Friday, 4 September 2015

ಇಂದು ಶುಕ್ರವಾರ


ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ

ಮುಂಜಾನೆಯ ಮಡಿಉಟ್ಟು ಕುಂಕುಮವ ಹಣೆಗಿಟ್ಟು
ರಂಗೋಲಿಯ ಬಾಗಿಲಿಗಿಟ್ಟು ಹಣ್ಣು ಕಾಯಿ ನೀಡುವ ವಾರ

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ, ಚಂದನ ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ, ಭಕ್ತಿಯಿ೦ದಲಿ ಭಜಿಸುವ ವಾರ

ಸುವಾಸಿನಿಯರಿಗೆ ಕುಂಕುಮ ಹಚ್ಚಿ, ಸಂಭ್ರಮದಿ೦ದ ಬಾಗಿಣ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ ಸಕಲ ಭಾಗ್ಯವ ಬೇಡುವ ವಾರ

ಸ್ವಾಮಿ ದೇವನೆ ಲೋಕ ಪಾಲನೆ

ಸ್ವಾಮಿ ದೇವನೆ ಲೋಕ ಪಾಲನೆ

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ|
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ||
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ|
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ|
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ||
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ|
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ|
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು||
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ|
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ  ಪೋದುದೊ ಕತ್ತಲೆ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ|
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ||
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ|
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ|
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ||
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ|
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ|
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ||
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ|
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ|
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ||
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ|
ದೀನಪಾಲನೆ ನಿನ್ನ ಧೀನದೊಳಿರ್ಪನಮ್ಮನು ಪಾಲಿಸೈ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ|
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ||
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ|
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ||

ಸಾಹಿತ್ಯ: ಸೋಸಲೆ ಅಯ್ಯಾ ಶಾಸ್ತ್ರಿಗಳು

ಸೂರ್ಯವಂದನ

ಸೂರ್ಯವಂದನ

"ಹಿರಣ್ಮಯೇನ ಪಾತ್ರೇಣ  ಸತ್ಯಸ್ಯಾಪಿಹಿತಂ  ಮುಖಂ      
 ತತ್  ತ್ವಂ  ಪೂಷನ್, ಆಪಾವೃಣು ಸತ್ಯಧರ್ಮಾಯ  ದೃಷ್ಟಯೇ"                                                                                                                                            

"ಪಾತ್ರೆಯನ್ನು ಮುಚ್ಚಳದಿಂದ ಮುಚ್ಚುವಂತೆ, ನಿನ್ನ ಚಿನ್ಮಯವಾದ ಆವರಣವು ಸತ್ಯದ ಬಾಗಿಲನ್ನು ಮುಚ್ಚಿದೆ.   ಓ ಕರುಣಾಳು ಸೂರ್ಯ ದೇವನೇ, ಆ ಬಾಗಿಲನ್ನು ಸರಿಸಿ ನಿನ್ನ ದಿವ್ಯಜ್ಞಾನದರ್ಶನವನ್ನು ನಮಗೆ ಕೃಪೆ ಮಾಡು”
 
ಓಂ ಮಿತ್ರಾಯ ನಮಃ  -  ಎಲ್ಲ ,ಜೀವಿಗಳ ಸ್ನೇಹಿತನಿಗೆ ನಮಸ್ಕಾರಗಳು

ಓಂ ರವಯೇ ನಮಃ - ಹೊಳೆಯುತ್ತಿರುವವನಿಗೆ  ನಮಸ್ಕಾರಗಳು

ಓಂ ಸೂರ್ಯಾಯ ನಮಃ – ಚೇತನ ನೀಡುವವನಿಗೆ ನಮಸ್ಕಾರಗಳು

ಓಂ ಭಾನವೇ ನಮಃ - ಎಲ್ಲವನ್ನು ಪ್ರಕಾಶಿಸುವವನಿಗೆ  ನಮಸ್ಕಾರಗಳು

ಓಂ ಖಗಾಯ ನಮಃ – ಆಕಾಶದಲ್ಲಿ ತ್ವರಿತವಾಗಿ ಸಂಚರಿಸುವವನಿಗೆ ನಮಸ್ಕಾರಗಳು

ಓಂ ಪೂಷ್ಣೇ ನಮಃ - ಶಕ್ತಿಯನ್ನು ಕೊಡುವವನಿಗೆ ನಮಸ್ಕಾರಗಳು

ಓಂ ಹಿರಣ್ಯಗರ್ಭಾಯ ನಮಃ - ಸುವರ್ಣ ವಿಶ್ವಾತ್ಮನಿಗೆ ನಮಸ್ಕಾರಗಳು

ಓಂ ಮರೀಚಯೇ ನಮಃ - ಬೆಳಗಿನ ದೇವತೆಗೆ ನಮಸ್ಕಾರಗಳು

ಓಂ ಆದಿತ್ಯಾಯ  ನಮಃ - ಅದಿತಿಯ ಮಗ - ವಿಶ್ವಮಾತೆಯ ಮಗನಿಗೆ ನಮಸ್ಕಾರಗಳು

ಓಂ ಸವಿತ್ರೆ ನಮಃ - ಸೃಷ್ಟಿ ಕರ್ತನಿಗೆ ನಮಸ್ಕಾರಗಳು

ಓಂ ಅರ್ಕಾಯ ನಮಃ - ಸ್ತುತಿಗೆ ಅರ್ಹನಾದವನಿಗೆ ನಮಸ್ಕಾರಗಳು


ಓಂ ಭಾಸ್ಕರಾಯ ನಮಃ - ಜ್ಞಾನದ ಕಡೆಗೆ ನಮ್ಮನ್ನು ನಡೆಸುವವನಿಗೆ ನಮಸ್ಕಾರಗಳು

ಗುರುವಿನ ಗುಲಾಮನಾಗುವ ತನಕ


ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

ಸಾಹಿತ್ಯ: ಪುರಂದರದಾಸರು

ಗುರುವಿನ ಗುಲಾಮನಾಗುವ ತನಕ


ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

ಸಾಹಿತ್ಯ: ಪುರಂದರದಾಸರು

ವೈಷ್ಣವ ಜನ ತೋ


ವೈಷ್ಣವ ಜನ ತೋ ತೇನೇ ಕಹಿಯೇ ಜೇ 
ಪೀಡ ಪರಾಯೀ ಜಾನೇ ರೇ!
ಪರದುಃಖೇ ಉಪಕಾರ ಕರೇ ತೊಯೇ
ಮನ ಅಭಿಮಾನ ನ ಆನೇ ರೇ!!

ಭಾವಾರ್ಥ= ವೈಷ್ಣವರೆನಿಸಿಕೊಳ್ಳುವವರು ಪರಪೀಡೆ ಮಾಡಬಾರದು, ಪರರು ದುಃಖದಲ್ಲಿದ್ದಾಗ ಸ್ವಾಭಿಮಾನವನ್ನು ತೊರೆದು ಅವರಿಗೆ ಉಪಕಾರ ಮಾಡು.

ಸಕಲ ಲೋಕಮಾಂ  ಸಹುನೇ ವಂದೇ
ನಿಂದಾ ನ ಕರೇ ಕೇನೀ ರೇ!
ವಾಚ ಕಾಛ ಮನ ನಿಶ್ಚಲ ರಾಖೇ
ಧನ-ಧನ ಜನನೀ ತೇನೀ ರೇ!!

ಭಾವಾರ್ಥ= ಲೋಕವೆಲ್ಲಾ ನಿನ ನಿಂದಿಸಿದರೂ ಸಹನೆಯಿಂದಿರು, ಐಶ್ವರ್ಯದಿಂದ ತುಂಬಿ ತುಳುಕುತ್ತಿದ್ದರೂ ಕೂಡ ಕಾಯ, ವಾಚ ಮನಸಾ ನಿಶ್ಚಲನಾಗಿರು (ಶುದ್ಧನಾಗಿರು)

ಸಮದೃಷ್ಟಿ ನೇ ತೃಷ್ಣಾ ತ್ಯಾಗೀ
ಪರಸ್ತ್ರೀ ಜೇನೇ ಮಾತಾ ರೇ!
ಜಿಹ್ವಾ ಥಕೀ ಅಸತ್ಯ ನ ಬೋಲೇ
ಪರಧನ ನವ್ ಝಾಲೇ ಹಾಥ ರೇ!!

ಭಾವಾರ್ಥ= ಸಮದೃಷ್ಠಿ ಬೆಳೆಸಿಕೋ, ಆಸೆಯನ್ನು ಬಿಡು, ಪರಸ್ತ್ರೀಯನ್ನು ಮಾತೆಯೆಂದು ತಿಳಿ, ನಾಲಿಗೆಯಿಂದ ಸುಳ್ಳನ್ನಾಡ ಬೇಡ ಮತ್ತು ಪರಧನಕ್ಕೆ ಕೈಹಾಕ ಬೇಡ.

ಮೋಹ ಮಾಯಾ ವ್ಯಾಪೇ ನಹಿ ಜೇನೇ
ದೃಢ ವೈರಾಗ್ಯ ಜೇನಾ ಮನಮಾಂ ರೇ!
ರಾಮನಾಮ ಶುಂ  ತಾಲೀ ರೇ ಲಾಗೀ
ಸಕಲ ತೀರ್ಥ ತೇನಾ ತನಮಾಂ ರೇ!!

ಭಾವಾರ್ಥ= ಮೋಹ ಮಾಯೆಯ ತೊರೆದು ದೃಢ ವೈರಾಗ್ಯವ ತೆಳೆದು, ರಾಮನಾಮವ ಮೈಗೂಡಿಸಿಕೊಂಡರೆ ನಿನ್ನಲ್ಲಿಯೇ ಸಕಲ ತೀರ್ಥವು ಕಾಣೋ. 

ವಣಲೋಭೀನೇ ಕಪಟರಹಿತ ಛೇ
ಕಾಮ ಕ್ರೋಧ ನಿರ್ವಾಯೋ ರೇ!
ಭಣೇ ನರಸೈಯೋ ತೇನು ದರಷನ ಕರತಾಂ
ಕುಲ ಏಕೋತೇರ ತಾರ್ಯಾ ರೇ!!

ಭಾವಾರ್ಥ =  ಲೋಭ, ಕಪಟತನವಿಲ್ಲದಿರುವಿಕೆ, ಕಾಮ, ಕ್ರೋಧ ನಿವಾರಣೆ ಇವನ್ನು ರೂಢಿಸಿಕೊಂಡರೆ ನರಸನ ದರುಶನವಾಗುವುದು, ಕುಲವ್ಯಾವುದಾದರೇನು. 

ಸಾಹಿತ್ಯ: ನರಸಿನ್ ಮೆಹ್ತಾ

ಜಯ ಶ್ರೀರಾಮ ಜಯ ರಘುರಾಮ

ಜಯ ಶ್ರೀರಾಮ ಜಯ ರಘುರಾಮ


ಜಯ ಶ್ರೀರಾಮ ಜಯ ರಘುರಾಮ
ಜಯಜಯ ಜನಕಜಾ ಪತಿರಾಮ

ಪರಬ್ರಹ್ಮ ಪುರುಷೋತ್ತಮ ರಾಮ
ಪುಣ್ಯನಾಮ ಶ್ರೀ ಸೀತಾರಾಮ
ಪರಾತ್ಪರನೆ ಪುರಹರಮಿತ್ರನೆ ಹರಿ
ಪುರಾಣ ಪುರುಷ ರಾಜಾರಾಮ

ಕೌಶಿಕ ಮುಖಸಂರಕ್ಷಕ ರಾಮ
ಕೋಸಲೇಶ ಶ್ರೀ ಸೀತಾರಾಮ
ಕೌಸಲ್ಯಾ ಸುಖವರ್ಧನ ರಾಮ
ವಿಶ್ವಾಮಿತ್ರ ಪ್ರಿಯಧನ ರಾಮ

ಜನಕಜಾ ಮಾತಾ ಜಾನಕಿಪ್ರೀತ
ಜಗಜ್ಜನಕ ಹರಿ ಸೀತಾರಾಮ
ಜಾಮದಗ್ನಿ ಗರ್ವಾಪಹಾರ
ಜನ್ಮಾದಿರಹಿತ ಜಯ ರಾಜಾರಾಮ

ಪಿತೃವಚನ ಪಾಲಕ ಋಷಿವೇಷಾ
ಭ್ರಾತೃವತ್ಸಲಾ ಸೀತಾರಾಮ
ಶತ್ರುವಿಮರ್ದನ ಮುನಿಜನಪಾಲನ
ಸುತ್ರಾಮವಂದಿತ ರಾಜಾರಾಮ

ಜಟಾಯು  ಶಬರಿ ಮೊಕ್ಷಪ್ರದ ಕಪಿ
ಕಟಕಾನ್ವಿತ ಹರಿ ಸೀತಾರಾಮ
ಕುಟಿಲವಾಲೀ ಸಂಹರಣ ಪ್ರಸವಣ
ಶಿಖರವಾಸಿ ಶ್ರೀ ರಾಜಾರಾಮ

ಹನುಮತ್ಸಖ ಹರಿ ಹನುಮತ್ಸೇವಿತ
ಹನುಮಂತಾರ್ಚಿತ ಸೀತಾರಾಮ
ಹನುಮಗುಂಗುರವನಿತ್ತು ಚೂಡಾಮಣಿ
ಹನುಮನಿಂ ಪಡೆದೆ ರಾಜಾರಾಮ

ಶರಣನ ರಕ್ಷಿಸಿ ಶರಧಿಯ ಬಂಧಿಸಿ
ದುರುಳರ ಕೊಂದಿಹ ಸೀತಾರಾಮ
ಶರಣಗೆ ಪಟ್ಟವಕಟ್ಟಿ ಭರತನ
ಹರಣವಣನುಳಿಸಿದ ರಾಜಾರಾಮ

ಕೋದಂಡಧಾರಿ ಕೋಮಲಾಂಗ ಹರಿ
ಮೂಲನಾರಾಯಣ ಸೀತಾರಾಮ
ಕೋದಂಡರಾಮ ಪಟ್ಟಾಭಿರಾಮ
ಭಕ್ತವಿಶ್ರಾಮ ರಾಜಾರಾಮ

ಸಾಹಿತ್ಯ: ಭದ್ರಗಿರಿ ಅಚ್ಯುತದಾಸರು

ರಘುಪತಿ ರಾಘವ ರಾಜಾರಾಮ್


ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸೀತಾರಾಮ್ ಸೀತಾರಾಮ್ 
ಭಜ ಪ್ಯಾರೇ ತೂ ಸೀತಾರಾಮ್ 
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್

ಇದು  ಕಳೆದ ಶತಮಾನದಲ್ಲಿ ವಿಷ್ಣು ದಿಗಂಬರ ಪಲುಸ್ಕರ್ ಅವರ ಸಂಗೀತದಲ್ಲಿ ಪ್ರಖ್ಯಾತಿಗೊಂಡ ಸಾಹಿತ್ಯವಾಗಿದೆ.

ಇದರ ಮೂಲ ಸಾಹಿತ್ಯ ಇಂತಿದೆ:

ರಘುಪತಿ ರಾಘವ ರಾಜಾರಾಂ
ಪತಿತಪಾವನ ಸೀತಾರಾಮ್
ಸುಂದರ ವಿಗ್ರಹ ಮೇಘಶ್ಯಾಮ್
ಭದ್ರ ಗಿರೀಶ್ವರ ಸೀತಾರಾಮ್
ಭಕ್ತ ಜನಪ್ರಿಯ ಸೀತಾರಾಮ್
ಜಾನಕಿ ರಮಣ ಸೀತಾರಾಮ್
ಜಯ ಜಯ ರಾಘವ ಸೀತಾರಾಮ್