Saturday, 2 June 2012


ಅಧ್ಯಾಯ : ಸಂಧಿಪ್ರಕರಣ: ಭಾಗ VI – ಸಾರಾಂಶ

ಇದುವರೆಗೆ ಸಂಸ್ಕೃತ ಸ್ವರಸಂಧಿ ವ್ಯಂಜನಸಂಧಿಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿದಿರುವಿರಿ. ಅದರ ಸಾರಾಂಶವನ್ನು ಕೆಳಗಿನ ಗೆರೆಗಳಿಂದ ಸೂಚಿಸಿರುವ ರೀತಿಯನ್ನು ನೋಡಿ ನೆನಪಿನಲ್ಲಿಡಿರಿ.

ಸಂಸ್ಕೃತ ಸಂಧಿಗಳು
ಸ್ವರಸಂಧಿಗಳು
ವ್ಯಂಜನಸಂಧಿಗಳು
(i)ಸವರ್ಣದೀರ್ಘಸಂಧ
(
ದೀರ್ಘಸ್ವರಾದೇಶ)
(i)ಜಶ್ತ್ವಸಂಧಿ
(
ಜಬಗಡದ ಆದೇಶ)
(ii)ಗುಣಸಂಧಿ
(
, , ಅರ್ ಆದೇಶ)
(ii)ಶ್ಚುತ್ವಸಂಧಿ
(
ಶಕಾರ ಚವರ್ಗಾದೇಶ)
(iii)ವೃದ್ಧಿಸಂಧಿ
(
, ಆದೇಶ)
(iii)ಅನುನಾಸಿಕಸಂಧಿ
(
,,,, ಗಳ ಆದೇಶ)
(iv)ಯಣ್ಸಂಧಿ
(
, , ಆದೇಶ)



ಅಧ್ಯಾಯ : ಸಂಧಿಪ್ರಕರಣ: ಅಭ್ಯಾಸ ಪ್ರಶ್ನೆಗಳು

. ಸಂಧಿಯೆಂದರೇನು?

. ದೇವರು + ಅಲ್ಲಿ, ಊರು + ಊರು, ಜಾತ್ರೆ + ಆಯಿತು, ಗುರು + ಅನ್ನು, ಹೊಲ + ಅನ್ನು ಇದನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.

. ಯಕಾರಾಗಮ ವಕಾರಾಗಮ ಸಂಧಿಗಳು ಎಲ್ಲೆಲ್ಲಿ ಬರುತ್ತವೆ, ತಿಳಿಸಿರಿ.

. ಪಿತೃ + ಅನ್ನು, ಮಾತೃ + ಅನ್ನು, ಮನೆ + ಅನ್ನು, ಗಿರಿ + ಅನ್ನು, ಸಿರಿ + ಅನ್ನು ಇವನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ. ಇಲ್ಲಿ ಲೋಪ ಮಾಡಿದ್ದರೆ ಹೇಗೆ ರೂಪಗಳಾಗುತ್ತಿದ್ದವು?

. ಅವನಲ್ಲಿ, ಊರನ್ನು, ದೇವರಲ್ಲಿ, ಮನೆಯಲ್ಲಿ, ಗುರುವನ್ನು, ಮಾತೃವನ್ನು, ಶತ್ರುವನ್ನು, ಮನವನ್ನು ಪದಗಳಲ್ಲಿರುವ ಸಂಧಿಗಳನ್ನು ಬಿಡಿಸಿ ಬರೆದು ಯಾವ ಯಾವ ಸಂಧಿಗಳೆಂಬುದನ್ನು ಹೆಸರಿಸಿರಿ.

. ಕೆಳಗೆ ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಶಬ್ದದಿಂದ ತುಂಬಿರಿ:-

(i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕತಪ ಗಳಿಗೆ ____________

(ii) ಮಳೆ + ______ = ಮಳೆಗಾಲ, ಇನಿದು + _______ = ಇಂಚರ
ನೀರ್ + ______ = ನೀರ್ವೊನಲ್, ಬೇರ್ + _______ = ಬೇರ್ವೆರಸಿ

(iii) ಎಂಬ ಶಬ್ದದ ಮುಂದೆ ಸ್ವರಗಳು ಬಂದರೆ ____________

(iv) ಸ್ವರದ ಮುಂದೆ ಸ್ವರ ಬಂದರೂ ಕೆಲವು ಕಡೆ ಲೋಪ, ಆಗಮ, ಆದೇಶಗಳು ಆಗುವುದಿಲ್ಲ. ಇದಕ್ಕೆ ___________

(v) ಸ್ವರಕ್ಕೆ ಸ್ವರವು ಪರವಾದಾಗ ಅರ್ಥಕ್ಕೆ ಹಾನಿ ಬಾರದಿದ್ದರೆ __________ ಸ್ವರವು ಲೋಪವಾಗುವುದು.

(vi) _______ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯಕಾರಾಗಮವಾಗುವುದು.

(vii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪಬಮ ಗಳಿಗೆ _______ ವು ಆದೇಶವಾಗಿ ಬರುವುದು.

(viii) ಭಾವಸೂಚಕಾವ್ಯಯಗಳ ಮುಂದೆ ಸ್ವರ ಬಂದರೆ __________

(ix) ಪ್ಲುತಕ್ಕೆ ಸ್ವರ ಪರವಾದರೆ ______________

. ಕೆಳಗಿನ ವಾಕ್ಯಗಳಲ್ಲಿ ದೋಷಗಳಿವೆ. ಅವನ್ನು ತಿದ್ದಿ ಹೇಳಿರಿ:-

(i) ಪ್ಲುತಸ್ವರವೆಂದರೆ, ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಸ್ವರ.

(ii) ಆಗಮ ಸಂಧಿಯೆಂದರೆ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದು.

(iii) ವ್ಯಂಜನಗಳು ಕಾರದಿಂದ ಕಾರದವರೆಗೆ ಹದಿನಾಲ್ಕು.

(iv) ಒಂದು ವ್ಯಂಜನದ ಮುಂದೆ ಇನ್ನೊಂದು ವ್ಯಂಜನ ಬಂದಾಗ ಲೋಪಸಂಧಿಯಾಗುವುದು.

. ಈಕೆಳಗೆ ಬಿಟ್ಟಿರುವ ಸ್ಥಳಗಳ ಮುಂದೆ ಆವರಣದಲ್ಲಿ ಕೊಟ್ಟಿರುವ ಸರಿಯಾದ ಒಂದು ಉತ್ತರವನ್ನು ಆರಿಸಿ ಬರೆಯಿರಿ.

(i) ಊರೂರು= (ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ)

(ii) ಮನೆ+ಅನ್ನು=(ಆಗಮ ಸಂಧಿ, ಆದೇಶಸಂಧಿ, ಲೋಪಸಂಧಿ)

(iii) ಶಬ್ದದ ಮುಂದೆ ಅಕಾರ ಪರವಾದರೆ (ಲೋಪಸಂಧಿ, ಆಗಮಸಂಧಿ, ಸಂಧಿಯಾಗುವುದಿಲ್ಲ)

(iv) ನಿಪಾತಾವ್ಯಯದ ಮುಂದೆ ಸ್ವರ ಬಂದರೆ ಎನಿಸುವುದು. (ಪ್ರಕೃತಿಭಾವ, ಆಗಮ, ಆದೇಶ)

(v) ಇಕಾರಕ್ಕೆ ಸ್ವರ ಪರವಾದರೆ (ಯಕಾರಾಗಮ, ವಕಾರಾಗಮ, ಲೋಪವಾಗುವುದು)

(vi) ಸ್ವರಕ್ಕೆ ಸ್ವರ ಪರವಾದರೆ ಸ್ವರವು ಲೋಪವಾಗುವುದು. (ಪೂರ್ವದ, ಮಧ್ಯದ, ಉತ್ತರದ)

(vii) ಪ್ಲುತಸ್ವರಕ್ಕೆ ಸ್ವರ ಪರವಾದರೆ ಬರುವುದು. (ಯಕಾರಾಗಮ, ವಕಾರಾಗಮ, ಪ್ರಕೃತಿಭಾವ)

(viii) ಪ್ಲುತಸ್ವರವೆಂದರೆ (ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ)

(ix) ಆದೇಶವೆಂದರೆ (ಒಂದು ಅಕ್ಷರದ ಸ್ಥಳದಲ್ಲಿ ಬರುವ ಬೇರೊಂದು ಅಕ್ಷರ, ಹೊಸದಾಗಿ ಬರುವ ಅಕ್ಷರ, ಇಲ್ಲದಂತಾಗುವ ಅಕ್ಷರ)

No comments:

Post a Comment