Friday, 4 September 2015

ಮಾಣಿಕ್ಯವೀಣಾಮುಫಲಾಲಯಂತೀಂ


ಮಾಣಿಕ್ಯವೀಣಾಮುಫಲಾಲಯಂತೀಂ
ಮದಾಲಸಾಂ ಮಂಜುಲವಾಗ್ವಿಲಾಸಾಂ |
ಮಾಹೇಂದ್ರನೀಲದ್ಯುತಿಕೋಮಲಾಂಗೀಂ
ಮಾತಂಗಕನ್ಯಾಂ ಮನಸಾಸ್ಮರಾಮಿ ||

ಮಾಣಿಕ್ಯವೀಣೆಯನ್ನು ಪ್ರೀತಿಯಿಂದ ನುಡಿಸುತ್ತಿರುವಮದದಿಂದ ಆಲಸಳಾಗಿರುವಮಧುರವಾದ ಮಾತಿನ ವಿಲಾಸವುಳ್ಳಕಾಂತಿಯೊಡಗೂಡಿ ನೀಲಬಣ್ಣದ ಮೋಡದಂತಹ ಶರೀರವುಳ್ಳಮತಂಗ ಋಷಿಯ ಕನ್ಯೆಯನ್ನು ಯಾವಾಗಲೂ ಸ್ಮರಿಸುತ್ತೇನೆ.


ಚತುರ್ಭುಜೇ ಚಂದ್ರಕಲಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ |
ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣಹಸ್ತೇ
ನಮಸ್ತೇ  ಜಗದೇಕಮಾತಃ. ||

ನಾಲ್ಕು ಭುಜಗಳುಳ್ಳಚಂದ್ರಕಲೆಯನ್ನು ಮುಡಿದಿರುವ ಕುಂಕುಮದಂತೆ ಕೆಂಪುಬಣ್ಣದ ವಕ್ಷಸ್ಥಲವಿರುವಕಬ್ಬಿಣ ಜಲ್ಲೆಪಾಶಅಂಕುಶಹೂವಿನ ಬಾಣಗಳನ್ನು ಕೈಯಲ್ಲಿ ಧರಿಸಿರುವಜಗತ್ತಿನ ಒಬ್ಬಳೇ ತಾಯಿಯಾದ ನಿನಗೆ ನಮಸ್ಕಾರ.


ಸರ್ವತೀರ್ಥಾತ್ಮಿಕೇಸರ್ವಮಂತ್ರಾತ್ಮಿಕೇ,
ಸರ್ವತಂತ್ರಾತ್ಮಿಕೇಸರ್ವಯಂತ್ರಾತ್ಮಿಕೇ,
ಸರ್ವಪೀಠಾತ್ಮಿಕೇಸರ್ವತತ್ವಾತ್ಮಿಕೇ,
ಸರ್ವಯೋಗಾತ್ಮಿಕೇಸರ್ವನಾದಾತ್ಮಿಕೇ,
ಸರ್ವಶಬ್ದಾತ್ಮಿಕೇಸರ್ವವಿಶ್ವಾತ್ಮಿಕೇ,
ಸರ್ವದೀಕ್ಷಾತ್ಮಿಕೇ,  ಸರ್ವಸರ್ವಾತ್ಮಿಕೇ,
ಸರ್ವಗೇ ಪಾಹಿ ಮಾಂ,
ಪಾಹಿ ಮಾಂದೇವಿ ತುಭ್ಯಂ ನಮೋ,
ದೇವಿ ತುಭ್ಯಂ ನಮೋದೇವಿ ತುಭ್ಯಂ ನಮಃ


ಎಲ್ಲ ತೀರ್ಥಸ್ವರೂಪಳೇಎಲ್ಲ ಮಂತ್ರಗಳ ಮೂರ್ತಿಯೇಎಲ್ಲ ತಂತ್ರಗಳ ರೂಪಳೇಎಲ್ಲ ಯಂತ್ರಗಳನ್ನೂ ಮೂರ್ತಿಯಾಗಿ ಉಳ್ಳವಳೇಎಲ್ಲ ಪೀಠಗಳ ಅಧಿಷ್ಠಾತ್ರಿಎಲ್ಲ ತತ್ವಗಳ ಮೂಲವಾಗಿ ಇರುವವಳೇಎಲ್ಲ ಶಕ್ತಿಗಳ ಸ್ವರೂಪಳೇಎಲ್ಲ ಯೋಗಗಳಎಲ್ಲ ನಾದಗಳಎಲ್ಲ ಶಬ್ದಗಳಎಲ್ಲ ವಿಶ್ವದಎಲ್ಲದರ ಆತ್ಮವಾಗಿರುವವಳೇಎಲ್ಲೆಡೆಯಲ್ಲಿಯೂ ಇರುವವಳೇ ನನ್ನನ್ನು ಕಾಪಾಡುನನ್ನನ್ನು ಪೊರೆಪಾಹಿ ಮಾಂದೇವಿ ನಿನಗೆ ನಮಸ್ಕಾರದೇವಿ ನಿನಗೆ ನಮಸ್ಕಾರದೇವಿ ನಿನಗೆ ನಮಸ್ಕಾರ.

No comments:

Post a Comment