Friday, 4 September 2015

ಇಂದು ಎನಗೆ ಗೋವಿಂದ


ಇಂದು ಎನಗೆ ಗೋವಿಂದ 
ನಿನ್ನಯ ಪಾದಾರವಿಂದವ ತೋರೋ 
ಮುಕುಂದನೇ, ಮುಕುಂದನೇ
ಸುಂದರ ವದನನೇ ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ 

ನೊಂದೇನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೇ

ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...ಸೇರಿದೆ ಕುಜನರಾ
ಯಾರುಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ

ಸಾಹಿತ್ಯ:  ರಾಘವೇಂದ್ರ ಸ್ವಾಮಿಗಳು

No comments:

Post a Comment