Saturday, 2 June 2012


ಅಧ್ಯಾಯ : ಸಂಧಿಪ್ರಕರಣ: ಭಾಗ I – ಸಂಧಿ

ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. ಊರು ಊರು ಎಂಬೆರಡು ಶಬ್ದಗಳನ್ನು ಊರೂರು ಎಂದು ಕೂಡಿಸಿಯೇ ಮಾತನಾಡುತ್ತೇವೆ. ಅವನು + ಅಲ್ಲಿ ಎಂಬೆರಡು ಶಬ್ದ ರೂಪಗಳನ್ನು ಅವನಲ್ಲಿ ಎಂದು ಕೂಡಿಸಿ ಹೇಳುತ್ತೇವೆ. ಮೇಲೆ ಹೇಳಿರುವ ಊರು + ಊರು ಎಂಬ ಶಬ್ದಗಳನ್ನೂ, ಅವನು + ಅಲ್ಲಿ ಎಂಬ ಪ್ರಕೃತಿ ಪ್ರತ್ಯಯಗಳನ್ನೂ ಕೂಡಿಸಿಯೇ ಹೇಳುತ್ತೇವೆ. ಅಂದರೆ, ಅವನ್ನು ಸಂಧಿಸಿಯೇ ಹೇಳುತ್ತೇವೆ. ಒಮ್ಮೊಮ್ಮೆ ಶಬ್ದ ಶಬ್ದಗಳನ್ನು ಬಿಡಿಬಿಡಿಸಿ ಹೇಳಿದರೂ, ಪಕೃತಿ ಪ್ರತ್ಯಯಗಳನ್ನು ಮಾತ್ರ ಸಂಧಿಸಿಯೇ ಹೇಳುತ್ತೇವೆ. ಅವನ್ನು ಬಿಡಿಬಿಡಿಯಾಗಿ ಹೇಳಲಾಗುವುದೇ ಇಲ್ಲ. ಕೆಳಗೆ ನೋಡಿ:-

ಪ್ರಕೃತಿ
+
ಪ್ರತ್ಯಯ
=
ಕೂಡಿಸಿದ ರೂಪ
ಆಡು
+
ಇಸು
=
ಆಡಿಸು
ಮರ
+
ಅನ್ನು
=
ಮರವನ್ನು
ಪುಸ್ತಕ
+
ಇಂದ
=
ಪುಸ್ತಕದಿಂದ
ದೇವರು
+
ಇಗೆ
=
ದೇವರಿಗೆ


ಪದಗಳನ್ನು
ಕೂಡಿಸಿಯಾದರೂ ಹೇಳಬಹುದು ಅಥವಾ ಬಿಡಿಬಿಡಿಯಾಗಿಯೂ ಹೇಳಬಹುದು.

ಪದ
+
ಪದ
=
ಕೂಡಿಸಿದ ರೂಪ
-
ಕೂಡಿಸದ ರೂಪ
ಅವನ
+
ಅಂಗಡಿ
=
ಅವನಂಗಡಿ
-
ಅವನ ಅಂಗಡಿ
ಅವನಿಗೆ
+
ಇಲ್ಲ
=
ಅವನಿಗಿಲ್ಲ
-
ಅವನಿಗೆ ಇಲ್ಲ
ಹಣ್ಣಿನ
+
ಅಂಗಡಿ
=
ಹಣ್ಣಿನಂಗಡಿ
-
ಹಣ್ಣಿನ ಅಂಗಡಿ
ಪದ
+
ಪದ
=
ಕೂಡಿಸಿದ ರೂಪ
-
ಕೂಡಿಸದ ರೂಪ
ಅವನ
+
ಅಂಗಡಿ
=
ಅವನಂಗಡಿ
-
ಅವನ ಅಂಗಡಿ
ಅವನಿಗೆ
+
ಇಲ್ಲ
=
ಅವನಿಗಿಲ್ಲ
-
ಅವನಿಗೆ ಇಲ್ಲ
ಹಣ್ಣಿನ
+
ಅಂಗಡಿ
=
ಹಣ್ಣಿನಂಗಡಿ
-
ಹಣ್ಣಿನ ಅಂಗಡಿ

ಮೇಲೆ ಹೇಳಿರುವ ಅನೇಕ ಉದಾಹರಣೆಗಳಲ್ಲಿ ಪ್ರಕೃತಿ ಪ್ರತ್ಯಯಗಳನ್ನು ಸೇರಿಸುವಲ್ಲಿ ಅವನ್ನು ಕೂಡಿಸಿಯೇ ಹೇಳುತ್ತೇವಲ್ಲದೆ ಬಿಡಿಬಿಡಿಸಿ ಹೇಳಲು ಬರುವಂತೆಯೇ ಇಲ್ಲ. ಆಡು ಇಸು ಎಂದು ಯಾರು ಹೇಳುವುದಿಲ್ಲ. ಪುಸ್ತಕ ಅನ್ನು ತಾ ಎನ್ನಬಾರದು. ಆಡಿಸು ಪುಸ್ತಕವನ್ನು ಹೀಗೆ ಕೂಡಿಸಿಯೇ ಹೇಳಬೇಕು. ಆಡಿಸು ಎಂಬಲ್ಲಿ (ಆಡು+ಇಸು) + ಸ್ವರಗಳು ಸಂಧಿಸುತ್ತವೆ. ಪುಸ್ತಕ+ಅನ್ನು ಎಂಬಲ್ಲಿ + ಸ್ವರಗಳು ಪರಸ್ಪರ ಸಂಧಿಸುತ್ತವೆ. ಅವೆರಡೂ ಸಂಧಿಸುವಾಗ ಮೊದಲಿನ ಸ್ವರಗಳು ಎರಡೂ ಕಡೆ ಹೋಗುತ್ತವೆ. ಸಂಧಿಸುವಿಕೆಯು ಕಾಲವಿಳಂಬವಿಲ್ಲದೆ ಹಾಗೆ ಆಗುತ್ತದೆ. ಇವು ಪ್ರಕೃತಿ ಪ್ರತ್ಯಯಗಳ ಸಂಧಿಸುವಿಕೆಯನ್ನು ತಿಳಿಸುವ ಉದಾಹರಣೆಗಳು.

ಅವನ ಅಂಗಡಿ ಎಂಬ ಪದಗಳನ್ನು ಬೇಕಾದರೆ ಸಂಧಿಯಾಗುವಂತೆ ಅವನಂಗಡಿ ಎಂದಾದರೂ ಹೇಳಬಹುದು; ಅಥವಾ ಕಾಲವನ್ನು ಸ್ವಲ್ಪ ವಿಳಂಬ ಮಾಡಿ ಅವನ ಅಂಗಡಿ ಎಂದಾದರೂ ಹೇಳಬಹುದು. ಅದು ಹೇಳುವವನ ಇಚ್ಛೆಯನ್ನು ಅವಲಂಬಿಸಿರುತ್ತದೆ. ಅವನಂಗಡಿ ಎನ್ನುವಾಗ (ಅವನ+ಅಂಗಡಿ) ಇಲ್ಲಿ ಸಂಧಿಸುವ ಸ್ವರಗಳು + ಎಂಬುವು. ಇವುಗಳಲ್ಲಿ ಮೊದಲಿನ ಅಕಾರವನ್ನು ತೆಗೆದುಹಾಕುತ್ತೇವೆ. ಆದ್ದರಿಂದ ಎರಡು ಅಕ್ಷರಗಳು ಸಂಧಿಸುವಿಕೆಯೇ ಸಂಧಿಯೆನಿಸುವುದೆಂದಹಾಗಾಯಿತು. ಇದರ ಸೂತ್ರವನ್ನು ಹೀಗೆ ಹೇಳಬಹುದು:-

(೧೫) ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಸೇರುವುದೇ ಸಂಧಿಯೆನಿಸುವುದು.

(i) ಸ್ವರದ ಮುಂದೆ ಸ್ವರ ಬಂದು ಹೀಗೆ ಸಂಧಿಯಾದರೆ ಸ್ವರಸಂಧಿಯೆನ್ನುತ್ತೇವೆ.

(ii) ಸ್ವರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ವ್ಯಂಜನಸಂಧಿಯೆನ್ನುತ್ತೇವೆ.

(iii) ಹೀಗೆ ಸಂಧಿಯಾಗುವಾಗ ಹಲಕೆಲವು ವ್ಯತ್ಯಾಸಗಳು ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವುವು. ಅವನ್ನೇ ಸಂಧಿಕಾರ್ಯಗಳು ಎನ್ನುತ್ತೇವೆ. ಅವುಗಳನ್ನು ಮುಂದೆ ತಿಳಿಯೋಣ.

ಅಧ್ಯಾಯ : ಸಂಧಿಪ್ರಕರಣ: ಭಾಗ II – ಕನ್ನಡ ಸಂಧಿಗಳು

. ಲೋಪಸಂಧಿ

ಊರು + ಅಲ್ಲಿ ಎಂಬಲ್ಲಿ ಎಂಬ ಸ್ವರದ ಮುಂದೆ ಎಂಬ ಸ್ವರ ಬಂದಿದೆ. ಕೂಡಿಸಿ ಬರೆದರೆ ಊರ್ ಅಲ್ಲಿ = ಊರಲ್ಲಿ ಎಂದಾಯಿತು. ಅಂದರೆ ರಕಾರದಲ್ಲಿರುವ ಕಾರ ಬಿಟ್ಟುಹೋಯಿತು. ಇದರ ಹಾಗೆ ಕೆಳಗಿನ ಇನ್ನೂ ಕೆಲವು ಉದಾಹರಣೆಗಳನ್ನು ನೋಡಿರಿ:-

ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲದಾಯಿತು)
(
+ )

ಆಡು + ಇಸು = ಆಡಿಸು (ಉಕಾರ ಇಲ್ಲದಾಯಿತು)
(
+ )

ಬೇರೆ + ಒಬ್ಬ = ಬೇರೊಬ್ಬ (ಎಕಾರ ಇಲ್ಲದಾಯಿತು)
(
+ )

ನಿನಗೆ + ಅಲ್ಲದೆ = ನಿನಗಲ್ಲದೆ (ಎಕಾರ ಇಲ್ಲದಾಯಿತು)
(
+ )

ನಾವು + ಎಲ್ಲಾ = ನಾವೆಲ್ಲಾ (ಉಕಾರ ಬಿಟ್ಟುಹೋಯಿತು)
(
+ )

ಮೇಲಿನ ಉದಾಹರಣೆಗಳಲ್ಲೆಲ್ಲಾ, ಎರಡು ಸ್ವರಗಳು ಸಂಧಿಸುವಾಗ ಮೊದಲನೆಯ ಸ್ವರವು ಇಲ್ಲದಂತಾಗುವುದು (ಲೋಪವಾಗುವುದು) ಕಂಡು ಬರುತ್ತದೆ. ಆದರೆ ಕೆಲವು ಕಡೆಗೆ ಸ್ವರದ ಮುಂದೆ ಸ್ವರವು ಬಂದಾಗ ಲೋಪ ಮಾಡಿದರೆ ಅರ್ಥವು ಕೆಡುವುದು. ಕೆಳಗಿನ ಉದಾಹರಣೆಗಳನ್ನು ನೋಡಿರಿ:-

ಮನೆ + ಇಂದಇಲ್ಲಿ ಲೋಪಮಾಡಿದರೆ ಮನಿಂದ ಎಂದಾಗುವುದು
(
+ )

ಗುರು + ಅನ್ನುಇಲ್ಲಿ ಲೋಪಮಾಡಿದರೆ ಗುರನ್ನು ಆಗುವುದು
(
+ )

ಹಾಗಾದರೆ ಅರ್ಥವು ಹಾಳಾಗುವಲ್ಲಿ ಲೋಪ ಮಾಡಬಾರದು. ಅಲ್ಲಿ ಬೇರೆ ವಿಧಾನವನ್ನು (ಮಾರ್ಗವನ್ನು) ಅನುಸರಿಸಬೇಕಾಗುವುದು. ಹಾಗಾದರೆ ಒಟ್ಟಿನಲ್ಲಿ ಲೋಪಸಂಧಿಗೆ ಸೂತ್ರವನ್ನು ಹೀಗೆ ಹೇಳಬಹುದು:-

(೧೬) ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು.

ಉದಾಹರಣೆಗೆ:-

ಊರು + ಅಲ್ಲಿ = ಊರಲ್ಲಿ (ಉಕಾರ ಲೋಪ)
(
+ )

ದೇವರು + ಇಂದ = ದೇವರಿಂದ (ಉಕಾರ ಲೋಪ)
(
+ )

ಬಲ್ಲೆನು + ಎಂದು = ಬಲ್ಲೆನೆಂದು (ಉಕಾರ ಲೋಪ)
(
+ )

ಏನು + ಆದುದು = ಏನಾದುದು (ಉಕಾರ ಲೋಪ)
(
+ )

ಇವನಿಗೆ + ಆನು = ಇವನಿಗಾನು (ಎಕಾರ ಲೋಪ)
(
+ )

ಅವನ + ಊರು = ಅವನೂರು (ಅಕಾರ ಲೋಪ)
(
+ )

. ಆಗಮ ಸಂಧಿ

ಮೇಲೆ ಹೇಳಿದ ಲೋಪಸಂಧಿಯನ್ನು ಅರ್ಥವು ಕೆಡದಂತಿದ್ದರೆ ಮಾತ್ರ ಮಾಡಬೇಕು, ಇಲ್ಲದಿದ್ದರೆ ಮಾಡಬಾರದು ಎಂದು ತಿಳಿದಿದ್ದೀರಿ.

ಮನೆ + ಅನ್ನು ಎಂಬಲ್ಲಿ ಲೋಪ ಮಾಡಿದರೆ ಮನನ್ನು ಆಗುವುದು,

ಗುರು + ಅನ್ನು ಎಂಬಲ್ಲಿ ಲೋಪ ಮಾಡಿದರೆ ಗುರನ್ನು ಆಗುವುದು

ಎಂಬುದನ್ನು ಹಿಂದೆ ತಿಳಿದಿದ್ದೀರಿ. ಹಾಗಾದರೆ ಮನೆ + ಅನ್ನು, ಗುರು + ಅನ್ನು ಇವು ಕೂಡುವಾಗ ಪದದ ಮಧ್ಯದಲ್ಲಿ ಸ್ವರದ ಮುಂದೆ ಸ್ವರ ಬಂದಿದೆಯಾದ್ದರಿಂದ ಅವನ್ನು ಬಿಡಿ ಬಿಡಿಸಿ ಅನ್ನಲೂ ಕೂಡ ಯೋಗ್ಯವಾಗುವುದಿಲ್ಲ. ಆಗ ಎರಡೂ ಸ್ವರಗಳ ಮಧ್ಯದಲ್ಲಿ ಕೂಡಿಸಿ ಹೇಳಲು ಅನುಕೂಲವಾಗುವಂತಹ ಯ್ಕಾರವನ್ನೋ, ವ್ ಕಾರವನ್ನೋ ಹೊಸದಾಗಿ ಸೇರಿಸಿದಾಗ ಉಚ್ಚಾರಮಾಡಲು ಅನುಕೂಲವಾಗುವುದು. ಹೀಗೆ ಹೊಸದಾಗಿ ಸೇರುವ ಅಕ್ಷರವೇ ಆಗಮಾಕ್ಷರ. ಹಾಗೆ ಹೊಸ ಅಕ್ಷರವನ್ನು ಸೇರಿಸಿ ಹೇಳುವ ಸಂಧಿಯೇ ಆಗಮಸಂಧಿ. ಕೆಳಗಿನ ಉದಾಹರಣೆಗಳನ್ನು ನೋಡಿರಿ:-

ಯಕಾರಾಗಮ ಬರುವುದಕ್ಕೆ

ತೆನೆ
+
ಅನ್ನು
=
ತೆನೆ
+
ಯ್
+
ಅನ್ನು
=
ತೆನೆಯನ್ನು
ಕೈ
+
ಅನ್ನು
=
ಕೈ
+
ಯ್
+
ಅನ್ನು
=
ಕೈಯನ್ನು
ಚಳಿ
+
ಅಲ್ಲಿ
=
ಚಳಿ
+
ಯ್
+
ಅಲ್ಲಿ
=
ಚಳಿಯಲ್ಲಿ
ಮಳೆ
+
ಇಂದ
=
ಮಳೆ
+
ಯ್
+
ಇಂದ
=
ಮಳೆಯಿಂದ
ಗಾಳಿ
+
ಅನ್ನು
=
ಗಾಳಿ
+
ಯ್
+
ಅನ್ನು
=
ಗಾಳಿಯನ್ನು
ಕೆರೆ
+
ಅಲ್ಲಿ
=
ಕೆರೆ
+
ಯ್
+
ಅಲ್ಲಿ
=
ಕೆರೆಯಲ್ಲಿ
ಮರೆ
+
ಇಂದ
=
ಮರೆ
+
ಯ್
+
ಇಂದ
=
ಮರೆಯಿಂದ

ವಕಾರಾಗಮ ಬರುವುದಕ್ಕೆ

ಗುರು
+
ಅನ್ನು
=
ಗುರು
+
ವ್
+
ಅನ್ನು
=
ಗುರುವನ್ನು
ಪಿತೃ
+
ಅನ್ನು
=
ಪಿತೃ
+
ವ್
+
ಅನ್ನು
=
ಪಿತೃವನ್ನು
ಮಗು
+
ಇಗೆ
=
ಮಗು
+
ವ್
+
ಇಗೆ
=
ಮಗುವಿಗೆ
+
ಉಂಗುರ
=
+
ವ್
+
ಉಂಗುರ
=
ಆವುಂಗುರ
+
ಊರು
=
+
ವ್
+
ಊರು
=
ಆವೂರು
+
ಒಲೆ
=
+
ವ್
+
ಒಲೆ
=
ಆವೊಲೆ
ಪೂ
+
ಅನ್ನು
=
ಪೂ
+
ವ್
+
ಅನ್ನು
=
ಪೂವನ್ನು

ಮೇಲೆ ತೋರಿಸಿರುವ ಯಕಾರಗಮ, ವಕಾರಾಗಮ ಸಂಧಿ ಬಂದಿರುವ ಸ್ಥಳಗಳಲ್ಲೆಲ್ಲ ಲೋಪಸಂಧಿಯನ್ನು ಮಾಡಿ ಹೇಳಲೂಬಾರದು, ಬರೆಯಲೂ ಬಾರದು. ಹಾಗೆ ಲೋಪ ಮಾಡಿದರೆ ಅರ್ಥವು ಹಾಳಾಗುವುದೆಂದು ಕಂಡಿದ್ದೀರಿ. ಆದುದರಿಂದ ಆಗಮಸಂಧಿಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-

(೧೭) ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು.

ಯಕಾರಾಗಮ ವಕಾರಾಗಮ ಎಲ್ಲೆಲ್ಲಿ ಬರುತ್ತವೆಂಬುದನ್ನು ತೀಳಿಯೋಣ:-

() ಯಕಾರಾಗಮ ಸಂಧಿ:-

, , , , , ಗಳ ಮುಂದೆ ಸ್ವರ ಬಂದರೆ ಎರಡೂ ಸ್ವರಗಳ ಮಧ್ಯದಲ್ಲಿ ಯ್ ಕಾರವು ಆಗಮವಾಗುವುದು.

ಉದಾಹರಣೆಗೆ:-

[1]ಕಾ+ಅದೆ =ಕಾ+ಯ್+ಅದೆ=ಕಾಯದೆ
(
+)

ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು
(
+)

[2]ಮೀ+ಅಲು=ಮೀ+ಯ್+ಅಲು=ಮೀಯಲು
(
+)

ಕೆರೆ+ಅನ್ನು=ಕೆರೆ+ಯ್+ಅನ್ನು=ಕೆರೆಯನ್ನು
(
+)

[3]ಮೇ+ಇಸು=ಮೇ+ಯ್+ಇಸು=ಮೇಯಿಸು
(
+)

ಮೈ+ಅನ್ನು=ಮೈ+ಯ್+ಅನ್ನು=ಮೈಯನ್ನು
(
+)

() ವಕಾರಾಗಮ ಸಂಧಿ:-

(i) , , , ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ವ್ ಕಾರವು ಆಗಮವಾಗಿ ಬರುವುದು.

ಉದಾಹರಣೆಗೆ:-

ಮಡು+ಅನ್ನು=ಮಡು+ವ್+ಅನ್ನು=ಮಡುವನ್ನು
(
+)

ಪೂ+ಇಂದ=ಪೂ+ವ್+ಇಂದ=ಪೂವಿಂದ
(
+)

ಮಾತೃ+ಅನ್ನು=ಮಾತೃ+ವ್+ಅನ್ನು=ಮಾತೃವನ್ನು
(
+)

ಗೋ+ಅನ್ನು=ಗೋ+ವ್+ಅನ್ನು=ಗೋವನ್ನು
(
+)

(ii) ಅಕಾರದ ಮುಂದೆ ಅಕಾರವೇ ಬಂದರೆ ವ್ ಕಾರಾಗಮವಾಗುವುದು. (ಪ್ರಕೃತಿ ಪ್ರತ್ಯಯ ಸೇರುವಾಗ ಮಾತ್ರ ಸಂಧಿಯಾಗುವುದು)

ಉದಾಹರಣೆಗೆ:-

ಹೊಲ+ಅನ್ನು=ಹೊಲ+ವ್+ಅನ್ನು=ಹೊಲವನ್ನು

ನೆಲ+ಅನ್ನು= ನೆಲ+ವ್+ಅನ್ನು=ನೆಲವನ್ನು

ಕುಲ+ಅನ್ನು=ಕುಲ+ವ್+ಅನ್ನು=ಕುಲವನ್ನು

ತಿಲ+ಅನ್ನು=ತಿಲ+ವ್+ಅನ್ನು=ತಿಲವನ್ನು

ಮನ+ಅನ್ನು=ಮನ+ವ್+ಅನ್ನು=ಮನವನ್ನು

(iii) [4] ಎಂಬ ಶಬ್ದದ ಮುಂದೆ , , , ಗಳು ಬಂದರೆ ನಡುವೆ ಕಾರವು ಆಗಮವಾಗಿ ಬರುವುದುಂಟು. (ಸಂಧಿಯನ್ನು ಮಾಡದೆಯೂ ಹೇಳಬಹುದು)

ಉದಾಹರಣೆಗೆ:-

+ ಉಂಗುರ = + ವ್ + ಉಂಗುರ = ಆವುಂಗುರ

+ ಊಟ = + ವ್ + ಊಟ = ಆವೂಟ

+ ಒಂಟೆ = + ವ್ + ಒಂಟೆ = ಆವೊಂಟೆ

+ ಓಟ = + ವ್ + ಓಟ = ಆವೋಟ

ಸಂಧಿ ಮಾಡದಿರುವುದಕ್ಕೆ- ಉಂಗುರ, ಊಟ, ಒಂಟೆ, ಓಟ (ಹೀಗೂ ಹೇಳಬಹುದು)

(iv) ಶಬ್ದದ ಮುಂದೆ , , , ಗಳು ಬಂದರೆ, ಯಕಾರಾಗಮ ವನ್ನಾದರೂ ಮಾಡಬಹುದು; ಅಥವಾ ವಕಾರಾಗಮವನ್ನಾದರೂ ಮಾಡಬಹುದು

ಉದಾಹರಣೆಗೆ:-

+ ಉದಕ = + ಯ್ + ಉದಕ
=
ಈಯುದಕ
ಈವುದಕ
+ ಊರು = + ಯ್ + ಊರು
=
ಈಯೂರು
ಈವೂರು
+ ಊಟ = + ಯ್ + ಊಟ
=
ಈಯೂಟ
ಈವೂಟ
+ ಒಲೆ = + ಯ್ + ಒಲೆ
=
ಈಯೊಲೆ
ಈವೊಲೆ
+ ಒಂಟೆ = + ಯ್ + ಒಂಟೆ
=
ಈಯೊಂಟೆ
ಈವೊಂಟೆ
+ ಓಕುಳಿ = + ಯ್ + ಓಕುಳಿ
=
ಈಯೋಕುಳಿ
ಈವೋಕುಳಿ
+ ಓಲೆ = + ಯ್ + ಓಲೆ
=
ಈಯೋಲೆ
ಈವೋಲೆ

ಮೇಲೆ ಹೇಳಿದ ಕಡೆಗಳಲ್ಲಿ ಸಂಧಿಗಳನ್ನು ಮಾಡದೆಯೆ ಉದಕ, ಊರು, ಒಂಟೆ, ಓಲೆ ಹೀಗೆಯೂ ಬರೆಯಬಹುದು

(v) ಕಾರದ ಮುಂದೆ ಸ್ವರ ಬಂದರೆ ಕಾರಾಗಮ ಬರುವುದೆಂದು ಹಿಂದೆ ಹೇಳಿದೆಯಷ್ಟೆ. ಆದರೆ ಕೆಲವು ಕಡೆ ಯಕಾರಾಗಮ ಬರುವುದುಂಟು.

ಉದಾಹರಣೆಗೆ:-

ಗೋ + ಅನ್ನು = ಗೋವನ್ನು (ವಕಾರಾಗಮ ಬಂದಿದೆ)
(
+ )

ನೋ + ಅಲು = ನೋಯಲು (ಯಕಾರಾಗಮ ಬಂದಿದೆ)
(
+ )

. ಆದೇಶ ಸಂಧಿ

ಇದುವರೆಗೆ ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿಯೋ, ಆಗಮಸಂಧಿಯೋ ಆಗುವ ವಿಚಾರ ನೋಡಿದೆವು. ಈಗ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ್ಯ ನಡೆಯುವುದೆಂಬುದನ್ನು ತಿಳಿಯೋಣ.

ಮಳೆ + ಕಾಲ = ಮಳೆಗಾಲ (ಮಳೆ + ಗ್ಆಲ)

ಚಳಿ + ಕಾಲ = ಚಳಿಗಾಲ (ಚಳಿ +ಗ್ಆಲ)

ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್ಆವರೆ)

ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್ಎಟ್ಟು)

ಕಣ್ + ಪನಿ = ಕಂಬನಿ (ಕಂ + ಬ್ಅನಿ)

ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ನೆಯ ಪದ [ಉತ್ತರಪದ][5] ಮೊದಲನೆಯ ಕಾರಕ್ಕೆ ಕಾರ ಬಂದಿದೆ. ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ. ಬೆಟ್ಟ + ತಾವರೆ ಎಂಬೆರಡು ಪದಗಳಲ್ಲಿ ನೆಯ ಪದದ ಮೊದಲಕ್ಷರವಾದ ಕಾರಕ್ಕೆ ಕಾರ ಬಂದಿದೆ. [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ] ಕಣ್ + ಪನಿ ಎಂಬಲ್ಲಿ ಕಾರಕ್ಕೆ ಕಾರ ಬಂದಿದೆ. ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು. ಕನ್ನಡ ಸಂಧಿಗಳಲ್ಲಿ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.

(೧೮) ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು.

ಹಾಗಾದರೆ ಎಲ್ಲೆಲ್ಲಿ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರುವುದು? ಎಂಬುದನ್ನು ವಿವರವಾಗಿ ತಿಳಿಯೋಣ.

(i) ಸಮಾಸದಲ್ಲಿ[6] ಉತ್ತರಪದದ ಆದಿಯಲ್ಲಿರುವ ವ್ಯಂಜನಗಳಿಗೆ ಕ್ರಮವಾಗಿ ವ್ಯಂಜನಗಳು ಆದೇಶವಾಗಿ ಬರುವುವು.

ಉದಾಹರಣೆಗೆ:-

ಹುಲ್ಲು + ಕಾವಲು
=
*ಹುಲ್ಲು + ಗ್ ಆವಲು
=
ಹುಲ್ಲುಗಾವಲು
(
ಕಕಾರಕ್ಕೆ ಗಕಾರಾದೇಶ)
ಹಳ + ಕನ್ನಡ
=
ಹಳ + ಗ್ ಅನ್ನಡ
=
ಹಳಗನ್ನಡ
(
ಕಕಾರಕ್ಕೆ ಗಕಾರಾದೇಶ)
ಕಳೆ + ಕೂಡಿ
=
ಕಳೆ + ಗ್ ಊಡಿ
=
ಕಳೆಗೂಡಿ
(
ಕಕಾರಕ್ಕೆ ಗಕಾರಾದೇಶ)
ಎಳೆ + ಕರು
=
ಎಳೆ + ಗ್ ಅರು
=
ಎಳೆಗರು
(
ಕಕಾರಕ್ಕೆ ಗಕಾರಾದೇಶ)
ಮನೆ + ಕೆಲಸ
=
ಮನೆ + ಗ್ ಎಲಸ
=
ಮನೆಗೆಲಸ
(
ಕಕಾರಕ್ಕೆ ಗಕಾರಾದೇಶ)
ಮೈ + ತೊಳೆ
=
ಮೈ + ದ್ ಒಳೆ
=
ಮೈದೊಳೆ
(
ತಕಾರಕ್ಕೆ ದಕಾರಾದೇಶ)
ಮೇರೆ + ತಪ್ಪು
=
ಮೇರೆ + ದ್ ಅಪ್ಪು
=
ಮೇರೆದಪ್ಪು
(
ತಕಾರಕ್ಕೆ ದಕಾರಾದೇಶ)
ಕಣ್ + ಪನಿ
=
ಕಣ್ + ಬ್ ಅನಿ
=
ಕಂಬನಿ
(
ಪಕಾರಕ್ಕೆ ಬಕಾರಾದೇಶ)
ಬೆನ್ + ಪತ್ತು
=
ಬೆನ್ + ಬ್ ಅತ್ತು
=
(ಬೆಂಬತ್ತು)
(
ಪಕಾರಕ್ಕೆ ಬಕಾರಾದೇಶ)

ಕೆಲವು ಕಡೆ ಆದೇಶಗಳು ಬಾರದೆ ಇರುವುದೂ ಉಂಟು

ಮನೆ + ಕಟ್ಟು = ಮನೆಕಟ್ಟು

ತಲೆ + ಕಟ್ಟು = ತಲೆಕಟ್ಟು

(ii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ವ್ಯಂಜನಗಳಿಗೆ ಕಾರವು ಆದೇಶವಾಗಿ ಬರುವುದು[7]

ಉದಾಹರಣೆಗೆ:-

ನೀರ್ + ಪೊನಲ್
=
ನೀರ್ + ವ್ ಒನಲ್ = ನೀರ್ವೊನಲ್
(
ಪಕಾರಕ್ಕೆ ವಕಾರಾದೇಶ)
ಎಳ + ಪೆರೆ
=
ಎಳ + ವ್ ಎರೆ = ಎಳವರೆ
(
ಪಕಾರಕ್ಕೆ ವಕಾರಾದೇಶ)
ಬೆಮರ್ + ಪನಿ
=
ಬೆಮರ್ + ವ್ ಅನಿ = ಬೆಮರ್ವನಿ
(
ಪಕಾರಕ್ಕೆ ವಕಾರಾದೇಶ)
ಬೇರ್ + ಬೆರಸಿ
=
ಬೇರ್ + ವ್ ಎರಸಿ = ಬೇರ್ವೆರಸಿ
(
ಬಕಾರಕ್ಕೆ ವಕಾರಾದೇಶ)
ಕಡು + ಬೆಳ್ಪು
=
ಕಡು + ವ್ ಎಳ್ಪು = ಕಡುವೆಳ್ಪು
(
ಬಕಾರಕ್ಕೆ ವಕಾರಾದೇಶ)
ಎಳ + ಬಳ್ಳಿ
=
ಎಳ + ವ್ ಅಳ್ಳಿ = ಎಳವಳ್ಳಿ
(
ಬಕಾರಕ್ಕೆ ವಕಾರಾದೇಶ)
ಮೆಲ್ + ಮಾತು
=
ಮೆಲ್ + ವ್ ಆತು = ಮೆಲ್ವಾತು
(
ಮಕಾರಕ್ಕೆ ವಕಾರಾದೇಶ)
ನೆಲೆ + ಮನೆ
=
ನೆಲೆ + ವ್ ಅನೆ = ನೆಲೆವನೆ
(
ಮಕಾರಕ್ಕೆ ವಕಾರಾದೇಶ)

ಇದರ ಹಾಗೆ…….ಕಿಸುವಣ್, ಎಸರ್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ.

ಆದೇಶವು ಕೆಲವು ಕಡೆ ಬರುವುದಿಲ್ಲ. ಅದಕ್ಕೆ ಉದಾಹರಣೆ:-

ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)

ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)

ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)

(iii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಸಕಾರಕ್ಕೆ ಸಾಮಾನ್ಯವಾಗಿ ಕೆಲವು ಕಡೆ ಚಕಾರವೂ, ಕೆಲವು ಕಡೆ ಜಕಾರವೂ, ಕೆಲವು ಕಡೆ ಛಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು.

ಉದಾಹರಣೆಗೆ:-

() ಸಕಾರಕ್ಕೆ ಚಕಾರ ಬರುವುದಕ್ಕೆ__
ಇನ್ + ಸರ = ಇನ್ + ಚ್ ಅರ = ಇಂಚರ
ನುಣ್ + ಸರ = ನುಣ್ + ಚ್ ಅರ = ನುಣ್ಚರ

() ಸಕಾರಕ್ಕೆ ಜಕಾರ ಬರುವುದಕ್ಕೆ__
ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು
ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್
ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್

() ಸಕಾರಕ್ಕೆ ಛಕಾರ ಬರುವುದಕ್ಕೆ__
ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ
ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ
ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ

ಕೆಲವು ಕಡೆ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.

ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.



[1]ಕಾಎಂಬುದುರಕ್ಷಣೆ ಮಾಡುಎಂಬರ್ಥದಲ್ಲಿ ಏಕಾಕ್ಷರಧಾತು. ಹೊಸಗನ್ನಡದಲ್ಲಿಕಾಧಾತುಕಾಯ್ಆಗುವುದೆಂದು ಕೆಲವರು ಒಪ್ಪುತ್ತಾರೆ.

[2] ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.

[3] ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.

[4] ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಎಂಬುದು ಆದೇಶವಾಗಿ ಬರುವುದು. ಹಾಗೆ ಆದೇಶವಾಗಿ ಬಂದ ಆಕಾರವೇ ಶಬ್ದವೆನಿಸುವುದು. ಉದಾ.:-ಅವನು+ಗಂಡಸು= ಗಂಡಸು; ಅವಳು+ಹೆಂಗಸು= ಹೆಂಗಸು; ಅದು+ಕಲ್ಲು= ಕಲ್ಲು ಇದರಂತೆ ಕೆಲವು ಕಡೆಇವನು+ಗಂಡಸು= ಗಂಡಸು; ಇವಳು+ಹೆಂಗಸು= ಹೆಂಗಸು; ಇದು+ಕಲ್ಲು= ಕಲ್ಲುಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಆದೇಶವಾಗಿ ಬಂದರೆ ಇದನ್ನು ಶಬ್ದವೆನ್ನುವರು

[5] ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ. ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ. ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು

[6] ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ. ಆಗ ಸ್ಪಷ್ಟವಾಗಿ ತಿಳಿದುಬರುವುದು. ಈಗ ಸಂಧಿಕಾರ್ಯಗಳನ್ನಷ್ಟು ಗಮನಿಸಿದರೆ ಸಾಕು.

* ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು. ಇದರಂತೆ ಉಳಿದವುಗಳನ್ನೂ ತಿಳಿಯಬೇಕು.

[7] ವ್ಯಂಜನಗಳಿಗೆ ಎಂದರೆ ಪ್, ಬ್, ಮ್ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು. ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ -ಇತ್ಯಾದಿ ಬರೆದಿದೆ. ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.

No comments:

Post a Comment