Friday, 4 September 2015

ವೈಷ್ಣವ ಜನ ತೋ


ವೈಷ್ಣವ ಜನ ತೋ ತೇನೇ ಕಹಿಯೇ ಜೇ 
ಪೀಡ ಪರಾಯೀ ಜಾನೇ ರೇ!
ಪರದುಃಖೇ ಉಪಕಾರ ಕರೇ ತೊಯೇ
ಮನ ಅಭಿಮಾನ ನ ಆನೇ ರೇ!!

ಭಾವಾರ್ಥ= ವೈಷ್ಣವರೆನಿಸಿಕೊಳ್ಳುವವರು ಪರಪೀಡೆ ಮಾಡಬಾರದುಪರರು ದುಃಖದಲ್ಲಿದ್ದಾಗ ಸ್ವಾಭಿಮಾನವನ್ನು ತೊರೆದು ಅವರಿಗೆ ಉಪಕಾರ ಮಾಡು.

ಸಕಲ ಲೋಕಮಾಂ  ಸಹುನೇ ವಂದೇ
ನಿಂದಾ ನ ಕರೇ ಕೇನೀ ರೇ!
ವಾಚ ಕಾಛ ಮನ ನಿಶ್ಚಲ ರಾಖೇ
ಧನ-ಧನ ಜನನೀ ತೇನೀ ರೇ!!

ಭಾವಾರ್ಥ= ಲೋಕವೆಲ್ಲಾ ನಿನ ನಿಂದಿಸಿದರೂ ಸಹನೆಯಿಂದಿರುಐಶ್ವರ್ಯದಿಂದ ತುಂಬಿ ತುಳುಕುತ್ತಿದ್ದರೂ ಕೂಡ ಕಾಯವಾಚ ಮನಸಾ ನಿಶ್ಚಲನಾಗಿರು (ಶುದ್ಧನಾಗಿರು)

ಸಮದೃಷ್ಟಿ ನೇ ತೃಷ್ಣಾ ತ್ಯಾಗೀ
ಪರಸ್ತ್ರೀ ಜೇನೇ ಮಾತಾ ರೇ!
ಜಿಹ್ವಾ ಥಕೀ ಅಸತ್ಯ ನ ಬೋಲೇ
ಪರಧನ ನವ್ ಝಾಲೇ ಹಾಥ ರೇ!!

ಭಾವಾರ್ಥ= ಸಮದೃಷ್ಠಿ ಬೆಳೆಸಿಕೋಆಸೆಯನ್ನು ಬಿಡುಪರಸ್ತ್ರೀಯನ್ನು ಮಾತೆಯೆಂದು ತಿಳಿನಾಲಿಗೆಯಿಂದ ಸುಳ್ಳನ್ನಾಡ ಬೇಡ ಮತ್ತು ಪರಧನಕ್ಕೆ ಕೈಹಾಕ ಬೇಡ.

ಮೋಹ ಮಾಯಾ ವ್ಯಾಪೇ ನಹಿ ಜೇನೇ
ದೃಢ ವೈರಾಗ್ಯ ಜೇನಾ ಮನಮಾಂ ರೇ!
ರಾಮನಾಮ ಶುಂ  ತಾಲೀ ರೇ ಲಾಗೀ
ಸಕಲ ತೀರ್ಥ ತೇನಾ ತನಮಾಂ ರೇ!!

ಭಾವಾರ್ಥ= ಮೋಹ ಮಾಯೆಯ ತೊರೆದು ದೃಢ ವೈರಾಗ್ಯವ ತೆಳೆದುರಾಮನಾಮವ ಮೈಗೂಡಿಸಿಕೊಂಡರೆ ನಿನ್ನಲ್ಲಿಯೇ ಸಕಲ ತೀರ್ಥವು ಕಾಣೋ. 

ವಣಲೋಭೀನೇ ಕಪಟರಹಿತ ಛೇ
ಕಾಮ ಕ್ರೋಧ ನಿರ್ವಾಯೋ ರೇ!
ಭಣೇ ನರಸೈಯೋ ತೇನು ದರಷನ ಕರತಾಂ
ಕುಲ ಏಕೋತೇರ ತಾರ್ಯಾ ರೇ!!

ಭಾವಾರ್ಥ =  ಲೋಭಕಪಟತನವಿಲ್ಲದಿರುವಿಕೆಕಾಮಕ್ರೋಧ ನಿವಾರಣೆ ಇವನ್ನು ರೂಢಿಸಿಕೊಂಡರೆ ನರಸನ ದರುಶನವಾಗುವುದುಕುಲವ್ಯಾವುದಾದರೇನು. 

ಸಾಹಿತ್ಯ: ನರಸಿನ್ ಮೆಹ್ತಾ

No comments:

Post a Comment