ಕನ್ನಡ ವ್ಯಾಕರಣ ದರ್ಪಣ: ಮುನ್ನುಡಿ
ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ. ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು. ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚಯವನ್ನು ಮಾಡಿಸುವ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ಸೆಕೆಂಡರಿ ಶಾಲೆಗಳ ಪಠ್ಯಕ್ರಮದಲ್ಲಿ ವ್ಯಾಕರಣ ಶಾಸ್ತ್ರದ ಮುಖ್ಯ ವಿಷಯಗಳನ್ನು ಅಳವಡಿಸಲಾಗಿದೆ. ಸೆಕೆಂಡರಿ ಹಂತದ ಎಂಟು, ಒಂಬತ್ತು ಮತ್ತು ಹತ್ತನೆಯ ತರಗತಿಗಳ ಪಠ್ಯಕ್ರಮದಲ್ಲಿ ಮಕ್ಕಳಿಗೆ ಕಲಿಸಬೇಕೆಂದು ಸಲಹೆ ಮಾಡಿರುವಂತೆ ವ್ಯಾಕರಣ, ಅಲಂಕಾರ ಮತ್ತು ಛಂದಸ್ಸುಗಳ ಅಂಶಗಳನ್ನು ಒಳಗೊಂಡ ಕನ್ನಡ ವ್ಯಾಕರಣ ರಚಿಸಲು ಈ ಕೆಳಕಂಡ ಸಮಿತಿಯನ್ನು ರಚಿಸಲಾಯಿತು:
೧. ಡಾ|| ಶಿ. ಚ. ನಂದಿಮಠ, ಎಂ.ಎ., ಪಿ.ಹೆಚ್ಡಿ., ಸಂಸ್ಕೃತ ಪ್ರೊಫೆಸರ್, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ … … … ಅಧ್ಯಕ್ಷರು
೨. ಸಿ. ಎಂ. ಎರೇಸೀಮೆ, ಕನ್ನಡ ಪಂಡಿತರು, ಗೌ|| ಸೆಂಟ್ರಲ್ ಹೈಯರ್ ಸೆಕೆಂಡರಿ ಶಾಲೆ, ಬೆಂಗಳೂರು. … … … ಸದಸ್ಯರು
೩. ಡಿ. ರೇವಣಪ್ಪ, ಕನ್ನಡ ಪಂಡಿತರು, ಟೀಚರ್ಸ ಟ್ರೈನಿಂಗ್ ಇನ್ಸ್ಟಿಟ್ಯೂಟ್ , ಚಿತ್ರದುರ್ಗ. … … … ಸದಸ್ಯರು
ಈ ಸಮಿತಿಯವರು ಉಪಯುಕ್ತ ಅಭ್ಯಾಸಗಳೊಂದಿಗೆ ಈ ಕನ್ನಡ ವ್ಯಾಕರಣವನ್ನು ಸಿದ್ಧ ಗೊಳಿಸಿರುತ್ತಾರೆ. ಮೇಲ್ಕಂಡ ಸಮಿತಿಯವರಿಗೆ ಈ ಅಮೂಲ್ಯ ಕಾರ್ಯಕ್ಕಾಗಿ ಇಲಾಖೆ ಋಣಿಯಾಗಿದೆಟಿ. ವಿ. ತಿಮ್ಮೇಗೌಡ,
ಡೈರೆಕ್ಟರ್ ಆಫ್ ಟೆಕ್ಸ್ಟ್ ಬುಕ್ಸ್
***
ಮೊದಲ ಮಾತು
ಮೈಸೂರು ರಾಜ್ಯದ ವಿದ್ಯಾಶಾಖೆಯ ವ್ಯಾಪ್ತಿಗೊಳಪಟ್ಟ ಪ್ರೌಢಶಾಲೆಗಳ ೮, ೯, ೧೦ ನೆಯ ವರ್ಗಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೂತನ ಅಭ್ಯಾಸಕ್ರಮಕ್ಕನುಸರಿಸಿ ಒಂದು ವ್ಯಾಕರಣ ಪಠ್ಯಪುಸ್ತಕವನ್ನು ರಚಿಸಬೇಕೆಂದೂ, ಅದರಲ್ಲಿ ಆಯಾ ತರಗತಿಗಳಿಗೆ ನಿಯಮಿತವಾದ ಅಲಂಕಾರ, ಛಂದಸ್ಸುಗಳ ಭಾಗವೂ ಇರಬೇಕೆಂದೂ ವಿದ್ಯಾಶಾಖೆಯವರು ತೀರ್ಮಾನಿಸಿ ಒಂದು ಸಮಿತಿಯನ್ನು ನಿಯಮಿಸಿದರು.
ವಿದ್ಯಾಶಾಖೆಯವರು ನಿರ್ಣಯಿಸಿದ ಪಠ್ಯಕ್ರಮಕ್ಕನುಸರಿಸಿ ಶಾಲಾಮಕ್ಕಳ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಸುಲಭದಿಂದ ಕಠಿಣಕ್ಕೆ ಎಂಬ ಬೋಧನಾತತ್ತ್ವಕ್ಕನುಗುಣವಾಗಿ ವಿಷಯ ನಿರೂಪಣೆ ಮಾಡುತ್ತ, ನಿಯಮಿತ ಅವಧಿಯಲ್ಲಿಯೇ ಈ ಪುಸ್ತಕವನ್ನು ರಚಿಸಲಾಗಿದೆ. ಇದರಲ್ಲಿ ಪಠ್ಯಕ್ರಮದ ವ್ಯಾಪ್ತಿಯನ್ನು ಮಿಕ್ಕಿ ಅಲ್ಲಲ್ಲಿ ಕೆಲವು ವಿಷಯಗಳನ್ನು ಗ್ರಂಥದ ಪರಿಪೂರ್ಣತೆಗಾಗಿ, ಜಿಜ್ಞಾಸೆಯುಳ್ಳ ಕನ್ನಡಭಾಷಾಭ್ಯಾಸಿಗಳ ಅನುಕೂಲತೆಗಾಗಿ ಹೇಳಿದ್ದರೂ ಕೂಡ ಉಪಾಧ್ಯಾಯರು ಅಂಥವುಗಳ ಕಡೆಗೆ ಹೆಚ್ಚು ಲಕ್ಷ್ಯಕೊಡದೆ ಕೇವಲ ಪಠ್ಯಕ್ರಮದ ವ್ಯಾಪ್ತಿಗನುಗುಣವಾಗಿ ಬೋಧನಾವಿಷಯಗಳನ್ನು ಆರಿಸಿಕೊಂಡು ಪಾಠ ಹೇಳಬೇಕೆಂದು ಸೂಚಿಸುತ್ತೇವೆ.ಮೈಸೂರು ರಾಜ್ಯದ ವಿದ್ಯಾಶಾಖೆಯ ವ್ಯಾಪ್ತಿಗೊಳಪಟ್ಟ ಪ್ರೌಢಶಾಲೆಗಳ ೮, ೯, ೧೦ ನೆಯ ವರ್ಗಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೂತನ ಅಭ್ಯಾಸಕ್ರಮಕ್ಕನುಸರಿಸಿ ಒಂದು ವ್ಯಾಕರಣ ಪಠ್ಯಪುಸ್ತಕವನ್ನು ರಚಿಸಬೇಕೆಂದೂ, ಅದರಲ್ಲಿ ಆಯಾ ತರಗತಿಗಳಿಗೆ ನಿಯಮಿತವಾದ ಅಲಂಕಾರ, ಛಂದಸ್ಸುಗಳ ಭಾಗವೂ ಇರಬೇಕೆಂದೂ ವಿದ್ಯಾಶಾಖೆಯವರು ತೀರ್ಮಾನಿಸಿ ಒಂದು ಸಮಿತಿಯನ್ನು ನಿಯಮಿಸಿದರು.
ಸೂತ್ರಗಳನ್ನು ಹೇಳುವುದಕ್ಕೆ ಪೂರ್ವದಲ್ಲಿ ಸಾಕಷ್ಟು ವಿವರಣೆಯನ್ನು ಕೊಡಲಾಗಿದೆ. ಸುಲಭವಾದ ದೃಷ್ಟಾಂತಗಳನ್ನು ತೋರಿಸಲಾಗಿದೆ. ಆ ವಿವರಣೆಯ ಆಧಾರದ ಮೇಲೆ ಸೂತ್ರ ರಚನೆಯನ್ನು ಮಕ್ಕಳಿಂದಲೇ ಮಾಡಿಸುವ ಬೋಧನಾನಿಯಮವನ್ನು ಶಿಕ್ಷಕರು ಅನುಸರಿಸಿ, ವ್ಯಾಕರಣವು ಸುಲಭವಾದ ವಿಷಯವೆಂಬ ವಿಶ್ವಾಸವನ್ನು ಮಕ್ಕಳಲ್ಲಿ ಮೂಡಿಸುವುದು ಬೋಧನಾಚತುರರಾದ ಉಪಾಧ್ಯಾಯರ ಕರ್ತವ್ಯವೆಂದು ನಾವು ಭಾವಿಸುತ್ತೇವೆ. ವಿದ್ಯಾರ್ಥಿಗಳ ಉಪಯೋಗದೃಷ್ಟಿಯಿಂದ ಹೆಚ್ಚಾಗಿ ದೃಷ್ಟಾಂತಗಳನ್ನು ಅಳವಡಿಸಲಾಗಿದೆ.
ಅಲಂಕಾರಗಳು ಸುಲಭವಾಗಿ ಮಕ್ಕಳ ಮನಸ್ಸನ್ನು ನಾಟಬೇಕೆಂಬ ಉದ್ದೇಶದಿಂದ ಗಾದೆಯ ಮಾತುಗಳ ಮತ್ತು ರೂಢಿಯೊಳಗಿನ ಮಾತುಗಳ ಸುಲಭ ದೃಷ್ಟಾಂತಗಳನ್ನು ಪ್ರಾರಂಭದಲ್ಲಿ ತಿಳಿಸಿ, ತದನಂತರ ಪದ್ಯಗಳನ್ನು ಹೇಳಿ; ವಿವರಣೆಮಾಡಿ ಸೂತ್ರಗಳನ್ನು ಹೇಳಲಾಗಿದೆ. ಅವರ ಪಠ್ಯಪುಸ್ತಕಗಳಲ್ಲಿ ಬಂದಿರುವ ಉದಾಹರಣೆಗಳತ್ತ ಸಾಮಾನ್ಯವಾಗಿ ಹೆಚ್ಚು ಲಕ್ಷ್ಯ ವಹಿಸಲಾಗಿದೆ. ಕೆಲವು ಕಡೆ ಪಠ್ಯಪುಸ್ತಕದ ಹೊರಗಿನ ಉದಾಹರಣೆಗಳನ್ನೂ ಕೊಡಲಾಗಿದೆ.
ಹೈಸ್ಕೂಲಿನ (ಪ್ರೌಢಶಾಲೆಯ) ಮೂರು ತರಗತಿಗಳಲ್ಲಿಯೂ ಮಕ್ಕಳು ಹಳಗನ್ನಡ ಗದ್ಯಪದ್ಯ ಭಾಗವನ್ನು ಸ್ವಲ್ಪ ಪರಿಚಯ ಮಾಡಿಕೊಳ್ಳಬೇಕಾಗಿರುವುದರಿಂದ ಅಲ್ಲಲ್ಲಿ ಹಳಗನ್ನಡ ಉದಾಹರಣೆಗಳನ್ನೂ ಕೊಡಲಾಗಿದೆ. ನಾಮವಿಭಕ್ತಿ ಪ್ರತ್ಯಯಗಳ ವಿವರಣೆ ಮಾಡುವಾಗ ಇದೇ ದೃಷ್ಟಿಯಿಂದ ಹೊಸಗನ್ನಡ ಮತ್ತು ಹಳಗನ್ನಡದ ಎರಡು ರೂಪಗಳನ್ನೂ ಹೇಳಲಾಗಿದೆ. ಸಮಾಸ ಪ್ರಕರಣದಲ್ಲಿ ಅನೇಕ ಹೊಸಗನ್ನಡ, ಹಳಗನ್ನಡದ ವಿಶೇಷ ಉದಾಹರಣೆಗಳ ಪಟ್ಟಿಯನ್ನು ಕೊಡಲಾಗಿದೆ. ಕ್ರಿಯಾಪದ ಪ್ರಕರಣಾಂತ್ಯದಲ್ಲಿ ದೀರ್ಘವಾದ ಧಾತುಗಳ ಪಟ್ಟಿಯೊಂದನ್ನು ಕೊಟ್ಟು ಅದರಲ್ಲಿ ಹೊಸಗನ್ನಡ ಹಳಗನ್ನಡ ಧಾತುರೂಪಗಳು ಮತ್ತು ಅವುಗಳ ಅರ್ಥ, ಕ್ರಿಯಾಪದದ ಒಂದೊಂದು ರೂಪ ಇವನ್ನು ಕೊಡಲಾಗಿದೆ. ಅಲ್ಲದೆ ಹಳಗನ್ನಡದಿಂದ ಹೊಸಗನ್ನಡಕ್ಕೆ ರೂಪಾಂತರಹೊಂದುವ ಅನೇಕ ಶಬ್ದಗಳ ಒಂದು ಪಟ್ಟಿಯನ್ನು ಮೂರನೆಯ ಅಧ್ಯಾಯದಲ್ಲಿ ಕೊಡಲಾಗಿದೆ. ಇದು ಬುದ್ಧಿವಂತರಾದ ವಿದ್ಯಾರ್ಥಿಗಳ ಭಾಷಾಜ್ಞಾನ ಬೆಳೆಯಲು ಉಪಯುಕ್ತ ಅಂಶವೆಂದು ಭಾವಿಸಿದ್ದೇವೆ. ಈ ಗ್ರಂಥದಲ್ಲಿ ದೋಷಗಳು ಉಳಿಯಬಾರದೆಂದು ಸಾಧ್ಯವಾದಷ್ಟು ಎಚ್ಚರಿಕೆ ವಹಿಸಿದ್ದೇವೆ. ಆದರೆ ಭಾಷೆಯೆಂಬುದು ವಿಸ್ತಾರವಾದುದರಿಂದಲೂ, ಪ್ರಯೋಗಗಳು ಅಗಣಿತವಾದುದರಿಂದಲೂ, ವೈಗುಣ್ಯಗಳು ಅಪ್ಪಿತಪ್ಪಿ ಉಳಿದಿದ್ದರೆ ಸಹೃದಯ ರಾದವರು ತಿಳಿಸಿದರೆ ಪುನರ್ಮುದ್ರಣದಲ್ಲಿ ಸರಿಪಡಿಸಲಾಗುವುದು.
ಮಕ್ಕಳ ಅಭ್ಯಾಸ ದೃಷ್ಟಿಯಿಂದ ಪ್ರತಿ ಅಧ್ಯಾಯದ ಕೊನೆಯಲ್ಲಿ ಅಭ್ಯಾಸ ಪ್ರಶ್ನೆಗಳನ್ನು ಸಾಕಷ್ಟು ವೈವಿಧ್ಯಪೂರ್ಣವಾಗಿ ಕೊಡಲಾಗಿದೆ. ಆ ಅಭ್ಯಾಸಗಳನ್ನು ಅವಶ್ಯವಾಗಿ ಉಪಾಧ್ಯಾಯರು ಮಾಡಿಸಬೇಕಾಗುವುದು. ಆಗಲೇ ವ್ಯಾಕರಣಪಾಠ ಪೂರ್ಣವಾಗುವುದು. ಗ್ರಂಥಾಂತ್ಯದಲ್ಲಿ ಲೇಖನ ಚಿಹ್ನೆಗಳ ಬಗೆಗೆ ವಿವರಿಸಲಾಗಿದೆ.
ಈ ಪುಸ್ತಕದ ರಚನೆಯ ಕಾರ್ಯವನ್ನು ನಮಗೆ ವಹಿಸಿಕೊಟ್ಟುದಕ್ಕಾಗಿ ಪಠ್ಯಪುಸ್ತಕ ವಿಭಾಗದ ಅಧಿಕಾರಿಗಳಿಗೆ ನಾವು ಕೃತಜ್ಞರಾಗಿದ್ದೇವೆ.
ಶಿ. ಚ. ನಂದಿಮಠ
(ಸಮಿತಿಯ ಪರವಾಗಿ)
ಬೆಂಗಳೂರು
೧೪-೪-೭೦
(ಸಮಿತಿಯ ಪರವಾಗಿ)
ಬೆಂಗಳೂರು
೧೪-೪-೭೦
***
ಸೂತ್ರ ಸಂಖ್ಯೆಗಳು
(೧)
|
ಸ್ವರ
|
(೨)
|
ವ್ಯಂಜನ
|
(೩)
|
ಯೋಗವಾಹ
|
(೪)
|
ಒಟ್ಟುವರ್ಣಮಾಲೆಯ ಅಕ್ಷರಗಳು
|
(೫)
|
ಹ್ರಸ್ವಸ್ವರ
|
(೬)
|
ದೀರ್ಘಸ್ವರ
|
(೭)
|
ಪ್ಲುತಸ್ವರ
|
(೮)
|
ಅಲ್ಪಪ್ರಾಣ
|
(೯)
|
ಮಹಾಪ್ರಾಣ
|
(೧೦)
|
ಅನುನಾಸಿಕ
|
(೧೧)
|
ಅವರ್ಗೀಯ ವ್ಯಂಜನ
|
(೧೨)
|
ಗುಣಿತಾಕ್ಷರ
|
(೧೩)
|
ಸಜಾತೀಯ ಸಂಯುಕ್ತಾಕ್ಷರ
|
(೧೪)
|
ವಿಜಾತೀಯ ಸಂಯುಕ್ತಾಕ್ಷರ
|
(೧೫)
|
ಸಂಧಿ
|
(೧೬)
|
ಲೋಪಸಂಧಿ
|
(೧೭)
|
ಆಗಮಸಂಧಿ
|
(೧೮)
|
ಆದೇಶಸಂಧಿ
|
(೧೯)
|
ಪ್ರಕೃತಿಭಾವ
|
(೨೦)
|
ಸವರ್ಣದೀರ್ಘಸಂಧಿ
|
(೨೧)
|
ಗುಣಸಂಧಿ
|
(೨೨)
|
ವೃದ್ಧಿಸಂಧಿ
|
(೨೩)
|
ಯಣ್ಸಂಧಿ
|
(೨೪)
|
ಜಶ್ತ್ವಸಂಧಿ
|
(೨೫)
|
ಶ್ಚುತ್ವಸಂಧಿ
|
(೨೬)
|
ಅನುನಾಸಿಕಸಂಧಿ
|
(೨೭)
|
ತತ್ಸಮಗಳು
|
(೨೮)
|
ತದ್ಭವಗಳು
|
(೨೯)
|
ನಾಮಪ್ರಕೃತಿ
|
(೩೦)
|
ಪದ
|
(೩೧)
|
ನಾಮಪದ
|
(೩೨)
|
ವಿಭಕ್ತಿಪ್ರತ್ಯಯಗಳು
|
(೩೩)
|
ನಾಮಪ್ರಕೃತಿಭೇದಗಳು
|
(೩೪)
|
ವಸ್ತುವಾಚಕಗಳು
|
(೩೫)
|
ಗುಣವಾಚಕಗಳು
|
(೩೬)
|
ಸಂಖ್ಯಾವಾಚಕಗಳು
|
(೩೭)
|
ಸಂಖ್ಯೇಯವಾಚಕಗಳು
|
(೩೮)
|
ಭಾವನಾಮಗಳು
|
(೩೯)
|
ಪರಿಮಾಣವಾಚಕಗಳು
|
(೪೦)
|
ಪ್ರಕಾರವಾಚಕಗಳು
|
(೪೧)
|
ದಿಗ್ವಾಚಕಗಳು
|
(೪೨)
|
ಸರ್ವನಾಮಗಳು
|
(೪೩)
|
ಪುಲ್ಲಿಂಗ
|
(೪೪)
|
ಸ್ತ್ರೀಲಿಂಗ
|
(೪೫)
|
ನಪುಂಸಕಲಿಂಗ
|
(೪೬)
|
ಪುನ್ನಪುಂಸಕಲಿಂಗ
|
(೪೭)
|
ಸ್ತ್ರೀನಪುಂಸಕಲಿಂಗ
|
(೪೮)
|
ನಿತ್ಯನಪುಂಸಕಲಿಂಗ
|
(೪೯)
|
ವಾಚ್ಯಲಿಂಗಗಳು
|
(೫೦)
|
ಏಕವಚನ, ಬಹುವಚನಗಳು
|
(೫೧)
|
ಬಹುವಚನದಲ್ಲಿ ಆಗಮಗಳು
|
(೫೨)
|
ವಿಭಕ್ತಿ
|
(೫೩)
|
ವಿಭಕ್ತಿಪಲ್ಲಟ
|
(೫೪)
|
ಧಾತು
|
(೫೫)
|
ಸಾಧಿತಧಾತು (ಪ್ರತ್ಯಯಾಂತಧಾತು)
|
(೫೬)
|
ಸಂಸ್ಕೃತ ನಾಮಪ್ರಕೃತಿಗಳು ಕನ್ನಡದ
|
ಧಾತುವಾಗುವಿಕೆ
|
|
(೫೭)
|
ಪ್ರೇರಣಾರ್ಥದಲ್ಲಿ ಇಸು ಪ್ರತ್ಯಯ
|
(೫೮)
|
ಸಕರ್ಮಕ ಧಾತುಗಳು
|
(೫೯)
|
ಅಕರ್ಮಕ ಧಾತುಗಳು
|
(೬೦)
|
ಕ್ರಿಯಾಪದಗಳು
|
(೬೧)
|
ವರ್ತಮಾನಕಾಲದ ಕ್ರಿಯಾಪದಗಳು
|
(೬೨)
|
ಭೂತಕಾಲದ ಕ್ರಿಯಾಪದಗಳು
|
(೬೩)
|
ಭವಿಷ್ಯತ್ ಕಾಲದ ಕ್ರಿಯಾಪದಗಳು
|
(೬೪)
|
ವಿಧ್ಯರ್ಥಕ ಕ್ರಿಯಾಪದಗಳು
|
(೬೫)
|
ನಿಷೇಧಾರ್ಥಕ ಕ್ರಿಯಾಪದಗಳು
|
(೬೬)
|
ಸಂಭಾವನಾರ್ಥಕ ಕ್ರಿಯಾಪದಗಳು
|
(೬೭)
|
ಕಾಲಪಲ್ಲಟ
|
(೬೮)
|
ಕ್ರಿಯಾರ್ಥಕಾವ್ಯಯಗಳು
|
(೬೯)
|
ಕರ್ಮಣಿಪ್ರಯೋಗಗಳು
|
(೭೦)
|
ಕರ್ತರಿ ಕರ್ಮಣಿ ಪ್ರಯೋಗದಲ್ಲಿ
|
ಲಿಂಗವ್ಯವಸ್ಥೆ
|
|
(೭೧)
|
ಅನೇಕ ಕರ್ತೃಗಳಿರುವಾಗ ಲಿಂಗ ವ್ಯವಸ್ಥೆ
|
(೭೨)
|
ಸರ್ವನಾಮಗಳು ಕರ್ತೃವಾಗಿರುವಾಗ ಲಿಂಗವ್ಯವಸ್ಥೆ
|
(೭೩)
|
“
|
(೭೪)
|
ಸಮಾಸ
|
(೭೫)
|
ಅರಿಸಮಾಸ
|
(೭೬)
|
ಸಮಾಸ ವಿಧಗಳು
|
(೭೭)
|
ತತ್ಪುರುಷ ಸಮಾಸ
|
(೭೮)
|
ಕರ್ಮಧಾರಯ ಸಮಾಸ
|
(೭೯)
|
ದ್ವಿಗು ಸಮಾಸ
|
(೮೦)
|
ಅಂಶಿ ಸಮಾಸ
|
(೮೧)
|
ದ್ವಂದ್ವ ಸಮಾಸ
|
(೮೨)
|
ಬಹುವ್ರೀಹಿ ಸಮಾಸ
|
(೮೩)
|
ಕ್ರಿಯಾ ಸಮಾಸ
|
(೮೪)
|
ಗಮಕ ಸಮಾಸ
|
(೮೫)
|
ದ್ವಿರುಕ್ತಿ
|
(೮೬)
|
ಕೃದಂತ
|
(೮೭)
|
ಕೃನ್ನಾಮ ರೂಪಗಳು
|
(೮೮)
|
ಕೃದಂತ ಭಾವನಾಮ
|
(೮೯)
|
ಕೃದಂತಾವ್ಯಯಗಳು
|
(೯೦)
|
ತದ್ಧಿತಾಂತಗಳು
|
(೯೧)
|
ಸ್ತ್ರೀಲಿಂಗದಲ್ಲಿ ತದ್ಧಿತ ಪ್ರತ್ಯಯಗಳು
|
(೯೨)
|
ತದ್ಧಿತ ಭಾವನಾಮಗಳು
|
(೯೩)
|
ತದ್ಧಿತಾಂತಾವ್ಯಯಗಳು
|
(೯೪)
|
ಅವ್ಯಯಗಳು:
|
(i) ಸಾಮಾನ್ಯಾವ್ಯಯಗಳು
|
|
(ii) ಅನುಕರಣಾವ್ಯಯಗಳು
|
|
(iii) ಭಾವಸೂಚಕಾವ್ಯಯಗಳು
|
|
(iv) ಕ್ರಿಯಾರ್ಥಕಾವ್ಯಯಗಳು
|
|
(v) ಸಂಬಂಧಾರ್ಥಕಾವ್ಯಯಗಳು
|
|
(vi) ಕೃದಂತಾವ್ಯಯ
|
|
(vii) ತದ್ಧಿತಾಂತಾವ್ಯಯ
|
|
(viii) ಅವಧಾರಣಾರ್ಥಕಾವ್ಯಯಗಳು
|
|
(೯೫)
|
ವಾಕ್ಯ
|
(೯೬)
|
ಆಧ್ಯಾಹಾರ
|
(೯೭)
|
ಸಾಮಾನ್ಯವಾಕ್ಯ
|
(೯೮)
|
ಸಂಯೋಜಿತವಾಕ್ಯ
|
(೯೯)
|
ಮಿಶ್ರವಾಕ್ಯ
|
(೧೦೦)
|
ರೂಪನಿಷ್ಪತ್ತಿ
|
(೧೦೧)
|
ಪ್ರಾಸ
|
(೧೦೨)
|
ಗಣಗಳು
|
(೧೦೩)
|
ಮಾತ್ರೆ, ಗುರು ಮತ್ತು ಲಘುಗಳು
|
(೧೦೪)
|
ಒಂದು ಮಾತ್ರಾಕಾಲದ ಅಕ್ಷರಗಳು
|
(೧೦೫)
|
ಗುರುಗಳು
|
(೧೦೬)
|
ಗುರುಗಳಾಗುವ ಅಕ್ಷರಗಳು
|
(೧೦೭)
|
ಕಂದಪದ್ಯದ ಲಕ್ಷಣ
|
(೧೦೮)
|
ಶರಷಟ್ಪದಿ ಲಕ್ಷಣ
|
(೧೦೯)
|
ಕುಸುಮಷಟ್ಪದಿ ಲಕ್ಷಣ
|
(೧೧೦)
|
ಭೋಗಷಟ್ಪದಿ ಲಕ್ಷಣ
|
(೧೧೧)
|
ಭಾಮಿನಿಷಟ್ಪದಿ ಲಕ್ಷಣ
|
(೧೧೨)
|
ಪರಿವರ್ಧಿನಿಷಟ್ಪದಿ ಲಕ್ಷಣ
|
(೧೧೩)
|
ವಾರ್ಧಕಷಟ್ಪದಿ ಲಕ್ಷಣ
|
(೧೧೪)
|
ಉತ್ಸಾಹರಗಳೆ ಲಕ್ಷಣ
|
(೧೧೫)
|
ಮಂದಾನಿಲರಗಳೆ ಲಕ್ಷಣ
|
(೧೧೬)
|
ಮಂದಾನಿಲರಗಳೆ ಲಕ್ಷಣ
|
(೧೧೭)
|
ಲಲಿತರಗಳೆ ಲಕ್ಷಣ
|
(೧೧೮)
|
ಅಕ್ಷರಗಣಗಳು
|
(೧೧೯)
|
ಉತ್ಪಲಮಾಲಾವೃತ್ತ ಲಕ್ಷಣ
|
(೧೨೦)
|
ಚಂಪಕಮಾಲಾವೃತ್ತ ಲಕ್ಷಣ
|
(೧೨೧)
|
ಶಾರ್ದೂಲವಿಕ್ರೀಡಿತವೃತ್ತ ಲಕ್ಷಣ
|
(೧೨೨)
|
ಮತ್ತೇಭವಿಕ್ರೀಡಿತವೃತ್ತ ಲಕ್ಷಣ
|
(೧೨೩)
|
ಸ್ರಗ್ಧರಾವೃತ್ತ ಲಕ್ಷಣ
|
(೧೨೪)
|
ಮಹಾಸ್ರಗ್ಧರಾವೃತ್ತ ಲಕ್ಷಣ
|
(೧೨೫)
|
ಉಪಮಾಲಂಕಾರ
|
(೧೨೬)
|
ಅಭೇದರೂಪಕಾಲಂಕಾರ
|
(೧೨೭)
|
ಉತ್ಪ್ರೇಕ್ಷಾಲಂಕಾರ
|
(೧೨೮)
|
ದೃಷ್ಟಾಂತಾಲಂಕಾರ
|
(೧೨೯)
|
ಅರ್ಥಾಂತರನ್ಯಾಸಾಲಂಕಾರ
|
(೧೩೦)
|
ಶ್ಲೇಷಾಲಂಕಾರ
|
(೧೩೧)
|
ಶಬ್ದಾಲಂಕಾರ
|
(೧೩೨)
|
ವೃತ್ತ್ಯನುಪ್ರಾಸ
|
(೧೩೩)
|
ಛೇಕಾನುಪ್ರಾಸ
|
(೧೩೪)
|
ಯಮಕಾಲಂಕಾರ
|
***
ಪೀಠಿಕೆ
ಶ್ರೀವಾಗ್ದೇವಿಗೆ ಶಬ್ದದಿ-|
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು-|
ದ್ಭಾವಿಪ ನಿರ್ಮಳಮೂರ್ತಿಗಿ-|
ಳಾವಂದ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ ||
- ಕೇಶಿರಾಜ (ಕ್ರಿ.ಶ.೧೨೬೦)
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು-|
ದ್ಭಾವಿಪ ನಿರ್ಮಳಮೂರ್ತಿಗಿ-|
ಳಾವಂದ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ ||
- ಕೇಶಿರಾಜ (ಕ್ರಿ.ಶ.೧೨೬೦)
ಲೋಕದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳೂ ಪರಸ್ಪರ ಮಾತನಾಡುವುದರಿಂದ, ಬರೆಯುವುದರಿಂದ ನಡೆಯುತ್ತವೆ. ತಮ್ಮ ತಮ್ಮ ಮನಸ್ಸಿನ ವಿಚಾರಗಳನ್ನು ಎಲ್ಲರೂ ಮಾತಿನ ಮೂಲಕವೇ ಇನ್ನೊಬ್ಬರಿಗೆ ತಿಳಿಯಪಡಿಸುತ್ತಾರೆ. ಆಡಿದ ಮಾತುಗಳನ್ನು, ಆಡಬೇಕಾದ ಮಾತುಗಳನ್ನು ಗೊತ್ತಾದ ಲಿಪಿಯ ಮೂಲಕ ಬರೆಯುವುದೇ ಬರವಣಿಗೆಯೆನಿಸುವುದು. ಬರೆಯುವುದೂ, ಮಾತನಾಡುವುದೂ ಮುಖ್ಯವಾಗಿ ಶಬ್ದಗಳ ಮೂಲಕವೇ ಆಗಿದೆ. ಒಂದೊಂದು ಶಬ್ದಕ್ಕೂ ಒಂದೊಂದು ಅರ್ಥವಿದೆ. ಶಬ್ದಗಳ ಉಚ್ಚಾರವಾಗಲಿ ಬರವಣಿಗೆಯಾಗಲಿ ಅರ್ಥಪೂರ್ಣವಾಗಿರಬೇಕು. ಶುದ್ಧವಾಗಿ ಮಾತನಾಡುವುದೂ, ಬರೆಯುವುದೂ ಉತ್ತಮ ವಿದ್ಯಾವಂತನ ಲಕ್ಷಣವಾಗಿದೆ. ವಿದ್ಯಾವಂತನೆನ್ನಿಸಿಕೊಳ್ಳಬೇಕಾದವನು ತಾನು ಬರೆಯುವ ಬರವಣಿಗೆಯನ್ನು ಪೂರ್ಣ ವಿಚಾರಿಸಿ, ಶುದ್ಧವಾಗಿ ಬರೆಯಬೇಕಾಗುವುದು; ಅಲ್ಲದೆ ಅವನು ಮಾತನಾಡುವುದೂ ಅರ್ಥಪೂರ್ಣವಾಗಿರಬೇಕು. ಶಬ್ದ ಮತ್ತು ಶಬ್ದಗಳ ಸಂಬಂಧ ಹೀಗೆ ಹೀಗೆಯೇ ಇರಬೇಕೆಂಬುದನ್ನು ವ್ಯಾಕರಣ ಶಾಸ್ತ್ರವು ಗೊತ್ತುಪಡಿಸುವುದು. ಆದುದರಿಂದ ಶುದ್ಧವಾಗಿ, ಅರ್ಥಪೂರ್ಣವಾಗಿ ಮಾತನಾಡುವ ಮತ್ತು ಬರೆಯುವ ಶಕ್ತಿಯನ್ನು ಪಡೆಯಬೇಕಾದರೆ ಅವಶ್ಯವಾಗಿ ವ್ಯಾಕರಣಶಾಸ್ತ್ರವನ್ನು ಅಭ್ಯಾಸ ಮಾಡಲೇ ಬೇಕಾಗುವುದು. ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಆಯಾಯ ಭಾಷೆಗಳ ಸ್ವರೂಪವನ್ನು ಅವುಗಳ ವ್ಯಾಕರಣಶಾಸ್ತ್ರವನ್ನು ಅಭ್ಯಾಸ ಮಾಡಬೇಕು. ಕನ್ನಡ ಭಾಷೆಯನ್ನು ಕಲಿಯುವವರು ಕನ್ನಡ ವ್ಯಾಕರಣವನ್ನು ಅವಶ್ಯವಾಗಿ ಓದಿ, ಅದರ ಶಬ್ದಗಳ ಶುದ್ಧ ರೂಪಗಳನ್ನೂ, ಅವುಗಳ ಸಂಬಂಧವನ್ನೂ ಸ್ಪಷ್ಟವಾಗಿ ತಿಳಿಯಬೇಕಾಗುವುದು.
ಸರ್ವ ವ್ಯವಹಾರಗಳಿಗೆ ಮೂಲವಾದುದು ಶಬ್ದಾರ್ಥಗಳ ನಿರ್ಣಯವೇ ಆಗಿದೆಯೆಂಬುದನ್ನು ಈ ಹಿಂದೆಯೇ ತಿಳಿಸಿದೆ. ವ್ಯಾಕರಣದಿಂದ ಪದ, ಪದದಿಂದ ಅರ್ಥ, ಅರ್ಥದಿಂದ ಜ್ಞಾನವು ಉಂಟಾಗುತ್ತದೆ*. ಭಾಷೆಯಲ್ಲಿ ಬಲ್ಲವನೆನ್ನಿಸಿಕೊಳ್ಳಬೇಕಾದರೆ, ಕೂಲಂಕುಷವಾಗಿ ವ್ಯಾಕರಣಶಾಸ್ತ್ರವನ್ನು ಓದಲೇ ಬೇಕು. ಭಾಷೆಯ ನಿಯಮಗಳನ್ನು ತಿಳಿಯಲೇ ಬೇಕು. ಮನಸ್ಸಿಗೆ ಬಂದ ಹಾಗೆ ಭಾಷೆಯ ಬಳಕೆಯನ್ನು ಮಾಡುತ್ತ ಹೋದರೆ ಕಾಲಾನಂತರದಲ್ಲಿ ಶದ್ಧವಾದ ಭಾಷೆಯ ಸ್ವರೂಪವೇ ಹಾಳಾಗಿ ಹೋಗಬಹುದು. ಶುದ್ಧವಾದ ಭಾಷೆಯನ್ನು ಬೆಳೆಸಿ, ಉಳಿಸಿಕೊಂಡು ಬರುವ ಸತ್ಸಂಪ್ರದಾಯವನ್ನು ಕನ್ನಡ ನಾಡಿನ ಮಕ್ಕಳು ಅನುಸರಿಸಬೇಕು. ನಮ್ಮ ಮಕ್ಕಳು ಶುದ್ಧವಾಗಿ ಬರೆಯುವುದನ್ನೂ, ಮಾತನಾಡುವುದನ್ನೂ ಅಭ್ಯಾಸ ಮಾಡಿ, ಸುಸಂಸ್ಕೃತ ಜನಾಂಗವೆಂದೆನಿಸಿಕೊಳ್ಳಬೇಕು. ಪ್ರೌಢಶಾಲೆಗಳಲ್ಲಿ ಓದುವ ಮಕ್ಕಳು ಈ ವ್ಯಾಕರಣದಲ್ಲಿರುವ ಎಲ್ಲ ನಿಬಂಧನೆಗಳನ್ನೂ ಚೆನ್ನಾಗಿ ಅರಿಯಬೇಕೆಂಬ ಮುಖ್ಯೋದ್ಧೇಶದಿಂದ ಈ ಪುಸ್ತಕವನ್ನು ರಚಿಸಲಾಗಿದೆ.
* * *
ಕನ್ನಡ ವ್ಯಾಕರಣಕಾರರು ಮತ್ತು ಅವರ ಗ್ರಂಥಗಳು
ಕನ್ನಡ ಭಾಷೆ ಪ್ರಾಚೀನವಾದುದು. ಇದು ದಕ್ಷಿಣಭಾರತದಲ್ಲಿ ಪ್ರಸಿದ್ಧವಾಗಿರುವ ದ್ರಾವಿಡ ಭಾಷೆಗಳ ವರ್ಗಕ್ಕೆ ಸೇರಿದುದು. ತಮಿಳು, ತೆಲುಗು, ಮಲಯಾಳ, ತುಳುಗಳೂ ಆ ವರ್ಗಕ್ಕೇ ಸೇರಿದವುಗಳು. ಈ ಐದೂ ಭಾಷೆಗಳು ಒಬ್ಬಳೇ ತಾಯಿಯಿಂದ ಜನ್ಮವೆತ್ತಿದ ಅಕ್ಕತಂಗಿಯರಿದ್ದ ಹಾಗೆ. ಸುಮಾರು ೨ ಸಾವಿರ ವರ್ಷಗಳಿಂದಲೂ ಕನ್ನಡ ಎಂಬ ನಾವು ಮಾತನಾಡುವ ಭಾಷೆ ಬಳಕೆಯಲ್ಲಿದೆ. ಪ್ರಾಚೀನಕಾಲದ ಈ ಕನ್ನಡಭಾಷೆಯನ್ನು ನಾವು ಹಳಗನ್ನಡ ಎಂದು ಕರೆಯುತ್ತೇವೆ. ಹಳಗನ್ನಡದ ಈ ಭಾಷೆಯ ಸ್ವರೂಪವನ್ನು ತಿಳಿಯಪಡಿಸಲೋಸುಗ ಅನೇಕ ವ್ಯಾಕರಣ ಗ್ರಂಥಗಳನ್ನು ಪ್ರಸಿದ್ಧ ವಿದ್ವಾಂಸರನೇಕರು ಬರೆದಿದ್ದಾರೆ. ಅವರ ಸಂಕ್ಷೇಪ ಪರಿಚಯವನ್ನು ಈ ಕೆಳಗೆ ಕೊಡಲಾಗಿದೆ.
(೧) ೨ನೆಯ ನಾಗವರ್ಮ
ಕ್ರಿ.ಶ.ಸು.೧೧೪೫ ರಲ್ಲಿದ್ದ ನಾಗವರ್ಮನೆಂಬುವನು ‘ಕರ್ನಾಟಕ ಭಾಷಾ ಭೂಷಣ’, ‘ಕಾವ್ಯಾವಲೋಕನ’ಗಳೆಂಬೆರಡು ಗ್ರಂಥಗಳನ್ನು ಬರೆದನು. ಕವ್ಯಾವಲೋಕನದಲ್ಲಿರುವ ೧ನೆಯ ಭಾಗದಲ್ಲಿ ಶಬ್ದಸ್ಮೃತಿ ಎಂಬ ಹೆಸರಿನಿಂದ ಬರೆದ ವಿಚಾರವೇ ವ್ಯಾಕರಣಶಾಸ್ತ್ರಕ್ಕೆ ಸಂಬಂಧಿಸಿ ದುದಾಗಿದೆ. ಈ ಶಬ್ದಸ್ಮೃತಿಯಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ-ಎಂಬ ೫ ಭಾಗಗಳಿದ್ದು, ಬಹು ಸಂಕ್ಷೇಪವಾಗಿ ಹಳಗನ್ನಡ ವ್ಯಾಕರಣ ವಿಷಯಗಳನ್ನು ಅದರಲ್ಲಿ ವಿವರಿಸಲಾಗಿದೆ. ಕರ್ನಾಟಕಭಾಷಾಭೂಷಣ ಎಂಬ ಗ್ರಂಥವು ಕನ್ನಡ ವ್ಯಾಕರಣಗ್ರಂಥವಾದರೂ ಸಂಸ್ಕೃತಭಾಷೆಯಲ್ಲಿ ಬರೆಯಲ್ಪಟ್ಟಿದೆ. ಈ ಪುಸ್ತಕದಿಂದ ಸಂಸ್ಕೃತವನ್ನು ಬಲ್ಲವರೂ ಕನ್ನಡ ವ್ಯಾಕರಣ ತಿಳಿಯಲು ಹೆಚ್ಚು ಅನುಕೂಲವಾಗಿದೆ. ಅಲ್ಲದೆ ಕನ್ನಡವೂ ಸಂಸ್ಕೃತದಷ್ಟೇ ಮಹತ್ವದ ಭಾಷೆಯೆಂಬುದನ್ನು ತೋರಿಸಿಕೊಡಲು ಸಾಧ್ಯವಾಗಿದೆ.
(೨) ಕೇಶಿರಾಜ
ಕ್ರಿ.ಶ.ಸು. ೧೨೬೦ರಲ್ಲಿದ್ದ ಕೇಶಿರಾಜ ಎಂಬುವನು ಶಬ್ದಮಣಿದರ್ಪಣ ಎಂಬ ಹೆಸರಿನ ಕನ್ನಡ ವ್ಯಾಕರಣಗ್ರಂಥವನ್ನು ರಚಿಸಿದನು. ಇದು ಸಮಗ್ರ ಹಳಗನ್ನಡ ಭಾಷೆಯ ಸ್ವರೂಪವನ್ನು ತಿಳಿಯಬೇಕೆನ್ನುವವರಿಗೆ ಉತ್ತಮ ಕೈಗನ್ನಡಿಯಂತಿದೆ. ಇವನ ತಂದೆಯಾದ ಮಲ್ಲಿಕಾರ್ಜುನ ಎಂಬುವನೂ, ಸೋದರಮಾವನಾದ ಜನ್ನ ಎಂಬುವನೂ ದೊಡ್ಡ ಕವಿಗಳು. ತಾತನಾದ (ತಾಯಿಯ ತಂದೆ) ಕವಿಸುಮನೋಬಾಣ ಎಂಬುವನೂ ಮಹಾವಿದ್ವಾಂಸ. ಇಂಥ ಮಹಾ ವಿದ್ವಾಂಸರ ಪರಂಪರೆಯಲ್ಲಿ ಹುಟ್ಟಿದ ಕೇಶಿರಾಜನೂ ಮಹಾವಿದ್ವಾಂಸನೇ ಆಗಿದ್ದನೆಂಬುದು ಅವನು ಬರೆದ ಶಬ್ದಮಣಿದರ್ಪಣವೆಂಬ ವ್ಯಾಕರಣ ಗ್ರಂಥದಿಂದ ಗೊತ್ತಾಗುವುದು. ಈ ವ್ಯಾಕರಣ ಗ್ರಂಥದಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ, ಅವ್ಯಯ ಎಂಬ ಎಂಟು ಅಧ್ಯಾಯಗಳಿವೆ. ಗ್ರಂಥದ ಕೊನೆಯಲ್ಲಿರುವ ಪ್ರಯೋಗಸಾರವೆಂಬ ಅಧ್ಯಾಯವು ಶಬ್ದಾರ್ಥನಿರ್ಣಯವನ್ನು ತಿಳಿಯಲು ಉಪಯುಕ್ತವಾಗಿದೆ. ವ್ಯಾಕರಣದ ಸೂತ್ರಗಳೆಲ್ಲ ಕಂದಪದ್ಯದಲ್ಲಿವೆ. ಒಟ್ಟು ೩೨೨ ಸೂತ್ರಗಳಿವೆ.
(೩) ಭಟ್ಟಾಕಳಂಕದೇವ
ಕ್ರಿ.ಶ. ೧೬೦೪ರ ಸುಮಾರಿನಲ್ಲಿದ್ದ ಭಟ್ಟಾಕಳಂಕದೇವನೆಂಬುವನು ಶಬ್ದಾನುಶಾಸನ ಎಂಬ ಹೆಸರಿನ ಬಹುಪ್ರೌಢವಾದ ಕನ್ನಡ ವ್ಯಾಕರಣಗ್ರಂಥವನ್ನು ಬರೆದನು. ಆದರೆ ಇದು ಸಂಸ್ಕೃತದಲ್ಲಿದೆ. ಈಗಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಾಡುವಳ್ಳಿ (ಸಂಗೀತಪುರ) ಎಂಬ ಊರಿನಲ್ಲಿರುವ ಜೈನರ ಮಠದ ಗುರುವಾಗಿದ್ದ ಅಕಳಂಕದೇವ ಎಂಬುವರು ಭಟ್ಟಾಕಳಂಕನ ಗುರುಗಳು. ಭಟ್ಟಾಕಳಂಕನು ಸಂಸ್ಕೃತ, ಕನ್ನಡ ಈ ಎರಡೂ ಭಾಷೆಗಳಲ್ಲಿ ಮಹಾವಿದ್ವಾಂಸ ನಾಗಿದ್ದನು. ಕನ್ನಡಭಾಷೆಯೂ ಸಂಸ್ಕೃತದಂತೆ ಯೋಗ್ಯ ಪುರಸ್ಕಾರ ಪಡೆಯತಕ್ಕ ಭಾಷೆಯೆಂಬು ದನ್ನು ಆಗಿನ ಸಂಸ್ಕೃತಭಾಷಾವಿದ್ವಾಂಸರಿಗೆ ತೋರಿಸಿಕೊಡುವ ಉದ್ದೇಶದಿಂದ ಈ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದುದು ಕನ್ನಡ ಭಾಷೆಗೊಂದು ದೊಡ್ಡ ಹೆಮ್ಮೆಯ ವಿಷಯ. ಹಿಂದೆ ಪಾಣಿನಿ ಮತ್ತು ಪತಂಜಲಿ ಮಹರ್ಷಿಗಳು ಸಂಸ್ಕೃತಭಾಷೆಯ ಸಲುವಾಗಿ ಅಷ್ಟಾಧ್ಯಾಯೀ ಮತ್ತು ಮಹಾಭಾಷ್ಯ ಎಂಬ ವ್ಯಾಕರಣಗ್ರಂಥಗಳನ್ನು ಕ್ರಮವಾಗಿ ರಚಿಸಿದ್ದಾರೆ. ಅವುಗಳ ಹಾಗೆಯೇ ಒಂದು ವ್ಯವಸ್ಥಾಬದ್ಧ ಕ್ರಮದಲ್ಲಿ ಭಟ್ಟಾಕಳಂಕದೇವನು ಕನ್ನಡದ ಈ ಶಬ್ದಾನುಶಾಸನ ವ್ಯಾಕರಣದ ಸೂತ್ರಗಳನ್ನೂ, ಅವುಗಳಿಗೆ ಭಾಷ್ಯವನ್ನೂ ರಚಿಸಿದನು.
ಈ ಪೂರ್ವದಲ್ಲಿ ಹೇಳಲ್ಪಟ್ಟ ನಾಗವರ್ಮನ ಶಬ್ದಸ್ಮೃತಿ, ಕರ್ನಾಟಕಭಾಷಾಭೂಷಣ ಗಳೂ, ಕೇಶಿರಾಜನ ಶಬ್ದಮಣಿದರ್ಪಣವೂ, ಭಟ್ಟಾಕಳಂಕದೇವನ ಶಬ್ದಾನುಶಾಸನವೂ ಕನ್ನಡ ಭಾಷೆಯ ಸ್ವರೂಪವನ್ನು ತಿಳಿಸತಕ್ಕ ವ್ಯಾಕರಣ ಗ್ರಂಥಗಳು. ಇಂದಿನ ಕಾಲದಲ್ಲಿ ಬಳಕೆಯಲ್ಲಿರುವ ಕನ್ನಡ ಭಾಷೆಯು ಹಿಂದಿನ ಕಾಲದ ಕನ್ನಡ ಭಾಷೆಗಿಂತ ಬಹಳ ಮಟ್ಟಿಗೆ ಮಾರ್ಪಾಟುಗೊಂಡಿದೆ. ಈ ಕಾಲದ ಭಾಷೆಯನ್ನು ಹೊಸಗನ್ನಡ ಎಂದು ಕರೆಯುತ್ತೇವೆ. ನಮ್ಮ ಮಕ್ಕಳು ಮುಖ್ಯವಾಗಿ ಹೊಸಗನ್ನಡ ಭಾಷೆಯನ್ನು ಕ್ರಮವಾಗಿ ಅಭ್ಯಾಸ ಮಾಡುವುದರ ಜೊತೆಗೆ ಹಳಗನ್ನಡ ಭಾಷೆಯ ಸ್ಥೂಲವಾದ ಪರಿಚಯವನ್ನೂ ಮಾಡಿಕೊಳ್ಳಬೇಕಾಗುತ್ತದೆ. ಆದುದರಿಂದ ಮುಖ್ಯವಾಗಿ ಹೊಸಗನ್ನಡ ವ್ಯಾಕರಣವನ್ನು ಓದುವುದರ ಜೊತೆಗೆ ಹಳಗನ್ನಡವನ್ನು ಪರಿಚಯ ಮಾಡಿಕೊಳ್ಳಲು ಬೇಕಾಗುವ ಕೆಲವು ವ್ಯಾಕರಣದ ಅಂಶಗಳ ಕಡೆಗೆ ಗಮನ ಕೊಡಬೇಕಾಗುವುದು. ಆದರೆ ಹಳಗನ್ನಡ ವ್ಯಾಕರಣವನ್ನೇ ಪ್ರಧಾನವಾಗಿ ತಿಳಿಯಬೇಕಾಗಿಲ್ಲ. ಹಳಗನ್ನಡ ಕಾವ್ಯಗಳನ್ನು ಸ್ವಲ್ಪ ಸ್ವಲ್ಪವಾಗಿ ಓದುತ್ತಿರುವ ನಮ್ಮ ಮಕ್ಕಳು ಆ ಬಗೆಗೆ ಅಲ್ಪಸ್ವಲ್ಪ ತಿಳಿದರೆ ಸಾಕು.
ಲೋಕಂ ತತ್ತ್ವಾಲೋಕದಿ| ನಾಕಾಂಕ್ಷಿಪ ಮುಕ್ತಿಯಕ್ಕುಮದೆ ಬುಧರ್ಗೆ ಫಲಂ ||೧೦|| ವೃತ್ತಿ: (ಪು.ತಿ.ನೋ)
ವೃತ್ತಿ: ವ್ಯಾಕರಣದಿಂ ಪದಸಿದ್ಧಿಯಕ್ಕುಂ: ಪದಸಿದ್ಧಿಯಿಂದರ್ಥಜ್ಞಾನಮಕ್ಕುಂ: ಅರ್ಥಜ್ಞಾನದಿಂ ತತ್ತ್ವವಿಚಾರಮಕ್ಕುಂ: ತತ್ತ್ವಜ್ಞಾನದಿಂ ಮುಕ್ತಿ ದೊರೆಕೊಳ್ಗುಂ ವಿಬುಧರ್ಗದು ಕಾರಣದಿಂ ವ್ಯಾಕರಣಮುಪಾದೇಯಂ. -ಶಬ್ದಮಣಿದರ್ಪಣಂ -ಕೇಶಿರಾಜ
ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಭಾಗ I – ಕನ್ನಡ ವರ್ಣಮಾಲೆ
ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ.
“ನಾನು ಪಾಠಶಾಲೆಗೆ ಹೋಗಿ ಬಂದೆನು.” ಈ ವಾಕ್ಯದಲ್ಲಿ ‘ನಾನು’, ‘ಪಾಠಶಾಲೆಗೆ’, `ಹೋಗಿ’, ‘ಬಂದೆನು’ – ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಅನೇಕ ಅಕ್ಷರಗಳಿವೆ. ‘ನಾನು’ ಎಂಬಲ್ಲಿ ನ್ ಆ ನ್ ಉ ಎಂಬ ಬೇರೆ ಬೇರೆ ಅಕ್ಷರಗಳಿವೆ. ನಾವು ಕನ್ನಡ ಭಾಷೆಯನ್ನು ಮಾತಾಡುವಾಗ ಇಂಥ ೫೦ ಅಕ್ಷರಗಳನ್ನು ಬಳಸುತ್ತೇವೆ. ಕನ್ನಡದ ಈ ೫೦ ಅಕ್ಷರಗಳ ಮಾಲೆಗೇ ವರ್ಣಮಾಲೆ ಅಥವಾ ‘ಅಕ್ಷರಮಾಲೆ’ ಎನ್ನುತ್ತೇವೆ.
ಪಾಠಶಾಲೆ ಎಂಬ ಪದದಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಈಗ ನೋಡೋಣ. ಪ್‌ಆ, ಠ್‌ಅ, ಶ್‌ಆ, ಲ್‌ಎ_ ಹೀಗೆ ಎಂಟು ಅಕ್ಷರಗಳು ಈ ಪದದಲ್ಲಿ ಇದ್ದ ಹಾಗಾಯಿತು. ಪ್, ಠ್, ಶ್, ಲ್_ ಹೀಗೆ ಈ ನಾಲ್ಕು ಅಕ್ಷರಗಳನ್ನು ಅವುಗಳ ಮುಂದೆ ಇರುವ ಆ, ಅ, ಆ, ಎ ಎಂಬ ಈ ನಾಲ್ಕು ಅಕ್ಷರಗಳನ್ನು ಉಚ್ಚಾರ ಮಾಡಿದಂತೆ ಸುಲಭವಾಗಿ ಉಚ್ಚಾರ ಮಾಡಲಾಗುವುದಿಲ್ಲ. ಇವುಗಳನ್ನು ಉಚ್ಚಾರ ಮಾಡಲು ಮುಂದೆ ಆ ಇ ಏ_ ಇತ್ಯಾದಿ ಸ್ವರಗಳು ಬೇಕೇ ಬೇಕು. ಅಥವಾ ಹಿಂದಾದರೂ ಸ್ವರವಿರಬೇಕು. ಹೇಗೆಂದರೆ ಪ್ ಇದರ ಹಿಂದೆ ಆ ಸ್ವರವಿದ್ದರೆ ಆಪ್ ಎನ್ನಬಹುದು. ಮುಂದೆ ಇದ್ದರೆ ಪ ಎನ್ನಬಹುದು, ಅದಿಲ್ಲದೆ ಪ್ ಠ್ ಶ್ ಲ್ ಹೀಗೆ ಬರೆದರೆ ಶಬ್ದವೂ ಆಗುವುದಿಲ್ಲ, ಉಚ್ಚಾರ ಮಾಡಲೂ ಆಗುವುದಿಲ್ಲ. ಆ, ಇ, ಎ, ಒ – ಇಂಥ ಅಕ್ಷರಗಳನ್ನಾದರೋ ಸ್ವತಂತ್ರವಾಗಿ ಉಚ್ಚಾರ ಮಾಡಬಹುದು. ಆದ್ದರಿಂದ_
(೧) ಸ್ವತಂತ್ರವಾಗಿ ಉಚ್ಚಾರಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತೇವೆ.
(೨) ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.
ಈ ಸ್ವರ ವ್ಯಂಜನಗಳಲ್ಲದೆ ಇನ್ನೊಂದು ಬಗೆಯ ಅಕ್ಷರಗಳಿವೆ. ಅವುಗಳನ್ನು ನೋಡಿರಿ-
ರಂಗ ಎಂಬಲ್ಲಿ ರ್ ಅ ೦ ಗ್ ಅ – ಇಷ್ಟು ಅಕ್ಷರಗಳಿವೆ. ಇಲ್ಲಿ ಅಕಾರದ ಮುಂದೆ ಸೊನ್ನೆಯೊಂದಿದೆ. ಆದರೆ ಅದು ಗಣಿತಪಾಠದಲ್ಲಿ ಬರುವ ಸೊನ್ನೆಯಲ್ಲ. ಅದಕ್ಕೆ ಭಾಷೆಯಲ್ಲಿ ಅನುಸ್ವಾರ ಎನ್ನುತ್ತೇವೆ, ಇದರ ಹಾಗೆಯೇ ದುಃಖ ಎಂಬ ಶಬ್ದದಲ್ಲಿ ದ್ ಉ ಃ ಖ್ ಅ ಎಂಬ ಅಕ್ಷರಗಳಿವೆಯಷ್ಟೆ. ಉಕಾರದ ಮುಂದೆ ಒಂದರ ಮೇಲೊಂದು ಸೊನ್ನೆಗಳನ್ನು ಃ ಹೀಗೆ ಬರೆದಿರುವ ಅಕ್ಷರವೇ ವಿಸರ್ಗ ಎಂಬ ಹೆಸರಿನದು. ಂ ಹೀಗೆ ಬರೆದಿರುವ ಅನುಸ್ವಾರವನ್ನೂ ಃ ಹೀಗೆ ಬರೆದಿರುವ ವಿಸರ್ಗವನ್ನೂ ಯೋಗವಾಹಗಳೆಂದು ಕರೆಯುತ್ತೇವೆ.
ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ. ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ.
ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ. ಅಂ, ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ ಃ ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ.[1] ಆದ್ದರಿಂದ
(೩) ಸ್ವರಗಳ ಮುಂದೆ ಬರೆದು ಉಚ್ಚರಿಸಲಾಗುವ ಅನುಸ್ವಾರ (ಂ), ವಿಸರ್ಗ (ಃ) ಗಳಿಗೆ ಯೋಗವಾಹಗಳು ಎಂದು ಹೆಸರು.
ಮೇಲೆ ವಿವರಿಸಿದಂತೆ ಅಕ್ಷರಗಳನ್ನು (೧) ಸ್ವರಗಳು, (೨) ವ್ಯಂಜನಗಳು, (೩) ಯೋಗವಾಹಗಳು_ಎಂದು ಮೂರು ಭಾಗ ಮಾಡಬಹುದು. ಹಾಗಾದರೆ ಅವು ಯಾವುವು? ಎಂಬುದನ್ನು ಕ್ರಮವಾಗಿ ತಿಳಿಯೋಣ.
(೧) ಸ್ವರಗಳು
ಅ ಆ ಇ ಈ ಉ ಊ ಋ ೠ[2] ಎ ಏ ಐ ಒ ಓ ಔ
ಎಂದು ಒಟ್ಟು ಸ್ವರಗಳು ಹದಿನಾಲ್ಕು (೧೪)
(೨) ವ್ಯಂಜನಗಳು
ಕ್
ಚ್
ಟ್
ತ್
ಪ್
| <><><><><><>
>
ಖ್
ಛ್
ಠ್
ಥ್
ಫ್
| <><><><><><>
>
ಗ್
ಜ್
ಡ್
ದ್
ಬ್
| <><><><><><>
>
ಘ್
ಝ್
ಢ್
ಧ್
ಭ್
| <><><><><><>
>
ಙ
ಞ
ಣ್
ನ್
ಮ್
| <><><><><><>
>
-
-
-
-
-
| <><><><><><>
>
ಕವರ್ಗ – ೫
ಚವರ್ಗ – ೫
ಟವರ್ಗ – ೫
ತವರ್ಗ – ೫
ಪವರ್ಗ – ೫
| <><><><><><>
>
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್
| <><><><><><>
>
- ೯
| <><><><><><>
>
(೩) ಯೋಗವಾಹಗಳು*
ಅನುಸ್ವಾರ (ಂ) ವಿಸರ್ಗ (ಃ) – ೨
(೪) ೧೪ ಸ್ವರಗಳು, ೩೪ ವ್ಯಂಜನಗಳು, ೨ ಯೋಗವಾಹಗಳು; ಒಟ್ಟು ೫೦ ಅಕ್ಷರಗಳು ಕನ್ನಡ ಭಾಷೆಯಲ್ಲಿವೆ. ಇವಕ್ಕೆ ಕನ್ನಡ ವರ್ಣಮಾಲೆ ಎನ್ನುವರು.
[1] ಅನುಸ್ವಾರ, ವಿಸರ್ಗಗಳನ್ನು ವ್ಯಂಜನಾಕ್ಷರಗಳ ಮುಂದೆಯೂ ಗ್ಂ, ರ್ಂ ಹೀಗೆಯೂ ಬರೆದು ಉಚ್ಚರಿಸಬಹುದು. ಇಂಥ ಉಚ್ಚಾರ ರೂಢಿಯಲ್ಲಿಲ್ಲ. ವೇದ, ಉಪನಿಷತ್ತುಗಳಲ್ಲಿ ಮಾತ್ರ ಉಂಟು.
[2] ೠ ಎಂಬ ಸ್ವರದಿಂದ ಕೂಡಿದ ಶಬ್ದಗಳು ಕನ್ನಡದ ಮಾತುಗಳಲ್ಲಿ ಬರುವುದೇ ಇಲ್ಲವಾದ್ದರಿಂದ ಇದನ್ನು ಕೈಬಿಟ್ಟರೂ ಹಾನಿಯಿಲ್ಲ. ಆಗ ಒಟ್ಟು ಅಕ್ಷರಗಳ ಸಂಖ್ಯೆ ೫೦ ಕ್ಕೆ ಪ್ರತಿಯಾಗಿ ೪೯ ಆಗುವುವು. ಆದರೆ ೫೦ ಅಕ್ಷರಗಳೆಂದು ೠಕಾರವನ್ನು ವರ್ಣಮಾಲೆಯಲ್ಲಿ ಸೇರಿಸಿ ಹೇಳುವುದು ವಾಡಿಕೆ.
* ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ ಅರ್ಥವನ್ನೂ ಕೊಡುತ್ತವೆ. ಆದ್ದರಿಂದ ಯೋಗವಾಹವೆಂದರೆ, ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.
ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಭಾಗ II – ಸ್ವರಗಳ ವಿಚಾರ
ಮೇಲೆ ಹೇಳಿದ ೧೪ ಸ್ವರಗಳಲ್ಲಿ ಅ, ಇ, ಉ, ಋ, ಎ, ಒ ಈ ಆರು ಸ್ವರಗಳನ್ನು ಒಂದು ಮಾತ್ರೆಯ ಕಾಲದಲ್ಲಿ[1] ಉಚ್ಚರಿಸುತ್ತೇವೆ.
(೫) ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಸ್ವರಗಳಿಗೆ ಹ್ರಸ್ವಸ್ವರಗಳೆನ್ನುವರು.
(೬) ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಆ, ಈ, ಊ, ೠ, ಏ, ಐ, ಓ, ಔ ಈ ಎಂಟು ಸ್ವರಗಳನ್ನು ದೀರ್ಘಸ್ವರಗಳೆನ್ನುವರು.
ಮೇಲೆ ಹೇಳಿದ ಸ್ವರಗಳನ್ನೇ ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚುಕಾಲ ಎಳೆದು ಹೇಳುವುದೂ ಉಂಟು.
ಅಣ್ಣಾ೩ ಓಡಿ ಬಾ.
ದೇವರೇ೩ ಕಾಪಾಡು
ಈ ಮಾತುಗಳಲ್ಲಿ ಣ್ ಕಾರದ ಮುಂದಿರುವ ಆ ಕಾರವನ್ನು, ದೇವರೇ ಎಂಬಲ್ಲಿ ರ್ ಕಾರದ ಮುಂದಿರುವ ಏ ಕಾರವನ್ನೂ ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚು ಕಾಲ ಅಂದರೆ ಮೂರು ಮಾತ್ರೆಗಳ ಕಾಲದವರೆಗೆ ಎಳೆದು ಉಚ್ಚರಿಸುತ್ತೇವೆ. ಸಂಬೋಧನೆಯಲ್ಲಿ[2] (ಕರೆಯುವಾಗ) ಕೊನೆಯ ಸ್ವರವನ್ನು ಹೀಗೆ ಮೂರು ಮಾತ್ರೆಗಳ ಕಾಲ ತೆಗೆದುಕೊಂಡು ಉಚ್ಚರಿಸುತ್ತೇವೆ. ಇದೇ ಪ್ಲುತಸ್ವರವೆನಿಸುವುದು.ದೇವರೇ೩ ಕಾಪಾಡು
(೭) ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳೆಲ್ಲ ಪ್ಲುತ ಸ್ವರಗಳೆನಿಸುವುವು[3]
ಉದಾಹರಣೆಗೆ:-
ಅಕ್ಕಾ೩ ಇಲ್ಲಿ ನೋಡು.
ಅಮ್ಮಾ೩ ನನಗೆ ಹಾಲು.
ದೇವರೇ೩ ರಕ್ಷಿಸು.
ಗುರುಗಳೇ೩ ತಮಗೆ ನಮಸ್ಕಾರ.
ಮಕ್ಕಳಿರಾ೩ ಬನ್ನಿರಿ.
ಮರಗಳೇ೩ ನೀವು ಫಲಗಳನ್ನು ಕೊಡಿ.
(ಇಲ್ಲಿ (೩) ಎಂದು ಗುರುತುಮಾಡಿರುವ ಸ್ವರಗಳೇ ಪ್ಲುತಗಳು)
ಹೀಗೆ ಮೇಲೆ ವಿವರಿಸಿದಂತೆ ಸ್ವರಗಳಲ್ಲಿ ಹ್ರಸ್ವ, ದೀರ್ಘ, ಪ್ಲುತಗಳೆಂದು ಮೂರು ರೀತಿ.[1] ಒಂದು ಮಾತ್ರಾ ಕಾಲವೆಂದರೆ ಅ ಎಂಬ ಅಕ್ಷರವನ್ನು ಉಚ್ಚರಿಸಲು ಎಷ್ಟು ಕಾಲವು ಹಿಡಿಯುವುದೋ ಅಷ್ಟು ಕಾಲ. ಅಂದರೆ ಎಳೆದು ಹೇಳದಂತೆ, ಮೊಟಕಾಗಿಯೂ ಹೇಳದಂತೆ ಉಚ್ಚರಿಸಬೇಕು. ಅದು ಎನ್ನುವಾಗ ಅ ಕಾರವನ್ನು ಎಷ್ಟು ಕಾಲದಲ್ಲಿ ಉಚ್ಚರಿಸುವೆವೋ ಅಷ್ಟು ಕಾಲಕ್ಕೆ ಒಂದು ಮಾತ್ರಾ ಕಾಲವೆನ್ನಬಹುದು. ಹೀಗೆ ಮೊಟಕಾಗಿ ೧ ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರವೇ ಹ್ರಸ್ವಸ್ವರವೆನಿಸುವುದು. ಇದೇ ಅಕಾರವನ್ನು ಸ್ವಲ್ಪ ಹೆಚ್ಚು ಎಳೆದರೆ ಆ ಎಂದು ಎರಡು ಮಾತ್ರೆಗಳ ಕಾಲ ತೆಗೆದುಕೊಳ್ಳುವುದು. ಮೂರು ಮಾತ್ರೆಗಳ ಕಾಲದವರೆಗೂ ಎಳೆದು ಹೇಳಬಹುದು.
[2] ಸಂಬೋಧನೆಯೆಂದರೆ ಕರೆಯುವಿಕೆ (ಅಭಿಮುಖೀಕರಣ). ಅಣ್ಣಾ ಎಂದು ಕರೆಯುವಾಗ ಣ ಕಾರದ ಮುಂದಿರುವ ಆ ಕಾರವೇ ಸಂಬೋಧನೆಯ ಸ್ವರ, ಅಣ್ಣ ಬಂದ ಅಣ್ಣಾ ಬಾ ಎಂಬಲ್ಲಿ, ಮೊದಲನೆಯ ಅಣ್ಣ ಎಂಬಲ್ಲಿಯ ಣ ಕಾರದ ಮುಂದಿರುವ ಅಕಾರ ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಿದ ಹ್ರಸ್ವವಾದರೆ, ಅಣ್ಣಾ ಎಂಬಲ್ಲಿಯ ಣಕಾರದ ಮುಂದಿರುವ ಆಕಾರ ಮೂರುಮಾತ್ರೆಯ ಸ್ವರ. ಆ ಸ್ವರಗಳ ಕೆಳಗಡೆ (೩) ಎಂದು ಬರೆದಿರುವುದು ಪ್ಲುತಸ್ವರವೆಂಬ ಗುರುತಿಗಾಗಿ ಮಾತ್ರ.
[3] ಹ್ರಸ್ವ ದೀರ್ಘ ಪ್ಲುತಗಳಿಗೆ ಒಂದು ಸೊಗಸಾದ ಉದಾಹರಣೆ ಕೊಡಬಹುದು. ಕು೧ ಕೂ೨ ಕೂ೩…… ಎಂದು ಕೋಳಿ ಕೂಗಿದುದನ್ನು ನಾವು ಹೀಗೆ ಕೂಗಿತೆನ್ನುತ್ತೇವೆ. ೧ನೆಯ ಕಕಾರದ ಮುಂದಿರುವ ಉ ಕಾರ ಹ್ರಸ್ವವಾದರೆ, ಎರಡನೆಯ ಕಕಾರದ ಮುಂದಿರುವ ಉಕಾರವೇ ದೀರ್ಘ, ಮೂರನೆಯ ಕಕಾರದ ಮುಂದಿರುವ ಉ ಕಾರವೇ ಪ್ಲುತ. ಇವು ಕ್ರಮವಾಗಿ ಒಂದು ಮಾತ್ರೆ, ಎರಡು ಮಾತ್ರೆ, ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಸ್ವರಗಳು.
ಅಧ್ಯಾಯ ೧: ಸಂಜ್ಞಾ ಪ್ರಕರಣ ಸಂಜ್ಞೆಗಳು: ಭಾಗ III- ವ್ಯಂಜನಾಕ್ಷರಗಳು
ಮೇಲೆ ಹೇಳಿದ ೩೪ ವ್ಯಂಜನಗಳಲ್ಲಿ ಮೊದಲಿನ ೨೫ ವ್ಯಂಜನಗಳನ್ನು ಎಂದರೆ: ಕಕಾರದಿಂದ ಮಕಾರದವರೆಗಿನ ವ್ಯಂಜನಗಳನ್ನು ಐದೈದರ ವರ್ಗಗಳನ್ನಾಗಿ ಬರೆಯುತ್ತೇವೆ. ಆದ್ದರಿಂದ ಇವನ್ನು ವರ್ಗೀಯ ವ್ಯಂಜನಗಳು ಎಂದು ಕರೆಯುತ್ತೇವೆ. ಈ ವರ್ಗೀಯ ವ್ಯಂಜನಗಳಲ್ಲಿ ಅಲ್ಪಪ್ರಾಣ[1], ಮಹಾಪ್ರಾಣ ಮತ್ತು ಅನುನಾಸಿಕ ಎಂಬ ಮೂರು ರೀತಿಯ ಅಕ್ಷರಗಳಿವೆ. ಅವುಗಳನ್ನು ಕೆಳಗೆ ನೋಡಿರಿ:-
ವರ್ಗ
|
ಅಲ್ಪಪ್ರಾಣ
|
ಮಹಾಪ್ರಾಣ
|
ಅಲ್ಪಪ್ರಾಣ
|
ಮಹಾಪ್ರಾಣ
|
ಅನುನಾಸಿಕ
|
ಒಟ್ಟು ಅಕ್ಷರಗಳು
|
ಕವರ್ಗ
|
ಕ್
|
ಖ್
|
ಗ್
|
ಘ್
|
ಙ
|
೫
|
ಚವರ್ಗ
|
ಚ್
|
ಛ್
|
ಜ್
|
ಝ್
|
ಞ
|
೫
|
ಟವರ್ಗ
|
ಟ್
|
ಠ್
|
ಡ್
|
ಢ್
|
ಣ್
|
೫
|
ತವರ್ಗ
|
ತ್
|
ಥ್
|
ದ್
|
ಧ್
|
ನ್
|
೫
|
ಪವರ್ಗ
|
ಪ್
|
ಫ್
|
ಬ್
|
ಭ್
|
ಮ್
|
೫
|
೫
|
೫
|
೫
|
೫
|
೫
|
೨೫
|
(೮) ಅಲ್ಪಪ್ರಾಣ:- ಪ್ರತಿಯೊಂದು ವರ್ಗದ ೧ನೆಯ, ೩ನೆಯ ವ್ಯಂಜನಗಳು ಅಲ್ಪಪ್ರಾಣಗಳು
(೯) ಮಹಾಪ್ರಾಣ:- ಪ್ರತಿಯೊಂದು ವರ್ಗದ ೨ನೆಯ, ೪ನೆಯ ವ್ಯಂಜನಗಳು ಮಹಾಪ್ರಾಣಗಳು
(೧೦) ಅನುನಾಸಿಕ:- ಪ್ರತಿಯೊಂದು ವರ್ಗದ ೫ನೆಯ ವ್ಯಂಜನವು ಅನುನಾಸಿಕವೆನಿ ಸುವುದು. ಇವುಗಳ ಉಚ್ಚಾರಣೆಗೆ ಮೂಗಿನ ಸಹಾಯವು ಬೇಕಾಗುವುದರಿಂದ ಇವನ್ನು ಅನುನಾಸಿಕವೆನ್ನುವರು.
ಮೇಲಿನ ಈ ೨೫ ಅಕ್ಷರಗಳನ್ನು ಕವರ್ಗ, ಚವರ್ಗ, ಟವರ್ಗ, ತವರ್ಗಗಳೆಂದು ವಿಭಾಗಿಸಿ ವರ್ಗಾಕ್ಷರಗಳೆಂದು ಹೆಸರಿಟ್ಟರೆ, ಯ್ ರ್ ಲ್ ವ್ ಶ್ ಷ್ ಸ್ ಹ್ ಳ್ ಈ ಒಂಬತ್ತು ಅಕ್ಷರಗಳನ್ನು ಯಾವ ವರ್ಗವೂ ಇಲ್ಲದೆ ಹೇಳುತ್ತೇವೆ. ವರ್ಗದ ವ್ಯವಸ್ಥೆ ಇವಕ್ಕೆ ಇಲ್ಲದುದ ರಿಂದ ಇವು ಅವರ್ಗೀಯ ವ್ಯಂಜನಗಳೆನಿಸುವುವು.
(೧೧) ಯಕಾರದಿಂದ ಳ ಕಾರದವರೆಗಿರುವ ೯ ವ್ಯಂಜನಗಳು ಅವರ್ಗೀಯವ್ಯಂಜನಗಳೆ ನಿಸುವುವು.
[1] ಅಲ್ಪಪ್ರಾಣ ಎಂದರೆ ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರ; ಮಹಾಪ್ರಾಣ ವೆಂದರೆ ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರ; ಅನುನಾಸಿಕ ವೆಂದರೆ ಮೂಗಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರ. (ನಾಸಿಕ=ಮೂಗು) (ಪ್ರಾಣ=ಉಸಿರು) (ಅಲ್ಪ=ಸ್ವಲ್ಪ) (ಮಹಾ=ಹೆಚ್ಚು). ನಾಸಿಕವನ್ನು ಅನುಸರಿಸಿ ಉಚ್ಚರಿಸುವ ಅಕ್ಷರವೇ ಅನುನಾಸಿಕ.
No comments:
Post a Comment