Friday, 4 September 2015

ಮನವ ಮಂತ್ರಾಲಯವ ಮಾಡಿ


ಮನವ ಮಂತ್ರಾಲಯವ ಮಾಡಿ, ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು

ಉಸಿರು ಉಸಿರಲಿ ರಾಘವೇಂದ್ರನ ಸ್ಮರಣೆ ಬೆರೆತಿರಲಾಗ.
ಪ್ರಭೆಯಲಿ ಗುರುವು ಕಾಣಿಸುವ, ಬ್ರಹ್ಮಾನಂದ ತೋರಿಸುವ

ಮಡಿಗೆ ಪೂಜೆಗೆ ಒಲಿಯದಾತನ, ಮಂತ್ರ ತಂತ್ರಕೆ ಸೋಲದಾತನ..
ಭಕ್ತಿ ಗೆಲ್ಲುವುದು ಚಿತ್ತ ಶುದ್ಧಿ ನಿಲಿಸುವುದು

ನಿತ್ಯ ನಿರ್ಮಲ ಭಾವ ತುಂಬಿದ, ಉತ್ತಮೋತ್ತಮ ಗುಣವ ಹೊಂದಿದ
ಸತ್ಯ ಸುಂದರನು ದರುಷನ ನೀಡಿ ಹರಸುವನು

ಮನವ ಮಂತ್ರಾಲಯವ ಮಾಡಿ, ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು

ಸಾಹಿತ್ಯ: ಚಿ. ಉದಯಶಂಕರ

No comments:

Post a Comment