Friday, 4 September 2015


Untitled254_20150902234245079

ನಾಗ ದೋಷ ಎಂದರೇನು?

ಪ್ರತಿಯೊಬ್ಬ ಪೃಚ್ಛಕನಿಗೂ ಇರುವಂತಹ ಒಂದು ನಿಗೂಢ ಗೊಂದಲ ನಾಗ ದೋಷದ ಬಗ್ಗೆ. ಅನೇಕರು ತಮ್ಮ ಯಾವುದೇ ಸಮಸ್ಯೆಗೆ ‘. ನಾಗ ದೋಷವಿದೆಯೇ’
ಎಂದು ಮೊದಲಾಗಿ ತಮ್ಮ ಮನದೊಳಗಿನ ಗೊಂದಲ ಮುಂದಿಡುತ್ತಾರೆ. ಸರ್ಪ ಸಂಸ್ಕಾರ, ಆಶ್ಲೇಷಾಬಲಿ ಇತ್ಯಾದಿ ಸೇವೆಗಳನ್ನು ಮಾಡಿಸುತ್ತಾರೆ.ಯಾಕೆಂದರೆ ನಾಗದೋಷ ಪರಿಹಾರವಾಗಲಿ ಎಂಬ ಉದ್ದೇಶ. ಆದರೆ ಇವರಿಗೆ ನಾಗದೋಷ ಎಂದರೆ ಏನು ಎಂಬುದು ಗೊತ್ತಿಲ್ಲ. ನಾಗ ಬನಗಳನ್ನು ಮಲಿನ ಮಾಡಿದ್ದೋ, ನಾಶಮಾ ಡಿದ್ದೋ,ಸರ್ಪ ಹತ್ಯೆಯೋ ಇತ್ಯಾದಿಗಳಿಂದ. ದೋಷ ಗಳು ಉಂಟಾಗುವುದೇ ನಾಗದೋಷ ಎಂದು ತಿಳಿದುಕೊಳ್ಳುತ್ತಾರೆ.ಹಾಗೆ ತಿಳುವಳಿಕೆಯಲ್ಲಿ ಮೇಲೆ ಹೇಳಿದ ಪೂಜೆ ಮಾಡಿದರೆ ಏನೋ ಶೇಕಡಾ.5ಭಾಗ ಸರಿಯಾದೀತಷ್ಟೆ. ಹಾಗಾದರೆ ಹಾಗಾದರೆ ನಾಗದೋಷದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
(http://fightforright.co)
ಸಾಮಾನ್ಯವಾಗಿ ನಾಗ ದೋಷಗಳನ್ನು ತಿಳಿಯುವುದು ರಾಹು ಗ್ರಹದ ಮೂಲಕ. ಈ ರಾಹು ಗ್ರಹನು
೧.ಯಾವ ಗ್ರಹ ಸಂಬಂಧಿ ನಕ್ಷತ್ರದಲ್ಲಿ ಇರುತ್ತಾನೋ
೨. ಯಾವ ಗ್ರಹನ ಕ್ಷೇತ್ರದಲ್ಲಿ ಇರುತ್ತಾನೋ
೩. ಯಾವ ಗ್ರಹನ ಯುತಿ ಯಲ್ಲಿ ಇರುತ್ತಾನೋ
೪. ರಾಶಿಯಲ್ಲಿ ಯಾವ ಗ್ರಹನ ಅಂಶದಲ್ಲಿ ಇರುತ್ತಾನೋ( ಇಲ್ಲಿ ಸಾಮಾನ್ಯವಾಗಿ ಕೇವಲ ನವಾಂಶ ಮಾತ್ರ ನೋಡುತ್ತಾರೆ.ಎಲ್ಲಾ ಅಂಶ ಶೋಧಿಸಿದರೆ ಉತ್ತಮ. ಆದರೆ ಅದು ಬಹಳ ಕಷ್ಟದ ಕೆಲಸ)
೫. ಯಾವ ಗ್ರಹನ ದೃಷ್ಟಿಗೊಳಗಾಗಿರುತ್ತಾನೋ –
ಆ ಫಲಗಳ ನ್ನು ಕೊಡುತ್ತಾನೆ ಎಂದು ಹೇಳಿದೆ..ಆದರೆ ಕೊಡುವುದಲ್ಲ.ಆ ಫಲವನ್ನು ಉದ್ಧೀಪನ ಗೊಳಿಸುತ್ತಾನೆ ಎಂದರ್ಥ. ಇದು ರಾಹುವಿನ ಬಲಿಷ್ಟತೆಯ ಆಧಾರದಲ್ಲಿ ಇರುತ್ತದೆ.
ಇನ್ನು ಮೇಲಿನ ವಿಚಾರದ ಉದ್ಧೀಪನಗೊಳ್ಳುವ ಭಾವದ ಆಧಾರದಲ್ಲಿ ನೋಡಬೇಕು. ಅಲ್ಲದೆ ಆಭಾವವು ಯಾವ ಸ್ವರೂಪದ್ದು ಎಂಬ ಚಿಂತನೆಯನ್ನೂ ಮಾಡಬೇಕು.
ಉದಾಃ ಲಗ್ನದ ದ್ವಿತೀಯ ದಲ್ಲಿ ರಾಹು ಕುಜನ ಯುತಿಯಲ್ಲಿದ್ದರೆ-
ಅದು ಚಂದ್ರ ಕ್ಷೇತ್ರ ಕರ್ಕವಾಗಿದ್ದರೆ –
ದ್ವಿತೀಯವು ವಾಕ್ ಕ್ಷೇತ್ರ. ಇವರು ಉತ್ತಮ ವಾಗ್ಮಿ. ವಿಮರ್ಶಾತ್ಮಕ ಮಾತುಗಳಿರುತ್ತದೆ. ತನಗೆ ಇತರರ ಮಾತು ಹಿಡಿಸ ದಿದ್ದರೆ ಇವರು ಆ ಸಂಭಾಷಣೆಗೆ ಬೆಲೆ ಕೊಡುವುದಿಲ್ಲ.ಕುಜ ಯುತಿ ಇರುವುದರಿಂದ ಅನೀತಿ ಮಾತುಗಳನ್ನು ಕೇಳಿ ಕೋಪಗೊಂಡು ಕಡಕ್ ಉತ್ತರ ನೀಡಬಹುದು.ಅಥವಾ ಎದ್ದು ಹೋಗ ಬಹುದು. ಎದ್ದು ಹೋಗುವ ಮನಸ್ಸು ಬರುವುದು ಇವರಿಗೆ ಗುರು ಚೆನ್ನಾಗಿದ್ದರೆ ಮಾತ್ರ.ಗುರು ಸರಿ ಇಲ್ಲದಿದ್ದರೆ ಜಗಳ ಮಾಡಬಹುದು. ಕುಜ ಯುತಿಯಲ್ಲಿ ಇರುವು ದರಿಂದ ಋಣ ವಿಚಾರ, ಪ್ರತಿಷ್ಟೆ ಗೌರವಾದರಗಳ ವಿಚಾರದಲ್ಲಿ ಆಸಕ್ತರಾ ಗಿರುತ್ತಾರೆ. ಕುಜ ರೋಗ ಸ್ಥಾನಾಧಿಪನಾಗಿಯೂ ಇರುವುದರಿಂದ ಔಷಧಿ ಸಲಹೆಯಲ್ಲಿ ನಿಪುಣತೆ ಇವರಿಗಿರುತ್ತದೆ.
ಜಲ ರಾಶಿಯಾ ಗಿರುವುದರಿಂದ ಇವರು ಸ್ವಚ್ಛ ನೀರಿನ ಹರಿವನ್ನು ಪ್ರೀತಿಸುತ್ತಾರೆ. ಕುಜ ಯುತಿಯಲ್ಲಿ ಇರುವುದರಿಂದ ಶತ್ರುಗಳನ್ನು ಮಾತಿನಲ್ಲೇ ಮುಗಿಸುತ್ತಾರೆ. ಇವರ ಮಾತಿಗೆ ಎದುರಾಡುವ ಸಾಮರ್ಥ್ಯ ಇತರರಿಗೆ ಇರುವುದಿಲ್ಲ.ಆಗ ಶತ್ರುಗಳು ಹಿಂದಿನಿಂದ ಇವರ image, ಹಾಳುಮಾಡಲು ಪ್ರಯತ್ನಿಸುತ್ತಾರೆ.
ಇಂತಹ ಗುಣಗಳು ಸಮಯೋಚಿತವಾಗಿದ್ದಾಗ ಒಳ್ಳೆಯದಾಗಬಹುದು. wrong application ಆದಾಗ ಅಭಿವೃದ್ಧಿಗೆ ಹಾನಿಯೂ ಆಗಬಹುದು. ಆಗ ಕೆಲವೊಮ್ಮೆ, ಕೆಲವೊಂದು ವಿಚಾರಗಳಲ್ಲಿ ಕಣ್ಮುಚ್ಚಿ ಕುಳಿತು ಕೊಳ್ಳಬೇಕು.ಅಂದರೆ ಒಂದು ರೀತಿಯ compromise ಬೇಕು. ಇವರಿಗೆ ಇವನ ದಶಾಭುಕ್ತಿಗಳು ಉತ್ತಮ ಫಲ ನೀಡುತ್ತದೆ.ಆದರೆ ಇವನ ಚತುರ್ಥ ಕೇಂದ್ರದಲ್ಲಿ ಪಾಪ ಗ್ರಹರಿರಬಾರದು. ಇಂತಹ ಉದ್ಧೀಪನ (exiting nature ,ambitious) ಇರುವ ವ್ಯಕ್ತಿಗಳು ಈ ಭಾವದ ವಿಚಾರ ಅಂದರೆ ಮಾತು, ಹಣಕಾಸು,ಕುಟುಂಬ ವಿಚಾರಗಳಲ್ಲಿ ಕೆಲವೊಮ್ಮೆ compromise ಮಾಡಿಕೊಂಡರೆ ಉತ್ತಮ. ‘ಹೋಗಲಿ ನನಗೆ ಗೌರವ ಈ ಸಾರಿ ಸಿಕ್ಕದಿದ್ದರೂ ಪರವಾಗಿಲ್ಲ.ನನ್ನ ಕೆಲಸವಾದರೆ ಸಾಕು ‘ಎಂಬ ಸ್ವಾರ್ಥದಲ್ಲಿ ಸುಮ್ಮನಾ ಗಬೇಕು.
ಇವರು ರಾಹು ಪ್ರೀತ್ಯರ್ಥ ಅಂದರೆ ವಾಕ್ ಸ್ಥಾನದ ದೋಷ ನಿವಾರಣೆ ಗಾಗಿ,ಅಥವಾ ಉತ್ತಮ ಪರಿಣಾಮಕ್ಕಾಗಿ ವಾಣಿಕಾ ರಕಿ ಶಾರದೆಯ ಮಂತ್ರದ ಸಂಪುಟೀಕರಣದಲ್ಲಿ ನಾಗ ಮಂತ್ರ ಜಪಿಸಬೇಕು. ಅಥವಾ ದುರ್ಗಾ ಮಂತ್ರದಲ್ಲಿ ಸಂಪುಟೀಕರಣ ಮಾಡಿಕೊಂಡರೂ ಆಗುತ್ತದೆ.ಅದು ಹೇಗೆಂದರೆ-
ಓಂ ದುಂ ದುರ್ಗಾಯೆಯೈನಮಃ
ಎಂದು ಹನ್ನೆರಡು ಸಲ ಜಪಿಸಿಕೊಂಡು –
ಒಂ ನಮೋ ಭಗವತೇ ಕಾಮ ರೂಪಿಣಿ ಮಹಾಬಲಾಯ ನಾಗಾಧಿಪತಯೇ ಅನಂತಾಯ ನಮಃ ‘ ಎಂದು ಇಷ್ಟ ಪಟ್ಟ ಸಂಖ್ಯೆಯಲ್ಲಿ(12,24,48, 108 ಇತ್ಯಾದಿ) ಜಪಮಾಡಿ ಕೊನೆಗೆ ಮತ್ತೆ ಹನ್ನೆರಡು ಸಲ ದುರ್ಗಾ ಜಪ ಮಾಡಬೇಕು.ಇದು ನೇರವಾಗಿ ದ್ವಿತೀಯ ಭಾವ ಸಂಬಂಧಿತ ನಾಡಿಗಳ ಜಾಗೃತಿಯನ್ನು ಮಾಡುತ್ತದೆ.
ಇದನ್ನು ಸಾಮಾನ್ಯ ಭಾಷೆಯಲ್ಲಿ ‘ನಾಗದೋಷ’ ಎಂದು ಕರೆದರು. ಉದ್ಧೀಪನ ಅಥವಾ ನಿರುತ್ಸಾಹಿ ಯಾಗುವಿಕೆಯ ನಿಯಂತ್ರಣ ಇರುವುದು ನಾಗದೇವರಲ್ಲಿ.ಅವನ ಸ್ಮರಣೆಯನ್ನು ನಿಯಮ ಪೂರ್ವಕವಾಗಿ ಮಾಡಿದರೆ ಕ್ಷೇಮವಾಗುತ್ತದೆ.ಹೀಗೆಯೇ ಭಾವಕ್ಕನು ಗುಣವಾಗಿ ಚಿಂತನೆ ಬೇಕು.ಕೇವಲ ನಾಗನೇ ಸಾಲದು.ಹಲವು ದೇವತಾ ಶಕ್ತಿಗಳ ದರ್ಶನ ಉಪಾಸನೆಗಳು ರಾಹು ಸ್ಥಿತಿಗನುಗುಣವಾಗಿ ನೋಡಬೇಕು.ಇಲ್ಲಿ ಕೇವಲ ಒಂದು ಉದಾಹರಣೆ ಹೇಳಿದ್ದೇನೆ. ಅಂತೂ ನಾಗನು ಎಲ್ಲರಿಗೂ ಒಂದಲ್ಲ ಒಂದು ಭಾವಕ್ಕೆ ಇದ್ದೇ ಇರುತ್ತಾನೆ. ಇದನ್ನು ಸಕಲ ದೇವರ ಚಿತ್ರಗಳಲ್ಲಿ ನೋಡಬಹುದು.ಕೈಯಲ್ಲಿ ಹಿಡಿದ ಭದ್ರಕಾಳಿ,ಕುತ್ತಿಗೆಗೆ ಸುತ್ತಿಕೊಂಡ ಶಿವ,ಹೊಟ್ಟೆಗೆ ಸುತ್ತಿಕೊಂಡ ಗಣಪ ಹೀಗೇ ಹಲವು ಸಂಕೇತ ಗಳಿವೆ.ಇದರಲ್ಲಿ ಸಕಲವನ್ನೂ ನಿಯಂತ್ರಿಸಿಕೊಂಡವನೇ ಭಗವಾನ್ ಶ್ರೀಹರಿ. ನಾಗರಾಜನನ್ನೇ ಸುರುಳಿಹಾಕಿ ಹಾಸಿಗೆ ಮಾಡಿ ಮಲಗಿದವ. ಇದಕ್ಕಾಗಿ ‘ನಾಗಾಂತರ್ಯಾಮಿ ಪ್ರದ್ಯುಮ್ನಾನಿರುದ್ಧ ಸಂಕರ್ಷಣ ಮೂರ್ತಿ ಭಗವಾನ್ ವಾಸುದೇವ ಪ್ರಿಯಂತಾಂ’ ಎಂದು ಪ್ರಾಜ್ಞರು ತಿಳಿಸಿದರು.
ಪ್ರತಿಯೊಬ್ಬರೂ ಅಂದರೆ ನಾಗದೇವರನ್ನು ನಂಬುವವರು ನಾಗದೇವರ ಉಪಾಸನೆ ಮಾಡಲೇ ಬೇಕು. ಅಂತಹ ಜ್ಞಾನಿಗಳು,ತಪಸ್ವಿಗಳಿಗೆ ಇದೆಲ್ಲಾ ಬೇಕಾಗಿಲ್ಲ.ಆದರೆ ಅವರ ಪಾಠವೇ ಇದಾಗಿದೆ.
Fight For Right
ಪ್ರಕಾಶ್ ಅಮ್ಮಣ್ಣಾಯ
ಜ್ಯೋತಿರ್ವಿಜ್ಞಾನಂ
9449663356.

No comments:

Post a Comment