ್ನು
ಮನುಷ್ಯನನ್ನು
ಮನುಷ್ಯರನ್ನು
ತೃತೀಯಾವಿಭಕ್ತಿ
-
ಹುಡುಗನಿಂದ
ಹುಡುಗರಿಂದ
ಮನುಷ್ಯನಿಂದ
ಮನುಷ್ಯರಿಂದ
ಚತುರ್ಥೀವಿಭಕ್ತಿ
-
ಹುಡುಗನಿಗೆ
ಹುಡುಗರಿಗೆ
ಮನುಷ್ಯನಿಗೆ
ಮನುಷ್ಯರಿಗೆ
ಪಂಚಮೀವಿಭಕ್ತಿ
-
ಹುಡುಗನ ದೆಸೆಯಿಂದ
ಹುಡುಗರ ದೆಸೆಯಿಂದ
ಮನುಷ್ಯನ ದೆಸೆಯಿಂದ
ಮನುಷ್ಯರ ದೆಸೆಯಿಂದ
ಷಷ್ಠೀವಿಭಕ್ತಿ
-
ಹುಡುಗನ
ಹುಡುಗರ
ಮನುಷ್ಯನ
ಮನುಷ್ಯರ
ಸಪ್ತಮೀವಿಭಕ್ತಿ
-
ಹುಡುಗನಲ್ಲಿ
ಹುಡುಗರಲ್ಲಿ
ಮನುಷ್ಯನಲ್ಲಿ
ಮನುಷ್ಯರಲ್ಲಿ
ಸಂಬೋಧನಾ
-
ಹುಡುಗನೇ ಹುಡುಗಾ
ಹುಡುಗರಿರಾ ಹುಡುಗರುಗಳಿರಾ
ಮನುಷ್ಯನೇ ಮನುಷ್ಯಾ
ಮನುಷ್ಯರೇ ಮನುಷ್ಯರುಗಳಿರಾ
ಇದರ ಹಾಗೆಯೇಗಾಣಿಗ, ಒಕ್ಕಲಿಗ, ಮೋಸಗಾರ, ಶಂಕರ, ರಾಮ - ಮುಂತಾದ ಶಬ್ದಗಳನ್ನು ಹೇಳಬಹುದು.
() ಇಕಾರಾಂತ ಪುಲ್ಲಿಂಗ ಕವಿ ಶಬ್ದ () ಇಕಾರಾಂತ ಪುಲ್ಲಿಂಗ ಹರಿ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಕವಿ (ಯು)
ಕವಿಗಳು
ಹರಿ(ಯು)
ಹರಿಗಳು
ದ್ವಿತೀಯಾವಿಭಕ್ತಿ
-
ಕವಿಯನ್ನು
ಕವಿಗಳನ್ನು
ಹರಿಯನ್ನು
ಹರಿಗಳನ್ನು
ತೃತೀಯಾವಿಭಕ್ತಿ
-
ಕವಿಯಿಂದ
ಕವಿಗಳಿಂದ
ಹರಿಯಿಂದ
ಹರಿಗಳಿಂದ
ಚತುರ್ಥೀವಿಭಕ್ತಿ
-
ಕವಿಗೆ
ಕವಿಗಳಿಗೆ
ಹರಿಗೆ
ಹರಿಗಳಿಗೆ
ಪಂಚಮೀವಿಭಕ್ತಿ
-
ಕವಿಯ ದೆಸೆಯಿಂದ
ಕವಿಗಳ ದೆಸೆಯಿಂದ
ಹರಿಯ ದೆಸೆಯಿಂದ
ಹರಿಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಕವಿಯ
ಕವಿಗಳ
ಹರಿಯ
ಹರಿಗಳ
ಸಪ್ತಮೀವಿಭಕ್ತಿ
-
ಕವಿಯಲ್ಲಿ
ಕವಿಗಳಲ್ಲಿ
ಹರಿಯಲ್ಲಿ
ಹರಿಗಳಲ್ಲಿ
ಸಂಬೋಧನಾ
-
ಕವಿಯೇ
ಕವಿಗಳೇ ಕವಿಗಳಿರಾ
ಹರಿಯೇ
ಹರಿಗಳೇ ಹರಿಗಳಿರಾ
() ಉಕಾರಾಂತ ಪುಲ್ಲಿಂಗ ಗುರು ಶಬ್ದ () ಉಕಾರಾಂತ ಪುಲ್ಲಿಂಗ ಮನು ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಗುರು (ವು)
ಗುರುಗಳು
ಮನು (ವು)
ಮನುಗಳು
ದ್ವಿತೀಯಾವಿಭಕ್ತಿ
-
ಗುರುವನ್ನು
ಗುರುಗಳನ್ನು
ಮನುವನ್ನು
ಮನುಗಳನ್ನು
ತೃತೀಯಾವಿಭಕ್ತಿ
-
ಗುರುವಿಂದ ಗರುವಿನಿಂದ
ಗುರುಗಳಿಂದ
ಮನುವಿನಿಂದ ಮನುವಿಂದ
ಮನುಗಳಿಂದ
ಚತುರ್ಥೀವಿಭಕ್ತಿ
-
ಗುರುವಿಗೆ
ಗುರುಗಳಿಗೆ
ಮನುವಿಗೆ
ಮನುಗಳಿಗೆ
ಪಂಚಮೀವಿಭಕ್ತಿ
-
ಗುರುವಿನ ದೆಸೆಯಿಂದ
ಗುರುಗಳ ದೆಸೆಯಿಂದ
ಮನುವಿನ ದೆಸೆಯಿಂದ
ಮನುಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಗುರುವಿನ
ಗುರುಗಳ
ಮನುವಿನ
ಮನುಗಳ
ಸಪ್ತಮೀವಿಭಕ್ತಿ
-
ಗುರುವಿನಲ್ಲಿ
ಗುರುಗಳಲ್ಲಿ
ಮನುವಿನಲ್ಲಿ
ಮನುಗಳಲ್ಲಿ
ಸಂಬೋಧನಾ
-
ಗರುವೇ
ಗುರುಗಳೇ ಗುರುಗಳಿರಾ
ಮನುವೇ
ಮನುಗಳೇ ಮನುಗಳಿರಾ
() ಋಕಾರಾಂತ ಪುಲ್ಲಿಂಗಪಿತೃಶಬ್ದ () ಋಕಾರಾಂತ ಪುಲ್ಲಿಂಗಭ್ರಾತೃಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಪಿತೃ (ವು)
ಪಿತೃಗಳು
ಭ್ರಾತೃ (ವು)
ಭ್ರಾತೃಗಳು
ದ್ವಿತೀಯಾವಿಭಕ್ತಿ
-
ಪಿತೃವನ್ನು
ಪಿತೃಗಳನ್ನು
ಭ್ರಾತೃವನ್ನು
ಭ್ರಾತೃಗಳನ್ನು
ತೃತೀಯಾವಿಭಕ್ತಿ
-
ಪಿತೃವಿಂದ ಪಿತೃವಿನಿಂದ
ಪಿತೃಗಳಿಂದ
ಭ್ರಾತೃವಿನಿಂದ ಭ್ರಾತೃವಿಂದ
ಭ್ರಾತೃಗಳಿಂದ
ಚತುರ್ಥೀವಿಭಕ್ತಿ
-
ಪಿತೃವಿಗೆ
ಪಿತೃಗಳಿಗೆ
ಭ್ರಾತೃವಿಗೆ
ಭ್ರಾತೃಗಳಿಗೆ
ಪಂಚಮೀವಿಭಕ್ತಿ
-
ಪಿತೃವಿನ ದೆಸೆಯಿಂದ
ಪಿತೃಗಳ ದೆಸೆಯಿಂದ
ಭ್ರಾತೃವಿನ ದೆಸೆಯಿಂದ
ಭ್ರಾತೃಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಪಿತೃವಿನ
ಪಿತೃಗಳ
ಭ್ರಾತೃವಿನ
ಭ್ರಾತೃಗಳ
ಸಪ್ತಮೀವಿಭಕ್ತಿ
-
ಪಿತೃವಿನಲ್ಲಿ
ಪಿತೃಗಳಲ್ಲಿ
ಭ್ರಾತೃವಿನಲ್ಲಿ
ಭ್ರಾತೃಗಳಲ್ಲಿ
ಸಂಬೋಧನಾ
-
ಪಿತೃವೇ
ಪಿತೃಗಳೇ ಪಿತೃಗಳಿರಾ
ಭ್ರಾತೃವೇ
ಭ್ರಾತೃಗಳೇ ಭ್ರಾತೃಗಳಿರಾ
ಸ್ತ್ರೀಲಿಂಗ ಶಬ್ದಗಳು
() ಅಕಾರಾಂತ ಸ್ತ್ರೀಲಿಂಗ ಅಕ್ಕ ಶಬ್ದ () ಅಕಾರಾಂತ ಸ್ತ್ರೀಲಿಂಗ ಅಮ್ಮ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಅಕ್ಕ (ನು)
ಅಕ್ಕಂದಿರು
ಅಮ್ಮ (ನು)
ಅಮ್ಮಂದಿರು
ದ್ವಿತೀಯಾವಿಭಕ್ತಿ
-
ಅಕ್ಕನನ್ನು
ಅಕ್ಕಂದಿರನ್ನು
ಅಮ್ಮನನ್ನು
ಅಮ್ಮಂದಿರನ್ನು
ತೃತೀಯಾವಿಭಕ್ತಿ
-
ಅಕ್ಕನಿಂದ
ಅಕ್ಕಂದಿರಿಂದ
ಅಮ್ಮನಿಂದ
ಅಮ್ಮಂದಿರಿಂದ
ಚತುರ್ಥೀವಿಭಕ್ತಿ
-
ಅಕ್ಕನಿಗೆ
ಅಕ್ಕಂದಿರಿಗೆ
ಅಮ್ಮನಿಗೆ
ಅಮ್ಮಂದಿರಿಗೆ
ಪಂಚಮೀವಿಭಕ್ತಿ
-
ಅಕ್ಕನ ದೆಸೆಯಿಂದ
ಅಕ್ಕಂದಿರ ದೆಸೆಯಿಂದ
ಅಮ್ಮನ ದೆಸೆಯಿಂದ
ಅಮ್ಮಂದಿರ ದೆಸೆಯಿಂದ
ಷಷ್ಠೀವಿಭಕ್ತಿ
-
ಅಕ್ಕನ
ಅಕ್ಕಂದಿರ
ಅಮ್ಮನ
ಅಮ್ಮಂದಿರ
ಸಪ್ತಮೀವಿಭಕ್ತಿ
-
ಅಕ್ಕನಲ್ಲಿ
ಅಕ್ಕಂದಿರಲ್ಲಿ
ಅಮ್ಮನಲ್ಲಿ
ಅಮ್ಮಂದಿರಲ್ಲಿ
ಸಂಬೋಧನಾ
-
ಅಕ್ಕನೇ ಅಕ್ಕಾ
ಅಕ್ಕಂದಿರಾ ಅಕ್ಕಗಳಿರಾ
ಅಮ್ಮಾ
ಅಮ್ಮಂದಿರಾ ಅಮ್ಮಂದಿರುಗಳಿರಾ
() ಇಕಾರಾಂತ ಸ್ತ್ರೀಲಿಂಗ ಅಜ್ಜಿ ಶಬ್ದ () ಈಕಾರಾಂತ ಸ್ತ್ರೀಲಿಂಗ ಸ್ತ್ರೀ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಅಜ್ಜಿ (ಯು)
ಅಜ್ಜಿಯರು
ಸ್ತ್ರೀ (ಯು)
ಸ್ತ್ರೀಯರು
ದ್ವಿತೀಯಾವಿಭಕ್ತಿ
-
ಅಜ್ಜಿಯನ್ನು
ಅಜ್ಜಿಯರನ್ನು
ಸ್ತ್ರೀಯನ್ನು
ಸ್ತ್ರೀಯರನ್ನು
ತೃತೀಯಾವಿಭಕ್ತಿ
-
ಅಜ್ಜಿಯಿಂದ
ಅಜ್ಜಿಯರಿಂದ
ಸ್ತ್ರೀಯಿಂದ
ಸ್ತ್ರೀಯರಿಂದ
ಚತುರ್ಥೀವಿಭಕ್ತಿ
-
ಅಜ್ಜಿಗೆ
ಅಜ್ಜಿಯರಿಗೆ
ಸ್ತ್ರೀಗೆ
ಸ್ತ್ರೀಯರಿಗೆ
ಪಂಚಮೀವಿಭಕ್ತಿ
-
ಅಜ್ಜಿಯ ದೆಸೆಯಿಂದ
ಅಜ್ಜಿಯರ ದೆಸೆಯಿಂದ
ಸ್ತ್ರೀಯ ದೆಸೆಯಿಂದ
ಸ್ತ್ರೀಯರ ದೆಸೆಯಿಂದ
ಷಷ್ಠೀವಿಭಕ್ತಿ
-
ಅಜ್ಜಿಯ
ಅಜ್ಜಿಯರ
ಸ್ತ್ರೀಯ
ಸ್ತ್ರೀಯರ
ಸಪ್ತಮೀವಿಭಕ್ತಿ
-
ಅಜ್ಜಿಯಲ್ಲಿ
ಅಜ್ಜಿಯರಲ್ಲಿ
ಸ್ತ್ರೀಯಲ್ಲಿ
ಸ್ತ್ರೀಯರಲ್ಲಿ
ಸಂಬೋಧನಾ
-
ಅಜ್ಜೀ ಅಜ್ಜಿಯೇ
ಅಜ್ಜಿಯರಿರಾ ಅಜ್ಜಿಯರುಗಳಿರಾ
ಸ್ತ್ರೀಯೇ
ಸ್ತ್ರೀಯರಿರಾ ಸ್ತ್ರೀಯರುಗಳಿರಾ
() ಉಕಾರಾಂತ ಸ್ತ್ರೀಲಿಂಗ ವಧು ಶಬ್ದ () ಋಕಾರಾಂತ ಸ್ತ್ರೀಲಿಂಗ ಮಾತೃ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ವಧು (ವು)
ವಧುಗಳು
ಮಾತೃ (ವು)
ಮಾತೃಗಳು
ದ್ವಿತೀಯಾವಿಭಕ್ತಿ
-
ವಧುವನ್ನು
ವಧುಗಳನ್ನು
ಮಾತೃವನ್ನು
ಮಾತೃಗಳನ್ನು
ತೃತೀಯಾವಿಭಕ್ತಿ
-
ವಧುವಿನಿಂದ
ವಧುಗಳಿಂದ
ಮಾತೃವಿನಿಂದ ಮಾತೃವಿಂದ
ಮಾತೃಗಳಿಂದ
ಚತುರ್ಥೀವಿಭಕ್ತಿ
-
ವಧುವಿಗೆ
ವಧುಗಳಿಗೆ
ಮಾತೃವಿಗೆ
ಮಾತೃಗಳಿಗೆ
ಪಂಚಮೀವಿಭಕ್ತಿ
-
ವಧುವಿನ ದೆಸೆಯಿಂದ
ವಧುಗಳ ದೆಸೆಯಿಂದ
ಮಾತೃವಿನ ದೆಸೆಯಿಂದ
ಮಾತೃಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ವಧುವಿನ
ವಧುಗಳ
ಮಾತೃವಿನ
ಮಾತೃಗಳ
ಸಪ್ತಮೀವಿಭಕ್ತಿ
-
ವಧುವಿನಲ್ಲಿ
ವಧುಗಳಲ್ಲಿ
ಮಾತೃವಿನಲ್ಲಿ
ಮಾತೃಗಳಲ್ಲಿ
ಸಂಬೋಧನಾ
-
ವಧುವೇ
ವಧುಗಳೇ ವಧುಗಳಿರಾ
ಮಾತೃವೇ
ಮಾತೃಗಳೇ ಮಾತೃಗಳಿರಾ
() ಎಕಾರಾಂತ ಸ್ತ್ರೀಲಿಂಗ ಅತ್ತೆ ಶಬ್ದ () ಎಕಾರಾಂತ ಸ್ತ್ರೀಲಿಂಗ ಸೊಸೆ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಅತ್ತೆ (ಯು)
ಅತ್ತೆಯರು
ಸೊಸೆ (ಯು)
ಸೊಸೆಯರು
ದ್ವಿತೀಯಾವಿಭಕ್ತಿ
-
ಅತ್ತೆಯನ್ನು
ಅತ್ತೆಯವರನ್ನು
ಸೊಸೆಯನ್ನು
ಸೊಸೆಯವರನ್ನು
ತೃತೀಯಾವಿಭಕ್ತಿ
-
ಅತ್ತೆಯಿಂದ
ಅತ್ತೆಯರುಗಳಿಂದ
ಸೊಸೆಯಿಂದ
ಸೊಸೆಯರುಗಳಿಂದ ಸೊಸೆಯರಿಂದ
ಚತುರ್ಥೀವಿಭಕ್ತಿ
-
ಅತ್ತೆಗೆ
ಅತ್ತೆಯರುಗಳಿಗೆ
ಸೊಸೆಗೆ
ಸೊಸೆಯರುಗಳಿಗೆ ಸೊಸೆಯರಿಗೆ
ಪಂಚಮೀವಿಭಕ್ತಿ
-
ಅತ್ತೆಯ ದೆಸೆಯಿಂದ
ಅತ್ತೆಯರುಗಳ ದೆಸೆಯಿಂದ
ಸೊಸೆಯ ದೆಸೆಯಿಂದ
ಸೊಸೆಯರ ದೆಸೆಯಿಂದ ಸೊಸೆಯರುಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಅತ್ತೆಯ
ಅತ್ತೆಯರ ಅತ್ತೆಯರುಗಳ
ಸೊಸೆಯ
ಸೊಸೆಯರ ಸೊಸೆಯರುಗಳ
ಸಪ್ತಮೀವಿಭಕ್ತಿ
-
ಅತ್ತೆಯಲ್ಲಿ
ಅತ್ತೆಯರಲ್ಲಿ ಅತ್ತೆಯರುಗಳಲ್ಲಿ
ಸೊಸೆಯಲ್ಲಿ
ಸೊಸೆಯರಲ್ಲಿ ಸೊಸೆಯರುಗಳಲ್ಲಿ
ಸಂಬೋಧನಾ
-
ಅತ್ತೆಯೇ
ಅತ್ತೆಯರುಗಳೇ ಅತ್ತೆಯರುಗಳಿರಾ
ಸೊಸೆಯೇ
ಸೊಸೆಯರಿರಾ ಸೊಸೆಯರುಗಳೇ
ನಪುಂಸಕಲಿಂಗದ ಶಬ್ದಗಳು
() ಅಕಾರಾಂತ ನಪುಂಸಕಲಿಂಗ ನೆಲ ಶಬ್ದ () ಅಕಾರಾಂತ ನಪುಂಸಕಲಿಂಗ ಪುಸ್ತಕ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ನೆಲ (ವು)
ನೆಲಗಳು
ಪುಸ್ತಕ (ವು)
ಪುಸ್ತಕಗಳು
ದ್ವಿತೀಯಾವಿಭಕ್ತಿ
-
ನೆಲವನ್ನು
ನೆಲಗಳನ್ನು
ಪುಸ್ತಕವನ್ನು
ಪುಸ್ತಕಗಳನ್ನು
ತೃತೀಯಾವಿಭಕ್ತಿ
-
ನೆಲದಿಂದ
ನೆಲಗಳಿಂದ
ಪುಸ್ತಕದಿಂದ
ಪುಸ್ತಕಗಳಿಂದ
ಚತುರ್ಥೀವಿಭಕ್ತಿ
-
ನೆಲಕ್ಕೆ
ನೆಲಗಳಿಗೆ
ಪುಸ್ತಕಕ್ಕೆ
ಪುಸ್ತಕಗಳಿಗೆ
ಪಂಚಮೀವಿಭಕ್ತಿ
-
ನೆಲದ ದೆಸೆಯಿಂದ
ನೆಲಗಳ ದೆಸೆಯಿಂದ
ಪುಸ್ತಕದ ದೆಸೆಯಿಂದ
ಪುಸ್ತಕಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ನೆಲದ
ನೆಲಗಳ
ಪುಸ್ತಕದ
ಪುಸ್ತಕಗಳ
ಸಪ್ತಮೀವಿಭಕ್ತಿ
-
ನೆಲದಲ್ಲಿ
ನೆಲಗಳಲ್ಲಿ
ಪುಸ್ತಕದಲ್ಲಿ
ಪುಸ್ತಕಗಳಲ್ಲಿ
ಸಂಬೋಧನಾ
-
ನೆಲವೇ
ನೆಲಗಳೇ
ಪುಸ್ತಕವೇ
ಪುಸ್ತಕಗಳೇ
ಇದರಂತೆ ಹೊಲ, ಮೊಲ, ಜೋಳ, ತೋಳ, ಬೆಟ್ಟ-ಇತ್ಯಾದಿ ಶಬ್ದಗಳನ್ನು ನಡೆಯಿಸಬೇಕು.
() ಇಕಾರಾಂತ ನಪುಂಸಕಲಿಂಗ ನಾಯಿ ಶಬ್ದ () ಇಕಾರಾಂತ ನಪುಂಸಕ ಲಿಂಗ ಗಿರಿ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ನಾಯಿ (ಯು)
ನಾಯಿಗಳು
ಗಿರಿ (ಯು)
ಗಿರಿಗಳು
ದ್ವಿತೀಯಾವಿಭಕ್ತಿ
-
ನಾಯಿಯನ್ನು
ನಾಯಿಗಳನ್ನು
ಗಿರಿಯನ್ನು
ಗಿರಿಗಳನ್ನು
ತೃತೀಯಾವಿಭಕ್ತಿ
-
ನಾಯಿಯಿಂದ
ನಾಯಿಗಳಿಂದ
ಗಿರಿಯಿಂದ
ಗಿರಿಗಳಿಂದ
ಚತುರ್ಥೀವಿಭಕ್ತಿ
-
ನಾಯಿಗೆ
ನಾಯಿಗಳಿಗೆ
ಗಿರಿಗೆ
ಗಿರಿಗಳಿಗೆ
ಪಂಚಮೀವಿಭಕ್ತಿ
-
ನಾಯಿಯ ದೆಸೆಯಿಂದ
ನಾಯಿಗಳ ದೆಸೆಯಿಂದ
ಗಿರಿಯ ದೆಸೆಯಿಂದ
ಗಿರಿಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ನಾಯಿಯ
ನಾಯಿಗಳ
ಗಿರಿಯ
ಗಿರಿಗಳ
ಸಪ್ತಮೀವಿಭಕ್ತಿ
-
ನಾಯಿಯಲ್ಲಿ
ನಾಯಿಗಳಲ್ಲಿ
ಗಿರಿಯಲ್ಲಿ
ಗಿರಿಗಳಲ್ಲಿ
ಸಂಬೋಧನಾ
-
ನಾಯಿಯೇ
ನಾಯಿಗಳಿರಾ ನಾಯಿಗಳೇ
ಗಿರಿಯೇ
ಗಿರಿಗಳೇ ಗಿರಿಗಳಿರಾ
ಇದರಂತೆ ಕರಿ, ಮರಿ, ಕುರಿ, ಹೋರಿ, ಗಿಳಿ, ನದಿ, ನರಿ, ಸಿರಿ- ಶಬ್ದಗಳನ್ನು ನಡೆಯಿಸಬೇಕು.
() ಉಕಾರಾಂತ ನಪುಂಸಕ ಲಿಂಗ ಕರು ಶಬ್ದ () ಉಕಾರಾಂತ ನಪುಂಸಕ ಲಿಂಗ ಕಲ್ಲು ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಕರು (ವು)
ಕರುಗಳು
ಕಲ್ಲು
ಕಲ್ಲುಗಳು
ದ್ವಿತೀಯಾವಿಭಕ್ತಿ
-
ಕರುವನ್ನು
ಕರುಗಳನ್ನು
ಕಲ್ಲನ್ನು
ಕಲ್ಲುಗಳನ್ನು
ತೃತೀಯಾವಿಭಕ್ತಿ
-
ಕರುವಿನಿಂದ ಕರುವಿಂದ
ಕರುಗಳಿಂದ
ಕಲ್ಲಿಂದ ಕಲ್ಲಿನಿಂದ
ಕಲ್ಲುಗಳಿಂದ
ಚತುರ್ಥೀವಿಭಕ್ತಿ
-
ಕರುವಿಗೆ
ಕರುಗಳಿಗೆ
ಕಲ್ಲಿಗೆ
ಕಲ್ಲುಗಳಿಗೆ
ಪಂಚಮೀವಿಭಕ್ತಿ
-
ಕರುವಿನ ದೆಸೆಯಿಂದ
ಕರುಗಳ ದೆಸೆಯಿಂದ
ಕಲ್ಲಿನ ದೆಸೆಯಿಂದ
ಕಲ್ಲುಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಕರುವಿನ
ಕರುಗಳ
ಕಲ್ಲಿನ
ಕಲ್ಲುಗಳ
ಸಪ್ತಮೀವಿಭಕ್ತಿ
-
ಕರುವಿನಲ್ಲಿ
ಕರುಗಳಲ್ಲಿ
ಕಲ್ಲಿನಲ್ಲಿ
ಕಲ್ಲುಗಳಲ್ಲಿ
ಸಂಬೋಧನಾ
-
ಕರುವೇ
ಕರುಗಳೇ ಕರುಗಳಿರಾ
ಕಲ್ಲೇ
ಕಲ್ಲುಗಳೇ
ಇದರಂತೆ ಕಣ್ಣು, ಮಣ್ಣು, ತುರು-ಇತ್ಯಾದಿ ಶಬ್ದಗಳನ್ನು ನಡೆಯಿಸಬೇಕು.
() ಎಕಾರಾಂತ ನಪುಂಸಕಲಿಂಗ ಮನೆ ಶಬ್ದ ()ಎಕಾರಾಂತ ನಪುಂಸಕಲಿಂಗ ನನೆ ಶಬ್ದ (ನನೆ-ಹೂವು)
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಮನೆ(ಯು)
ಮನೆಗಳು
ನನೆ (ಯು)
ನನೆಗಳು
ದ್ವಿತೀಯಾವಿಭಕ್ತಿ
-
ಮನೆಯನ್ನು
ಮನೆಗಳನ್ನು
ನನೆಯನ್ನು
ನನೆಗಳನ್ನು
ತೃತೀಯಾವಿಭಕ್ತಿ
-
ಮನೆಯಿಂದ
ಮನೆಗಳಿಂದ
ನನೆಯಿಂದ
ನನೆಗಳಿಂದ
ಚತುರ್ಥೀವಿಭಕ್ತಿ
-
ಮನೆಗೆ
ಮನೆಗಳಿಗೆ
ನನೆಗೆ
ನನೆಗಳಿಗೆ
ಪಂಚಮೀವಿಭಕ್ತಿ
-
ಮನೆಯ ದೆಸೆಯಿಂದ
ಮನೆಗಳ ದೆಸೆಯಿಂದ
ನನೆಯ ದೆಸೆಯಿಂದ
ನನೆಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಮನೆಯ
ಮನೆಗಳ
ನನೆಯ
ನನೆಗಳ
ಸಪ್ತಮೀವಿಭಕ್ತಿ
-
ಮನೆಯಲ್ಲಿ
ಮನೆಗಳಲ್ಲಿ
ನನೆಯಲ್ಲಿ
ನನೆಗಳಲ್ಲಿ
ಸಂಬೋಧನಾ
-
ಮನೆಯೇ
ಮನೆಗಳೇ
ನನೆಯೇ
ನನೆಗಳೇ ನನೆಗಳಿರಾ
ಇದರಂತೆ ಕೆರೆ, ತೆರೆ, ಅಲೆ, ಗೆರೆ, ತಿರೆ, ತೊರೆ, ಮಲೆ-ಇತ್ಯಾದಿ ಶಬ್ದಗಳನ್ನು ನಡೆಯಿಸಬೇಕು.
() ಐಕಾರಾಂತ ನಪುಂಸಕಲಿಂಗ ಕೈ ಶಬ್ದ () ಐಕಾರಾಂತ ನಪುಂಸಕಲಿಂಗ ಮೈ ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಕೈ (ಯು)
ಕೈಗಳು
ಮೈ(ಯು)
ಮೈಗಳು
ದ್ವಿತೀಯಾವಿಭಕ್ತಿ
-
ಕೈಯನ್ನು
ಕೈಗಳನ್ನು
ಮೈಯನ್ನು
ಮೈಗಳನ್ನು
ತೃತೀಯಾವಿಭಕ್ತಿ
-
ಕೈಯಿಂದ
ಕೈಗಳಿಂದ
ಮೈಯಿಂದ
ಮೈಗಳಿಂದ
ಚತುರ್ಥೀವಿಭಕ್ತಿ
-
ಕೈಗೆ
ಕೈಗಳಿಗೆ
ಮೈಗೆ
ಮೈಗಳಿಗೆ
ಪಂಚಮೀವಿಭಕ್ತಿ
-
ಕೈಯ ದೆಸೆಯಿಂದ
ಕೈಗಳ ದೆಸೆಯಿಂದ
ಮೈಯ ದೆಸೆಯಿಂದ
ಮೈಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಕೈಯ
ಕೈಗಳ
ಮೈಯ
ಮೈಗಳ
ಸಪ್ತಮೀವಿಭಕ್ತಿ
-
ಕೈಯಲ್ಲಿ
ಕೈಗಳಲ್ಲಿ
ಮೈಯಲ್ಲಿ
ಮೈಗಳಲ್ಲಿ
ಸಂಬೋಧನಾ
-
ಕೈಯೇ
ಕೈಗಳೇ
ಮೈಯೇ
ಮೈಗಳೇ
ಏನು ಎಂಬ ಪ್ರಶ್ನಾರ್ಥಕ ಸರ್ವನಾಮವು ಏಕವಚನದಲ್ಲಿ ಮಾತ್ರ ವಿಭಕ್ತಿಪ್ರತ್ಯಯಗಳನ್ನು ಹೊಂದುತ್ತದೆ. (ಸಂಬೋಧನೆಯಲ್ಲಿ ಯಾವ ಸರ್ವನಾಮಗಳಿಗೂ ವಿಭಕ್ತಿಪ್ರತ್ಯಯ ಹತ್ತುವುದಿಲ್ಲ.)
() ಪ್ರಶ್ನಾರ್ಥಕ ಸರ್ವನಾಮ ಏನು ಶಬ್ದ
ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಏನು
ದ್ವಿತೀಯಾವಿಭಕ್ತಿ
-
ಏನನ್ನು
ಶಬ್ದವು ಬಹುವಚನದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಹೊಂದುವುದಿಲ್ಲ
ತೃತೀಯಾವಿಭಕ್ತಿ
-
ಏತರಿಂದ
ಚತುರ್ಥೀವಿಭಕ್ತಿ
-
ಏತಕ್ಕೆ
ಪಂಚಮೀವಿಭಕ್ತಿ
-
ಏತರ ದೆಸೆಯಿಂದ
ಷಷ್ಠೀವಿಭಕ್ತಿ
-
ಏತರ
ಸಪ್ತಮೀವಿಭಕ್ತಿ
-
ಏತರಲ್ಲಿ
() ಎಲ್ಲಾ (ಎಲ್ಲ) ಸರ್ವನಾಮ ಶಬ್ದ ರೂಪಗಳು
ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಎಲ್ಲ (ಎಲ್ಲಾ) (ಎಲ್ಲದು)
ಎಲ್ಲವು
ದ್ವಿತೀಯಾವಿಭಕ್ತಿ
-
ಎಲ್ಲದನ್ನು
ಎಲ್ಲವನ್ನು
ತೃತೀಯಾವಿಭಕ್ತಿ
-
ಎಲ್ಲದರಿಂದ
ಎಲ್ಲವುಗಳಿಂದ
ಚತುರ್ಥೀವಿಭಕ್ತಿ
-
ಎಲ್ಲದಕ್ಕೆ
ಎಲ್ಲವುಗಳಿಗೆ
ಪಂಚಮೀವಿಭಕ್ತಿ
-
ಎಲ್ಲದರ ದೆಸೆಯಿಂದ
ಎಲ್ಲವುಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಎಲ್ಲದರ
ಎಲ್ಲವುಗಳ
ಸಪ್ತಮೀವಿಭಕ್ತಿ
-
ಎಲ್ಲದರಲ್ಲಿ
ಎಲ್ಲವುಗಳಲ್ಲಿ
() ಮೂಡಲು, ಪಡುವಲು, ತೆಂಕಲು, ಬಡಗು -ಮುಂತಾದ ದಿಗ್ವಾಚಕ ಶಬ್ದಗಳ ಸಿದ್ಧರೂಪಗಳು:-
ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಮೂಡಲು+ಅಣ+=ಮೂಡಣವು
ಮೂಡಣಗಳು
ದ್ವಿತೀಯಾವಿಭಕ್ತಿ
-
ಮೂಡಲು+ಅಣ+ಅನ್ನು=ಮೂಡಣವನ್ನು
ಮೂಡಣಗಳನ್ನು
ತೃತೀಯಾವಿಭಕ್ತಿ
-
ಮೂಡಲು+ಅಣ+ಇಂದ=ಮೂಡಣಿಂದ
ಮೂಡಣಗಳಿಂದ
(ಮೂಡಲು+ಅಣ+ಇಂದ=ಮೂಡಣದಿಂದ)
ಚತುರ್ಥೀವಿಭಕ್ತಿ
-
ಮೂಡಲು+ಅಣ+ಕ್ಕೆ=ಮೂಡಣಕ್ಕೆ
ಮೂಡಣಗಳಿಗೆ
ಪಂಚಮೀವಿಭಕ್ತಿ
-
ಮೂಡಲು+ಅಣ+ದೆಸೆಯಿಂದ=ಮೂಡಣದ ದೆಸೆಯಿಂದ, (ಮೂಡಣದೆಸೆಯಿಂದ)
ಮೂಡಣಗಳ ದೆಸೆಯಿಂದ
ಷಷ್ಠೀವಿಭಕ್ತಿ
-
ಮೂಡಲು+ಅಣ++=ಮೂಡಣದ
ಮೂಡಣಗಳ
ಸಪ್ತಮೀವಿಭಕ್ತಿ
-
ಮೂಡಲು+ಅಣ++ಅಲ್ಲಿ=ಮೂಡಣದಲ್ಲಿ
ಮೂಡಣಗಳಲ್ಲಿ
ಸಂಬೋಧನಾ
-
ಮೂಡಲು+ಅಣ+=ಮೂಡಣವೇ
ಮೂಡಣಗಳಿರಾ, ಮೂಡಣಗಳೇ
ಮೇಲಿನ ಉದಾಹರಣೆಗಳನ್ನು ಅವಲೋಕಿಸಿದಾಗ ಏನು ಶಬ್ದ ತೃತೀಯಾ ಮೊದಲ್ಗೊಂಡು ಎಲ್ಲ ವಿಭಕ್ತಿಪ್ರತ್ಯಯ ಹತ್ತುವಾಗ ಏತರ ಎಂದು ರೂಪ ಧರಿಸುವುದು. ಎಲ್ಲಾ (ಎಲ್ಲ) ಶಬ್ದದ ಮುಂದೆ ಎಲ್ಲ ವಿಭಕ್ತಿಗಳಲ್ಲೂ ಏಕವಚನದಲ್ಲಿ ಅದು ಮತ್ತು ಬಹುವಚನದಲ್ಲಿ ಅವು ಎಂಬುವು ಬಂದು ವಿಭಕ್ತಿಪ್ರತ್ಯಯಗಳು ಮುಂದೆ ಹತ್ತುತ್ತವೆ. ಪ್ರಥಮೆಯಲ್ಲಿ ಮಾತ್ರ ಪ್ರಕೃತಿರೂಪವೇ ಉಳಿಯುವುದು.
ಮೂಡಲು ಶಬ್ದಕ್ಕೆ ವಿಭಕ್ತಿಪ್ರತ್ಯಯಗಳು ಸೇರುವಾಗ ಅಣ ಎಂಬಾಗಮವು ಬರುವುದು. ಕೊನೆಯ ಲು ಕಾರವು ಲೋಪ ಹೊಂದುವುದು. ಬಡಗು ಶಬ್ದದ ಗು ಅಕ್ಷರಕ್ಕೆ ಲೋಪ ತೃತೀಯಾ, ಪಂಚಮೀಗಳಲ್ಲಿ ವಿಕಲ್ಪದಿಂದಲೂ, ಷಷ್ಠೀ, ಸಪ್ತಮೀಗಳಲ್ಲಿ ನಿತ್ಯವಾಗಿಯೂ ಅಣ ಪ್ರತ್ಯಯಕ್ಕೂ ವಿಭಕ್ತಿಪ್ರತ್ಯಯಕ್ಕೂ ಮಧ್ಯದಲ್ಲಿ ಪ್ರತ್ಯಯವು ಆಗಮವಾಗಿ ಬರುವುದು. ಇದರ ಹಾಗೆಯೇ ಪಡುವಲು, ಬಡಗು, ತೆಂಕಲು ಶಬ್ದಗಳನ್ನು ನಡೆಯಿಸಬೇಕು.

[1] ವಿಭಕ್ತಿಪ್ರತ್ಯಯಗಳು ಏಳು ಮಾತ್ರ. ಸಂಬೋಧನೆಯನ್ನು ಸೇರಿಸಿದರೆ ಎಂಟಾಗುವುವು. ಆದರೆ ಸಂಬೋಧನೆಯು ಪ್ರಥಮಾ ವಿಭಕ್ತಿಯಲ್ಲಿಯೇ ಸೇರಿ ಸಂಬೋಧನಾ ಪ್ರಥಮಾವಿಭಕ್ತಿಯೆನಿಸುವುದು. ಇಲ್ಲಿ ಸ್ಪಷ್ಟತೆಗೋಸುಗ ವಿಭಕ್ತಿಯೆಂದು ಹೇಳಿದೆ. ಇವುಗಳಲ್ಲಿ ಷಷ್ಟೀ, ಸಂಬೋಧನೆಯನ್ನುಳಿದು ಉಳಿದ ಆರು ವಿಭಕ್ತಿಗಳು ಕಾರಕಾರ್ಥಗಳೆನಿಸುವುವು.
[2] ಪ್ರಥಮಾವಿಭಕ್ತಿಪ್ರತ್ಯಯವು ಹೊಸಗನ್ನಡ-ಹಳಗನ್ನಡ ಎರಡರಲ್ಲೂ ಇಲ್ಲವೆಂದೂ, ಪ್ರಕೃತಿಗಳೇ ಪ್ರಥಮಾವಿಭಕ್ತ್ಯಂತ ರೂಪಗಳಾಗಿರುತ್ತವೆಂದೂ ಆಧುನಿಕ ಭಾಷಾಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.
[3] ಕೆಲವುಕಡೆ ವಿಭಕ್ತಿಪ್ರತ್ಯಯಗಳು ಮೂರು ನಾಲ್ಕು ಇದ್ದು ಒಂದೇ ಪ್ರಕೃತಿಯ ಮೇಲೆ ಅವೆಲ್ಲವೂ ಬರುತ್ತವೆಂದು ತಿಳಿಯಬಾರದು. ಒಂದೊಂದು ಕಡೆಯಲ್ಲಿ ಒಂದೊಂದು ವಿಭಕ್ತಿಪ್ರತ್ಯಯ ಬರುತ್ತದೆಂದು ತಿಳಿಯಬೇಕು. ಹಳಗನ್ನಡದಲ್ಲಿ ತೃತೀಯಾ ವಿಭಕ್ತಿಪ್ರತ್ಯಯವು ಎಂದು ಕೆಲವುಕಡೆ ಅಕಾರಾಂತ ನಪುಂಸಕಲಿಂಗ ಶಬ್ದಗಳಿಗೆ ಮಾತ್ರ ಬರುವುದು. ಉದಾಹರಣೆಗೆ:- ಕ್ರಮದೆ, ನಯದೆ-ಇತ್ಯಾದಿ.
[4] ಪಂಚಮೀವಿಭಕ್ತಿಪ್ರತ್ಯಯವು ಕನ್ನಡದಲ್ಲಿ ಇಲ್ಲವೆಂದೂ, ಅದರ ಕಾರ್ಯವನ್ನು ತೃತೀಯಾ ವಿಭಕ್ತಿಪ್ರತ್ಯಯವೇ ಮಾಡುವುದೆಂದೂ, ಸಂಸ್ಕೃತ ವ್ಯಾಕರಣದಲ್ಲಿದ್ದ ಹಾಗೆ ಕನ್ನಡದಲ್ಲೂ ಪಂಚಮೀ ವಿಭಕ್ತಿ ಇರಬೇಕೆಂದು ತಿಳಿದು ಕನ್ನಡ ವ್ಯಾಕರಣಕಾರರು ಹಿಂದಿನಿಂದಲೂ ವಿಭಕ್ತಿಯನ್ನು ಹೇಳುತ್ತ ಬಂದಿರುವರೆಂದೂ ಆಧುನಿಕ ವಿದ್ವಾಂಸರ ಮತ.
[5] ಷಷ್ಠೀವಿಭಕ್ತಿಗೆ ಸಂಬಂಧಾನ್ವಯವಲ್ಲದೆ ಕಾರಕಾನ್ವಯವಿಲ್ಲ. ಎಲ್ಲ ಕಾರಕಾರ್ಥಗಳ ಸಂಬಂಧದಲ್ಲೂ ಷಷ್ಠೀವಿಭಕ್ತಿ ಬರುತ್ತದಾದ್ದರಿಂದ ಇದು ನೇರವಾಗಿ ಕಾರಕಾರ್ಥವಿಲ್ಲದ್ದೆಂದು ತಿಳಿಯಬೇಕು.
[6] ಸಂಬೋಧನೆಯೆಂಬುದು ಎಂಟನೆಯ ವಿಭಕ್ತಿಯಲ್ಲ. ಇದನ್ನು ಪ್ರಥಮೆಯಲ್ಲಿಯೇ ಸೇರಿಸುವರು. ಇದು ಕಾರಕಾರ್ಥವಲ್ಲ. ಇರಾ ಪ್ರತ್ಯಯ ಬಹುವಚನದಲ್ಲಿ ಮಾತ್ರ ಬರುವುದು.
[7] ಅಣ್ಣ, ಅಕ್ಕ ಎಂಬ ಶಬ್ದಗಳ ಹಳಗನ್ನಡ ಏಕವಚನದ ರೂಪಗಳು ಕ್ರಮವಾಗಿ ಕೆಳಗಿನಂತಾಗುತ್ತವೆ. ಅಣ್ಣಂ, ಅಣ್ಣನಂ, ಅಣ್ಣನಿಂ, (ಅಣ್ಣನಿಂದಂ, ಅಣ್ಣನಿಂದೆ), ಅಣ್ಣಂಗೆ, ಅಣ್ಣನತ್ತಣಿಂ, (ಅಣ್ಣನತ್ತಣಿಂದಂ, ಅಣ್ಣನತ್ತಣಿಂದೆ), ಅಣ್ಣನ, ಅಣ್ಣನೊಳ್, ಅಣ್ಣಾ, ಅಣ್ಣನೇ-ಇತ್ಯಾದಿ, ಅಕ್ಕಂ, ಅಕ್ಕನಂ, ಅಕ್ಕನಿಂ, (ಅಕ್ಕನಿಂದಂ, ಅಕ್ಕನಿಂದೆ), ಅಕ್ಕಂಗೆ, ಅಕ್ಕನತ್ತಣಿಂ, ಅಕ್ಕನತ್ತಣಿಂದಂ, ಅಕ್ಕನತ್ತಣಿಂದೆ, ಅಕ್ಕನ, ಅಕ್ಕನೊಳ್, ಅಕ್ಕಾ, ಅಕ್ಕನೇ-ಇತ್ಯಾದಿ.
[8] ವಿಕಲ್ಪ ಎಂದರೆ ಯಾವುದೇ ಒಂದು ಹೇಳಿದ ಕಾರ್ಯವು ಕೆಲವು ಕಡೆ ಬರುವುದು, ಕೆಲವು ಕಡೆ ಬರದಿರುವುದು, ಕೆಲವು ಕಡೆ ಬೇರೆ ಕಾರ್ಯ ಬರುವುದು ಎಂದೂ ಅರ್ಥ.
[9] ಹೀಗೆ ಆಕಾರದ ಕೆಳಗೆ ನ್ನು ಬರೆದು ತೋರಿಸಿರುವುದರ ಉದ್ದೇಶ ಹಿಂದೆ ಸಂಜ್ಞಾಪ್ರಕರಣದಲ್ಲಿ ತಿಳಿಸಿರುವಂತೆ ಪ್ಲುತಸ್ವರ ಎಂಬುದರ ಗುರುತಿಗಾಗಿ. ಆಕಾರವು ದೀರ್ಘಸ್ವರಮಾತ್ರ ಅಲ್ಲ. ಮಾತ್ರೆಗಳ ಕಾಲದವರೆಗೆ ಎಳೆದು ಹೇಳುವ ಪ್ಲುತಸ್ವರವೆಂಬ ತಿಳಿವಳಿಕೆಗಾಗಿ. ಗ್ರಂಥಾದಿಗಳಲ್ಲಿ ಹಾಗೆ ಬರೆಯುವುದಿಲ್ಲ. ವ್ಯಾಕರಣದ ಪುಸ್ತಕದಲ್ಲಿ ಹಾಗೆ ಬರೆದಿರುವುದು ಕೇವಲ ತಿಳಿವಳಿಕೆಗಾಗಿ ಮಾತ್ರ.

No comments:

Post a Comment