Saturday, 7 July 2012

ಲಾಲಿ ಹಾಡು


ತಿಳಿಮುಗಿಲ ತೊಟ್ಟಿಲಲಿ..
ಸಾಹಿತ್ಯ: ಎಸ್.ವಿ.ಪರಮೇಶ್ವರ ಭಟ್ಟ
ಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ರತ್ನಮಾಲ ಪ್ರಕಾಶ್
ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು
ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು||||
ಮುದುಡಿರುವ ಪೊದರಿನಲಿ ನಸುಗಂಪಿನುದರದಲಿ
ಜೇನುಗನಸಿನಾ ಹಾಡು ಕೇಳುತಿತ್ತು
ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹಾಡುತಿತ್ತು ||ತಿಳಿ||
ಬರುವ ಮುಂದಿನ ದಿನದ ನವ ನವೋದಯಕ್ಕಾಗಿ
ಪ್ರ್*ಅಕೃತಿ ತಪವಿರುವಂತೆ ತೋರುತಿತ್ತು
ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತಿತ್ತು ||ತಿಳಿ||
ಚಿನ್ನಾ ನಿನ್ನ ಮುದ್ದಾಡುವೆ"
ಜೋ ಜೋ ಲಾಲೀ ನಾ ಹಾಡುವೆ
Jo Jo laali Na Haaduve
ಚಿನ್ನಾ ನಿನ್ನಾ ಮುದ್ದಾಡುವೆ
Chinna ninnaa middaaduve
ಹೂವಂತಕನಸೂ ತಾ ಮೂಡಿ ಬರಲಿ
hoovanta kanasoo ta moodi barali
ನಗುವಾಅಳುವಾ ಕಣ್ಣಲ್ಲಿಇಂದೂ....
naguva aLuva kannalli indoo....
ಜೋ ಜೋ....
Joo Joo....
ನಿದಿರಾ ದೇವೀ ಬಾ ಮೆಲ್ಲಗೆ
nidira devi baa mellage
ತಾರೆಯಿಂದಾ ಈ ಭೂಮಿಗೆ
taareyinda EE Bhoomige
ಸಾವಿರ ರಂಗಿನ ಮಳೆಬಿಲ್ಲಿನಾ
savira rangina malebillinaa
ಮಾಲೆಯ ಧರಿಸೀ ಬಾ ಇಲ್ಲಿಗೆ
maaleya Dharisi baa illige
ಚಿನ್ನದ ತೇರಲಿ ಒಲವಿಂದ ಬಂದು
Chinnada therali olavinda bandu
ತಾರೇ ಮುತ್ತು ಕಂದಂಗೆ ಇಂದು....
taare muttu kandange indu...
ಜೋ ಜೋ....
joo ... joo...
ಚಿಪ್ಪೀ ಮಡಿಲಾ ಮುತ್ತಂತೆಯೇ
Chippi madila muttanteye
ದೀಪದೇ ಜ್ಯೋತಿ ಇರುವಂತೆಯೇ
deepade jyothi iruvantheye
ಕಿರಣದೆ ಕಾಂತಿ ಕುಳಿತಂತೆಯೇ
kiranade kanti kuLitanteye
ಮೊಗ್ಗಲಿ ಸೌರಭ ಇರುವಂತೆಯೇ
Moggali sourabh iruvantheye
ರಾತ್ರೀ ಸೆರಗೂ ಹಾಸಿರಲೆಂದೂ
ratri seraguu haasiralenduu
ಮಲಗೂ ಮಮತೆ ಮಡಿಲಲ್ಲಿ ಬಂದೂ....
malaguu mamate madilalli banduu.....
ಜೋ ಜೋ....
joo joo....

No comments:

Post a Comment