Sunday, 3 June 2012


ಅಧ್ಯಾಯ : ನಾಮಪದ ಪ್ರಕರಣ (ನಾಮಪದ-ನಾಮಪ್ರಕೃತಿ-ನಾಮವಿಭಕ್ತಿ ಪ್ರತ್ಯಯ): ಭಾಗ v – ವಿಭಕ್ತಿ ಪ್ರತ್ಯಯಗಳು  ªÀÄÄAzÀĪÀgÉzÀ ¨sÁUÀ

() ಈಗ ಚತುರ್ಥೀ ಸಪ್ತಮೀ ಸಂಬೋಧನೆ ಮೊದಲಾದ ವಿಭಕ್ತಿಪ್ರತ್ಯಯಗಳನ್ನು ಒಂದಕ್ಕಿಂತ ಹೆಚ್ಚಾಗಿ ಹೇಳಿದೆ. ಎಲ್ಲಿ ಎಲ್ಲಿ ಯಾವ ಯಾವ ವಿಭಕ್ತಿಪ್ರತ್ಯಯ ಬರುತ್ತದೆಂಬುದನ್ನು ತಿಳಿಯೋಣ.

(i) ಚತುರ್ಥಿ ಗೆ-ಇಗೆ ಕ್ಕೆ-ಅಕ್ಕೆ ವಿಭಕ್ತಿಗಳು.

() ಗೆ:- ಹರಿಗೆ, ದೊರೆಗೆ, ಲಕ್ಷ್ಮಿಗೆ, ಕೈಗೆ, ಮೈಗೆ, ವಿಧಿಗೆ, ಅತ್ತೆಗೆ, ತಾಯಿಗೆ, ಮನೆಗೆ.

() , ಕಾರಾಂತ ಪ್ರಕೃತಿಗಳಿಗೆ ಸಾಮಾನ್ಯವಾಗಿ ಗೆ ಪ್ರತ್ಯಯ ಬರುವುದು.

() ಇಗೆ:- ರಾಮನಿಗೆ, ಭೀಮನಿಗೆ, ಕಾಮನಿಗೆ, ದೇವರಿಗೆ, ಬ್ರಾಹ್ಮಣನಿಗೆ, ರಾಮರಿಗೆ, ಭೀಮರಿಗೆ, ಕಾಮರಿಗೆ, ಬ್ರಾಹ್ಮಣರಿಗೆ, ದೇವರಿಗೆ, ಕರುವಿಗೆ, ಹಸುವಿಗೆ, ಅಕ್ಕನಿಗೆ, ಕರುಗಳಿಗೆ, ಹಸುಗಳಿಗೆ, ಅಕ್ಕಂದಿರುಗಳಿಗೆ.

(ಸಾಮಾನ್ಯವಾಗಿ ಅಕಾರಂತ, ಉಕಾರಾಂತ, ಪ್ರಕೃತಿಗಳಿಗೆ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳ ಏಕವಚನ, ಬಹುವಚನಗಳೆರಡರಲ್ಲೂ ಇಗೆ ಎಂಬ ಚತುರ್ಥೀವಿಭಕ್ತಿಪ್ರತ್ಯಯ ಬರುವುದು)

() ಕ್ಕೆ:- ನೆಲಕ್ಕೆ, ಹೊಲಕ್ಕೆ, ಕಣಕ್ಕೆ, ತಿಲಕ್ಕೆ, ತೈಲಕ್ಕೆ, ಪುಸ್ತಕಕ್ಕೆ, - ಇತ್ಯಾದಿ.

(ಸಾಮಾನ್ಯವಾಗಿ ಅಕಾರಾಂತ ನಪುಂಸಕಲಿಂಗಕ್ಕೆ ಕ್ಕೆ ಎಂಬ ವಿಭಕ್ತಿಪ್ರತ್ಯಯವು ಬರುವುದು.)

() ಅಕ್ಕೆ:- ಒಂದು+ಅಕ್ಕೆ=ಒಂದಕ್ಕೆ. ಇದರಂತೆ- ಎರಡಕ್ಕೆ, ಹತ್ತಕ್ಕೆ, ಎಷ್ಟಕ್ಕೆ, ಅಷ್ಟಕ್ಕೆ -ಇತ್ಯಾದಿ.

(ಸಾಮಾನ್ಯವಾಗಿ ಅಕ್ಕೆ ಪ್ರತ್ಯಯವು ಕಾರಾಂತಗಳಾದ ನಪುಂಸಕಲಿಂಗ ಪ್ರಕೃತಿಗಳ ಮೇಲೆ ಬರುತ್ತದೆಂದು ತಿಳಿಯಬೇಕು.)

(ii) ಸಂಬೋಧನೆಯ , , ಇರಾ, ಪ್ರತ್ಯಯಗಳು ಎಲ್ಲೆಲ್ಲಿ ಬರುತ್ತವೆಂಬು ದನ್ನು ಗಮನಿಸಿರಿ.

() [9]:- ರಾಮಾ, ಅಣ್ಣಾ, ಭೀಮಾ, ಕೌರವಾ, ಅಕ್ಕಾ, ಇತ್ಯಾದಿ ಅಕಾರಾಂತ ಪುಲ್ಲಿಂಗ, ಸ್ತ್ರೀಲಿಂಗ ಪ್ರಕೃತಿಗಳ ಮೇಲೆ ಸಂಬೋಧನೆಯ ಕಾರವು ಏಕವಚನದಲ್ಲಿ ಮಾತ್ರ ಬರುವುದೆಂದು ತಿಳಿಯಬೇಕು.

() , :- ರಾಮನೇ, ಅಣ್ಣನೇ, ಭೀಮನೇ, ಕೌರವನೇ, ತಾಯಿಯೇ, ಅಜ್ಜಿಯೇಇತ್ಯಾದಿ. ತಂಗೀ, ತಾಯೀಇಲ್ಲಿ ಬಂದಿದೆ.

ಅಕಾರಾಂತ ಪುಲ್ಲಿಂಗದಲ್ಲಿ ನಕಾರಾಗಮ ಬಂದಲ್ಲೆಲ್ಲ ಮತ್ತು ಇಕಾರಾಂತ ಸ್ತ್ರೀಲಿಂಗಗಳಲ್ಲಿ, ನಪುಂಸಕಲಿಂಗಗಳಲ್ಲಿ, ಉಕಾರಾಂತ ಪುಲ್ಲಿಂಗದಲ್ಲಿ ಏ೩ ಎಂಬ ಸಂಬೋಧನಾ ವಿಭಕ್ತಿಯು ಸಾಮಾನ್ಯವಾಗಿ ಎಲ್ಲ ಕಡೆಗೂ ಬರುತ್ತದೆ.

() ಇರಾ:- ಅಣ್ಣಂದಿರಾ, ತಾಯಂದಿರಾ, ರಾಮರುಗಳಿರಾ, ಮರಗಳಿರಾ, ತಾಯಿಯರುಗಳಿರಾ, ಅಕ್ಕಂದಿರುಗಳಿರಾ, ವನಗಳಿರಾ, ವಧುಗಳಿರಾ, ಗಿಡಗಳಿರಾ, ಕಮಲಗಳಿರಾ, ಕೋಗಿಲೆಗಳಿರಾ, ದೇವರುಗಳಿರಾ-ಇತ್ಯಾದಿ.

(ಬಹುವಚನದಲ್ಲಿ ಸಾಮಾನ್ಯವಾಗಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗದ ಎಲ್ಲ ಪ್ರಕೃತಿಗಳ ಮೇಲೂ, ಇರಾ೩ ಪ್ರತ್ಯಯವು ಸೇರುವುದು. ಆಗ ಬಹುವಚನ ಸೂಚಕ ಅರು, ಗಳು, ಅರುಗಳು, ಅಂದಿರು, ಅಂದಿರುಗಳು-ಇತ್ಯಾದಿ ಪ್ರತ್ಯಯಗಳು ಆಗಮಗಳಾಗಿ ಬರುತ್ತವೆ.)

(iii) ಸಪ್ತಮೀಯಲ್ಲಿ ಅಲ್ಲಿ, ಅಲಿ, ಒಳು, -ಎಂದು ನಾಲ್ಕು ವಿಧವಾದ ವಿಭಕ್ತಿ ಪ್ರತ್ಯಯಗಳನ್ನು ಹೇಳಿರುವೆವಷ್ಟೆ. ಅವು ಎಲ್ಲೆಲ್ಲಿ ಬರುವುವೆಂಬುದನ್ನು ಗಮನಿಸಿರಿ.

() ಅಲ್ಲಿ:- ರಾಮನಲ್ಲಿ, ಭೀಮನಲ್ಲಿ, ತಾಯಿಯಲ್ಲಿ, ಅಕ್ಕನಲ್ಲಿ, ಮರದಲ್ಲಿ, ನೆಲದಲ್ಲಿ-ಇತ್ಯಾದಿ.

(ಸಾಮಾನ್ಯವಾಗಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗದ ಎಲ್ಲ ಪ್ರಕೃತಿಗಳ ಮೇಲು ಅಲ್ಲಿ ಎಂಬ ವಿಭಕ್ತಿಪ್ರತ್ಯಯವು ಸೇರುವುದು.)

() ಅಲಿ:- ರಾಮನಲಿ, ಭೀಮನಲಿ, ಮರದಲಿ, ಹೊಲದಲಿ, ನೆಲದಲಿ, ಕಲ್ಲಿನಲಿ, ಮುಳ್ಳಿನಲಿ-ಇತ್ಯಾದಿ.

(ಸಾಮಾನ್ಯವಾಗಿ ನಡುಗನ್ನಡ ಶೈಲಿಯ ಬರವಣಿಗೆಯಲ್ಲಿ ಅಲಿ ಪ್ರತ್ಯಯದ ಪ್ರಯೋಗ ವಿಶೇಷ. ಹೊಸಗನ್ನಡದಲ್ಲೂ ಕೆಲವರು ಪ್ರಯೋಗಿಸುತ್ತಾರೆ. ಇದೂ ಕೂಡ ಸಾಮಾನ್ಯವಾಗಿ ಎಲ್ಲಾ ಪ್ರಕೃತಿಗಳ ಮೇಲೂ ಬರುತ್ತದೆ.)

() ಒಳು:- ರಾಮನೊಳು, ಭೀಮನೊಳು, ಮರದೊಳು, ಕಲ್ಲಿನೊಳು, ಮನೆಯೊಳು, ರಾಮರೊಳು, ಭೀಮರೊಳು, ಮರಗಳೊಳು, ಕಲ್ಲುಗಳೊಳು, ಮನೆಗಳೊಳು, ಅಮ್ಮನೊಳು, ಅಕ್ಕನೊಳು, ಅಮ್ಮಂದಿರೊಳು, ಅಕ್ಕಂದಿರೊಳು-ಹೀಗೆ ಪುಲ್ಲಿಂಗ ಸ್ತ್ರೀಲಿಂಗ, ನಪುಂಸಕಲಿಂಗ ಮೂರರ ಏಕವಚನ, ಬಹುವಚನಗಳಲ್ಲೂ ಒಳು ಸಪ್ತಮೀ ವಿಭಕ್ತಿಯನ್ನು ಬಳಸುವುದುಂಟು. ಮುಖ್ಯವಾಗಿ ನಡುಗನ್ನಡ ಶೈಲಿಯಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ. ಹೊಸಗನ್ನಡದಲ್ಲೂ ಬಳಸುತ್ತಾರೆ.

() :- ಮೇಲೆ, ಕೆಳಗೆ, ಒಳಗೆ, ಹೊರಗೆ, ಹಿಂದೆ, ಮುಂದೆ-ಇತ್ಯಾದಿ ದಿಗ್ವಾಚಕಗಳ ಮೇಲೆ ಎಂಬ ಸಪ್ತಮೀ ವಿಭಕ್ತಿಪ್ರತ್ಯಯವು ಪ್ರಯೋಗಿಸಲ್ಪಡುವುದು.

() ಈಗ, ತಾನು, ನಾನು, ನೀನು, ಏನು ಇತ್ಯಾದಿ ಸರ್ವನಾಮಗಳ ಮೇಲೆ ವಿಭಕ್ತಿಪ್ರತ್ಯಯಗಳು ಸೇರುವಾಗ ಆಗುವ ರೂಪಾಂತರಗಳನ್ನು ನೋಡೋಣ. (ಸರ್ವನಾಮಗಳಿಗೆ ಸಂಬೋಧನಾವಿಭಕ್ತಿ ಪ್ರತ್ಯಯಗಳು ಸೇರುವುದಿಲ್ಲವೆಂಬುದನ್ನು ಜ್ಞಾಪಕದಲ್ಲಿ ಡಬೇಕು.)

() ‘ತಾನುಸರ್ವನಾಮ ಪ್ರಕೃತಿ

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ತಾನು+=ತಾನು
ತಾನು++=ತಾವು
ದ್ವಿತೀಯಾವಿಭಕ್ತಿ
-
ತಾನು+ಅನ್ನು=ತನ್ನನ್ನು
ತಾನು+ಅನ್ನು=ತಮ್ಮನ್ನು
ತೃತೀಯಾವಿಭಕ್ತಿ
-
ತಾನು+ಇಂದ=ತನ್ನಿಂದ
ತಾನು+ಇಂದ=ತಮ್ಮಿಂದ
ಚತುರ್ಥೀವಿಭಕ್ತಿ
-
ತಾನು+ಗೆ=ತನಗೆ
ತಾನು+ಗೆ=ತಮಗೆ
ಪಂಚಮೀವಿಭಕ್ತಿ
-
ತಾನು+ದೆಸೆಯಿಂದ = ತನ್ನದೆಸೆಯಿಂದ
ತಾನು+ದೆಸೆಯಿಂದ = ತಮ್ಮದೆಸೆಯಿಂದ
ಷಷ್ಠೀವಿಭಕ್ತಿ
-
ತಾನು+=ತನ್ನ
ತಾನು+=ತಮ್ಮ
ಸಪ್ತಮೀವಿಭಕ್ತಿ
-
ತಾನು+ಅಲ್ಲಿ=ತನ್ನಲ್ಲಿ
ತಾನು+ಅಲ್ಲಿ=ತಮ್ಮಲ್ಲಿ

ಇದರ ಹಾಗೆಯೇ - ‘ನೀನುಶಬ್ದ

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ನೀನು (ನೀನು+)
ನೀವು
ದ್ವಿತೀಯಾವಿಭಕ್ತಿ
-
ನಿನ್ನನ್ನು
ನಿಮ್ಮನ್ನು
ತೃತೀಯಾವಿಭಕ್ತಿ
-
ನಿನ್ನಿಂದ
ನಿಮ್ಮಿಂದ
ಚತುರ್ಥೀವಿಭಕ್ತಿ
-
ನಿನಗೆ
ನಿಮಗೆ
ಪಂಚಮೀವಿಭಕ್ತಿ
-
ನಿನ್ನ ದೆಸೆಯಿಂದ
ನಿಮ್ಮ ದೆಸೆಯಿಂದ
ಷಷ್ಠೀವಿಭಕ್ತಿ
-
ನಿನ್ನ
ನಿಮ್ಮ
ಸಪ್ತಮೀವಿಭಕ್ತಿ
-
ನಿನ್ನಲ್ಲಿ
ನಿಮ್ಮಲ್ಲಿ

ಇದರ ಹಾಗೆಯೇನಾನುಶಬ್ದ

ವಿಭಕ್ತಿ
ಏಕವಚನ
ಬಹುವಚನ
ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ನಾನು
ನಾವು
ದ್ವಿತೀಯಾವಿಭಕ್ತಿ
-
ನನ್ನನ್ನು
ನಮ್ಮನ್ನು
ತೃತೀಯಾವಿಭಕ್ತಿ
-
ನನ್ನಿಂದ
ನಮ್ಮಿಂದ
ಚತುರ್ಥೀವಿಭಕ್ತಿ
-
ನನಗೆ
ನಮಗೆ
ಪಂಚಮೀವಿಭಕ್ತಿ
-
ನನ್ನ ದೆಸೆಯಿಂದ
ನಮ್ಮ ದೆಸೆಯಿಂದ
ಷಷ್ಠೀವಿಭಕ್ತಿ
-
ನನ್ನ
ನಮ್ಮ
ಸಪ್ತಮೀವಿಭಕ್ತಿ
-
ನನ್ನಲ್ಲಿ
ನಮ್ಮಲ್ಲಿ

ಇದರ ಹಾಗೆಯೇಏನುಶಬ್ದ

ವಿಭಕ್ತಿ
ಏಕವಚನ
(ಏನು ಶಬ್ದದ ಬಹುವಚನ ರೂಪವಿಲ್ಲ)
ಪ್ರಥಮಾವಿಭಕ್ತಿ
-
ಏನು
ದ್ವಿತೀಯಾವಿಭಕ್ತಿ
-
ಏನನ್ನು
ತೃತೀಯಾವಿಭಕ್ತಿ
-
ಏತರಿಂದ
ಚತುರ್ಥೀವಿಭಕ್ತಿ
-
ಏತಕ್ಕೆ
ಪಂಚಮೀವಿಭಕ್ತಿ
-
ಏತರ ದೆಸೆಯಿಂದ
ಷಷ್ಠೀವಿಭಕ್ತಿ
-
ಏತರ
ಸಪ್ತಮೀವಿಭಕ್ತಿ
-
ಏತರಲ್ಲಿ

ಮೇಲಿನ ತಾನು, ನಾನು, ನೀವು, ಏನು ಶಬ್ದಗಳ ಸಿದ್ಧರೂಪ ನೋಡಿದರೆ-ತಾನು, ನೀನು, ನಾನು ಶಬ್ದಗಳು ಪ್ರಥಮಾವಿಭಕ್ತಿಯನ್ನುಳಿದು ಉಳಿದ ವಿಭಕ್ತಿಪ್ರತ್ಯಯಗಳು ಸೇರುವಾಗ ಕ್ರಮವಾಗಿ ತನ್ನ, ನಿನ್ನ, ನನ್ನ-ಎಂಬ ರೂಪ ಧರಿಸಿ ವಿಭಕ್ತಿಪ್ರತ್ಯಯಗಳನ್ನು ಹೊಂದುತ್ತವೆ. ಚತುರ್ಥೀವಿಭಕ್ತಿ ಪ್ರತ್ಯಯ ಸೇರುವಾಗ ಮಾತ್ರ ತನ, ನಿನ, ನನ-ರೂಪ ಧರಿಸುತ್ತವೆ. ಏನು ಎಂಬ ಪ್ರಶ್ನಾರ್ಥಕ ಸರ್ವನಾಮವು ಪ್ರಥಮಾ, ದ್ವಿತೀಯಾ, ಚತುರ್ಥೀ ವಿಭಕ್ತಿಗಳನ್ನುಳಿದು ಉಳಿದ ಕಡೆಗೆ ಏತರ ಎಂದೂ, ದ್ವಿತೀಯೆಯಲ್ಲಿ ಏನು ಎಂದೂ, ಚತುರ್ಥೀಯಲ್ಲಿ ಮಾತ್ರ ಏತ ಎಂದೂ ರೂಪ ಧರಿಸಿ ವಿಭಕ್ತಿಪ್ರತ್ಯಯ ಹೊಂದುತ್ತವೆ.

() ದೊಡ್ಡದು, ಸಣ್ಣದು ಮೊದಲಾದ ಗುಣವಾಚಕಗಳು ವಿಭಕ್ತಿಪ್ರತ್ಯಯಗಳನ್ನು ಹೊಂದುವಾಗ ಆಗುವ ವ್ಯಾಕರಣ ಕ್ರಿಯೆಯನ್ನು ಕೆಳಗೆ ನೋಡಿರಿ:-

() ದೊಡ್ಡದು ಶಬ್ದ ಪುಲ್ಲಿಂಗದಲ್ಲಿ:-

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾ
-
ದೊಡ್ಡ+ಅವನು+ = ದೊಡ್ಡವನು
ದೊಡ್ಡ+ಅವರು+ = ದೊಡ್ಡವರು
ದ್ವಿತೀಯಾ
-
ದೊಡ್ಡ+ಅವನು+ಅನ್ನು=ದೊಡ್ಡವನನ್ನು
ದೊಡ್ಡ+ಅವರು+ಅನ್ನು = ದೊಡ್ಡವರನ್ನು
ತೃತೀಯಾ
-
ದೊಡ್ಡ+ಅವನು+ಇಂದ = ದೊಡ್ಡವನಿಂದ
ದೊಡ್ಡ+ಅವರು+ಇಂದ = ದೊಡ್ಡವರಿಂದ
ಚತುರ್ಥೀ
-
ದೊಡ್ಡ+ಅವನು+ಇಗೆ = ದೊಡ್ಡವನಿಗೆ
ದೊಡ್ಡ+ಅವರು+ಇಗೆ = ದೊಡ್ಡವರಿಗೆ
ಪಂಚಮೀ
-
ದೊಡ್ಡ+ಅವನು+ದೆಸೆಯಿಂದ = ದೊಡ್ಡವನ ದೆಸೆಯಿಂದ
ದೊಡ್ಡ+ಅವರು+ದೆಸೆಯಿಂದ = ದೊಡ್ಡವರ ದೆಸೆಯಿಂದ
ಷಷ್ಠೀ
-
ದೊಡ್ಡ+ಅವನು+=ದೊಡ್ಡವನ
ದೊಡ್ಡ+ಅವರು+=ದೊಡ್ಡವರ
ಸಪ್ತಮೀ
-
ದೊಡ್ಡ+ಅವನು+ಅಲ್ಲಿ = ದೊಡ್ಡವನಲ್ಲಿ
ದೊಡ್ಡ+ಅವರು+ಅಲ್ಲಿ = ದೊಡ್ಡವರಲ್ಲಿ
ಸಂಬೋಧನಾ
-
ದೊಡ್ಡ+ಅವನು+=ದೊಡ್ಡವನೇ
ದೊಡ್ಡ+ಅವರು+=ದೊಡ್ಡವರೇ

() ಸಣ್ಣದು ಶಬ್ದ ಪುಲ್ಲಿಂಗದಲ್ಲಿ:-

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾ
-
ಸಣ್ಣ+ಅವನು+=ಸಣ್ಣವನು
ಸಣ್ಣ+ಅವರು+=ಸಣ್ಣವರು
ದ್ವಿತೀಯಾ
-
ಸಣ್ಣ+ಅವನು+ಅನ್ನು = ಸಣ್ಣವನನ್ನು
ಸಣ್ಣ+ಅವರು+ಅನ್ನು = ಸಣ್ಣವರನ್ನು
ತೃತೀಯಾ
-
ಸಣ್ಣ+ಅವನು+ಇಂದ = ಸಣ್ಣವನಿಂದ
ಸಣ್ಣ+ಅವರು+ಇಂದ = ಸಣ್ಣವರಿಂದ
ಚತುರ್ಥೀ
-
ಸಣ್ಣ+ಅವನು+ಇಗೆ=ಸಣ್ಣವನಿಗೆ
ಸಣ್ಣ+ಅವರು+ಇಗೆ=ಸಣ್ಣವರಿಗೆ
ಪಂಚಮೀ
-
ಸಣ್ಣ+ಅವನು+ದೆಸೆಯಿಂದ = ಸಣ್ಣವನ ದೆಸೆಯಿಂದ
ಸಣ್ಣ+ಅವರು+ದೆಸೆಯಿಂದ = ಸಣ್ಣವರ ದೆಸೆಯಿಂದ
ಷಷ್ಠೀ
-
ಸಣ್ಣ+ಅವನು+=ಸಣ್ಣವನ
ಸಣ್ಣ+ಅವರು+=ಸಣ್ಣವರ
ಸಪ್ತಮೀ
-
ಸಣ್ಣ+ಅವನು+ಅಲ್ಲಿ=ಸಣ್ಣವನಲ್ಲಿ
ಸಣ್ಣ+ಅವರು+ಅಲ್ಲಿ=ಸಣ್ಣವರಲ್ಲಿ
ಸಂಬೋಧನಾ
-
ಸಣ್ಣ+ಅವನು+=ಸಣ್ಣವನೇ
ಸಣ್ಣ+ಅವರು+=ಸಣ್ಣವರೇ

ಇದರ ಹಾಗೆಯೇ ಚಿಕ್ಕ ಶಬ್ದ ಪುಲ್ಲಿಂಗದಲ್ಲಿ:-

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾ
-
ಚಿಕ್ಕ+ಅವನು+=ಚಿಕ್ಕವನು
ಚಿಕ್ಕ+ಅವರು+=ಚಿಕ್ಕವರು
ದ್ವಿತೀಯಾ
-
ಚಿಕ್ಕ+ಅವನು+ಅನ್ನು = ಚಿಕ್ಕವನನ್ನು
ಚಿಕ್ಕ+ಅವರು+ಅನ್ನು=ಚಿಕ್ಕವರನ್ನು
ತೃತೀಯಾ
-
ಚಿಕ್ಕ+ಅವನು+ಇಂದ = ಚಿಕ್ಕವನಿಂದ
ಚಿಕ್ಕ+ಅವರು+ಇಂದ = ಚಿಕ್ಕವರಿಂದ
ಚತುರ್ಥೀ
-
ಚಿಕ್ಕ+ಅವನು+ಇಗೆ=ಚಿಕ್ಕವನಿಗೆ
ಚಿಕ್ಕ+ಅವರು+ಇಗೆ=ಚಿಕ್ಕವರಿಗೆ
ಪಂಚಮೀ
-
ಚಿಕ್ಕ+ಅವನು+ದೆಸೆಯಿಂದ = ಚಿಕ್ಕವನ ದೆಸೆಯಿಂದ
ಚಿಕ್ಕ+ಅವರು+ದೆಸೆಯಿಂದ = ಚಿಕ್ಕವರ ದೆಸೆಯಿಂದ
ಷಷ್ಠೀ
-
ಚಿಕ್ಕ+ಅವನು+=ಚಿಕ್ಕವನ
ಚಿಕ್ಕ+ಅವರು+=ಚಿಕ್ಕವರ
ಸಪ್ತಮೀ
-
ಚಿಕ್ಕ+ಅವನು+ಅಲ್ಲಿ=ಚಿಕ್ಕವನಲ್ಲಿ
ಚಿಕ್ಕ+ಅವರು+ಅಲ್ಲಿ=ಚಿಕ್ಕವರಲ್ಲಿ
ಸಂಬೋಧನಾ
-
ಚಿಕ್ಕ+ಅವನು+=ಚಿಕ್ಕವನೇ
ಚಿಕ್ಕ+ಅವರು+=ಚಿಕ್ಕವರೇ

ಮೇಲಿನ ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳು ಪುಲ್ಲಿಂಗದಲ್ಲಿ ದೊಡ್ಡ, ಸಣ್ಣ, ಚಿಕ್ಕ, ಎಂದಾಗಿ, ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬುದೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುತ್ತವೆ. ಪಂಚಮೀಯಲ್ಲಿ ಅವನು ಎಂಬುದು ಅವನ ಎಂದೂ, ಅವರು ಎಂಬುದು ಅವರ ಎಂದೂ ಉಳಿಯುವುದು.

() ಇವೇ ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳು ಸ್ತ್ರೀಲಿಂಗದಲ್ಲಿ ಹೇಗಾಗುತ್ತವೆಂಬುದನ್ನು ಕೆಳಗೆ ನೋಡಿರಿ:-

() ದೊಡ್ಡದು ಶಬ್ದ ಸ್ತ್ರೀಲಿಂಗದಲ್ಲಿ:-

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾ
-
ದೊಡ್ಡ+ಅವಳು+ = ದೊಡ್ಡವಳು
ದೊಡ್ಡ+ಅವರು+ = ದೊಡ್ಡವರು
ದ್ವಿತೀಯಾ
-
ದೊಡ್ಡ+ಅವಳು+ಅನ್ನು = ದೊಡ್ಡವಳನ್ನು
ದೊಡ್ಡ+ಅವರು+ಅನ್ನು = ದೊಡ್ಡವರನ್ನು
ತೃತೀಯಾ
-
ದೊಡ್ಡ+ಅವಳು+ಇಂದ = ದೊಡ್ಡವಳಿಂದ
ದೊಡ್ಡ+ಅವರು+ಇಂದ = ದೊಡ್ಡವರಿಂದ
ಚತುರ್ಥೀ
-
ದೊಡ್ಡ+ಅವಳು+ಗೆ = ದೊಡ್ಡವಳಿಗೆ
ದೊಡ್ಡ+ಅವರು+ಇಗೆ = ದೊಡ್ಡವರಿಗೆ
ಪಂಚಮೀ
-
ದೊಡ್ಡ+ಅವಳು+ ದೆಸೆಯಿಂದ = ದೊಡ್ಡವಳ ದೆಸೆಯಿಂದ
ದೊಡ್ಡ+ಅವರು+ದೆಸೆಯಿಂದ = ದೊಡ್ಡವರ ದೆಸೆಯಿಂದ
ಷಷ್ಠೀ
-
ದೊಡ್ಡ+ಅವಳು+ = ದೊಡ್ಡವಳ
ದೊಡ್ಡ+ಅವರು+ = ದೊಡ್ಡವರ
ಸಪ್ತಮೀ
-
ದೊಡ್ಡ+ಅವಳು+ಅಲ್ಲಿ = ದೊಡ್ಡವಳಲ್ಲಿ
ದೊಡ್ಡ+ಅವರು+ಅಲ್ಲಿ = ದೊಡ್ಡವರಲ್ಲಿ
ಸಂಬೋಧನಾ
-
ದೊಡ್ಡ+ಅವಳು+ = ದೊಡ್ಡವಳೇ
ದೊಡ್ಡ+ಅವರು+ = ದೊಡ್ಡವರೇ

() ಇದರ ಹಾಗೆಯೇ ಸಣ್ಣದು ಶಬ್ದ ಸ್ತ್ರೀಲಿಂಗದಲ್ಲಿ

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಸಣ್ಣವಳು
ಸಣ್ಣವರು
ದ್ವಿತೀಯಾವಿಭಕ್ತಿ
-
ಸಣ್ಣವಳನ್ನು
ಸಣ್ಣವರನ್ನು
ತೃತೀಯಾವಿಭಕ್ತಿ
-
ಸಣ್ಣವಳಿಂದ
ಸಣ್ಣವರಿಂದ
ಚತುರ್ಥೀವಿಭಕ್ತಿ
-
ಸಣ್ಣವಳಿಗೆ
ಸಣ್ಣವರಿಗೆ
ಪಂಚಮೀವಿಭಕ್ತಿ
-
ಸಣ್ಣವಳ ದೆಸೆಯಿಂದ
ಸಣ್ಣವರ ದೆಸೆಯಿಂದ
ಷಷ್ಠೀವಿಭಕ್ತಿ
-
ಸಣ್ಣವಳ
ಸಣ್ಣವರ
ಸಪ್ತಮೀವಿಭಕ್ತಿ
-
ಸಣ್ಣವಳಲ್ಲಿ
ಸಣ್ಣವರಲ್ಲಿ
ಸಂಬೋಧನಾ
-
ಸಣ್ಣವಳೇ
ಸಣ್ಣವರೇ

() ಚಿಕ್ಕದು ಶಬ್ದ ಸ್ತ್ರೀಲಿಂಗದಲ್ಲಿ (ಮೇಲಿನವುಗಳ ಹಾಗೆಯೇ)

ವಿಭಕ್ತಿ
ಏಕವಚನ
ಬಹುವಚನ
ಪ್ರಥಮಾವಿಭಕ್ತಿ
-
ಚಿಕ್ಕವಳು
ಚಿಕ್ಕವರು
ದ್ವಿತೀಯಾವಿಭಕ್ತಿ
-
ಚಿಕ್ಕವಳನ್ನು
ಚಿಕ್ಕವರನ್ನು
ತೃತೀಯಾವಿಭಕ್ತಿ
-
ಚಿಕ್ಕವಳಿಂದ
ಚಿಕ್ಕವರಿಂದ
ಚತುರ್ಥೀವಿಭಕ್ತಿ
-
ಚಿಕ್ಕವಳಿಗೆ
ಚಿಕ್ಕವರಿಗೆ
ಪಂಚಮೀವಿಭಕ್ತಿ
-
ಚಿಕ್ಕವಳ ದೆಸೆಯಿಂದ
ಚಿಕ್ಕವರ ದೆಸೆಯಿಂದ
ಷಷ್ಠೀವಿಭಕ್ತಿ
-
ಚಿಕ್ಕವಳ
ಚಿಕ್ಕವರ
ಸಪ್ತಮೀವಿಭಕ್ತಿ
-
ಚಿಕ್ಕವಳಲ್ಲಿ
ಚಿಕ್ಕವರಲ್ಲಿ
ಸಂಬೋಧನಾ
-
ಚಿಕ್ಕವಳೇ
ಚಿಕ್ಕವರೇ

ಮೇಲಿನ ಮೂರು ದೊಡ್ಡದು, ಸಣ್ಣದು, ಚಿಕ್ಕದು ಶಬ್ದಗಳ ಸ್ತ್ರೀಲಿಂಗದ ಉದಾಹರಣೆಗಳನ್ನು ನೋಡಿದರೆ, ಕ್ರಮವಾಗಿ ಇವು ದೊಡ್ಡ, ಚಿಕ್ಕ, ಸಣ್ಣ-ಎಂಬ ರೂಪಧರಿಸಿ ವಿಭಕ್ತಿಪ್ರತ್ಯಯ ಹೊಂದುವಾಗ ಅವಳು ಎಂಬುದು ಏಕವಚನದಲ್ಲೂ, ಅವರು ಎಂಬುದು ಬಹುವಚನದಲ್ಲೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಆಗಮಗಳಾಗಿ ಬರುವುವು. ಪಂಚಮೀವಿಭಕ್ತಿಪ್ರತ್ಯಯ ಹತ್ತುವಾಗ ಅವಳು ಎಂಬುದು ಅವಳ ಎಂದೂ, ಅವರು ಎಂಬುದು ಅವರ ಎಂದೂ ಉಳಿಯುವುವು.

No comments:

Post a Comment