Friday, 4 September 2015

ಬಾಲಕನಾಗಿ ಬಂದಾ ನೋಡು


ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ತುಂಗಾ ತೀರದಿ ಬಾಲಕ್ರಿಷ್ನನು 
ಕೊಳಲನೂದಲು ಮೋಹಗೊಂಡನು
ಎಲ್ಲ ಮರೆತು ಉಲ್ಲಾಸದಿಂದಲಿ
ಕಾಣಲೆಂದು ಓಡೋಡಿ ಬಂದನು

ಸಂಧ್ಯೆಯು ಆರತಿ ಎತ್ತಿರುವಾಗ
ತಣ್ಣನೆ ಗಾಳಿ ಬೀಸಿರುವಾಗ
ಮುರಳಿಲೋಲನ ಸ್ವರ ಕೇಳುತ
ಗೋವುಗಳು ತಲೆದೂಗಿರುವಾಗ

ರಾಘವೇಂದ್ರನ ಕಂಡ ಮುಕುಂದ
ಇಬ್ಬರ ಮನದಲು ಬಲು ಆನಂದ
ಒಬ್ಬರನೊಬ್ಬರು ಅಪ್ಪಿ ನಲಿದರು
ಸರಸವಾಡುವ ಸಂಭ್ರಮದಿಂದ

ಮುತ್ತು ರತ್ನದ ಹಾರ ಅವನಲಿ
ತುಳಸಿ ಮಣಿಗಳ ಮಾಲೆ ಇವನಲಿ
ಝಗ ಝಗಿಸುವ ಪೀತಾಂಬರವಲ್ಲಿ
ಬಾಲಯೋಗಿ ಸನ್ಯಾಸಿ ಉಡುಪಲಿ

ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ಸಾಹಿತ್ಯ: ಚಿ. ಉದಯಶಂಕರ

No comments:

Post a Comment