Monday 30 January 2012

Ratha Saptami Festival / ರಥ ಸಪ್ತಮೀ ಹಬ್ಬ



ರಥ ಸಪ್ತಮಿ ಹಬ್ಬವನ್ನು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮೀ ದಿನ ಆಚರಿಸುತ್ತಾರೆ. ಇದು ಸೂರ್ಯ ದೇವನ ಹಬ್ಬ. ಸೂರ್ಯನು ಸಿಂಹ ರಾಶಿ ಇಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ, ತನ್ನ ಏಳು ಕುದುರೆಗಳ ರಥ ಏರಿ ಹೋಗುತ್ತಾನೆ. ಈ ದಿನಅರುಣೋದಯದ ಕಾಲದಲ್ಲಿ ಸ್ನಾನ ಮಾಡಿ , ಸೂರ್ಯನಿಗೆ ಪೂಜೆ ಮಾಡುತ್ತಾರೆ.ಸ್ನಾನ ಮಾಡುವಾಗ ಎಕ್ಕದ ಗಿಡದ 7ಎಲೆಗಳನ್ನು ನೆತ್ತಿ/ತಲೆ, ಭುಜ, ತೊಡೆ ಮೇಲೆ ಇಟ್ಟುಕೊಂಡು ಸ್ನಾನ ಮಾಡುತ್ತಾರೆ. ಎಕ್ಕದ ಗಿಡ ಹೇಗಿರುತ್ತೆ ಅಂತಗೊತ್ತಿಲ್ಲದವರಿಗೆ, ಕೆಳಗೆ ಎಕ್ಕದ ಗಿಡದ ಚಿತ್ರ ಇದೆ.

ಎಕ್ಕದ ಗಿಡ
ಕೆಳಗಿರುವ ಮಂತ್ರವನ್ನು ಹೇಳಿಕೊಂಡು ಸ್ನಾನ ಮಾಡಬೇಕು ಬೇಕು.


ಸ್ನಾನದ ನಂತರ ಸೂರ್ಯನಿಗೆ ಅಷ್ಟೋತ್ತರ, ನೈವೇದ್ಯದಿಂದ ಪೂಜೆ ಮಾಡುತ್ತಾರೆ. ಪೂಜಾ ವಿಧಾನ ಇಲ್ಲಿದೆ. ಸೂರ್ಯನಿಗೆ ಪ್ರಿಯವಾದ ಗೋಧಿ/ರವೆ ಪಾಯಸ ನೈವೇದ್ಯ. ದಿನ ಪೂಜೆ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡಿದಲ್ಲಿ ಎಲ್ಲ ಪಾಪಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆ.

ರಥ ಸಪ್ತಮಿ ಬಹಳ ಶುಭಕರವಾದ ದಿನ. ಹೀಗಾಗಿ ದಿನ ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹಪ್ರವೇಶ, ನಾಮಕರಣ ಮುಂತಾದ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಸೂರ್ಯನು ರಥವನ್ನೇರಿ ಮೇಲೆ ಹೋದಂತೆ ನಮ್ಮ ಕಾರ್ಯಗಳಲ್ಲಿ, ಬಾಳಲ್ಲಿ ನಾವೂ ಯಶಸ್ಸು ಪಡೆಯುತ್ತೀವಿ ಎಂಬ ನಂಬಿಕೆ.ಸೂರ್ಯ ದೇವರ ಸ್ತೋತ್ರಗಳು ಇಲ್ಲಿದೆ:
1.Surya Ashtakam[song 11]

2.Surya Ashtottara
ಸೂರ್ಯನ ಕಿರಣದಂತೆ ನಿಮ್ಮ ಬಾಳೂ ಉಜ್ವಲವಾಗಲಿ :)

Bilvaashtakam in Kannada / ಬಿಲ್ವಾಷ್ಟಕ ಸ್ತೋತ್ರ

ಶಿವ ಪೂಜೆ ಅಂದರೆ ಬಿಲ್ವ ಪತ್ರೆ ಇರಲೇಬೇಕು. ಬಿಲ್ವ ಪತ್ರೆ ಈಶ್ವರನಿಗೆ ಬಹಳ ಪ್ರಿಯ. ಬಿಲ್ವ ಪತ್ರೆ ಹೇಗಿದೆ ಅಂತಗೊತ್ತಿಲ್ಲದವರಿಗೆ, ಕೆಳಗಡೆ ಚಿತ್ರ ಇದೆ.


ಬಿಲ್ವ ಪತ್ರೆ / ಗಿಡ/ ಮರ (Image Source - Wikipedia)
ಶಿವ ಸ್ತೋತ್ರಗಳಲ್ಲಿ ಬಿಲ್ವಾಷ್ಟಕವು ಒಂದು. ಸ್ತೋತ್ರವನ್ನು ಪಠಿಸುತ್ತಾ ಬಿಲ್ವ ಪಾತ್ರೆಯನ್ನು ಈಶ್ವರನಿಗೆ ಪೂಜೆ ಮಾಡಿ. ಬಿಲ್ವಾಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಬಿಲ್ವಾಷ್ಟಕದ ಧ್ವನಿ ಮುದ್ರಣ ಕೆಳಗೆ ಕೇಳಿ :
1.AudioLink- by S.P.Balasubramanyam
2.AudioLink - by Unnikrishnan


Related Link:

Guru Stotra in Kannada / ಗುರು ಸ್ತೋತ್ರ / ಗುರು ವಂದನ

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಗುರು ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ ಎಲ್ಲ ಹೊಂದಿರುವನು. ಒಂದು ಅಕ್ಷರ ಕಲಿಸಿದರೂ ಸಾಕು, ಅವನು ಗುರುವಿನ ಸ್ಥಾನ ಪಡೆಯುತ್ತಾನೆ. ನಮ್ಮ ತಾಯಿ, ತಂದೆ, ಬಂಧುಗಳು, ಹಿರಿಯರು, ಮಿತ್ರರು, ಶಿಕ್ಷಕರು ಇವರೆಲ್ಲರೂ ಗುರುಗಳೇ. ಗುರುವಿನ ಮಾರ್ಗದರ್ಶನ, ಗುರುವಿನಿಂದ ಪಡೆದ ಜ್ಞಾನವೇ ನಮ್ಮ ಸಾಧನಗಳು ಈ ಜೀವನದಲ್ಲಿ. ಇಂತಹ ಮಹಿಮೆ, ಪ್ರಭಾವ ಇರುವ ಗುರುವಿಗೆ ಈ ಗುರು ಸ್ತೋತ್ರದಲ್ಲಿ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇವೆ. ಗುರು ಸ್ತೋತ್ರವು ಕನ್ನಡದಲ್ಲಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.


AudioLink of Guru Stotram by Usha Seturaman

Audio Link by another artist

Sankata Nashana Ganesha Stotram in Kannada/ Ganesha Dwadashanama /ಸಂಕಟ ನಾಶನ ಗಣೇಶ ಸ್ತೋತ್ರಂ/ಗಣೇಶ ದ್ವಾದಶನಾಮ



ಈ ಸ್ತೋತ್ರದ ಹೆಸರೇ ಹೇಳುವಂತೆ ಇದನ್ನು ಪಠಿಸಿದರೆ ಎಲ್ಲ ಸಂಕಷ್ಟಗಳು ನಾಶವಾಗುತ್ತದೆ ಎಂಬ ನಂಬಿಕೆ. ಇದರಲ್ಲಿ ಗಣಪತಿಯ ೧೨ ನಾಮಗಳಿವೆ. ಆದ್ದರಿಂದ ಇದನ್ನು ಗಣೇಶ ದ್ವಾದಶ ನಾಮಸ್ತೋತ್ರ ಎಂದೂ ಕರೆಯುತ್ತಾರೆ.
ಓಂ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್‌
ಭಕ್ತಾವಾಸಂ ಸ್ಮರೇನಿತ್ಯಂ ಆಯುಶ್ಕಾಮಾರ್ಥ ಸಿದ್ಧಯೇ 1

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ
ತೃತೀಯಂ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್‌ 2

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಮ್‌ 3

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್‌
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್‌ 4

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿ ಕರಃ ಪ್ರಭೋ 5

ವಿದ್ಯಾರ್ಥಿ ಲಭತೇ ವಿದ್ಯಾಂ ಧರ್ನಾರ್ಥಿ ಲಭತೇ ಧನಮ್‌
ಪುತ್ರಾರ್ಥಿ ಲಭತೇ ಪುತ್ರಾನ್‌ ಮೋಕ್ಷಾರ್ಥಿ ಲಭತೇ ಗತಿಮ್‌ 6

ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್‌
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ 7

ಅಷ್ಟೇಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್‌
ತಸ್ಯ ವಿದ್ಯಾ ಭವೇತ್‌ಸರ್ವಾ ಗಣೇಶಸ್ಯ ಪ್ರಸಾದತಃ 8

ಇತಿ ಶ್ರೀ ನಾರದ ಪುರಾಣೆ ಸಂಕಟ ನಾಶನಂ ಗಣೇಶ ಸ್ತೋತ್ರಂ ಸಂಪೂರ್ಣಂ

1.Audio Link by Shruti Sadolikar [song 1]

2.Audio Link by Sikkil Gurucharan [song 7]

3.Audio Link by a group [song 4]

4.Audio Link by another artist

Nagara Panchami / Panchami Habba / ನಾಗರ ಪಂಚಮಿ ಹಬ್ಬ

Nagara Panchami / Panchami Habba / ನಾಗರ ಪಂಚಮಿ ಹಬ್ಬ


ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂ ಆಚರಿಸುತ್ತಾರೆ.
ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಪಟ ಇದ್ದೇ ಇರುತ್ತೆ. ಇದನ್ನೂ ಜೊತೆಯಲ್ಲಿ ಇಟ್ಟು ಪೂಜೆ ಮಾಡಬಹುದು. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಸಾಮಾನ್ಯವಾಗಿ ತಾಳೆ ಗಿಡದ ಎಲೆ/ಹೂವನ್ನು ಉಪಯೋಗಿಸಿ ತನಿ ಎರೆಯುತ್ತಾರೆ. ತಾಳೆ ಗಿಡದ ಚಿತ್ರ ಕೆಳಗಿದೆ.
click on image to enlarge

ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.

ನೈವೇದ್ಯಕ್ಕೆ ಚಿಗಳಿ ( ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ತಂಬಿಟ್ಟು ( ಅಕ್ಕಿ, ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ಮಾಡುತ್ತಾರೆ. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ.

ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.


ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.
ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ಮಾಡುತ್ತಾರೆ. ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಕರ್ನಟಾಕದಲ್ಲೇ ಅಲ್ಲ, ಇಡೀ ಭಾರತ ದೇಶದಲ್ಲಿ ನಾಗ ಪಂಚಮಿ ಆಚರಿಸುತ್ತಾರೆ.
Useful Links:
Subramanya Ashottara
Subramanya Stotram

Subramanya Bhujangam


Subrahmanya Ashtaka

Subrahmanya Sahasranamavali below


Subramanya Songs by VidyaBhushana:
  1. Bandu Nodiro Shree Subramanya
  2. Subbaraya Shubhakaya
  3. Subrahmanya Suragraganya
  4. Subramanya Subramanya