Saturday 2 June 2012


ಅಧ್ಯಾಯ : ಸಂಧಿಪ್ರಕರಣ: ಭಾಗ IV – ಸಾರಾಂಶ

ಇದುವರೆಗೆ ಕನ್ನಡ ಭಾಷೆಯಲ್ಲಿ ಬರುವ ಲೋಪ, ಆಗಮ, ಆದೇಶ ಸಂಧಿಗಳ ಬಗೆಗೆ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮ ಸಂಧಿಗಳಾಗುತ್ತವೆ. ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದರೆ ಆಗುವ ಆದೇಶ ಸಂಧಿಗಳ ಸ್ಥೂಲಪರಿಚಯ ಮಾಡಿಕೊಂಡಿರಿ. ಅನಂತರ ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇರುವ ಪ್ರಕೃತಿಭಾವವನ್ನೂ ಅರಿತಿರಿ. ಇದನ್ನು ಕೆಳಗೆ ಸೂಚಿಸಿರುವ ರೇಖಾ ಚಿತ್ರಗಳ ಮೂಲಕ ಸ್ಥೂಲವಾಗಿ ನೆನಪಿನಲ್ಲಿ ಇಟ್ಟುಕೊಳ್ಳಿರಿ.

() ಕನ್ನಡ ಸಂಧಿಗಳು
ಲೋಪ ಸ್ವರ+ಸ್ವರ-ಪೂರ್ವದ ಸ್ವರಕ್ಕೆ ಅರ್ಥಹಾನಿಯಾಗದಾಗ ಲೋಪ
ಆಗಮ
ಸ್ವರ+ಸ್ವರ-ಮಧ್ಯದಲ್ಲಿ
ಯಕಾರ ಅಥವಾ
ವಕಾರಾಗಮ
ಆದೇಶ ಸ್ವರ+ವ್ಯಂಜನ, ವ್ಯಂಜನ+ವ್ಯಂಜ
. ಉತ್ತರಪದದ ಆದಿಯ ಗಳು ಗಳಾಗುತ್ತವೆ.
. ಗಳಿಗೆ ವಕಾರ ಆದೇಶವಾಗುತ್ತದೆ.
. ಕಾರಕ್ಕೆ ಗಳು ಆದೇಶವಾಗುತ್ತವೆ.

() ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದಿರುವುದು ಪ್ರಕೃತಿಭಾವ

ಅಧ್ಯಾಯ : ಸಂಧಿಪ್ರಕರಣ: V – ಸಂಸ್ಕೃತ ಸಂಧಿಗಳು

. ಸಂಸ್ಕೃತ ಸ್ವರ ಸಂಧಿಗಳು

() ರಾಮಾಯಣವು ಮಹೋನ್ನತ ಗ್ರಂಥ.

() ಸೂರ್ಯೋದಯ ಸಮಯವು ಅತ್ಯಂತ ಮನೋಹರವಾದುದು.

ಮೇಲಿನ ಎರಡೂ ವಾಕ್ಯಗಳು ಕನ್ನಡ ವಾಕ್ಯಗಳೇ ಅಲ್ಲವೆ? ಆದರೆ ಇದರಲ್ಲಿ ಸಂಸ್ಕೃತದಿಂದ ಬಂದ ಶಬ್ದಗಳೇ ಹೆಚ್ಚಾಗಿವೆ. ರಾಮಾಯಣ ಮಹೋನ್ನತ ಗ್ರಂಥ ಸೂರ್ವೋದಯ ಸಮಯ ಅತ್ಯಂತ ಮನೋಹರ -ಹೀಗೆ ಏಳೂ ಶಬ್ದಗಳು ಸಂಸ್ಕೃತ ಶಬ್ದಗಳೇ ಆಗಿವೆ. ಹೀಗೆ ನಮ್ಮ ಭಾಷೆಯಲ್ಲಿ ಸಾವಿರಾರು ವರ್ಷಗಳಿಂದ ಸಂಸ್ಕೃತದ ಅನೇಕ ಶಬ್ದಗಳು ಬಂದು ಸೇರಿವೆ. ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಲೆಕ್ಕವಿಲ್ಲದಷ್ಟು ಸಂಸ್ಕೃತ ಶಬ್ದಗಳನ್ನು ಸೇರಿಸಿ ಕಾವ್ಯ ಬರೆದಿದ್ದಾರೆ. ಆದ್ದರಿಂದ ಸಂಸ್ಕೃತದಿಂದ ಕನ್ನಡಕ್ಕೆ ಬಂದು ಬಳಸಲ್ಪಡುತ್ತಿರುವ ಶಬ್ದಗಳ ಸಂಧಿಕಾರ್ಯಗಳೇನೆಂಬುದನ್ನು ಕನ್ನಡ ಭಾಷಾಜ್ಞಾನದ ದೃಷ್ಟಿಯಿಂದ ತಿಳಿಯುವುದು ಉಪಯುಕ್ತವಾದುದು.

ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ. ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿ ಸಂಧಿಯಾದರೆ ಕನ್ನಡ ಸಂಧಿಯೇ ಆಗುತ್ತದೆ.

ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾಗಿ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾಗಿ ವ್ಯಂಜನ ಸಂಧಿಗಳೂ ಆಗುವುವು. ಮೊದಲು ಸ್ವರಸಂಧಿಗಳ ವಿಚಾರ ತಿಳಿಯೋಣ.

() ಸವರ್ಣ ದೀರ್ಘ ಸಂಧಿ

() ವಿದ್ಯಾಭ್ಯಾಸ ಮಾಡಿದನು.

() ರಾಮಾಯಣವನ್ನು ಓದು.

() ಹರೀಶ್ವರನು ಕನ್ನಡ ಕವಿ.

() ಗುರೂಪದೇಶವನ್ನು ಪಡೆ.

ವಾಕ್ಯಗಳಲ್ಲಿ ವಿದ್ಯಾಭ್ಯಾಸ ರಾಮಾಯಣ ಹರೀಶ್ವರ ಗುರೂಪದೇಶ ಶಬ್ದಗಳಲ್ಲಿ ಆಗಿರುವ ಸಂಧಿಕಾರರ್ಯಗಳನ್ನು ಗಮನಿಸಿರಿ.

ವಿದ್ಯಾ + ಅಭ್ಯಾಸ = ವಿದ್ಯ್ + + ಭ್ಯಾಸ = ವಿದ್ಯಾಭ್ಯಾಸ ( + )

ಇಲ್ಲಿ ಎಂಬ ಸ್ವರದ ಮುಂದೆ ಎಂಬ ಸ್ವರ ಬಂದಿದೆ. ಎರಡೂ ಸ್ವರಗಳು ಸವರ್ಣಸ್ವರಗಳು[1], ಅಂದರೆ ಸಮಾನ ಸ್ಥಾನದಲ್ಲಿ ಹುಟ್ಟಿದವುಗಳು. ಒಂದು ಹ್ರಸ್ವ, ಒಂದು ದೀರ್ಘ ಅಷ್ಟೆ.

ಇವು ಹೀಗೆ ಒಂದರ ಮುಂದೆ ಒಂದು ಬಂದಾಗ ಅವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಅದರದೇ ಒಂದು ದೀರ್ಘಸ್ವರವು ಬರುವುದು. ಹೀಗೆ ಬರುವುದು ಆದೇಶವೆಂದು ಹಿಂದೆ ತಿಳಿದಿದ್ದೀರಿ. ಇದರ ಹಾಗೆಯೇ ಹರೀಶ್ವರ ಶಬ್ದವು-

ಹರಿ + ಈಶ್ವರ = ಹರ್ + + ಶ್ವರ = ಹರೀಶ್ವರ-ಎಂಬಲ್ಲಿ ( + )

ಕಾರದ ಮುಂದೆ ಕಾರ ಬಂದಿದೆ. ಇವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಎಂಬ ದೀರ್ಘಸ್ವರ ಆದೇಶವಾಗಿ ಬರುವುದು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-

(೨೦) ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

ಉದಾಹರಣೆಗೆ:-

ದೇವ + ಅಸುರ = ದೇವಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(
+ )

ಸುರ + ಅಸುರ = ಸುರಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(
+ )

ಮಹಾ + ಆತ್ಮಾ = ಮಹಾತ್ಮ (ಆಕಾರಕ್ಕೆ ಆಕಾರ ಪರವಾಗಿ ಒಂದು ದೀರ್ಘಸ್ವರ ಆದೇಶ)
(
+ )

ಕವಿ + ಇಂದ್ರ = ಕವೀಂದ್ರ (ಇಕಾರಕ್ಕೆ ಇಕಾರ ಪರವಾಗಿ ಈಕಾರಾದೇಶ)
(
+ )

ಗಿರಿ + ಈಶ = ಗಿರೀಶ (ಇಕಾರಕ್ಕೆ ಈಕಾರ ಪರವಾಗಿ ಈಕಾರಾದೇಶ)
(
+ )

ಲಕ್ಷೀ + ಈಶ = ಲಕ್ಷೀಶ (ಈಕಾರಕ್ಕೆ ಈಕಾರಪರವಾಗಿ ಈಕಾರಾದೇಶ)
(
+ )

ಗುರು + ಉಪದೇಶ = ಗರೂಪದೇಶ (ಉಕಾರಕ್ಕೆ ಉಕಾರ ಪರವಾಗಿ ಊಕಾರಾದೇಶ)
(
+ )
ವಧೂ + ಉಪೇತ = ವಧೂಪೇತ (ಊಕಾರಕ್ಕೆ ಉಕಾರಪರವಾಗಿ ಊಕಾರಾದೇಶ)
(
+ )

() ಗುಣಸಂಧಿ

() ಸುರೇಶನು ಬಂದನು.

() ದೇವೇಂದ್ರನ ಸಭೆ.

() ಮಹೇಶನನ್ನು ನೋಡು.

() ಸೂರ್ಯೋದಯವಾಯಿತು.

() ವಾಲ್ಮೀಕಿ ಮಹರ್ಷಿಗಳು ಬಂದರು

ವಾಕ್ಯಗಳಲ್ಲಿರುವ ಸುರೇಶ, ದೇವೇಂದ್ರ, ಮಹೇಶ, ಸುರ್ಯೋದಯ, ಮಹರ್ಷಿ ಶಬ್ದಗಳನ್ನು ಬಿಡಿಸಿ ಬರೆದರೆ ಹೇಗಾಗುವುವು ನೋಡಿರಿ.

ಸುರ + ಈಶ = ಸುರೇಶ ( + = )
(
+ )

ದೇವ + ಇಂದ್ರ = ದೇವೇಂದ್ರ ( + = )
(
+ )

ಮಹಾ + ಈಶ = ಮಹೇಶ ( + = )
(
+ )

ಸೂರ್ಯ + ಉದಯ = ಸೂರ್ಯೋದಯ ( + = )
(
+ )

ಮಹಾ + ಋಷಿ = ಮಹರ್ಷಿ ( + = ಆರ್)
(
+ )

ಎಲ್ಲಾ ಉದಾಹರಣೆಗಳಲ್ಲೂ ಪೂರ್ವದ ಸ್ವರವು ಅಥವಾ ಆಗಿವೆ. ಪರದಲ್ಲಿ (ಎದುರಿನಲ್ಲಿ) , , , ಇತ್ಯಾದಿ ಸ್ವರಗಳಿವೆ. ಅಥವಾ ಪರವಾದಲ್ಲೆಲ್ಲಾ ಕಾರ ಬಂದಿದೆ. ಪರವಾದಲ್ಲಿ ಕಾರ ಬಂದಿದೆ. ಪರವಾದಲ್ಲಿ ಅರ್ ಕಾರ ಬಂದಿದೆ. ಅಂದರೆ ಪೂರ್ವದ ಮತ್ತು ಪರದ ಎರಡೂ ಸ್ವರಗಳು ಹೋಗಿ ಅವುಗಳ ಸ್ಥಾನದಲ್ಲಿ ಅರ್ ಗಳು ಆದೇಶಗಳಾಗಿ ಬಂದಿವೆ ಎಂದ ಹಾಗಾಯಿತು. ಇದಕ್ಕೆ ಸಾಮಾನ್ಯ ಸೂತ್ರವನ್ನು ಹೀಗೆ ಹೇಳಬಹುದು.

(೨೧) ಕಾರಗಳಿಗೆ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಕಾರವೂ, ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಕಾರವೂ, ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.

ಉದಾಹರಣೆಗೆ:-

ಸುರ + ಇಂದ್ರ = ಸುರೇಂದ್ರ (ಅಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(
+ )

ಧರಾ + ಇಂದ್ರ = ಧರೇಂದ್ರ (ಆಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(
+ )

ಮಹಾ + ಈಶ್ವರ = ಮಹೇಶ್ವರ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ)
(
+ )

ಚಂದ್ರ + ಉದಯ = ಚಂದ್ರೋದಯ (ಅಕಾರಕ್ಕೆ ಉಕಾರ ಪರವಾಗಿ ಓಕಾರಾದೇಶ)
(
+ )

ಏಕ + ಊನ = ಏಕೋನ (ಅಕಾರಕ್ಕೆ ಊಕಾರ ಪರವಾಗಿ ಓಕಾರಾದೇಶ)
(
+ )

ದೇವ + ಋಷಿ = ದೇವರ್ಷಿ (ಅಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(
+ )

ಮಹಾ + ಋಷಿ = ಮಹರ್ಷಿ (ಆಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(
+ )

() ವೃದ್ಧಿ ಸಂಧಿ

() ಅವನು ಏಕೈಕ ವೀರನು.

() ಕೃಷ್ಣದೇವರಾಯ ಅಷ್ಟೈಶ್ವರ್ಯದಿಂದ ಕೂಡಿದ್ದನು.

() ಹಿಮಾಲಯದಲ್ಲಿ ವನೌಷಧಿಗಳುಂಟು.

() ನಾರಣಪ್ಪ ಮಹೌನ್ನತ್ಯದಿಂದ ಕೂಡಿದ ಕವಿ.

ಮೇಲಿನ ವಾಕ್ಯಗಳಲ್ಲಿ ಬಂದಿರುವ ಏಕೈಕ, ಅಷ್ಟೈಶ್ವರ್ಯ, ವನೌಷದಿ, ಮಹೌನ್ನತ್ಯ ಪದಗಳನ್ನು ಬಿಡಿಸಿ ಬರೆದರೆ ಅವು ಕೆಳಗಿನಂತೆ ಆಗುವುವು:-

ಏಕ + ಏಕ = ಏಕ್ + ಐಕ ( + + )
(
+ )

ಅಷ್ಟ + ಐಶ್ವರ್ಯ = ಅಷ್ಟ್ + ಐಶ್ವರ್ಯ = ಅಷ್ಟೈಶ್ವರ್ಯ ( + = )
(
+ )

ವನ + ಓಷಧಿ = ವನ್ + ಔಷಧಿ = ವನೌಷಧಿ ( + = )
(
+ )

ಮಹಾ + ಔನ್ನತ್ಯ = ಮಹ್ + ಔನ್ನತ್ಯ = ಮಹೌನ್ನತ್ಯ ( + = )
(
+ )

ಪೂರ್ವದಲ್ಲಿ ಎಲ್ಲ ಕಡೆಗೂ ಅಥವಾ ಸ್ವರಗಳಿವೆ. ಎದುರಿಗೆ , , , ಪರವಾಗಿವೆ. ಅಥವಾ ಪರವಾದಾಗ ಒಂದು ಕಾರವೂ, ಅಥವಾ ಪರವಾದಾಗ ಒಂದು ಕಾರವೂ ಆದೇಶಗಳಾಗಿ ಅಂದರೆ ಎರಡೂ ಸ್ವರಗಳ ಸ್ಥಾನದಲ್ಲಿ ಬಂದಿವೆ. ಹಾಗಾದರೆ ಇದರ ಸೂತ್ರವನ್ನು ಹೀಗೆ ಹೇಳಬಹುದು:-

(೨೨) [2] ಕಾರಗಳಿಗೆ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಕಾರವೂ, ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.

ಉದಾಹರಣೆಗೆ:-

ಲೋಕ + ಏಕವೀರ = ಲೋಕೈಕವೀರ (ಅಕಾರಕ್ಕೆ ಏಕಾರ ಪರವಾಗಿ ಐಕಾರಾದೇಶ)
(
+ )

ಜನ + ಐಕ್ಯ = ಜನೈಕ್ಯ (ಅಕಾರಾಕ್ಕೆ ಐಕಾರ ಪರವಾಗಿ ಐಕಾರಾದೇಶ)
(
+ )

ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ (ಆಕಾರಕ್ಕೆ ಐಕಾರ ಪರವಾಗಿ ಐಕಾರಾದೇಶ)
(
+ )

ಜಲ + ಓಘ = ಜಲೌಘ (ಅಕಾರಕ್ಕೆ ಓಕಾರ ಪರವಾಗಿ ಔಕಾರಾದೇಶ)
(
+ )

ಘನ + ಔದಾರ್ಯ = ಘನೌದಾರ್ಯ (ಅಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(
+ )

ಮಹಾ + ಔದಾರ್ಯ = ಮಹೌದಾರ್ಯ (ಆಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(
+ )

() ಯಣ್ ಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ. ಅದರ ಪ್ರಕಾರ ಯಣ್ ಎಂದರೆ ನಾಲ್ಕು ವ್ಯಂಜನಗಳು. ಯಣ್ ಸಂಧಿಯೆಂದರೆ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ. ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ:-

() ಅವನು ಅತ್ಯಂತ ಪರಾಕ್ರಮಿ.

() ಮನ್ವಂತರದಲ್ಲಿ ನಡೆಯಿತು.

() ನಮ್ಮದು ಪಿತ್ರಾರ್ಜಿತವಾದ ಆಸ್ತಿ.

ಮೂರು ವಾಕ್ಯಗಳಲ್ಲಿ ಬಂದಿರುವ ಅತ್ಯಂತ ಮನ್ವಂತರ ಪಿತ್ರಾರ್ಜಿತ ಶಬ್ದಗಳನ್ನು ಬಿಡಿಸಿ ಬರೆದರೆ:-

() ಅತಿ + ಅಂತ = ಅತ್ + ಯ್ + ಅಂತ = ಅತ್ಯಂತ ( + = ಯ್)
ಇಲ್ಲಿ ಇಕಾರದ ಸ್ಥಳದಲ್ಲಿ ಯ್ ಕಾರಾದೇಶವಾಗಿದೆ.

() ಮನು + ಅಂತರ = ಮನ್ವ್ + ಅಂತರ = ಮನ್ವಂತರ ( + =ವ್)
ಇಲ್ಲಿ ಉಕಾರದ ಸ್ಥಾನದಲ್ಲಿ ವ್ ಕಾರಾದೇಶವಾಗಿದೆ.

() ಪಿತೃ + ಆರ್ಜಿತ = ಪಿತ್ರ್ + ಆರ್ಜಿತ = ಪಿತ್ರಾರ್ಜಿತ ( + = ರ್)
ಇಲ್ಲಿ ಋಕಾರದ ಸ್ಥಾನದಲ್ಲಿ ರ್ ಕಾರಾದೇಶವಾಗಿದೆ.

ಹಾಗಾದರೆ ಪೂರ್ವದಲ್ಲಿರುವ , , ಕಾರಗಳಿಗೆ, ಕ್ರಮವಾಗಿ ಯ್, ವ್, ರ್ ಗಳು ಆದೇಶವಾಗಿ ಬಂದಿವೆಯೆಂದ ಹಾಗಾಯಿತು. ಎದುರಿಗೆ ಎಂಥ ಸ್ವರಗಳು ಇರಬೇಕೆಂಬುದಕ್ಕೂ ಒಂದು ನೇಮವಿದೆ. ಅತಿ + ಇಚ್ಛಾ ಹೀಗೆ ಇಕಾರದ ಮುಂದೆ ಇಕಾರವೇ ಬಂದಿದ್ದರೆ ಅತೀಚ್ಛಾ ಎಂದು ಸವರ್ಣದೀರ್ಘ ಸಂಧಿಯಾಗುತ್ತಿತ್ತು. ಆದ್ದರಿಂದ ಸವರ್ಣಸ್ವರ ಎದುರಿಗೆ ಬರಬಾರದೆಂದ ಹಾಗಾಯಿತು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೨೩) [3], , , , ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಕಾರಗಳಿಗೆ ಯ್ ಕಾರವೂ, ಕಾರಗಳಿಗೆ ವ್ ಕಾರವೂ, ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.

ಉದಾಹರಣೆಗೆ:-

ಅತಿ + ಅವಸರ = ಅತ್ಯವಸರ (ಇಕಾರಕ್ಕೆ ಯ್ ಕಾರಾದೇಶ)
(
+ )

ಜಾತಿ + ಅತೀತ = ಜಾತ್ಯಾತೀತ (ಇಕಾರಕ್ಕೆ ಯ್ ಕಾರಾದೇಶ)
(
+ )

ಕೋಟಿ + ಅಧೀಷ = ಕೋಟ್ಯಧೀಶ (ಇಕಾರಕ್ಕೆ ಯ್ ಕಾರಾದೇಶ)
(
+ )

ಗತಿ + ಅಂತರ = ಗತ್ಯಂತರ ( “ )
(
+ )

ಪ್ರತಿ + ಉತ್ತರ = ಪ್ರತ್ಯುತ್ತರ ( “ )
(
+ )

ಪತಿ + ಅರ್ಥ = ಪತ್ಯರ್ಥ ( “ )
(
+ )

ಅತಿ + ಆಶೆ = ಅತ್ಯಾಶೆ ( “ )
(
+ )

ಅಧಿ + ಆತ್ಮ = ಅಧ್ಯಾತ್ಮ ( “ )
(
+ )

ಗುರು + ಆಜ್ಞೆ = ಗುರ್ವಾಜ್ಞೆ (ಉಕಾರಕ್ಕೆ ವ್ ಕಾರಾದೇಶ)
(
+ )

ಮನು + ಆದಿ = ಮನ್ವಾದಿ (ಉಕಾರಕ್ಕೆ ವ್ ಕಾರಾದೇಶ)
(
+ )

ವಧೂ + ಆಭರಣ = ವಧ್ವಾಭರಣ (ಊಕಾರಕ್ಕೆ ವ್ ಕಾರಾದೇಶ)
(
+ )

ವಧೂ + ಅನ್ವೇಷಣ = ವಧ್ವನ್ವೇಷಣ (ಊಕಾರಕ್ಕೆ ವ್ ಕಾರಾದೇಶ)
(
+ )

ಪಿತೃ + ಅರ್ಥ = ಪಿತ್ರರ್ಥ (ಋಕಾರಕ್ಕೆ ರ್ ಕಾರಾದೇಶ)
(
+ )

ಮಾತೃ + ಅಂಶ = ಮಾತ್ರಂಶ ( “ )
(
+ )

ಕರ್ತೃ + ಅರ್ಥ = ಕರ್ತ್ರರ್ಥ ( “ )
(
+ )

. ಸಂಸ್ಕೃತ ವ್ಯಂಜನ ಸಂಧಿಗಳು

() ಜಶ್ತ್ವಸಂಧಿ

ಜಶ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಜಬಗಡದ ಐದು ವ್ಯಂಜನಗಳನ್ನು ತಿಳಿಸುವ ಒಂದು ಸಂಜ್ಞೆ. ಜಶ್ತ್ವ ಎಂದರೆ ಐದು ವರ್ಣಗಳಾದ ಜಬಗಡದ ವ್ಯಂಜನಗಳು ಆದೇಶವಾಗಿ ಬರುವುದು ಎಂದು ಅರ್ಥ. ಯಾವ ಅಕ್ಷರಕ್ಕೆ ಇವು ಆದೇಶವಾಗಿ ಬರುತ್ತವೆ? ಎಂಬ ಬಗೆಗೆ ತಿಳಿಯೋಣ.

() ದಿಗಂತದಲ್ಲಿ ಪಸರಿಸಿತು.

() ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ.

() ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಉಂಟು.

() ಹುಡುಗನ ಹೆಸರು ಸದಾನಂದ ಎಂದು.

() ಅಬ್ಧಿ ಎಂದರೆ ಸಾಗರಕ್ಕೆ ಹೆಸರು.

ವಾಕ್ಯಗಳಲ್ಲಿ ಬಂದಿರುವ ದಿಗಂತ, ಅಜಂತ, ಷಡಾನನ, ಸದಾನಂದ, ಅಬ್ಧಿ ಶಬ್ದಗಳನ್ನು ಬಿಡಿಸಿ ಬರೆದರೆ__

ದಿಕ್ + ಅಂತ = ದಿಗ್ + ಅಂತ = ದಿಗಂತ (ಪೂರ್ವದ ಕಕಾರಕ್ಕೆ ಗಕಾರಾದೇಶ)
(
ಕ್ + = ಗ್)

ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
(
ಚ್ + = ಜ್)

ಷಟ್ + ಆನನ = ಷಡ್ + ಆನನ = ಷಡಾನನ (ಟಕಾರಕ್ಕೆ ಡಕಾರಾದೇಶ)
(
ಟ್ + = ಡ್)

ಸತ್ + ಆನಂದ = ಸದ್ + ಆನಂದ = ಸದಾನಂದ (ತಕಾರಕ್ಕೆ ದಕಾರಾದೇಶ)
(
ತ್ + = ದ್)

ಅಪ್ + ಧಿ = ಅಬ್ + ಧಿ = ಅಬ್ಧಿ (ಪಕಾರಕ್ಕೆ ಬಕಾರಾದೇಶ)
(
ಪ್ + ಧಿ = ಬ್ಧಿ)

ಮೇಲಿನ ಐದೂ ಉದಾಹರಣೆಗಳನ್ನು ಲಕ್ಷ್ಯವಿಟ್ಟು ನೋಡಿದಾಗ, ಪೂರ್ವಶಬ್ದದ ಅಂತ್ಯದಲ್ಲಿರುವ ಕ್, ಚ್, ಟ್, ತ್, ಪ್ ಗಳಿಗೆ ಕ್ರಮವಾಗಿ ಗ್, ಜ್, ಡ್, ದ್, ಬ್ ಗಳು ಆದೇಶಗಳಾಗಿ ಬಂದಿವೆ. ಪೂರ್ವ ಶಬ್ದದಲ್ಲಿರುವ ವರ್ಗಪ್ರಥಮವರ್ಣಗಳಿಗೆ ಅದೇ ವರ್ಗದ ಮೂರನೆಯ ವರ್ಣಗಳು ಆದೇಶಗಳಾಗಿ ಬರುವ ಸಂಧಿಯು ಸಂಸ್ಕೃತ ಶಬ್ದಗಳೇ ಎರಡೂ ಆಗಿದ್ದಾಗ ಮಾತ್ರ ಬರುವುದು. ಕನ್ನಡದಲ್ಲೂ ಕತಪ ಗಳಿಗೆ ಗದಬ ಗಳು ಆದೇಶವಾಗಿ ಬರುವುದುಂಟು. ಆದರೆ ಕತಪ ಗಳು ಉತ್ತರಪದದ ಆದಿಯಲ್ಲಿರಬೇಕು. ಇದು ಕೇವಲ ಕನ್ನಡದ ಆದೇಶಸಂಧಿಯೆಂದು ತಿಳಿಯಬೇಕು. ಹೀಗೆ ಪೂರ್ವ ಶಬ್ದದ ಕೊನೆಯ ಕಚಟತಪ ಗಳಿಗೆ ಗಜಡದಬ ಗಳು ಆದೇಶವಾಗಿ ಬರುವುದೇ ಜಶ್ತ್ವಸಂಧಿಯೆನಿಸುವುದು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೨೪) ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು. ಪ್ರಾಯಶಃ ಎಂದು ಹೇಳಿರುವುದರಿಂದ ಕಖ, ಚಛ, ಟಠ, ತಥ, ಪಫ, , , , , , , ಅಕ್ಷರಗಳು ಪರವಾದರೆ (ಎದುರಿಗೆ ಬಂದರೆ) ಮೂರನೆಯ ಅಕ್ಷರಗಳು ಆದೇಶವಾಗಿ ಕೆಲವು ಕಡೆ ಬರುವುದಿಲ್ಲ. ಅಂದರೆ ಜಶ್ತ್ವಸಂಧಿಯಾಗುವುದಿಲ್ಲ.

ಉದಾಹರಣೆಗೆ:-

ವಾಕ್
+
ದೇವಿ
=
ವಾಗ್ದೇವಿ
=
ವಾಗ್ದೇವಿ
(ಕಕಾರಕ್ಕೆ ಗಕಾರಾದೇಶ)
ವಾಕ್
+
ದಾನ
=
ವಾಗ್ದಾನ
=
ವಾಗ್ದಾನ
( ” )
ವಾಕ್
+
ಅಧಿಪ
=
ವಾಗ್ಅಧಿಪ
=
ವಾಗಧಿಪ
( ” )
ದಿಕ್
+
ದೇಶ
=
ದಿಗ್ದೇಶ
=
ದಿಗ್ದೇಶ
( ” )
ದಿಕ್
+
ದಿಗಂತ
=
ದಿಗ್ದಿಗಂತ
=
ದಿಗ್ದಿಗಂತ
( ” )
ದಿಕ್
+
ದೇವತೆ
=
ದಿಗ್ದೇವತೆ
=
ದಿಗ್ದೇವತೆ
( ” )
[4]ಅಚ್
+
ಅಂತ
=
ಅಜ್ಅಂತ
=
ಅಜಂತ
(ಚಕಾರಕ್ಕೆ ಜಕಾರಾದೇಶ)
ಅಚ್
+
ಆದಿ
=
ಅಜ್ಆದಿ
=
ಅಜಾದಿ
( ” )
ಷಟ್
+
ಆನನ
=
ಷಡ್ಆನನ
=
ಷಡಾನನ
(ಟಕಾರಕ್ಕೆ ಡಕಾರಾದೇಶ)
ಷಟ್
+
ಅಂಗ
=
ಷಡ್ಅಂಗ
=
ಷಡಂಗ
( ” )
ಷಟ್
+
ಅಂಗನೆ
=
ಷಡ್ಅಂಗನೆ
=
ಷಡಂಗನೆ
( ” )
ವಿರಾಟ್
+
ರೂಪ
=
ವಿರಾಡ್ರೂಪ
=
ವಿರಾಡ್ರೂಪ
( ” )
ಸತ್
+
ಉದ್ದೇಶ
=
ಸದ್ಉದ್ದೇಶ
=
ಸದುದ್ದೇಶ
(ತಕಾರಕ್ಕೆ ದಕಾರಾದೇಶ)
ಸತ್
+
ಉತ್ತರ
=
ಸದ್ಉತ್ತರ
=
ಸದುತ್ತರ
( ” )
ಚಿತ್
+
ಆನಂದ
=
ಚಿದ್ಆನಂದ
=
ಚಿದಾನಂದ
( ” )
ಸತ್
+
ಭಾವ
=
ಸದ್ಭಾವ
=
ಸದ್ಭಾವ
( ” )
ಸತ್
+
ಉದ್ಯೋಗ
=
ಸದ್ಉದ್ಯೋಗ
=
ಸದುದ್ಯೋಗ
( ” )
[5]ಅಪ್
+
=
ಅಬ್
=
ಅಬ್ಜ
(ಪಕಾರಕ್ಕೆ ಬಕಾರಾದೇಶ)
[6]ಅಪ್
+
=
ಅಬ್
=
ಅಬ್ದ
(ಪಕಾರಕ್ಕೆ ಬಕಾರಾದೇಶ)
[7]ಅಪ್
+
ಅಂಶ
=
ಅಬ್ಅಂಶ
=
ಅಬಂಶ
(ಪಕಾರಕ್ಕೆ ಬಕಾರಾದೇಶ)
[8]ಅಪ್
+
ಧಿ
=
ಅಬ್ಧಿ
=
ಅಬ್ಧಿ
(ಪಕಾರಕ್ಕೆ ಬಕಾರಾದೇಶ)

ಜಶ್ತ್ವಸಂಧಿಯಾಗದಿರುವುದಕ್ಕೆ ಉದಾಹರಣೆಗಳು

ದಿಕ್+ಚಕ್ರ=ದಿಕ್ಚಕ್ರ
ಇಲ್ಲಿ ಎಲ್ಲಿಯೂ ಮೂರನೆಯ ವರ್ಣದ ಆದೇಶವಿಲ್ಲ
ದಿಕ್+ತಟ=ದಿಕ್ತಟ
ಸತ್+ಕವಿ=ಸತ್ಕವಿ
ದಿಕ್+ಸೂಚಿ=ದಿಕ್ಸೂಚಿ
ವಾಕ್+ಪತಿ=ವಾಕ್ಪತಿ

() ಶ್ಚುತ್ವ ಸಂಧಿ

ಶ್ಚು ಎಂದರೆ ಶಕಾರ ಚವರ್ಗಾಕ್ಷರಗಳು. (ಶ್=ಶಕಾರ, ಚು= ) ಆರು ಅಕ್ಷರಗಳೇ ಶ್ಚು ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು. ಹಾಗಾದರೆ ಇವು ಯಾವ ಅಕ್ಷರಗಳಿಗೆ ಯಾವಾಗ ಅದೇಶವಾಗಿ ಬರುತ್ತವೆಂಬುದನ್ನು ಯೋಚಿಸೋಣ.

ಮನಸ್ + ಶುದ್ಧಿ = ಮನಶ್ + ಶುದ್ಧಿ = ಮನಶ್ಶುದ್ಧಿ
(
ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಯಶಸ್ + ಚಂದ್ರಿಕೆ = ಯಶಶ್ + ಚಂದ್ರಿಕೆ = ಯಶಶ್ಚಂದ್ರಿಕೆ
(
ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಲಸತ್ + ಚಿತ್ರ = ಲಸಚ್ + ಚಿತ್ರ = ಲಸಚ್ಚಿತ್ರ
(
ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಸತ್ + ಚಿತ್ರ = ಸಚ್ + ಚಿತ್ರ = ಸಚ್ಚಿತ್ರ
(
ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಬೃಹತ್ + ಛತ್ರ = ಬೃಹಚ್ + ಛತ್ರ = ಬೃಹಚ್ಛತ್ರ
(
ತಕಾರಕ್ಕೆ ಛಕಾರ ಪರವಾಗಿ, ತಕಾರಕ್ಕೆ ಚಕಾರಾದೇಶ)

ಮೇಲಿನ ಎಲ್ಲ ಉದಾಹರಣೆಗಳನ್ನು ಗಮನವಿಟ್ಟು ನೋಡಿರಿ. ಶಬ್ದದ ಅಂತ್ಯದಲ್ಲಿ ಸಕಾರ ಇಲ್ಲವೆ ತವರ್ಗದಲ್ಲಿನ ಐದು ಅಕ್ಷರಗಳಲ್ಲಿ ಯುವುದಾದರೊಂದು ಅಕ್ಷರವಿರುತ್ತದೆ. ಪರದಲ್ಲಿ (ಎದುರಿನಲ್ಲಿ) ಶಕಾರ ಇಲ್ಲವೆ ಚವರ್ಗದಲ್ಲಿನ ಯಾವುದಾದರೊಂದು ಅಕ್ಷರವಿದೆ. ಹೀಗೆ ಇವು ಒಂದಕ್ಕೊಂದು ಸಂಧಿಸಿದಾಗ ಕಾರವಿದ್ದಲ್ಲೆಲ್ಲ ಶಕಾರವು, ತವರ್ಗದ ಅಕ್ಷರಗಳಿದ್ದಲ್ಲೆಲ್ಲ ಚವರ್ಗದ ಅಕ್ಷರಗಳು ಆದೇಶಗಳಾಗಿ ಬಂದಿವೆ. ಅಂದರೆ_

ಗಳಿಗೆ__

ಅಕ್ಷರಗಳು ಆದೇಶವಾಗಿ ಬರುತ್ತವೆ ಎಂದ ಹಾಗಾಯಿತು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-

(೨೫) ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ.

ಪಯಸ್ + ಶಯನ = ಪಯಶ್ + ಶಯನ = ಪಯಶ್ಶಯನ
(
ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಮನಸ್ + ಚಂಚಲ = ಮನಶ್ + ಚಂಚಲ = ಮನಶ್ಚಂಚಲ
(
ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಮನಸ್ + ಚಾಪಲ್ಯ = ಮನಶ್ + ಚಾಪಲ್ಯ = ಮನಶ್ಚಾಪಲ್ಯ
(
ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಶರತ್ + ಚಂದ್ರ = ಶರಚ್ + ಚಂದ್ರ = ಶರಚ್ಚಂದ್ರ
(
ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಜಗತ್ + ಜ್ಯೋತಿ = ಜಗಚ್ + ಜ್ಯೋತಿ = ಜಗಜ್ಜ್ಯೋತಿ
(
ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಚಕಾರಾದೇಶ, ಅನಂತರ ಜಕಾರಾದೇಶ)

ಯಶಸ್ + ಶರೀರಿ = ಯಶಶ್ + ಶರೀರಿ = ಯಶಶ್ಶರೀರಿ

ಇದರ ಹಾಗೆ-ಚಲಚ್ಚಿತ್ರ, ಚಲಚ್ಚಾಮರ, ಜ್ವಲಜ್ಜ್ಯೋತಿ, ಬೃಹಜ್ಜ್ಯೋತಿ, ಮನಶ್ಯಾಂತಿ, ಮನಶ್ಚಪಲ ಇತ್ಯಾದಿಗಳು.

() ಅನುನಾಸಿಕ ಸಂಧಿ

, , , , - ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಹಿಂದಿನ ಸಂಜ್ಞಾಪ್ರಕರಣದಲ್ಲಿ ತಿಳಿಸಿದೆ. ಅನುನಾಸಿಕಾಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಅನುನಾಸಿಕ ಸಂಧಿಯೆನಿಸುವುದು. ಹಾಗಾದರೆ ಇವು ಯಾವ ಅಕ್ಷರಕ್ಕೆ ಯಾವಾಗ ಆದೇಶವಾಗಿ ಬರುತ್ತವೆ? ಯಾವ ಅಕ್ಷರ ಪರವಾಗಿರಬೇಕು? ಎಂಬ ಬಗೆಗೆ ತಿಳಿಯೋಣ.

() ವಾಕ್ + ಮಯ = ವಾಙ್ + ಮಯ = ವಾಙ್ಮಯ
(
ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಙಕಾರಾದೇಶವಾಗಿದೆ)

() ಷಟ್ + ಮುಖ = ಷಣ್ + ಮುಖ = ಷಣ್ಮುಖ
(
ಇಲ್ಲಿ ಟಕಾರಕ್ಕೆ ಮಕಾರ ಪರವಾಗಿ ಟಕಾರಕ್ಕೆ ಣಕಾರಾದೇಶವಾಗಿದೆ)

() ಸತ್ + ಮಾನ = ಸನ್ + ಮಾನ = ಸನ್ಮಾನ
(
ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ)

() ಅಪ್ + ಮಯ = ಅಮ್ + ಮಯ = ಅಮ್ಮಯ[9]
(
ಇಲ್ಲಿ ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ)

ಮೇಲಿನ ಉದಾಹರಣೆಗಳನ್ನು ಅವಲೋಕಿಸಿದಾಗ ಪೂರ್ವಶಬ್ದದ ಕೊನೆಯಲ್ಲೆಲ್ಲ ವರ್ಗದ ಮೊದಲನೆಯ ಅಕ್ಷರಗಳಾದ ಕ್, ಟ್, ತ್, ಪ್ ಇತ್ಯಾದಿ ಅಕ್ಷರಗಳಿವೆ. ಎದುರಿಗೆ ಅನುನಾಸಿಕಾಕ್ಷರ ಬಂದಿದೆ. ಆದ ಕಾರಣದಿಂದ ವರ್ಗದ ಮೊದಲನೆಯ ಅಕ್ಷರಗಳಾದ ಇತ್ಯಾದಿ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕಾಕ್ಷರ (ಐದನೆಯ ವರ್ಣ) ಆದೇಶವಾಗಿ ಬಂದಿದೆಯೆಂದು ತಿಳಿಯಬೇಕು. ಅಂದರೆ ವರ್ಗದ ಮೊದಲನೆಯ ವ್ಯಂಜನಕ್ಕೆ ಅದರದೇ ಆದ ಅನುನಾಸಿಕಾಕ್ಷರ ಬರುವಿಕೆಯೇ ಅನುನಾಸಿಕ ಸಂಧಿಯೆನಿಸುವುದು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-

(೨೬) ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ ವ್ಯಂಜನಗಳಿಗೆ ಕ್ರಮವಾಗಿ ವ್ಯಂಜನಗಳು ಆದೇಶಗಳಾಗಿ ಬರುತ್ತವೆ.[10]

ಉದಾಹರಣೆಗೆ:-

ದಿಕ್ + ನಾಗ = ದಿಙ್ + ನಾಗ = ದಿಙ್ನಾಗ[11]
(
ಕಕಾರಕ್ಕೆ ನಕಾರ ಪರವಾಗಿ ಙಕಾರಾದೇಶ)

ಷಟ್ + ಮಾಸ = ಷಣ್ + ಮಾಸ = ಷಣ್ಮಾಸ
(
ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)

ವಾಕ್ + ಮಾಧುರ್ಯ = ವಾಙ್ + ಮಾಧುರ್ಯ = ವಾಙ್ಮಾಧುರ್ಯ[12]
(
ಕಕಾರಕ್ಕೆ ಮಕಾರ ಪರವಾಗಿ ಙಕಾರಾದೇಶ)

ಚಿತ್ + ಮಯ = ಚಿನ್ + ಮಯ = ಚಿನ್ಮಯ
(
ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)

ಚಿತ್ + ಮೂಲ = ಚಿನ್ + ಮೂಲ = ಚಿನ್ಮೂಲ
(
ತಕಾರಕ್ಕೆ ಮಕಾರಪರವಾಗಿ ನಕಾರಾದೇಶ)

ಸತ್ + ಮಣಿ = ಸನ್ + ಮಣಿ = ಸನ್ಮಣಿ
(
ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)

ಇದರಂತೆ, ವಾಙ್ಮೂಲ[13], ವಾಙ್ಮಾನಸ, ಉನ್ಮಾದ, ತನ್ಮಯ ಇತ್ಯಾದಿ



[1] ಅಆ, ಇಈ, ಉಊ, ಋೠ ಸ್ವರಗಳು ಸವರ್ಣ ಸ್ವರಗಳು. ಅಅ, ಅಆ, ಆಆ, ಆಅ-ಹೀಗೆ ಬಂದರೂ ಸವರ್ಣ ಸ್ವರಗಳು. ಈಈ, ಇಇ, ಈಇ, ಇಈ-ಹೀಗೆ ಬಂದರೂ ಸವರ್ಣ ಸ್ವರಗಳು. ಇದರ ಹಾಗೆಯೇ ಉಊ, ಋೠ ಗಳ ಸವರ್ಣ ಸ್ವರಗಳ ವಿಚಾರ ಕೂಡ.

[2] ಕಾರಗಳಿಗೆ ಎಂದರೆ, ಅಥವಾ ಕಾರಗಳಲ್ಲಿ ಯಾವುದಾದರೊಂದು ಸ್ವರಕ್ಕೆ ಎಂದರ್ಥ. ಕಾರಗಳು ಪರವಾದರೆ ಎಂದರೆ, ಅಥವಾ ಕಾರಗಳಲ್ಲಿ ಯಾವುದಾದರೂ ಒಂದು ಪರವಾದರೆ ಎಂದು ಅರ್ಥ.

[3] ಯಣ್ ಎಂದರೆ ನಾಲ್ಕು ಅಕ್ಷರಗಳೆಂದು ಹಿಂದೆ ತಿಳಿಸಿದೆಯಷ್ಟೆ. ಕಾರವು ಆದೇಶವಾಗಿ ಬರುವ ಉದಾಹರಣೆಗಳು ಕನ್ನಡ ಭಾಷೆಯಲ್ಲಿ ಇಲ್ಲವಾದ್ದರಿಂದ ಸೂತ್ರದಲ್ಲಿ ಅದನ್ನು ಕೈಬಿಟ್ಟಿದೆ.

[4] ಅಚ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಸ್ವರ ಎಂದು ಅರ್ಥ. ಅಜಂತ ಎಂದರೆ ಸ್ವರಾಂತವೆಂದು ತಿಳಿಯಬೇಕು.

[5] ಅಬ್ಜ=ಕಮಲ

[6] ಅಬ್ದ=ಮೋಡ

[7] ಅಬಂಶ=ನೀರಿನ ಅಂಶ

[8] ಅಬ್ಧಿ=ಸಮುದ್ರ (ಅಪ್ ಅಂದರೆ ನೀರು)

[9] ಅಪ್ಮಯ=ನೀರಿನ ಮಯ, ಅಂದರೆ ಜಲಮಯ ಎಂದು ಅರ್ಥ.

[10] ಚಕಾರಕ್ಕೆ ಕಾರ ಆದೇಶವಾಗಿ ಬರುವ ಉದಾಹರಣೆಗಳು ಪ್ರಸಿದ್ಧವಲ್ಲವಾದ್ದರಿಂದ ಉದಾಹರಣೆ ಕೊಟ್ಟಿಲ್ಲ.

[11] ದಿಙ್ನಾಗ=ದಿಕ್ಕುಗಳಲ್ಲಿರುವ ಆನೆ (ಅಷ್ಟದಿಗ್ಗಜಗಳು)

[12] ವಾಙ್ಮಾಧುರ್ಯ=ಮಾತಿನ ಮಾಧುರ್ಯ

[13] ವಾಙ್ಮೂಲ=ಮಾತಿನ ಮೂಲ; ವಾಙ್ಮಾನಸ=ಮಾತು, ಮನಸ್ಸು; ಉನ್ಮಾದ=ವಿಶೇಷ ಮದದಿಂದ ಕೂಡಿದ; ತನ್ಮಯ=ಬೆರೆಯುವಿಕೆ.

No comments:

Post a Comment