Friday, 4 September 2015

ಕೊಡು ಬೇಗ ದಿವ್ಯಮತಿ ಸರಸ್ವತಿ


ಕೊಡು ಬೇಗ ದಿವ್ಯಮತಿ ಸರಸ್ವತಿ

ಮೃಡ ಹರಿ ಹಯಮುಖರೊಡೆಯಳೆ ನಿನ್ನ
ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ

ಇಂದಿರಾ ರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ

ಪತಿತ ಪಾವನೆ ನೀನೇ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ

ಸಾಹಿತ್ಯ: ಪುರಂದರದಾಸರು

ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ


ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ
ಸಂಗೀತ ಸಾಹಿತ್ಯ ಸಕಲಕಲಾ ವಿಶಾರದೆ
ತುಂಗಾ ನದೀತೀರ ಪೀಠಸ್ತಿತೆ
ಬಂಗಾರ ರಕ್ಷಿಸುವ ಲಕ್ಷ್ಮೀಯುತೆ
ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ
ಸಂಗೀತ ಸಾಹಿತ್ಯ ಸಕಲಕಲಾ ವಿಶಾರದೆ

ಸತ್ಯಶಿವ ಸುಂದರತೆ ಸಾಕಾರವಾಗಿ
ನಿತ್ಯನಿರ್ಮಲಜ್ಞಾನ ಜ್ಯೋತಿ ಬೆಳಗಿ
ನರ್ತಿಸೆ ದೇವಿ ನಾಲಿಗೆ ಮೇಲೆ
ಆಪ್ತಜನರ ಸಖಿ ಕರುಣಾವಿಶಾಲೆ
ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ
ಸಂಗೀತ ಸಾಹಿತ್ಯ ಸಕಲಕಲಾ ವಿಶಾರದೆ

ಚಿತ್ರ: ಕಾವೇರಿ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ ಪಿ. ಸುಶೀಲ

No comments:

Post a Comment