Friday, 4 September 2015

ಇಂದು ಶುಕ್ರವಾರ


ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ

ಮುಂಜಾನೆಯ ಮಡಿಉಟ್ಟು ಕುಂಕುಮವ ಹಣೆಗಿಟ್ಟು
ರಂಗೋಲಿಯ ಬಾಗಿಲಿಗಿಟ್ಟು ಹಣ್ಣು ಕಾಯಿ ನೀಡುವ ವಾರ

ಮಲ್ಲಿಗೆ ಜಾಜಿ ಹೂಮಾಲೆ ಹಾಕಿಚಂದನ ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿಭಕ್ತಿಯಿ೦ದಲಿ ಭಜಿಸುವ ವಾರ

ಸುವಾಸಿನಿಯರಿಗೆ ಕುಂಕುಮ ಹಚ್ಚಿಸಂಭ್ರಮದಿ೦ದ ಬಾಗಿಣ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ ಸಕಲ ಭಾಗ್ಯವ ಬೇಡುವ ವಾರ

ಸ್ವಾಮಿ ದೇವನೆ ಲೋಕ ಪಾಲನೆ

ಸ್ವಾಮಿ ದೇವನೆ ಲೋಕ ಪಾಲನೆ

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ|
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ||
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ|
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ|
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ||
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ|
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ|
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು||
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ|
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ  ಪೋದುದೊ ಕತ್ತಲೆ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ|
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ||
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ|
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ|
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ||
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ|
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ|
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ||
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ|
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ|
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ||
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ|
ದೀನಪಾಲನೆ ನಿನ್ನ ಧೀನದೊಳಿರ್ಪನಮ್ಮನು ಪಾಲಿಸೈ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ|
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ||
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ|
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ||

ಸಾಹಿತ್ಯ: ಸೋಸಲೆ ಅಯ್ಯಾ ಶಾಸ್ತ್ರಿಗಳು

ಸೂರ್ಯವಂದನ

ಸೂರ್ಯವಂದನ

"ಹಿರಣ್ಮಯೇನ ಪಾತ್ರೇಣ  ಸತ್ಯಸ್ಯಾಪಿಹಿತಂ  ಮುಖಂ      
 ತತ್  ತ್ವಂ  ಪೂಷನ್ಆಪಾವೃಣು ಸತ್ಯಧರ್ಮಾಯ  ದೃಷ್ಟಯೇ"                                                                                                                                            

"ಪಾತ್ರೆಯನ್ನು ಮುಚ್ಚಳದಿಂದ ಮುಚ್ಚುವಂತೆನಿನ್ನ ಚಿನ್ಮಯವಾದ ಆವರಣವು ಸತ್ಯದ ಬಾಗಿಲನ್ನು ಮುಚ್ಚಿದೆ.   ಓ ಕರುಣಾಳು ಸೂರ್ಯ ದೇವನೇಆ ಬಾಗಿಲನ್ನು ಸರಿಸಿ ನಿನ್ನ ದಿವ್ಯಜ್ಞಾನದರ್ಶನವನ್ನು ನಮಗೆ ಕೃಪೆ ಮಾಡು
 
ಓಂ ಮಿತ್ರಾಯ ನಮಃ  -  ಎಲ್ಲ ,ಜೀವಿಗಳ ಸ್ನೇಹಿತನಿಗೆ ನಮಸ್ಕಾರಗಳು

ಓಂ ರವಯೇ ನಮಃ - ಹೊಳೆಯುತ್ತಿರುವವನಿಗೆ  ನಮಸ್ಕಾರಗಳು

ಓಂ ಸೂರ್ಯಾಯ ನಮಃ – ಚೇತನ ನೀಡುವವನಿಗೆ ನಮಸ್ಕಾರಗಳು

ಓಂ ಭಾನವೇ ನಮಃ - ಎಲ್ಲವನ್ನು ಪ್ರಕಾಶಿಸುವವನಿಗೆ  ನಮಸ್ಕಾರಗಳು

ಓಂ ಖಗಾಯ ನಮಃ – ಆಕಾಶದಲ್ಲಿ ತ್ವರಿತವಾಗಿ ಸಂಚರಿಸುವವನಿಗೆ ನಮಸ್ಕಾರಗಳು

ಓಂ ಪೂಷ್ಣೇ ನಮಃ - ಶಕ್ತಿಯನ್ನು ಕೊಡುವವನಿಗೆ ನಮಸ್ಕಾರಗಳು

ಓಂ ಹಿರಣ್ಯಗರ್ಭಾಯ ನಮಃ - ಸುವರ್ಣ ವಿಶ್ವಾತ್ಮನಿಗೆ ನಮಸ್ಕಾರಗಳು

ಓಂ ಮರೀಚಯೇ ನಮಃ - ಬೆಳಗಿನ ದೇವತೆಗೆ ನಮಸ್ಕಾರಗಳು

ಓಂ ಆದಿತ್ಯಾಯ  ನಮಃ - ಅದಿತಿಯ ಮಗ - ವಿಶ್ವಮಾತೆಯ ಮಗನಿಗೆ ನಮಸ್ಕಾರಗಳು

ಓಂ ಸವಿತ್ರೆ ನಮಃ - ಸೃಷ್ಟಿ ಕರ್ತನಿಗೆ ನಮಸ್ಕಾರಗಳು

ಓಂ ಅರ್ಕಾಯ ನಮಃ - ಸ್ತುತಿಗೆ ಅರ್ಹನಾದವನಿಗೆ ನಮಸ್ಕಾರಗಳು


ಓಂ ಭಾಸ್ಕರಾಯ ನಮಃ - ಜ್ಞಾನದ ಕಡೆಗೆ ನಮ್ಮನ್ನು ನಡೆಸುವವನಿಗೆ ನಮಸ್ಕಾರಗಳು

ಗುರುವಿನ ಗುಲಾಮನಾಗುವ ತನಕ


ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

ಸಾಹಿತ್ಯ: ಪುರಂದರದಾಸರು

ಗುರುವಿನ ಗುಲಾಮನಾಗುವ ತನಕ


ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

ಸಾಹಿತ್ಯ: ಪುರಂದರದಾಸರು

ವೈಷ್ಣವ ಜನ ತೋ


ವೈಷ್ಣವ ಜನ ತೋ ತೇನೇ ಕಹಿಯೇ ಜೇ 
ಪೀಡ ಪರಾಯೀ ಜಾನೇ ರೇ!
ಪರದುಃಖೇ ಉಪಕಾರ ಕರೇ ತೊಯೇ
ಮನ ಅಭಿಮಾನ ನ ಆನೇ ರೇ!!

ಭಾವಾರ್ಥ= ವೈಷ್ಣವರೆನಿಸಿಕೊಳ್ಳುವವರು ಪರಪೀಡೆ ಮಾಡಬಾರದುಪರರು ದುಃಖದಲ್ಲಿದ್ದಾಗ ಸ್ವಾಭಿಮಾನವನ್ನು ತೊರೆದು ಅವರಿಗೆ ಉಪಕಾರ ಮಾಡು.

ಸಕಲ ಲೋಕಮಾಂ  ಸಹುನೇ ವಂದೇ
ನಿಂದಾ ನ ಕರೇ ಕೇನೀ ರೇ!
ವಾಚ ಕಾಛ ಮನ ನಿಶ್ಚಲ ರಾಖೇ
ಧನ-ಧನ ಜನನೀ ತೇನೀ ರೇ!!

ಭಾವಾರ್ಥ= ಲೋಕವೆಲ್ಲಾ ನಿನ ನಿಂದಿಸಿದರೂ ಸಹನೆಯಿಂದಿರುಐಶ್ವರ್ಯದಿಂದ ತುಂಬಿ ತುಳುಕುತ್ತಿದ್ದರೂ ಕೂಡ ಕಾಯವಾಚ ಮನಸಾ ನಿಶ್ಚಲನಾಗಿರು (ಶುದ್ಧನಾಗಿರು)

ಸಮದೃಷ್ಟಿ ನೇ ತೃಷ್ಣಾ ತ್ಯಾಗೀ
ಪರಸ್ತ್ರೀ ಜೇನೇ ಮಾತಾ ರೇ!
ಜಿಹ್ವಾ ಥಕೀ ಅಸತ್ಯ ನ ಬೋಲೇ
ಪರಧನ ನವ್ ಝಾಲೇ ಹಾಥ ರೇ!!

ಭಾವಾರ್ಥ= ಸಮದೃಷ್ಠಿ ಬೆಳೆಸಿಕೋಆಸೆಯನ್ನು ಬಿಡುಪರಸ್ತ್ರೀಯನ್ನು ಮಾತೆಯೆಂದು ತಿಳಿನಾಲಿಗೆಯಿಂದ ಸುಳ್ಳನ್ನಾಡ ಬೇಡ ಮತ್ತು ಪರಧನಕ್ಕೆ ಕೈಹಾಕ ಬೇಡ.

ಮೋಹ ಮಾಯಾ ವ್ಯಾಪೇ ನಹಿ ಜೇನೇ
ದೃಢ ವೈರಾಗ್ಯ ಜೇನಾ ಮನಮಾಂ ರೇ!
ರಾಮನಾಮ ಶುಂ  ತಾಲೀ ರೇ ಲಾಗೀ
ಸಕಲ ತೀರ್ಥ ತೇನಾ ತನಮಾಂ ರೇ!!

ಭಾವಾರ್ಥ= ಮೋಹ ಮಾಯೆಯ ತೊರೆದು ದೃಢ ವೈರಾಗ್ಯವ ತೆಳೆದುರಾಮನಾಮವ ಮೈಗೂಡಿಸಿಕೊಂಡರೆ ನಿನ್ನಲ್ಲಿಯೇ ಸಕಲ ತೀರ್ಥವು ಕಾಣೋ. 

ವಣಲೋಭೀನೇ ಕಪಟರಹಿತ ಛೇ
ಕಾಮ ಕ್ರೋಧ ನಿರ್ವಾಯೋ ರೇ!
ಭಣೇ ನರಸೈಯೋ ತೇನು ದರಷನ ಕರತಾಂ
ಕುಲ ಏಕೋತೇರ ತಾರ್ಯಾ ರೇ!!

ಭಾವಾರ್ಥ =  ಲೋಭಕಪಟತನವಿಲ್ಲದಿರುವಿಕೆಕಾಮಕ್ರೋಧ ನಿವಾರಣೆ ಇವನ್ನು ರೂಢಿಸಿಕೊಂಡರೆ ನರಸನ ದರುಶನವಾಗುವುದುಕುಲವ್ಯಾವುದಾದರೇನು. 

ಸಾಹಿತ್ಯ: ನರಸಿನ್ ಮೆಹ್ತಾ

ಜಯ ಶ್ರೀರಾಮ ಜಯ ರಘುರಾಮ

ಜಯ ಶ್ರೀರಾಮ ಜಯ ರಘುರಾಮ


ಜಯ ಶ್ರೀರಾಮ ಜಯ ರಘುರಾಮ
ಜಯಜಯ ಜನಕಜಾ ಪತಿರಾಮ

ಪರಬ್ರಹ್ಮ ಪುರುಷೋತ್ತಮ ರಾಮ
ಪುಣ್ಯನಾಮ ಶ್ರೀ ಸೀತಾರಾಮ
ಪರಾತ್ಪರನೆ ಪುರಹರಮಿತ್ರನೆ ಹರಿ
ಪುರಾಣ ಪುರುಷ ರಾಜಾರಾಮ

ಕೌಶಿಕ ಮುಖಸಂರಕ್ಷಕ ರಾಮ
ಕೋಸಲೇಶ ಶ್ರೀ ಸೀತಾರಾಮ
ಕೌಸಲ್ಯಾ ಸುಖವರ್ಧನ ರಾಮ
ವಿಶ್ವಾಮಿತ್ರ ಪ್ರಿಯಧನ ರಾಮ

ಜನಕಜಾ ಮಾತಾ ಜಾನಕಿಪ್ರೀತ
ಜಗಜ್ಜನಕ ಹರಿ ಸೀತಾರಾಮ
ಜಾಮದಗ್ನಿ ಗರ್ವಾಪಹಾರ
ಜನ್ಮಾದಿರಹಿತ ಜಯ ರಾಜಾರಾಮ

ಪಿತೃವಚನ ಪಾಲಕ ಋಷಿವೇಷಾ
ಭ್ರಾತೃವತ್ಸಲಾ ಸೀತಾರಾಮ
ಶತ್ರುವಿಮರ್ದನ ಮುನಿಜನಪಾಲನ
ಸುತ್ರಾಮವಂದಿತ ರಾಜಾರಾಮ

ಜಟಾಯು  ಶಬರಿ ಮೊಕ್ಷಪ್ರದ ಕಪಿ
ಕಟಕಾನ್ವಿತ ಹರಿ ಸೀತಾರಾಮ
ಕುಟಿಲವಾಲೀ ಸಂಹರಣ ಪ್ರಸವಣ
ಶಿಖರವಾಸಿ ಶ್ರೀ ರಾಜಾರಾಮ

ಹನುಮತ್ಸಖ ಹರಿ ಹನುಮತ್ಸೇವಿತ
ಹನುಮಂತಾರ್ಚಿತ ಸೀತಾರಾಮ
ಹನುಮಗುಂಗುರವನಿತ್ತು ಚೂಡಾಮಣಿ
ಹನುಮನಿಂ ಪಡೆದೆ ರಾಜಾರಾಮ

ಶರಣನ ರಕ್ಷಿಸಿ ಶರಧಿಯ ಬಂಧಿಸಿ
ದುರುಳರ ಕೊಂದಿಹ ಸೀತಾರಾಮ
ಶರಣಗೆ ಪಟ್ಟವಕಟ್ಟಿ ಭರತನ
ಹರಣವಣನುಳಿಸಿದ ರಾಜಾರಾಮ

ಕೋದಂಡಧಾರಿ ಕೋಮಲಾಂಗ ಹರಿ
ಮೂಲನಾರಾಯಣ ಸೀತಾರಾಮ
ಕೋದಂಡರಾಮ ಪಟ್ಟಾಭಿರಾಮ
ಭಕ್ತವಿಶ್ರಾಮ ರಾಜಾರಾಮ

ಸಾಹಿತ್ಯ: ಭದ್ರಗಿರಿ ಅಚ್ಯುತದಾಸರು

ರಘುಪತಿ ರಾಘವ ರಾಜಾರಾಮ್


ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸೀತಾರಾಮ್ ಸೀತಾರಾಮ್ 
ಭಜ ಪ್ಯಾರೇ ತೂ ಸೀತಾರಾಮ್ 
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್

ಇದು  ಕಳೆದ ಶತಮಾನದಲ್ಲಿ ವಿಷ್ಣು ದಿಗಂಬರ ಪಲುಸ್ಕರ್ ಅವರ ಸಂಗೀತದಲ್ಲಿ ಪ್ರಖ್ಯಾತಿಗೊಂಡ ಸಾಹಿತ್ಯವಾಗಿದೆ.

ಇದರ ಮೂಲ ಸಾಹಿತ್ಯ ಇಂತಿದೆ:

ರಘುಪತಿ ರಾಘವ ರಾಜಾರಾಂ
ಪತಿತಪಾವನ ಸೀತಾರಾಮ್
ಸುಂದರ ವಿಗ್ರಹ ಮೇಘಶ್ಯಾಮ್
ಭದ್ರ ಗಿರೀಶ್ವರ ಸೀತಾರಾಮ್
ಭಕ್ತ ಜನಪ್ರಿಯ ಸೀತಾರಾಮ್
ಜಾನಕಿ ರಮಣ ಸೀತಾರಾಮ್
ಜಯ ಜಯ ರಾಘವ ಸೀತಾರಾಮ್

ವಾಗರ್ಥಾವಿವ ಸಂಪೃಕ್ತೌ


ವಾಗರ್ಥಾವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ

ಮಾತಾಪಿತರ ಆಶೀರ್ವಾದದಿಂದ ಆರಂಭಿಸುವ ಕಾರ್ಯಗಳು ಸಫಲವಾಗುವುದೆಂಬುದು ಭಾರತೀಯರ ಪರಂಪರಾಗತ  ನಂಬಿಕೆ.  ಸಂಸ್ಕೃತದ ಶ್ರೇಷ್ಠ ಕವಿ ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದ ರಚನೆಯಲ್ಲಿ ಮಂಗಳ ಶ್ಲೋಕವಾಗಿ ವಾಕ್ (ಶಬ್ದ) ಮತ್ತು ಅರ್ಥ (ಅರ್ಥಕ್ಕಿರುವ ಭಾವ)ಗಳು ಬೇರ್ಪಡಿಸಲಾಗದ ಹಾಗೆ  ಒಂದಾಗಿರುವಂತೆ ಜಗತ್ತಿಗೆ ತಂದೆ ತಾಯಿಯರ ರೂಪದಲ್ಲಿರುವ ಪರಮೇಶ್ವರ ಪಾರ್ವತಿಯರನ್ನು ಈ ಶ್ಲೋಕಮುಖೇನ ವಂದಿಸುತ್ತಿದ್ದಾನೆ.  

ತಂದೆ ತಾಯಿಯರ ಮತ್ತು ಆ ಮೂಲಕ ಜಗತ್ತಿನ ತಂದೆ ತಾಯಿಯರಾದ ಪಾರ್ವತಿ ಪರಮೇಶ್ವರರ ಕೃಪೆ ನಮ್ಮೆಲ್ಲರ ಮೇಲಿರಲಿ.

ಬಾಲಕನಾಗಿ ಬಂದಾ ನೋಡು


ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ತುಂಗಾ ತೀರದಿ ಬಾಲಕ್ರಿಷ್ನನು 
ಕೊಳಲನೂದಲು ಮೋಹಗೊಂಡನು
ಎಲ್ಲ ಮರೆತು ಉಲ್ಲಾಸದಿಂದಲಿ
ಕಾಣಲೆಂದು ಓಡೋಡಿ ಬಂದನು

ಸಂಧ್ಯೆಯು ಆರತಿ ಎತ್ತಿರುವಾಗ
ತಣ್ಣನೆ ಗಾಳಿ ಬೀಸಿರುವಾಗ
ಮುರಳಿಲೋಲನ ಸ್ವರ ಕೇಳುತ
ಗೋವುಗಳು ತಲೆದೂಗಿರುವಾಗ

ರಾಘವೇಂದ್ರನ ಕಂಡ ಮುಕುಂದ
ಇಬ್ಬರ ಮನದಲು ಬಲು ಆನಂದ
ಒಬ್ಬರನೊಬ್ಬರು ಅಪ್ಪಿ ನಲಿದರು
ಸರಸವಾಡುವ ಸಂಭ್ರಮದಿಂದ

ಮುತ್ತು ರತ್ನದ ಹಾರ ಅವನಲಿ
ತುಳಸಿ ಮಣಿಗಳ ಮಾಲೆ ಇವನಲಿ
ಝಗ ಝಗಿಸುವ ಪೀತಾಂಬರವಲ್ಲಿ
ಬಾಲಯೋಗಿ ಸನ್ಯಾಸಿ ಉಡುಪಲಿ

ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ಸಾಹಿತ್ಯ: ಚಿ. ಉದಯಶಂಕರ

ಮನವ ಮಂತ್ರಾಲಯವ ಮಾಡಿ


ಮನವ ಮಂತ್ರಾಲಯವ ಮಾಡಿ, ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು

ಉಸಿರು ಉಸಿರಲಿ ರಾಘವೇಂದ್ರನ ಸ್ಮರಣೆ ಬೆರೆತಿರಲಾಗ.
ಪ್ರಭೆಯಲಿ ಗುರುವು ಕಾಣಿಸುವ, ಬ್ರಹ್ಮಾನಂದ ತೋರಿಸುವ

ಮಡಿಗೆ ಪೂಜೆಗೆ ಒಲಿಯದಾತನ, ಮಂತ್ರ ತಂತ್ರಕೆ ಸೋಲದಾತನ..
ಭಕ್ತಿ ಗೆಲ್ಲುವುದು ಚಿತ್ತ ಶುದ್ಧಿ ನಿಲಿಸುವುದು

ನಿತ್ಯ ನಿರ್ಮಲ ಭಾವ ತುಂಬಿದ, ಉತ್ತಮೋತ್ತಮ ಗುಣವ ಹೊಂದಿದ
ಸತ್ಯ ಸುಂದರನು ದರುಷನ ನೀಡಿ ಹರಸುವನು

ಮನವ ಮಂತ್ರಾಲಯವ ಮಾಡಿ, ಹೃದಯ ಬೃಂದಾವನವ ಮಾಡಿ
ಭಕ್ತಿ ಎನ್ನುವ ತುಂಗೆಯಲ್ಲಿ ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು ಕಂಗಳ ಕಾಂತಿ ತುಂಬುವುದು

ಸಾಹಿತ್ಯ: ಚಿ. ಉದಯಶಂಕರ

ನಮ್ಮ ನದಿಗಳ ಸ್ಮರಣೆ


ನದೀ ಸ್ತೋತ್ರಂ  ಪ್ರವಕ್ಷ್ಯಾಮಿ ಸರ್ವಪಾಪಪ್ರಣಾಶನಮ್ 
ಭಾಗೀರಥೀ ವಾರಣಾಸೀ ಯಮುನಾ ಚ ಸರಸ್ವತೀ 

ಫಲ್ಗುನೀ ಶೋಣಭದ್ರಾ ಚ ನರ್ಮದಾ ಗಂಡಕೀ ತಥಾ 
ಮಣಿಕರ್ಣಿಕಾ ಗೋಮತೀ ಪ್ರಯಾಗೀ ಚ ಪುನಃ ಪುನೀ 

ಗೋದಾವರೀ ಸಿಂಧುನದೀ ಸರಯೂರ್ವರ್ಣಿನೀ ತಥಾ
ಕೃಷ್ಣವೇಣೀ ಭೀಮರಥೀ ಖಾಗಿನೀ ಭವನಾಶಿನೀ 

ತುಂಗಭದ್ರಾ ಮಲಹರೀ ವರದಾ ಚ ಕುಮುದ್ವತೀ 
ಕಾವೇರೀ ಕಪಿಲಾ ಕುಂತೀ ಹೇಮಾವತೀ ಹರಿದ್ವತೀ

ನೇತ್ರಾವತೀ ವೇದವತೀ ಸುದ್ಯೋತೀ ಕನಕಾವತೀ
ತಾಮ್ರಪರ್ಣೀ ಭರದ್ವಾಜಾ ಶ್ವೇತಾ ರಾಮೇಶ್ವರೀ ಕುಶಾ 

ಮಂದರೀ ತಪತೀ ಕಾಲೀ ಕಾಲಿಂದೀ ಜಾಹ್ನವೀ ತಥಾ
ಕೌಮೋದಕೀ ಕುರುಕ್ಷೇತ್ರಾ ಗೋವಿಂದಾ ದ್ವಾರಕೀ ಭವೇತ್

ಬ್ರಾಹ್ಮೀ ಮಾಹೇಶ್ವರೀ ಮಾತ್ರಾ ಇಂದ್ರಾಣೀ ಅತ್ರಿಣೀ ತಥಾ
ನಲಿನೀ ನಂದಿನೀ ಸೀತಾ ಮಾಲತೀ ಚ ಮಲಾಪಹಾ 

ಸಂಭೂತಾ ವೈಷ್ಣವೀ ವೇಣೀ ತ್ರಿಪಥಾ ಭೋಗವತೀ ತಥಾ 
ಕಮಂಡಲು ಧನುಷ್ಕೋಟೀ ತಪಿನೀ ಗೌತಮೀ ತಥಾ 

ನಾರದೀ ಚ ನದೀ ಪೂರ್ಣಾ ಸರ್ವನದ್ಯಃ ಪ್ರಕೀರ್ತಿತಾಃ
ಪ್ರಾತಃಕಾಲೇ ಪಠೇನ್ನಿತ್ಯಂ ಸ್ನಾನಕಾಲೇ ವಿಶೇಷತಃ 

ಕೋಟಿಜನ್ಮಾರ್ಜಿತಂ ಪಾಪಂ ಸ್ಮರಣೇನ ವಿನಶ್ಯತಿ|
ಇಹಲೋಕೇ ಸುಖೀ ಭೂತ್ವಾ ವಿಷ್ಣುಲೋಕಂ ಸಗಚ್ಛತಿ

ರಾಘವೇಂದ್ರ ಎನ್ನಿರಿ


ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ

ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ
ನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ

ಹೇಗೆ ಇರಲಿ ಎಲ್ಲೆ ಇರಲಿ...ಅವನ ಸ್ಮರಣೆ ಮಾಡಿರಿ
ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ

ಮಾನ ಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ್ನ ಕರುಣೆಯೊಂದೆ ಸಾಕು ನನಗೆ ಎನ್ನಿರಿ

ಕಲ್ಲು ಮುಳ್ಳೊ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ
ಏನೇ  ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ

ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ

ನಿಮ್ಮ ಮನೆಯ ನಿಮ್ಮ ಮನದ ವಿಷಯವೆಲ್ಲ ಬಲ್ಲನು
ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು

ಕೊಡುವುದೆಲ್ಲ ಕೊಡುವನವನು ಇನ್ನು ಆಸೆಯೇತಕೆ
ಕಲ್ಪವೃಕ್ಷದಂತೆ ಗುರುವು ಇರಲು ಚಿಂತೆಯೇತಕೆ

ರಾಘವೇಂದ್ರ ರಾಘವೇಂದ್ರ ರಾಘವೇಂದ್ರನೆನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ

ಸಾಹಿತ್ಯ: ಚಿ ಉದಯಶಂಕರ್

ವಾತಾಪಿ ಗಣಪತಿಂ ಭಜೇsಹಂ

ವಾತಾಪಿ ಗಣಪತಿಂ ಭಜೇsಹಂ

ವಾತಾಪಿ ಗಣಪತಿಂ ಭಜೇsಹಂ 
ವಾರಾಣಾಸ್ಯಂ ವರಪ್ರದಂ ಶ್ರೀ 
ವಾತಾಪಿ ಗಣಪತಿಂ ಭಜೇsಹಂ 

ಭೂತಾಧಿ ಸಂಸೇವಿತ ಚರಣಂ
ಭೂತಭೌತಿಕ  ಪ್ರಪಂಚ ಭರಣಂ
ವೀತರಾಗಿನಂ ವಿನುತ ಯೋಗಿನಂ 
ವಿಶ್ವಕಾರಣಂ ವಿಘ್ನ ವಾರಣಂ
ವಾತಾಪಿ ಗಣಪತಿಂ ಭಜೇsಹಂ

ಪುರಾ  ಕುಂಭ ಸಂಭವ ಮುನಿವರ ಪ್ರಪೂಜಿತಂ 
ತ್ರಿಭುವನ ಮಧ್ಯಗತಂ
ಮುರಾರಿ  ಪ್ರಮುಖಾಧ್ಯುಪಾಸಿತಂ 
ಮೂಲಾಧಾರ ಕ್ಷೇತ್ರಸ್ಥಿಥಂ
ಪರಾಧಿ  ಚತ್ವಾರಿ ವಾಗಾತ್ಮಕಂ 
ಪ್ರಣವಸ್ವರೂಪ ವಕ್ರತುಂಡಂ
ನಿರಂತರಂ ನಿಖಿಲ ಚಂದ್ರಕಂಡ
ನಿಜವಾಮಕರ ವಿಧ್ರುತೇಕ್ಷು ದಂಡಂ

ಕರಾಂಭುಜಪಾಶ ಬೀಜಾಪೂರಂ  
ಕಲುಷವಿದೂರಂ ಭೂತಾಕಾರಂ 
ಹರಾಧಿ ಗುರುಗುಹ ತೋಷಿತ ಬಿಂಬo  
ಹಂಸಧ್ವನಿ ಭೂಷಿತ ಹೇರಂಭಂ
ವಾತಾಪಿ ಗಣಪತಿಂ ಭಜೇsಹಂ
ವಾರಾಣಾಸ್ಯಂ ವರ ಪ್ರಧಂ ಶ್ರೀ
ವಾತಾಪಿ ಗಣಪತಿಂ ಭಜೇsಹಂ...

ಸಾಹಿತ್ಯ: ಮುತ್ತುಸ್ವಾಮಿ ದೀಕ್ಷಿತರು

ನಿತ್ಯ ಸ್ತುತಿ

ನಿತ್ಯ ಸ್ತುತಿ 

ಪ್ರಾತಃ ಸ್ಮರಾಮಿ ಖಲು ತತ್ಸವಿತುರ್ವರೇಣ್ಯಂ
ರೂಪಂ ಹಿ ಮಂಡಲಮೃಚೋಽಥ ತನುರ್ಯಜೂಂಷಿ |
ಸಾಮಾನಿ ಯಸ್ಯ ಕಿರಣಾಃ ಪ್ರಭವಾದಿಹೇತುಂ
ಬ್ರಹ್ಮಾಹರಾತ್ಮಕಮಲಕ್ಷ್ಯಮಚಿಂತ್ಯರೂಪಮ್ ||

ಪ್ರಾತರ್ಭಜಾಮಿ ಭಜತಾಮಭಿಲಾಷದಾತ್ರೀಂ
ಧಾತ್ರೀಂ ಸಮಸ್ತ ಜಗತಾಂ ದುರಿತಾಪಹಂತ್ರೀ ಮ್ |
ಸಂಸಾರಬಂಧನವಿಮೋಚನಹೇತುಭೂತಾಂ
ಮಾಯಾಂ ಪರಾಂ ಸಮಧಿಗಮ್ಯ ಪರಸ್ಯ ವಿಷ್ಣೋಃ ||

ಪ್ರಾತಃ ಸ್ಮರಾಮಿ ಭವಭೀತಿಹರಂ ಸುರೇಶಂ
ಗಂಗಾಧರಂ ವೃಷಭವಾಹನಮಂಬಿಕೇಶಮ್ |
ಖಟ್ವಾಂಗಶೂಲವರದಾಭಯಹಸ್ತಮೀಶಂ
ಸಂಸಾರರೋಗಹರಮೌಷಧಮದ್ವಿತೀಯಮ್ ||

ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾಂಬರೀಷ ಶುಕ ಶೌನಕ ಭೀಷ್ಮ ದಾಲ್ಭ್ಯಾನ್ |
ರುಕ್ಮಾಂಗದಾರ್ಜುನ ವಸಿಷ್ಠ ವಿಭೀಷಣಾದೀನ್
ಪುಣ್ಯಾನಿಮಾನ್ಪರಮ ಭಾಗವತಾನ್ಸ್ಮರಾಮಿ ||

ಯಂ ಬ್ರಹ್ಮಾವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಸ್ತವೈಃ
ವೇದೈಃ ಸಾಂಗಪದಕ್ರಮೋಪನಿಷದೈರ್ಗಾಯಂತಿ ಯಂ ಸಾಮಗಾಃ |
ಧ್ಯಾನವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ಯಾಂತಂ ನ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ ||

ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ |
ಯಃ ಪ್ರಯಾತಿ ತ್ಯಜನ್ದೇ್ಹಂ ಸ ಯಾತಿ ಪರಮಾಂ ಗತಿಮ್ ||

ಸ್ಥಾನೇ ಹೃಷೀಕೇಶ | ತವ ಪ್ರಕೀರ್ತ್ಯಾ
ಜಗತ್ ಪ್ರಹೃಷ್ಯತ್ಯನುರಜ್ಯತೇ ಚ |
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ||

ಕವಿಂ ಪುರಾಣಮನುಶಾಸಿತಾರಂ
ಅಣೋರಣೀಯಾಂಸಮನುಸ್ಮರೇದ್ಯಃ |
ಸರ್ವಸ್ಯಧಾತಾರಮಚಿಂತ್ಯರೂಪಂ
ಆದಿತ್ಯವರ್ಣಂ ತಮಸಃ ಪರಸ್ತಾತ್ ||

ಊರ್ಧ್ವಮೂಲಮಧಃ ಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||

ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟೋ
ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ |
ವೇದೈಶ್ಚ ಸರ್ವೈರಹಮೇವ ವೇದ್ಯೋ
ವೇದಾಂತಕೃದ್ವೇದವೆದೇವ ಚಾಹಮ್ ||

ಕ್ಷೀರಸಾಗರ ಸಂಜಾತಾಂ ವಿಷ್ಣೋಃ ಪತ್ನೀಂ ದಯಾಮಯೀಮ್ |
ಲಕ್ಷ್ಮೀಂ ಸದಾ ಪ್ರಪದ್ಯೇಽಹಂ ಸರ್ವಸಂಪತ್ಸಮೃದ್ಧಯೇ ||

ಭಜಗೋವಿಂದಂ

ಭಜಗೋವಿಂದಂ

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕ್ರಿಂಕರಣೇ || 1 ||

ಮೂಢ ಜಹೀಹಿ ಧನಾಗಮತೃಷ್ಣಾಂ
ಕುರು ಸದ್ಬುದ್ಧಿಮ್ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜ ಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್ || 2 ||

ನಾರೀ ಸ್ತನಭರ ನಾಭೀದೇಶಂ
ದೃಷ್ಟ್ವಾ ಮಾ ಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ
ಮನಸಿ ವಿಚಿಂತಯಾ ವಾರಂ ವಾರಮ್ || 3 ||

ನಳಿನೀ ದಳಗತ ಜಲಮತಿ ತರಳಂ
ತದ್ವಜ್ಜೀವಿತ ಮತಿಶಯ ಚಪಲಮ್ |
ವಿದ್ಧಿ ವ್ಯಾಧ್ಯಭಿಮಾನ ಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ || 4 ||

ಯಾವದ್-ವಿತ್ತೋಪಾರ್ಜನ ಸಕ್ತಃ
ತಾವನ್-ನಿಜಪರಿವಾರೋ ರಕ್ತಃ |
ಪಶ್ಚಾಜ್ಜೀವತಿ ಜರ್ಜರ ದೇಹೇ
ವಾರ್ತಾಂ ಕೋ‌உಪಿ ನ ಪೃಚ್ಛತಿ ಗೇಹೇ || 5 ||

ಯಾವತ್-ಪವನೋ ನಿವಸತಿ ದೇಹೇ
ತಾವತ್-ಪೃಚ್ಛತಿ ಕುಶಲಂ ಗೇಹೇ |
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ || 6 ||

ಬಾಲ ಸ್ತಾವತ್ ಕ್ರೀಡಾಸಕ್ತಃ
ತರುಣ ಸ್ತಾವತ್ ತರುಣೀಸಕ್ತಃ |
ವೃದ್ಧ ಸ್ತಾವತ್-ಚಿಂತಾಮಗ್ನಃ
ಪರಮೇ ಬ್ರಹ್ಮಣಿ ಕೋ‌உಪಿ ನ ಲಗ್ನಃ || 7 ||

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋ‌உಯಮತೀವ ವಿಚಿತ್ರಃ |
ಕಸ್ಯ ತ್ವಂ ವಾ ಕುತ ಆಯಾತಃ
ತತ್ವಂ ಚಿಂತಯ ತದಿಹ ಭ್ರಾತಃ || 8 ||

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್ |
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ || 9 ||

ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ |
ಕ್ಷೀಣೇ ವಿತ್ತೇ ಕಃ ಪರಿವಾರಃ
ಙ್ಞಾತೇ ತತ್ತ್ವೇ ಕಃ ಸಂಸಾರಃ || 10 ||

ಮಾ ಕುರು ಧನಜನ ಯೌವನ ಗರ್ವಂ
ಹರತಿ ನಿಮೇಷಾತ್-ಕಾಲಃ ಸರ್ವಮ್ |
ಮಾಯಾಮಯಮಿದಮ್-ಅಖಿಲಂ ಹಿತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ || 11 ||

ದಿನ ಯಾಮಿನ್ಯೌ ಸಾಯಂ ಪ್ರಾತಃ
ಶಿಶಿರ ವಸಂತೌ ಪುನರಾಯಾತಃ |
ಕಾಲಃ ಕ್ರೀಡತಿ ಗಚ್ಛತ್ಯಾಯುಃ
ತದಪಿ ನ ಮುಂಚತ್ಯಾಶಾವಾಯುಃ || 12 ||

ದ್ವಾದಶ ಮಂಜರಿಕಾಭಿರ ಶೇಷಃ
ಕಥಿತೋ ವೈಯಾ ಕರಣಸ್ಯೈಷಃ |
ಉಪದೇಶೋ ಭೂದ್-ವಿದ್ಯಾ ನಿಪುಣೈಃ
ಶ್ರೀಮಚ್ಛಂಕರ ಭಗವಚ್ಛರಣೈಃ || 13 ||

ಕಾ ತೇ ಕಾಂತಾ ಧನ ಗತ ಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ |
ತ್ರಿಜಗತಿ ಸಜ್ಜನ ಸಂಗತಿರೇಕಾ
ಭವತಿ ಭವಾರ್ಣವ ತರಣೇ ನೌಕಾ || 14 ||

ಜಟಿಲೋ ಮುಂಡೀ ಲುಂಜಿತ ಕೇಶಃ
ಕಾಷಾಯಾನ್ಬರ ಬಹುಕೃತ ವೇಷಃ |
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರ ನಿಮಿತ್ತಂ ಬಹುಕೃತ ವೇಷಃ || 15 ||

ಅಂಗಂ ಗಲಿತಂ ಪಲಿತಂ ಮುಂಡಂ
ದಶನ ವಿಹೀನಂ ಜಾತಂ ತುಂಡಮ್ |
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಮ್ || 16 ||

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕ ಸಮರ್ಪಿತ ಜಾನುಃ |
ಕರತಲ ಭಿಕ್ಷಸ್-ತರುತಲ ವಾಸಃ
ತದಪಿ ನ ಮುಂಚತ್ಯಾಶಾ ಪಾಶಃ || 17 ||

ಕುರುತೇ ಗಂಗಾ ಸಾಗರ ಗಮನಂ
ವ್ರತ ಪರಿಪಾಲನಮ್-ಅಥವಾ ದಾನಮ್ |
ಙ್ಞಾನ ವಿಹೀನಃ ಸರ್ವಮತೇನ
ಭಜತಿ ನ ಮುಕ್ತಿಂ ಜನ್ಮ ಶತೇನ || 18 ||

ಸುರಮಂದಿರ ತರು ಮೂಲ ನಿವಾಸಃ
ಶಯ್ಯಾ ಭೂತಲಮ್-ಅಜಿನಂ ವಾಸಃ |
ಸರ್ವ ಪರಿಗ್ರಹ ಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ || 19 ||

ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ |
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ || 20 ||

ಭಗವದ್ಗೀತಾ ಕಿಂಚಿದಧೀತಾ
ಗಂಗಾ ಜಲಲವ ಕಣಿಕಾ ಪೀತಾ |
ಸಕೃದಪಿ ಯೇನ ಮುರಾರೀ ಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ || 21 ||

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಮ್ |
ಇಹ ಸಂಸಾರೇ ಬಹು ದುಸ್ತಾರೇ
ಕೃಪಯಾಪಾರೇ ಪಾಹಿ ಮುರಾರೇ || 22 ||

ರಥ್ಯಾ ಚರ್ಪಟ ವಿರಚಿತ ಕಂಥಃ
ಪುಣ್ಯಾಪುಣ್ಯ ವಿವರ್ಜಿತ ಪಂಥಃ |
ಯೋಗೀ ಯೋಗ ನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ || 23 ||

ಕಸ್ತ್ವಂ ಕೋ‌உಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ನಿಜ ಸಂಸಾರಂ
ಸರ್ವಂ ತ್ಯಕ್ತ್ವಾ ಸ್ವಪ್ನ ವಿಚಾರಮ್ || 24 ||

ತ್ವಯಿ ಮಯಿ ಸರ್ವತ್ರೈಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ |
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಞ್ಛಸ್ಯಚಿರಾದ್-ಯದಿ ವಿಷ್ಣುತ್ವಮ್ || 25 ||

ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹ ಸಂಧೌ |
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್-ಸೃಜ ಭೇದಾಙ್ಞಾನಮ್ || 26 ||

ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾತ್ಮಾನಂ ಪಶ್ಯತಿ ಸೋಹಮ್ |
ಆತ್ಮಙ್ಞ್ನಾನ ವಿಹೀನಾ ಮೂಢಾಃ
ತೇ ಪಚ್ಯಂತೇ ನರಕ ನಿಗೂಢಾಃ || 27 ||

ಗೇಯಂ ಗೀತಾ ನಾಮ ಸಹಸ್ರಂ
ಧ್ಯೇಯಂ ಶ್ರೀಪತಿ ರೂಪಮ್-ಅಜಸ್ರಮ್ |
ನೇಯಂ ಸಜ್ಜನ ಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ || 28 ||

ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ |
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಮ್ || 29 ||

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖ ಲೇಶಃ ಸತ್ಯಮ್ |
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ || 30 ||

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯ ವಿವೇಕ ವಿಚಾರಮ್ |
ಜಾಪ್ಯಸಮೇತ ಸಮಾಧಿ ವಿಧಾನಂ
ಕುರ್ವ ವಧಾನಂ ಮಹದ್-ಅವಧಾನಮ್ || 31 ||

ಗುರು ಚರಣಾಂಭುಜ ನಿರ್ಭರಭಕ್ತಃ
ಸಂಸಾರಾದ್-ಅಚಿರಾದ್-ಭವ ಮುಕ್ತಃ |
ಸೇಂದಿಯ ಮಾನಸ ನಿಯಮಾದೇವಂ
ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್ || 32 ||

ಮೂಢಃ ಕಶ್ಚಿನ ವೈಯಾಕರಣೋ
ಡುಕೃಣ್ಕರಣಾಧ್ಯಯನ ಧುರೀಣಃ |
ಶ್ರೀಮಚ್ಛಂಕರ ಭಗವಚ್ಚಿಷ್ಯೈಃ
ಬೋಧಿತ ಆಸೀಚ್ಛೋದಿತ ಕರಣೈಃ || 33 ||

ರಚನ: ಆದಿ ಶಂಕರಾಚಾರ್ಯ