ಅಧ್ಯಾಯ ೩: ದೇಶ್ಯ-ಅನ್ಯದೇಶ್ಯ-ತತ್ಸಮ-ತದ್ಭವ ಪ್ರಕರಣ : ಭಾಗ III – ತತ್ಸಮ ತದ್ಭವ ರೂಪಗಳು ಮುಂದುವರೆದಿದೆ....
(xii) ಇನ್ನೂ ಅನೇಕ ವಿಕಾರ ರೂಪಗಳನ್ನು ಈ ಕೆಳಗೆ ಗಮನಿಸಿರಿ:-
ಸಂಸ್ಕೃತ ರೂಪ
|
ವಿಕಾರ ರೂಪ
|
ಸಂಸ್ಕೃತ ರೂಪ
|
ವಿಕಾರ ರೂಪ
|
|||
ಕಪಿಲೆ
|
-
|
ಕವಿಲೆ
|
ಕುರುಂಟ
|
-
|
ಗೋರಟೆ
|
|
ತ್ರಿಪದಿ
|
-
|
ತಿವದಿ
|
ಮಾನುಷ್ಯ
|
-
|
ಮಾನಸ
|
|
ಪಿಶುನ
|
-
|
ಹಿಸುಣ
|
ಮರೀಚ
|
-
|
ಮೆಣಸು
|
|
ಪಿಪ್ಪಲಿ
|
-
|
ಹಿಪ್ಪಲಿ
|
ಅನ್ಯಾಯ
|
-
|
ಅನ್ನೆಯ
|
|
ಪಾದುಕಾ
|
-
|
ಹಾವುಗೆ
|
ಸಾಹಸ
|
-
|
ಸಾಸ
|
|
ಪರವಶ
|
-
|
ಹರವಸ
|
ಗಹನ
|
-
|
ಗಾನ
|
|
ಕಬಳ
|
-
|
ಕವಳ
|
ಕುಕ್ಕುಟ
|
-
|
ಕೋಳಿ
|
|
ಸಿಬಿಕಾ
|
-
|
ಸಿವಿಗೆ
|
ನಿಷ್ಠಾ
|
-
|
ನಿಟ್ಟೆ
|
|
ವಶಾ
|
-
|
ಬಸೆ
|
ಅಮೃತ
|
-
|
ಅಮರ್ದು
|
|
ವಂಚನಾ
|
-
|
ಬಂಚನೆ
|
ಅಂಗುಷ್ಠ
|
-
|
ಉಂಗುಟ
|
|
ವಸಂತ
|
-
|
ಬಸಂತ
|
ಪಿಷ್ಟ
|
-
|
ಹಿಟ್ಟು
|
|
ವೀಣಾ
|
-
|
ಬೀಣೆ
|
ಇಷ್ಟಕಾ
|
-
|
ಇಟ್ಟಿಗೆ
|
|
ವೀರ
|
-
|
ಬೀರ
|
ಕೂಷ್ಮಾಂಡ
|
-
|
ಕುಂಬಳ
|
|
ವಾಲ
|
-
|
ಬಾಲ
|
ದಾಡಿಮ
|
-
|
ದಾಳಿಂಬೆ
|
|
ಶ್ರವಣ
|
-
|
ಸವಣ
|
ತೃತೀಯಾ
|
-
|
ತದಿಗೆ
|
|
ಪ್ರಸರ
|
-
|
ಪಸರ
|
ಚತುರ್ಥೀ
|
-
|
ಚೌತಿ
|
|
ಪತಿವ್ರತೆ
|
-
|
ಹದಿಬದೆ
|
ವರ್ಧಮಾನ
|
-
|
ಬದ್ದವಣ
(ಔಡಲ)
|
|
ವೇತ್ರ
|
-
|
ಬೆತ್ತ
|
||||
ಸೂತ್ರಿಕಾ
|
-
|
ಸುತ್ತಿಗೆ
|
ವಿನಾಯಕ
|
-
|
ಬೆನಕ
|
|
ವೃಷಭ
|
-
|
ಬಸವ
|
ಸುರಪರ್ಣೀ
|
-
|
ಸುರಹೊನ್ನೆ
|
|
ವ್ಯಾಘ್ರ
|
-
|
ಬಗ್ಗ
|
ಮರುವಕ
|
-
|
ಮರುಗ
|
|
ರಕ್ಷಾ
|
-
|
ರಕ್ಕೆ
|
ಸರ್ವ
|
-
|
ಸಬ್ಬ
|
|
ಪಕ್ಷ
|
-
|
ಪಕ್ಕ
|
ಶ್ರೀಖಂಡ
|
-
|
ಸಿರಿಕಂಡ
|
|
ಲಕ್ಷ
|
-
|
ಲಕ್ಕ
|
ವೀರಶ್ರೀ
|
-
|
ಬೀರಸಿರಿ
|
|
ಅಕ್ಷರ
|
-
|
ಅಕ್ಕರ
|
ಅಂದೋಲಿಕಾ
|
-
|
ಅಂದಣ
|
|
ಭಿಕ್ಷಾ
|
-
|
ಬಿಕ್ಕೆ
|
ಬಾಹುವಲಯ
|
-
|
ಬಾಹುಬಳೆ
|
|
ಕ್ಷಪಣ
|
-
|
ಸವಣ
|
ತ್ರಿಗುಣ
|
-
|
ತಿಗುಣ
|
|
ಕ್ಷಾರ
|
-
|
ಕಾರ
|
ತ್ರಿವಳಿ
|
-
|
ತಿವಳಿ
|
|
ಯಮಳ
|
-
|
ಜವಳ
|
ವಲ್ಲಿ
|
-
|
ಬಳ್ಳಿ
|
|
ಚರ್ಮ
|
-
|
ಸಮ್ಮ
|
ವಸತಿ
|
-
|
ಬಸದಿ
|
|
ಚರ್ಮಕಾರ
|
-
|
ಸಮ್ಮಕಾರ
|
ಶೀರ್ಷಕ
|
-
|
ಸೀಸಕ
|
|
ಶಿಲ್ಪಿಗ
|
-
|
ಚಿಪ್ಪಿಗ
|
ವರ್ತಿ
|
-
|
ಬತ್ತಿ
|
|
ಶಷ್ಕುಲಿ
|
-
|
ಚಕ್ಕುಲಿ
|
ಕರ್ತರಿ
|
-
|
ಕತ್ತರಿ
|
|
ಹಂಸ
|
-
|
ಅಂಚೆ
|
ಶರ್ಕರಾ
|
-
|
ಸಕ್ಕರೆ
|
|
ತುಳಸಿ
|
-
|
ತೊಳಚಿ
|
ಕರ್ಕಶ
|
-
|
ಕಕ್ಕಸ
|
|
ಕಾಂಸ್ಯ
|
-
|
ಕಂಚು
|
ರಾಕ್ಷಸ
|
-
|
ರಕ್ಕಸ
|
|
ನಿತ್ಯ
|
-
|
ನಿಚ್ಚ
|
ಅರ್ಕ
|
-
|
ಎಕ್ಕ
|
|
ವಿಸ್ತಾರ
|
-
|
ಬಿತ್ತರ
|
ದ್ರೋಣಿ
|
-
|
ದೋಣಿ
|
|
ವ್ಯವಸಾಯ
|
-
|
ಬೇಸಾಯ
|
ಭ್ರಮರ
|
-
|
ಬವರ
|
|
ಶಯ್ಯಾ
|
-
|
ಸಜ್ಜೆ
|
ಪ್ರಭಾ
|
-
|
ಹಬೆ
|
|
ಜಟಾ
|
-
|
ಜಡೆ
|
ಪ್ರಣಿತೆ
|
-
|
ಹಣತೆ
|
|
ತೈಲಿಕ
|
-
|
ತೆಲ್ಲಿಗ
|
ಪುಸ್ತಕ
|
-
|
ಹೊತ್ತಗೆ
|
|
ಇಳಾ
|
-
|
ಎಳೆ
|
ಕುಸ್ತುಂಬರ
|
-
|
ಕೊತ್ತುಂಬರಿ
|
|
ಸ್ಪರ್ಶ
|
-
|
ಪರುಸ
|
ಬ್ರಹ್ಮ
|
-
|
ಬೊಮ್ಮ
|
|
ಸ್ಪಟಿಕ
|
-
|
ಪಳಿಗೆ
|
ರತ್ನ
|
-
|
ರನ್ನ
|
|
ಶ್ಮಶಾನ
|
-
|
ಮಸಣ
|
ಪ್ರಜ್ವಲ
|
-
|
ಪಜ್ಜಳ
|
|
ತಾಂಬೂಲ
|
-
|
ತಂಬುಲ
|
ಬಿಲ್ವಪತ್ರ
|
-
|
ಬೆಲ್ಲವತ್ತ
|
|
ಆರಾಮ
|
-
|
ಅರವೆ
|
ಕನ್ಯಕಾ
|
-
|
ಕನ್ನಿಕೆ
|
|
ಬಂಧೂಕ
|
-
|
ಬಂದುಗೆ
|
ಮೃತ್ಯು
|
-
|
ಮಿಳ್ತು
|
|
ಗೋಧೂಮ
|
-
|
ಗೋದುವೆ
|
ಕಾವ್ಯ
|
-
|
ಕಬ್ಬ
|
|
ಬರ್ಭೂರ
|
-
|
ಬೊಬ್ಬುಳಿ
|
ದಂಷ್ಟ್ರ
|
-
|
ದಾಡೆ
|
|
ಪ್ರಯಾಣ
|
-
|
ಪಯಣ
|
ಕಹಳಾ
|
-
|
ಕಾಳೆ
|
|
ದ್ವಿತೀಯಾ
|
-
|
ಬಿದಿಗೆ
|
ಋಷಿ
|
-
|
ರಿಸಿ
|
|
ಅಶೋಕ
|
-
|
ಅಸುಗೆ
|
ಮೃಗ
|
-
|
ಮಿಗ
|
|
ಉದ್ಯೋಗ
|
-
|
ಉಜ್ಜುಗ
|
ಭೃಂಗಾರ
|
-
|
ಬಿಂಗಾರ
|
|
ಸಂಜ್ಞಾ
|
-
|
ಸನ್ನೆ
|
ಪ್ರಗ್ರಹ
|
-
|
ಹಗ್ಗ
|
|
ಯಜ್ಞಾ
|
-
|
ಜನ್ನ
|
ಆಶ್ಚರ್ಯ
|
-
|
ಅಚ್ಚರಿ
|
|
ಕ್ರೌಂಚ
|
-
|
ಕೊಂಚೆ
|
ಸ್ವರ್ಗ
|
-
|
ಸಗ್ಗ
|
|
ಸುಧಾ
|
-
|
ಸೊದೆ
|
ಜ್ಯೋತಿಷ
|
-
|
ಜೋಯಿಸ
|
|
ಭುಜಂಗ
|
-
|
ಬೊಜಂಗ
|
ಅಮಾವಾಸ್ಯಾ
|
-
|
ಅಮಾಸೆ
|
|
ಕೌಪೀನ
|
-
|
ಕೋವಣ
|
ಧ್ವನಿ
|
-
|
ದನಿ
|
|
ಮಯೂರ
|
-
|
ಮೋರ
|
ಜ್ವರ
|
-
|
ಜರ
|
|
ಗೂರ್ಜರ
|
-
|
ಗುಜ್ಜರ
|
ಸರಸ್ವತಿ
|
-
|
ಸರಸತಿ
|
|
ಆರ್ಯ
|
-
|
ಅಜ್ಜ
|
ವರ್ಧಕಿ
|
-
|
ಬಡಗಿ
|
|
ವ್ಯವಹಾರ
|
-
|
ಬೇಹಾರ
|
ಕಾಷ್ಠ
|
-
|
ಕಡ್ಡಿ
|
|
ನಿಯಮ
|
-
|
ನೇಮ
|
ಚತುರ್ದಂತ
|
-
|
ಚೌದಂತ
|
|
ಪತ್ತನ
|
-
|
ಪಟ್ಟಣ
|
ದೃಷ್ಟಿ
|
-
|
ದಿಟ್ಟ
|
|
ಅತಸೀ
|
-
|
ಅಗಸೆ
|
ದಿಶಾಬಲಿ
|
-
|
ದೆಸೆಬಲಿ
|
|
ತ್ವರಿತ
|
-
|
ತುರಿಹ
|
ಏಕಶರ
|
-
|
ಎಕ್ಕಸರ
|
|
ಆಜ್ಞೆ
|
-
|
ಆಣೆ
|
ಚತುಷ್ಕ
|
-
|
ಚೌಕ
|
|
ಶಾಣ
|
-
|
ಸಾಣೆ
|
ಚತುರ್ವೇದಿ
|
-
|
ಚೌವೇದಿ
|
|
ಜೀರಿಕಾ
|
-
|
ಜೀರಿಗೆ
|
ಸಹದೇವ
|
-
|
ಸಾದೇವ
|
|
ವಿಜ್ಞಾನ
|
-
|
ಬಿನ್ನಣ
|
ಸಹವಾಸಿ
|
-
|
ಸಾವಾಸಿ
|
|
ಕಲಮಾ
|
-
|
ಕಳವೆ
|
ಮಹಾಪಾತಕ
|
-
|
ಮಾಪಾತಕ
|
|
ಕಂಬಲ
|
-
|
ಕಂಬಳಿ
|
ಪಂಜರಪಕ್ಷಿ
|
-
|
ಹಂಜರವಕ್ಕಿ
|
|
ಅರ್ಗಲ
|
-
|
ಅಗುಳಿ
|
ದಿಶಾಬಲಿ
|
-
|
ದೆಸೆವಲಿ
|
|
ಕುದ್ದಾಲ
|
-
|
ಗುದ್ದಲಿ
|
ರತ್ನಮಣಿ
|
-
|
ರನ್ನವಣಿ
|
|
ದ್ಯೂತ
|
-
|
ಜೂಜು
|
ಅಂತಃಪುರ
|
-
|
ಅಂತಪುರ
|
|
ಗ್ರಂಥಿ
|
-
|
ಗಂಟು
|
ಅಚ್ಚಮಲ್ಲಿಕಾ
|
-
|
ಅಚ್ಚಮಲ್ಲಿಗೆ
|
|
ಕುಕ್ಷಿ
|
-
|
ಕುಕ್ಕೆ
|
ಅಕ್ಷರಮಾಲಾ
|
-
|
ಅಕ್ಕರಮಾಲೆ
|
|
ಚರ್ಮಪಟ್ಟಿಕಾ
|
-
|
ಚಮ್ಮಟಿಗೆ
|
ಕ್ಷೀರಾಗಾರಾ
|
-
|
ಕೀಲಾರ
|
|
ದೇವಕುಲ
|
-
|
ದೇಗುಲ
|
ಗೂಢಾಗಾರ
|
-
|
ಗೂಡಾರ
|
|
ದೀಪಾವಳಿಕಾ
|
-
|
ದೀವಳಿಗೆ
|
ಹೀಗೆ ಅನೇಕ ಸಂಸ್ಕೃತ-ಪ್ರಾಕೃತ ಭಾಷಾಶಬ್ದಗಳು ಕನ್ನಡಕ್ಕೆ ಬರುವಾಗ ರೂಪಾಂತರ ಹೊಂದಿ ಬರುವುದನ್ನು ಇದುವರೆಗೆ ಸ್ಥೂಲವಾಗಿ ಹೇಳಲಾಗಿದೆ.
ಇದುವರೆಗೆ ಸಂಸ್ಕೃತದ ಅನೇಕ ಶಬ್ದಗಳು ರೂಪಾಂತರ ಹೊಂದಿ ಕನ್ನಡಕ್ಕೆ ಬಂದ ಬಗೆಗೆ ತಿಳಿದಿರುವಿರಿ. ಕನ್ನಡದ ಅನೇಕ ಶಬ್ದಗಳು ಕಾಲಕಾಲಕ್ಕೆ ರೂಪಾಂತರ ಹೊಂದಿವೆ.
ಹಳೆಗನ್ನಡದ ಅನೇಕ ಶಬ್ದಗಳು ಈಗಿನ ಕನ್ನಡದಲ್ಲಿ (ಹೊಸಗನ್ನಡದಲ್ಲಿ) ರೂಪಾಂತರ ಹೊಂದಿ ಪ್ರಯೋಗವಾಗುತ್ತಿವೆ. ಅವುಗಳ ಬಗೆಗೆ ಈಗ ಸ್ಥೂಲವಾಗಿ ಮುಖ್ಯವಾದ ಕೆಲವು ಅಂಶಗಳನ್ನು ನೀವು ಅವಶ್ಯ ತಿಳಿಯಬೇಕು.
(೧) ಪಕಾರಾದಿಯಾದ ಅನೇಕ ಶಬ್ದಗಳು ಹಕಾರಾದಿಯಾಗುತ್ತವೆ.
ಹಳಗನ್ನಡ
|
-
|
ಹೊಸಗನ್ನಡ
|
ಹಳಗನ್ನಡ
|
-
|
ಹೊಸಗನ್ನಡ
|
ಪಾಲ್
|
-
|
ಹಾಲು
|
ಪಂಬಲಿಸು
|
-
|
ಹಂಬಲಿಸು
|
ಪಾವ್
|
-
|
ಹಾವು
|
ಪಣೆ
|
-
|
ಹಣೆ
|
ಪಾಸು
|
-
|
ಹಾಸು
|
ಪರಡು
|
-
|
ಹರಡು
|
ಪರಿ
|
-
|
ಹರಿ
|
ಪರದ
|
-
|
ಹರದ
|
ಪರ್ಬು
|
-
|
ಹಬ್ಬು
|
ಪಲವು
|
-
|
ಹಲವು
|
ಪೊರಳ್
|
-
|
ಹೊರಳು
|
ಪಲ್ಲಿಲಿ
|
-
|
ಹಲ್ಲಿಲ್ಲದ
|
ಪೊಳೆ
|
-
|
ಹೊಳೆ
|
ಪಲ್ಲಿಲಿವಾಯ್
|
-
|
ಹಲ್ಲಿಲದ ಬಾಯಿ
|
ಪೊರೆ
|
-
|
ಹೊರೆ
|
ಪವ್ವನೆ
|
-
|
ಹವ್ವನೆ
|
ಪೂ
|
-
|
ಹೂ
|
ಪಳ್ಳ
|
-
|
ಹಳ್ಳ
|
ಪನಿ
|
-
|
ಹನಿ
|
ಪಕ್ಕಿ
|
-
|
ಹಕ್ಕಿ
|
ಪಿಂಡು
|
-
|
ಹಿಂಡು
|
ಪಗೆ
|
-
|
ಹಗೆ
|
ಪತ್ತು
|
-
|
ಹತ್ತು
|
ಪೊರಮಡು
|
ಹೊರಹೊರಡು
|
|
ಪುಲಿ
|
-
|
ಹುಲಿ
|
ಪೆರ್ಚು
|
-
|
ಹೆಚ್ಚು
|
ಪಣ್
|
-
|
ಹಣ್ಣು
|
ಪುಗು
|
-
|
ಹುಗು
|
ಪಂದೆ
|
-
|
ಹಂದೆ
|
ಪೊಗು
|
-
|
ಹೊಗು
|
ಪಂದರ
|
-
|
ಹಂದರ
|
ಪಿಂಗು
|
-
|
ಹಿಂಗು
|
ಪಗಲ್
|
-
|
ಹಗಲು
|
ಪಿಂತೆ
|
-
|
ಹಿಂದೆ
|
ಪಂದಿ
|
-
|
ಹಂದಿ
|
ಪಳಿ
|
-
|
ಹಳಿ
|
ಪಂದೆ
|
-
|
ಹಂದೆ
|
ಪೋಳ್
|
-
|
ಹೋಳು
|
ಪೊಸ
|
-
|
ಹೊಸ
|
ಪಲ್ಲಿ
|
-
|
ಹಲ್ಲಿ
|
ಪೋಗು
|
-
|
ಹೋಗು
|
ಪಲ್
|
-
|
ಹಲ್ಲು
|
ಪರ್ಚು
|
-
|
ಹಂಚು
|
ಪಸಿ
|
-
|
ಹಸಿ
|
ಪರಸು
|
-
|
ಹರಸು
|
ಪಸುರ್
|
-
|
ಹಸುರು
|
ಪೀರ್
|
-
|
ಹೀರು
|
ಪಾಡು
|
-
|
ಹಾಡು
|
ಪುದುಗು
|
-
|
ಹುದುಗು
|
ಪುರ್ಬು
|
-
|
ಹುಬ್ಬು
|
ಪಿರಿಯ
|
-
|
ಹಿರಿಯ
|
ಪರ್ಬು
|
-
|
ಹಬ್ಬು
|
ಪದುಳ
|
-
|
ಹದುಳ
|
ಪೆರ್ಮೆ
|
-
|
ಹೆಮ್ಮೆ
|
ಪರ್ದು
|
-
|
ಹದ್ದು
|
ಪಿರಿದು
|
-
|
ಹಿರಿದು
|
ಪರ್ಬುಗೆ
|
-
|
ಹಬ್ಬುವಿಕೆ
|
ಮೇಲಿನ ಉದಾಹರಣೆಗಳಲ್ಲಿ ಕೆಲವು ಕಡೆ ಅಂತ್ಯದಲ್ಲಿರುವ ಲ್ ವ್ ಎಂಬ ವ್ಯಂಜನಾಂತ ಶಬ್ದಗಳು ಉಕಾರಾಂತಗಳಾಗಿರುವುದನ್ನು ಗಮನಿಸಿರಿ. (ಉದಾ:- ಪಾಲ್-ಹಾಲು, ಪಾವ್-ಹಾವು__ಇತ್ಯಾದಿ)
ಈಗ ಕೊನೆಯ ವ್ಯಂಜನಗಳು ಯಾವ ಯಾವ ವ್ಯತ್ಯಾಸ ಹೊಂದುತ್ತವೆಂಬುದನ್ನು ತಿಳಿಯಿರಿ.
(೨) ನ, ಣ, ಲ, ರ, ಳ ವ್ಯಂಜನಗಳು ಅಂತ್ಯದಲ್ಲಿ ಉಳ್ಳ ಕೆಲವು ಶಬ್ದಗಳು ಉಕಾರಾಂತಗಳಾಗುತ್ತವೆ. ಕೆಲವು ಇದೇ ಇನ್ನೊಂದು ವ್ಯಂಜನದಿಂದ ಕೂಡಿ ದ್ವಿತ್ವ (ಒತ್ತಕ್ಷರ) ಗಳೆನಿಸುತ್ತವೆ. ಯಕಾರಾಂತಗಳು ಇಕಾರಾಂತಗಳಾಗುತ್ತವೆ ಮತ್ತು ದ್ವಿತ್ವವುಳ್ಳ ವುಗಳಾಗುತ್ತವೆ.
ಉದಾಹರಣೆಗೆ:-
(i) ನಕಾರಾಂತವು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದೊಡನೆ ಉಕಾರಾಂತ ವಾಗುವುದಕ್ಕೆ:-
ನಾನ್-ನಾನು
|
ನೀನ್-ನೀನು
|
ಏನ್-ಏನು
|
ಅವನ್-ಅವನು
|
ಆನ್-ಆನು
|
ತಿನ್-ತಿನ್ನು
|
ಸೀನ್-ಸೀನು
|
ಪೊನ್-ಪೊನ್ನು (ಹೊನ್ನು)
|
ತಾನ್-ತಾನು
|
ಎನ್-ಎನ್ನು
|
(ii) ಣಕಾರಾಂತಗಳು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದಿಂದ ಕೂಡಿದ ಉಕಾರಾಂತಗಳಾಗುವುದಕ್ಕೆ:-
ಕಣ್-ಕಣ್ಣು
|
ಪುಣ್-ಹುಣ್ಣು
|
ಉಣ್-ಉಣ್ಣು
|
ಪಣ್-ಹಣ್ಣು
|
ಮಣ್-ಮಣ್ಣು
|
ಮಾಣ್-ಮಾಣು
|
ಪೆಣ್-ಹೆಣ್ಣು
|
ಕಾಣ್-ಕಾಣು
|
(iii) ಲಕಾರಂತ ಶಬ್ದಗಳು ದ್ವಿತ್ವದಿಂದ ಕೂಡಿ ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವವಿಲ್ಲದೆ ಉಕಾರಾಂತಗಳಾಗುವುದಕ್ಕೆ
ಬಿಲ್-ಬಿಲ್ಲು
|
ಅರಲ್-ಅರಲು
|
ಸೊಲ್-ಸೊಲ್ಲು
|
ನಿಲ್-ನಿಲ್ಲು
|
ಸೋಲ್-ಸೋಲು
|
ಕಾಲ್-ಕಾಲು
|
ಕಲ್-ಕಲ್ಲು
|
ಒರಲ್-ಒರಲು
|
ಪಾಲ್-ಪಾಲು
|
ಪುಲ್-ಹುಲ್ಲು
|
ಜೋಲ್-ಜೋಲು
|
ಸಿಡಿಲ್-ಸಿಡಿಲು
|
ಕೊಲ್-ಕೊಲ್ಲು
|
ನೂಲ್-ನೂಲು
|
ಅರಿಲ್-ಅರಿಲು
|
ಮಡಿಲ್-ಮಡಿಲು
|
ಪೋಲ್-ಪೋಲು
|
ನರಲ್-ನರಲು
|
ಬಳಲ್-ಬಳಲು
|
ಚಲ್-ಚಲ್ಲು
|
(iv) ಳಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ ಮತ್ತು ಇನ್ನೊಂದು ಳಕಾರದೊಡನೆ ಉಕಾರಾಂತಗಳಾಗುವುದಕ್ಕೆ
ಮರಳ್-ಮರಳು
|
ಉಗುಳ್-ಉಗುಳು
|
ಉರುಳ್-ಉರುಳು
|
ಮರುಳ್-ಮರುಳು
|
ತಳ್-ತಳ್ಳು
|
ಪೊರಳ್-ಪೊರಳು
|
ಸೀಳ್-ಸೀಳು
|
ಮುಳ್-ಮುಳ್ಳು
|
ನುಸುಳ್-ನುಸುಳು
|
ತಾಳ್-ತಾಳು
|
ಜೊಳ್-ಜೊಳ್ಳು
|
ಕೂಳ್-ಕೂಳು
|
ಮುಸುಳ್-ಮುಸುಳು
|
ಪುರುಳ್-ಹುರುಳು
|
ಕೇಳ್-ಕೇಳು
|
ಒರಳ್-ಒರಳು
|
ಆಳ್-ಆಳು
|
ಪಾಳ್-ಹಾಳು
|
ಅರಳ್-ಅರಳು
|
ಬಗುಳ್-ಬಗುಳು
(ಬೊಗಳು) |
ಕಳ್-ಕಳ್ಳು
|
ಬಾಳ್-ಬಾಳು
|
ಕೊಳ್-ಕೊಳ್ಳು
|
(v) ರಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ
ನಾರ್-ನಾರು
|
ಬಸಿರ್-ಬಸಿರು
|
ಕಾರ್-ಕಾರು
|
ತಳಿರ್-ತಳಿರು
|
ಸೋರ್-ಸೋರು
|
ಮೊಸರ್-ಮೊಸರು
|
ಸೇರ್-ಸೇರು
|
ಬೆಮರ್-ಬೆವರು (ಬೆಮರು)
|
ತೆಮರ್-ತೆವರು
|
ಉಸಿರ್-ಉಸಿರು
|
(vi) ಯಕಾರಾಂತ ಶಬ್ದಗಳು ಇಕಾರಾಂತ ಮತ್ತು ದ್ವಿತ್ವದಿಂದ ಕೂಡಿದ ಇಕಾರಾಂತ ಗಳಾಗುವುದಕ್ಕೆ
ತಾಯ್-ತಾಯಿ
|
ಕಾಯ್-ಕಾಯಿ
|
ಬಯ್-ಬಯ್ಯಿ
|
ನಾಯ್-ನಾಯಿ
|
ಕಯ್-ಕಯ್ಯಿ
|
ಪೊಯ್-ಪೊಯ್ಯಿ
|
ಸಾಯ್-ಸಾಯಿ
|
ಮೆಯ್-ಮೆಯ್ಯಿ
|
ನೆಯ್-ನೆಯ್ಯಿ
|
(vii) ಅನುಸ್ವಾರದಿಂದ ಕೂಡಿದ ಎಷ್ಟೋ ಶಬ್ದಗಳು ಅದಿಲ್ಲದೆ ಹೊಸಗನ್ನಡದಲ್ಲಿ ರೂಪಾಂತರವಾಗಿವೆ.
ತೋಂಟ-ತೋಟ
|
ನೊರಂಜು-ನೊರಜು
|
ಸಿಡುಂಬು-ಸಿಡುಬು
|
ಕುಸುಂಬೆ-ಕುಸುಬೆ
|
ತುಳುಂಕು-ತುಳುಕು
|
ಸೇಂದು-ಸೇದು
|
ಪೊಸಂತಿಲ್-ಹೊಸತಿಲು
|
ಬಣಂಜಿಗ-ಬಣಜಿಗ
|
ಕರಂಡಗೆ-ಕರಡಗೆ
|
ಬಣಂಬೆ-ಬಣವೆ
|
ತುರುಂಬು-ತುರುಬು
|
ಜಿನುಂಗು-ಜಿನುಗು
|
ಕೊಡಂತಿ-ಕೊಡತಿ
|
ನಾಂದು-ನಾದು
|
ಮುಸುಂಕು-ಮುಸುಗು
|
ಕವುಂಕುಳ್-ಕಂಕುಳ
|
ಪಲುಂಬು-ಹಲುಬು
|
ಸೆರೆಂಗು-ಸೆರಗು
|
ಒರಂತೆ-ಒರತೆ
|
ಮೀಂಟು-ಮೀಟು
|
ಬೆಡಂಗು-ಬೆಡಗು
|
ತೋಂಟಿಗ-ತೋಟಿಗ
|
(viii) ಇನ್ನೂ ಕೆಲವು ರೂಪಾಂತರಗಳನ್ನು ನೋಡಿರಿ.
ಎಳ್ನೆಯ್- ಎಣ್ಣೆ
|
|
ಗಳ್ದೆ-ಗರ್ದೆ-ಗದ್ದೆ
|
ಬೆಳ್ನೆಯ್- ಬೆಣ್ಣೆ
|
ಪೊಳ್ತು-ಪೊತ್ತು- ಹೊತ್ತು
|
ಕಾಣ್ಕೆ-ಕಾಣಿಕೆ
|
ಅಪ್ಪುದು- ಅಹುದು- ಹೌದು
|
ಪೂಣ್ಕೆ-ಪೂಣಿಕೆ (ಹೂಣಿಕೆ)
|
ತನತ್ತು-ತನ್ನತು- ತನ್ನ
|
ಬಳಲ್ಕೆ-ಬಳಲಿಕೆ
|
ನಿನತ್ತು-ನಿನ್ನತು-ನಿನ್ನ
|
ಒರ್ಮೆ-ಒಮ್ಮೆ
|
ಎನಿತ್ತು-ಎನಿತು, ಎಸುಟು-ಎಷ್ಟು
|
ನುರ್ಗು-ನುಗ್ಗು
|
ಅನಿತ್ತು- ಅನಿತು, ಅಸುಟು- ಅಷ್ಟು
|
ತರ್ಗು-ತಗ್ಗು
|
ಚುರ್ಚು- ಚುಚ್ಚು
|
ಗುರ್ದು-ಗುದ್ದು
|
ಕರ್ಚು-ಕಚ್ಚು
|
ಪರ್ದು-ಹದ್ದು
|
ಬಿರ್ದು- ಬಿದ್ದು
|
ತೋರ್ಪ-ತೋರುವ
|
ಉರ್ದು- ಉದ್ದು
|
ಕಾರ್ದ-ಕಾರಿದ
|
ಇರ್ಪ- ಇರುವ
|
ಅಲ್ಲಂ-ಅಲ್ಲ
|
ಪೀರ್ದಂ-ಹೀರಿದನು
|
ತಣ್ಣು-ತಂಪು
|
ಸೇರ್ದಂ-ಸೇರಿದನು
|
ತೆಳು- ತಿಳುವು
|
ಕರ್ಪು-ಕಪ್ಪು
|
ನೇರ್ಪು- ನೇರ
|
ಕೆರ್ಪು-ಕೆರ
|
ಕಲ್ತು-ಕಲಿತು
|
ಬೆಳ್ಪು- ಬಿಳುಪು
|
[1] ಇಲ್ಲಿಯ ಳಕಾರವು ರಳಾಕ್ಷರವಾದರೂ ಹಾಗೆ ಬರೆದಿಲ್ಲ. ರಳ ಮತ್ತು ಕುಳಗಳ ನಿಯಮವನ್ನಾಗಲಿ, ಶಕಟರೇಫ ನಿಯಮವನ್ನಾಗಲಿ ಎಲ್ಲಿಯೂ ಪಾಲಿಸಿಲ್ಲ. ವಿದ್ಯಾರ್ಥಿಗಳ ದೃಷ್ಟಿಯಿಂದ ಅಷ್ಟೊಂದು ಸೂಕ್ಷ್ಮವಾಗಿ ವಿಚಾರ ಮಾಡದೆ ಸ್ಥೂಲವಾಗಿ ಹೇಳುವುದೇ ಮುಖ್ಯೋದ್ದೇಶ.
No comments:
Post a Comment